Thyroid Problem: ಈ ತೈಲಗಳ ಬಳಕೆ ಮಾಡಿ ಥೈರಾಯ್ಡ್‌ ಸಮಸ್ಯೆಯಿಂದ ಉಂಟಾಗೋ ಕಿರಿಕಿರಿಗೆ ಬೈ ಹೇಳಿ

By Suvarna News  |  First Published Oct 19, 2022, 4:53 PM IST

ಥೈರಾಯ್ಡ್‌ ಸಮಸ್ಯೆಯಿಂದ ದೇಹದಲ್ಲಿ ಹಲವು ರೀತಿಯ ಕಿರಿಕಿರಿಗಳು ಆಗುತ್ತಿರುತ್ತವೆ. ಮಂಡಿಗಳಲ್ಲಿ ನೋವು, ಚರ್ಮದಲ್ಲಿ ಸಮಸ್ಯೆ ಸೇರಿದಂತೆ ಮಾನಸಿಕ ಒತ್ತಡ, ಆತಂಕ ಹೆಚ್ಚುತ್ತದೆ. ಅಂತಹ ಸಮಯದಲ್ಲಿ ವಿವಿಧ ಸಾರಭೂತ ತೈಲಗಳ ಬಳಕೆ ಉತ್ತಮ ಪರಿಹಾರ ನೀಡಬಲ್ಲದು. 
 


ಥೈರಾಯ್ಡ್‌ ಸಮಸ್ಯೆ ಇತ್ತೀಚೆಗೆ ಸಾಮಾನ್ಯವಾಗಿದೆ. ನಮ್ಮ ಕುತ್ತಿಗೆಯಲ್ಲಿರುವ ಒಂದು ಗ್ರಂಥಿ ಥೈರಾಯ್ಡ್. ಇದರ ಕಾರ್ಯ ಅಸಾಮಾನ್ಯ. ದೇಹದ ಎಲ್ಲ ಕೆಲಸ ಕಾರ್ಯಗಳಿಗೆ ಅಗತ್ಯವಾದ ವಿವಿಧ ಹಾರ್ಮೋನುಗಳು ಸರಿಯಾದ ಪ್ರಮಾಣದಲ್ಲಿ ಸ್ರವಿಕೆಯಾಗುವಂತೆ ನೋಡಿಕೊಳ್ಳುತ್ತದೆ. ಥೈರಾಯ್ಡ್‌ ಗ್ರಂಥಿಯ ಕಾರ್ಯವಿಧಾನದಲ್ಲಾಗುವ ಸಣ್ಣದೊಂದು ವ್ಯತ್ಯಾಸವು ದೇಹದ ಮೇಲೆ ಬಹುದೊಡ್ಡ ಪರಿಣಾಮವನ್ನು ಬೀರಬಹುದು. ಥೈರಾಯ್ಡ್‌ ಹಾರ್ಮೋನು ಹೆಚ್ಚು ಪ್ರಮಾಣದಲ್ಲಿ ಬಿಡುಗಡೆಯಾದರೆ ಈ ಗ್ರಂಥಿಯ ಕಾರ್ಯ ಸ್ಥಗಿತವಾಗುತ್ತದೆ. ಆಗ ವಿವಿಧ ರೀತಿಯ ಸಮಸ್ಯೆಗಳು ಆರಂಭವಾಗುತ್ತದೆ. ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ ಹೈಪೋಥೈರಾಯಡಿಸಮ್‌, ಗಳಗಂಡ, ಹೈಪರ್‌ ಥೈರಾಯ್ಡಿಸಮ್‌ ಇತ್ಯಾದಿ. ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್‌ ಸಮಸ್ಯೆ ಅತಿ ಸಾಮಾನ್ಯವಾಗಿದೆ. ಇದಕ್ಕೆ ಹಲವರು ಸಾಕಷ್ಟು ರೀತಿಯ ಔಷಧಗಳನ್ನೂ ಮಾಡುತ್ತಾರೆ. ಜತೆಗೆ, ಥೈರಾಯ್ಡ್‌ ಸಮಸ್ಯೆಯಿಂದ ಉಂಟಾಗುವ ಹಲವು ಕಿರಿಕಿರಿಗಳನ್ನು ನಿವಾರಿಸಿಕೊಳ್ಳುವುದು ಅಗತ್ಯವಾಗುತ್ತದೆ. ವಿವಿಧ ಸಾರಭೂತ ತೈಲಗಳನ್ನು ಬಳಕೆ ಮಾಡುವ ಮೂಲಕ ಪರಿಣಾಮಕಾರಿಯಾಗಿ ಈ ಸ್ಥಿತಿಯನ್ನು ಎದುರಿಸಬಹುದು. ಸಾರಭೂತ ತೈಲಗಳು ಥೈರಾಯ್ಡ್‌ ಹಾರ್ಮೋನ್‌ ಸ್ರವಿಕೆ ಮೇಲೆ ಪರಿಣಾಮ ಬೀರುವುದಿಲ್ಲವಾದರೂ ಕೆಲವು ಕಿರಿಕಿರಿಗಳಿಂದ ಖಂಡಿತವಾಗಿ ಮುಕ್ತಿ ನೀಡಬಲ್ಲವು. ಅಂತಹ ಕೆಲವು ತೈಲಗಳ ಬಗ್ಗೆ ತಿಳಿದುಕೊಳ್ಳಿ.

•    ಲಿಂಬೆಹುಲ್ಲು ಅಥವಾ ಲೆಮನ್‌ ಗ್ರಾಸ್‌ ತೈಲ (Lemon grass Oil)
ಲಿಂಬೆಹುಲ್ಲಿನ ತೈಲವು ಅತ್ಯದ್ಭುತ ಆಂಟಿಫಂಗಲ್‌ ಗುಣ ಹೊಂದಿರುತ್ತದೆ. ಉರಿಯೂತ (Inflammation) ಶಮನ ಮಾಡುವ ಅಂಶ ಹೊಂದಿದೆ. ನಮ್ಮ ದೇಹದಲ್ಲಿರುವ ಲಿಂಫಟಿಕ್‌ (ದುಗ್ಧರಸ) ಡ್ರೈನೇಜ್‌ (ನಾಳ) ನೈಸರ್ಗಿಕವಾಗಿ (Naturally) ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಥೈರಾಯ್ಡ್‌ (Thyroid) ಗ್ರಂಥಿಯನ್ನು (Gland) ವಿಷಮುಕ್ತಗೊಳಿಸುವ (Detox) ಮೂಲಕ ಶುದ್ಧೀಕರಿಸುತ್ತದೆ. ಈ ತೈಲದ ಕೆಲವೇ ಹನಿಗಳನ್ನು ಹಸ್ತದ ಮೇಲೆ ಹಾಕಿಕೊಂಡು ಹಣೆ, ಮೂಗು, ಕತ್ತಿನ ಭಾಗದಲ್ಲಿ ಲೇಪಿಸಿಕೊಳ್ಳುವ ಮೂಲಕ ಇದರ ಪರಿಮಳ ಗಂಟಲಿನವರೆಗೆ ಹೋಗುವಂತೆ ಮಾಡಬಹುದು. ಇದರಿಂದ ಕೆಲವು ಕಿರಿಕಿರಿ (Irritation) ಕಡಿಮೆ ಆಗುತ್ತದೆ.

Tap to resize

Latest Videos

ಕೆಮಿಕಲ್‌ಗಳಿಂದ ತುಂಬಿದ ಪರ್ಫ್ಯೂಮ್‌ಗಳು ಬೇಡ್ವಾ? ಹಾಗಾದರೆ ಈ Essential Oilಗಳನ್ನು ಟ್ರೈ ಮಾಡಿ

•    ಧೂಪದ (Frankincense) ತೈಲ
ಸಾಮಾನ್ಯವಾಗಿ ಧೂಪವನ್ನು ಪುಡಿಯ ರೂಪದಲ್ಲಿ ನೋಡುತ್ತೇವೆ. ಇದರ ಸಾರಭೂತ ತೈಲವೂ (Essential Oil) ಲಭ್ಯವಿದೆ. ಮರದ ಕಾಂಡದಿಂದ ಸಿಗುವ ಮೇಣದಿಂದ ಇದನ್ನು ಉತ್ಪಾದಿಸಲಾಗುತ್ತದೆ. ಈ ತೈಲ ಉರಿಯೂತ ಕಡಿಮೆ ಮಾಡುವ ಗುಣ ಹೊಂದಿದೆ. ದೇಹದಲ್ಲಿ ಎಲ್ಲಾದರೂ ನೋವಾಗುತ್ತಿದ್ದರೆ (Pain) ಇದನ್ನು ಬಳಕೆ ಮಾಡಿದಾಕ್ಷಣ ಕಿರಿಕಿರಿ ಕಡಿಮೆ ಆಗುತ್ತದೆ. ಥೈರಾಯ್ಡ್‌ ಅಸಮತೋಲನದಿಂದ ಚರ್ಮದ ಸಮಸ್ಯೆ (Skin Disorder) ಉಂಟಾಗಿದ್ದರೆ ಈ ತೈಲವನ್ನು ಲೇಪಿಸಿಕೊಳ್ಳುವ ಮೂಲಕ ನಿವಾರಣೆ ಮಾಡಿಕೊಳ್ಳಬಹುದು. ದೇಹದಲ್ಲಿರುವ ಫ್ರೀ ರ್ಯಾಡಿಕಲ್ಸ್‌ ನಿರ್ಮೂಲನೆ ಮಾಡುವ ಜತೆಗೆ ಥೈರಾಯ್ಡ್‌ ಗ್ರಂಥಿಯನ್ನು ರಕ್ಷಣೆ ಮಾಡುತ್ತದೆ. ತೆಂಗಿನೆಣ್ಣೆ ಜತೆಗೆ ಸೇರಿಸಿ ದೇಹದ ಯಾವುದೇ ಭಾಗಕ್ಕೆ ಇದನ್ನು ಲೇಪಿಸಿಕೊಳ್ಳಬಹುದು.

•    ಲ್ಯಾವೆಂಡರ್‌ (Lavender) ತೈಲ
ಲ್ಯಾವೆಂಡರ್‌ ತೈಲ ಮನಸ್ಸನ್ನು ಶಾಂತಗೊಳಿಸುವ ಗುಣ ಹೊಂದಿದೆ. ಸಾಮಾನ್ಯವಾಗಿ ಥೈರಾಯ್ಡ್‌ ಸಮಸ್ಯೆ ಉಳ್ಳವರು ಒಂದು ರೀತಿಯ ಒತ್ತಡದಲ್ಲಿ (Tension) ಇರುತ್ತಾರೆ. ಸದಾಕಾಲ ಕಿರಿಕಿರಿಯ ಮೂಡ್‌ ನಲ್ಲಿ ಇರುವುದೂ ಇದೆ. ಇಂತಹ ಸಮಸ್ಯೆಗೆ ಇದು ಉತ್ತಮ ಪರಿಹಾರವಾಗಿದೆ. ಲ್ಯಾವೆಂಡರ್‌ ತೈಲದ ಒಂದೆರಡು ಹನಿಗಳನ್ನು ಹಣೆಯ ಮೇಲೆ ಲೇಪಿಸಿಕೊಂಡರೆ ಮನಸ್ಸು ರಿಲ್ಯಾಕ್ಸ್‌ (Relax) ಆಗುತ್ತದೆ. ಒತ್ತಡ ಕಡಿಮೆ ಆಗುವ ಜತೆಗೆ ಉಲ್ಲಾಸ ಮೂಡುತ್ತದೆ. ಹೈಪರ್‌ ಥೈರಾಯ್ಡಿಸಮ್‌ ನಿಂದಾಗಿ ಆತಂಕದ (Anxiety) ಸಮಸ್ಯೆ ಎದುರಿಸುತ್ತಿರುವವರಿಗೂ ಇದು ಅತ್ಯುತ್ತಮ. ಆತಂಕ ನಿವಾರಣೆ ಮಾಡುತ್ತದೆ. ಮಾನಸಿಕ ಆರೋಗ್ಯಕ್ಕೆ (Mental Wellbeing) ಲ್ಯಾವೆಂಡರ್‌ ತೈಲ ಉತ್ತಮ ಪೂರಕ ಅಂಶವಾಗಿದೆ. 

ಪರ್ಫ್ಯೂಮ್ ಹಚ್ಕೊಳ್ಳೋಕೆ ಇಷ್ಟವಿಲ್ವಾ ? ಈ ಸುಗಂಧಭರಿತ ಎಣ್ಣೆ ಹಚ್ಕೊಳ್ಳಿ ಸಾಕು

•    ವಿಂಟರ್‌ ಗ್ರೀನ್‌ (Wintergreen) ತೈಲ
ಮೆಥಿಲ್‌ ಸ್ಯಾಲಿಸೈಲೇಟ್‌ ಅಂಶ ಹೊಂದಿರುವ ವಿಂಟರ್‌ ಗ್ರೀನ್‌ ತೈಲ ಉತ್ತಮ ನೋವು ನಿವಾರಕ (Pain Relief) ತೈಲವಾಗಿದೆ. ಥೈರಾಯ್ಡ್‌ ಉರಿಯೂತ ಕಡಿಮೆ ಮಾಡುತ್ತದೆ. ದೇಹದಲ್ಲಿ ನೋವಿದ್ದಾಗ ಆಸ್ಪಿರಿನ್‌ ತೆಗೆದುಕೊಂಡರೆ ಹೇಗೆ ಪರಿಣಾಮ ಉಂಟಾಗುತ್ತದೆಯೋ ಅದೇ ರೀತಿ ಪ್ರಭಾವ ಬೀರುತ್ತದೆ. ಮಂಡಿನೋವಿಗೆ (Joints) ಉತ್ತಮ. ಮಾಂಸಖಂಡಗಳ ನೋವಿಗೂ ಪರಿಣಾಮಕಾರಿ. 

click me!