ಪುರುಷರೇ, ಪ್ರಾಸ್ಟೇಟ್ ಕ್ಯಾನ್ಸರ್ ಸೂಚನೆಗಳಿವು, ಯಾವತ್ತೂ ಇಗ್ನೋರ್ ಮಾಡ್ಬೇಡಿ!

Published : Aug 01, 2022, 04:56 PM ISTUpdated : Mar 28, 2025, 07:16 PM IST
ಪುರುಷರೇ, ಪ್ರಾಸ್ಟೇಟ್ ಕ್ಯಾನ್ಸರ್ ಸೂಚನೆಗಳಿವು, ಯಾವತ್ತೂ ಇಗ್ನೋರ್ ಮಾಡ್ಬೇಡಿ!

ಸಾರಾಂಶ

ಪ್ರಾಸ್ಟೇಟ್ ಗ್ರಂಥಿಯು ವೀರ್ಯವನ್ನು ಉತ್ಪಾದಿಸುತ್ತದೆ. 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಸಾಮಾನ್ಯ. ಮೂತ್ರ ವಿಸರ್ಜನೆಯಲ್ಲಿ ತೊಂದರೆ, ನೋವು, ರಕ್ತ, ನಿಮಿರುವಿಕೆ ಸಮಸ್ಯೆಗಳು ಇದರ ಲಕ್ಷಣಗಳು. ತಡವಾದ ರೋಗನಿರ್ಣಯದಿಂದ ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡಬಹುದು. ಯುವಕರಿಗೂ ಇದು ಬರಬಹುದು. ನಿಯಮಿತ ತಪಾಸಣೆ, ಆರೋಗ್ಯಕರ ಜೀವನಶೈಲಿ, ತೂಕ ನಿರ್ವಹಣೆ, ಮತ್ತು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಪ್ರಾಸ್ಟೇಟ್ (prostate gland) ಬಗ್ಗೆ ಗೊತ್ತಿಲ್ಲದವರಿಗೆ ಇದೊಂದು ಪ್ರಾಥಮಿಕ ಮಾಹಿತಿ- ಇದು ವೀರ್ಯವನ್ನು ಪೋಷಿಸುವ ಮತ್ತು ಸಾಗಿಸುವ ಸೆಮಿನಲ್ ದ್ರವವನ್ನು ಉತ್ಪಾದಿಸುವ ಒಂದು ಗ್ರಂಥಿ. ಐವತ್ತು ವರ್ಷದ ನಂತರದ ಪುರುಷರಲ್ಲಿ  ಹಲವು ಮಂದಿಗೆ ಇದರ ಕ್ಯಾನ್ಸರ್ (prostate cancer) ಬರಬಹುದು. ಮಾರಣಾಂತಿಕವೂ ಆಗಬಹುದು. ಪ್ರಾಸ್ಟೇಟ್ ಗ್ರಂಥಿಯಲ್ಲಿನ ಜೀವಕೋಶಗಳು ನಿಯಂತ್ರಣ ಮೀರಿ ಬೆಳೆದಾಗ ಪ್ರಾಸ್ಟೇಟ್ ಕ್ಯಾನ್ಸರ್ ಪ್ರಾರಂಭವಾಗುತ್ತದೆ.

ಪ್ರಾಸ್ಟೇಟ್ ಕ್ಯಾನ್ಸರ್‌ನ ವಿಧಗಳು 
- ಸಣ್ಣ ಜೀವಕೋಶದ ಕಾರ್ಸಿನೋಮಗಳು (carcinoma)
- ನ್ಯೂರೋಎಂಡೋಕ್ರೈನ್ ಗೆಡ್ಡೆಗಳು  (neuroendocrine) 
- ಪರಿವರ್ತನೆಗೊಂಡ ಜೀವಕೋಶಗಳ ಕಾರ್ಸಿನೋಮಗಳು
- ಸಾರ್ಕೋಮಾಸ್ (sarcoma) 

ಕಾಯಿಲೆಯ ಆರಂಭದ ಲಕ್ಷಣಗಳು

ಪ್ರಾಸ್ಟೇಟ್ ಕ್ಯಾನ್ಸರ್‌ನ ಕೆಲವು ಸಾಮಾನ್ಯ ಚಿಹ್ನೆಗಳನ್ನು ನಾವು ಕಾಯಿಲೆಗಳೊಂದಿಗೆ ತಪ್ಪಾಗಿ ಜೋಡಿಸಿಕೊಳ್ಳುವ ಸಾಧ್ಯತೆ ಇದೆ. 
- ಪ್ರಾಸ್ಟೇಟ್ ಗ್ರಂಥಿಯು ಮೂತ್ರನಾಳದ ಸಮೀಪದಲ್ಲಿ ನೆಲೆಗೊಂಡಿರುವುದರಿಂದ, ಮೂತ್ರದ ರೋಗಲಕ್ಷಣಗಳನ್ನು ಅನುಭವಿಸುವ ಹೆಚ್ಚಿನ ಅವಕಾಶವಿದೆ. ಇದು ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿ ಸಾಮಾನ್ಯ. 
- ಮೂತ್ರ ವಿಸರ್ಜನೆಯಲ್ಲಿ ತೊಂದರೆ 
- ಮೂತ್ರ ವಿಸರ್ಜನೆಯ ಸಮಯದಲ್ಲಿ ಸುಡುವ ನೋವು ಅಥವಾ ಅಸ್ವಸ್ಥತೆ
- ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ
- ಮೂತ್ರದಲ್ಲಿ ರಕ್ತ
- ವೀರ್ಯದಲ್ಲಿ ರಕ್ತ
- ಶಿಶ್ನದ ನಿಮಿರುವಿಕೆ ಕುಸಿತ (erectle dysfunction)
- ಸ್ಖಲನದ ವೇಳೆ ನೋವವು
- ಮುಖ್ಯವಾಗಿ, ನಿಮ್ಮ ಮೂತ್ರದ ನಿಯಮಿತತೆ ಗಮನಿಸಿ. ಮೊದಲಿಗಿಂತ ಹೆಚ್ಚು ಬಾರಿ ವಾಷ್‌ರೂಮ್ ವಿಸಿಟ್ ಮಾಡುತ್ತಿದ್ದೀರಿ ಅನಿಸಿದರೆ ಎಚ್ಚರದಿಂದ ಗಮನಿಸಿಕೊಳ್ಳಿ.  (frequent urination)
 
ಕ್ಯಾನ್ಸರ್ ತೀವ್ರವಾದಾಗ ಕಾಣುವ ಚಿಹ್ನೆಗಳು
ಅನೇಕ ಸಂದರ್ಭಗಳಲ್ಲಿ, ತಡವಾದ ರೋಗನಿರ್ಣಯ (diagnosis) ಮತ್ತು ಚಿಕಿತ್ಸೆಯಿಂದಾಗಿ, ಕ್ಯಾನ್ಸರ್ ಪ್ರಾಸ್ಟೇಟ್ ಗ್ರಂಥಿಯ ಹೊರಗೆ ಮೂಳೆಗಳು ಮತ್ತು ದುಗ್ಧರಸ ಗ್ರಂಥಿಗಳು ಸೇರಿದಂತೆ ದೇಹದ ಇತರ ಭಾಗಗಳಿಗೆ ಹರಡಬಹುದು. ಇದು ಹೆಚ್ಚು ತೀವ್ರವಾದ ತೊಂದರೆ ಉಂಟುಮಾಡುತ್ತದೆ.
- ಕಾಲುಗಳು ಅಥವಾ ಸೊಂಟದ ಪ್ರದೇಶದಲ್ಲಿ ಊತ
- ಸೊಂಟ, ಕಾಲುಗಳು ಅಥವಾ ಪಾದಗಳಲ್ಲಿ ಮರಗಟ್ಟುವಿಕೆ ಅಥವಾ ನೋವು
- ಮೂಳೆ ನೋವು ನಿರಂತರ ಅಥವಾ ಮುರಿತಗಳಿಗೆ ಕಾರಣವಾಗುತ್ತದೆ

ಯುವಕರಿಗೂ ಅಪಾಯವಿದೆಯೇ? 
ಈ ಮೊದಲು ಪ್ರಾಸ್ಟೇಟ್ ಕ್ಯಾನ್ಸರ್ ರೋಗ ಬರುವ ಸರಾಸರಿ ವಯಸ್ಸು 68 ಎಂದು ಇತ್ತು. ಆದರೆ, ಈಗ ಯುವಕರಿಗೂ ಪ್ರಾಸ್ಟೇಟ್ ಕ್ಯಾನ್ಸರ್ ಬರಬಹುದಾಗಿದೆ. ಜಾಗತಿಕವಾಗಿ, 15 ಮತ್ತು 40ರ ನಡುವಿನ ವಯಸ್ಸಿನ ಪುರುಷರಲ್ಲೂ ಆರಂಭಿಕ ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಳ ಕಂಡುಬಂದಿದೆ.
ನಿಯಮಿತ ಪರೀಕ್ಷೆ ಮಾಡಿಸುವುದು, ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಬದುಕುಳಿಯಲು ಸಹಾಯ ಮಾಡುತ್ತದೆ. ವಯಸ್ಸಾದ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ರೋಗನಿರ್ಣಯಕ್ಕಿಂತ ಯುವ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ರೋಗನಿರ್ಣಯವು ಹೆಚ್ಚು ಬೇಗನೆ ಸಾಧ್ಯ. 

ಆರರಲ್ಲಿ ಒಂದು ಸಾವು
ಪ್ರಪಂಚದಾದ್ಯಂತ, ಪ್ರಾಸ್ಟೇಟ್ ಕ್ಯಾನ್ಸರ್ ಎರಡನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್. ಮತ್ತು ಪುರುಷರಲ್ಲಿ ಕ್ಯಾನ್ಸರ್ ಸಾವಿನ ಆರನೇ ಪ್ರಮುಖ ಕಾರಣ. 

ರಾಷ್ಟ್ರೀಯ ಜನಸಂಖ್ಯೆ ಆಧಾರಿತ ಕ್ಯಾನ್ಸರ್ ದಾಖಲಾತಿಗಳ ಮಾಹಿತಿಯ ಪ್ರಕಾರ, ದೆಹಲಿ, ಕೋಲ್ಕತ್ತಾ, ಪುಣೆ ಮತ್ತು ತಿರುವನಂತಪುರಂಗಳಲ್ಲಿ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ ಎರಡನೇ ಪ್ರಮುಖ ತಾಣ. ಬೆಂಗಳೂರು ಮತ್ತು ಮುಂಬೈಗಳಲ್ಲಿ ಕ್ಯಾನ್ಸರ್‌ನ ಮೂರನೇ ಪ್ರಮುಖ ತಾಣ. 

ಯಾರಿಗೆ ಹೆಚ್ಚು ಅಪಾಯ?
ವೃದ್ಧಾಪ್ಯದಲ್ಲಿ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸವಿದ್ದರೆ (genetic) ಹುಷಾರಾಗಿರಬೇಕು. ಬೊಜ್ಜು ಇದ್ದವರು ಕೂಡ ಜಾಗ್ರತರಾಗಿರುವುದು ಲೇಸು. ಅನಾರೋಗ್ಯಕರ ಜೀವನಶೈಲಿಯು ಸಹ ಕ್ಯಾನ್ಸರ್‌ಗೆ ಒಂದು ಕಾರಣ. 

ತೂಕ ಇಳಿಸಿಕೊಳ್ಳುವ ಭರದಲ್ಲಿ ಇಂಥ ತಪ್ಪನ್ನೆಲ್ಲಾ ಅಪ್ಪಿ ತಪ್ಪಿಯೂ ಮಾಡ್ಬೇಡಿ!

ನೀವೇ ಪತ್ತೆ ಹಚ್ಚಬಹುದಾ? 
ಪ್ರಾಸ್ಟೇಟ್ ಕ್ಯಾನ್ಸರ್ ಸ್ವಯಂ ರೋಗನಿರ್ಣಯ ಮಾಡಲು ಉತ್ತಮ ಮಾರ್ಗವೆಂದರೆ ಮನೆಯಲ್ಲಿ PSA ರಕ್ತ ಪರೀಕ್ಷೆಯನ್ನು ಪಡೆಯುವುದು. ರೋಗಲಕ್ಷಣಗಳನ್ನು ನೀವು ಯಾವಾಗಲೂ ಪರಿಶೀಲಿಸಬಹುದು. ಏನೋ ಸಮಸ್ಯೆಯಿದೆ ಅನಿಸಿದರೆ ಗುದನಾಳದ ಪರೀಕ್ಷೆಗಾಗಿ ವೈದ್ಯರನ್ನು ಭೇಟಿ ಮಾಡಿ. ಅಲ್ಲಿ ಅವರು ನಿಮ್ಮ ಪ್ರಾಸ್ಟೇಟ್‌ನ್ನು ಪರೀಕ್ಷಿಸುತ್ತಾರೆ.

ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೇಗೆ ಕಡಿಮೆ ಮಾಡುವುದು?
ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳಿಂದ ಕೂಡಿದ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕಡಿಮೆ ಕೊಬ್ಬಿನ ಆಹಾರವನ್ನು ಸೇವಿಸುವುದು, ದೈನಂದಿನ ಡೈರಿ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸಬಹುದು. ದೈಹಿಕವಾಗಿ ಸಕ್ರಿಯವಾಗಿರುವುದು ಮುಖ್ಯ. ನಿಯಮಿತ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ನಿಮ್ಮ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

World Lung Cancer Day: ಶ್ವಾಸಕೋಶ ಕ್ಯಾನ್ಸರ್‌ನ ರೋಗಲಕ್ಷಣ ನಿರ್ಲಕ್ಷಿಸಬೇಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ