ಮಳೆಗಾಲದಲ್ಲಿ ಬೆಚ್ಚಗಿರುವುದು ಮುದವಾದರೂ ಸ್ನಾನವನ್ನು ಸ್ಕಿಪ್ ಮಾಡುವುದು ಒಳ್ಳೆಯದಲ್ಲ. ಸ್ನಾನ ಮಾಡದೆ ಇದ್ದರೆ ಹಾನಿಯೇ ಹೆಚ್ಚು. ಮಳೆಗಾಲದಲ್ಲಿ ಸ್ನಾನ ಮಾಡದಿರುವುದರಿಂದ ಉಂಟಾಗುವ ಸಮಸ್ಯೆ ಅರಿತುಕೊಳ್ಳಿ.
ಮಳೆಗಾಲದಲ್ಲಿ ಬೆಚ್ಚಗಿರುವುದು ಖುಷಿ ನೀಡುತ್ತದೆ. ಬಿಸಿಯಾದ ಕಾಫಿ, ಟೀ, ಕಷಾಯ ಕುಡಿದುಕೊಂಡು ಹಾಯಾಗಿರುವ ಮನಸ್ಸಾಗುತ್ತದೆ. ಸಂಜೆಯಾದರೆ ಬಿಸಿಬಿಸಿ ಪಕೋಡದ ನೆನಪಾಗುತ್ತದೆ. ಮಳೆಯ ವಾತಾವರಣದಲ್ಲಿ ಶೀತಗಾಳಿ ಹೆಚ್ಚಿದ್ದರೆ ಸ್ವೆಟರ್, ಮಫ್ಲರ್ ಗಳೆಲ್ಲ ಹೊರಗೆ ಬಂದು ಮೈ ಏರುತ್ತವೆ. ಮಳೆಗಾಲದಲ್ಲಿ ಹೆಚ್ಚು ಸೆಕೆ ಆಗುವುದಿಲ್ಲವಾದ ಕಾರಣ ಬೆವರುವುದು ಕಡಿಮೆ. ಬೆವರದೆ ಇರುವುದರಿಂದ ಅನೇಕರು ಈ ಸಮಯವನ್ನು ಅಡ್ವಾಂಟೇಜ್ ತೆಗೆದುಕೊಳ್ಳುತ್ತಾರೆ. ಏನೆಂದರೆ, ಸ್ನಾನ ಮಾಡಲು ಬೇಸರಿಸಿಕೊಳ್ಳುವ ಜನ ಮಳೆಯ ಸಮಯದಲ್ಲಿ ಸ್ನಾನ ಮಾಡದೆ ಹಾಗೇ ಇದ್ದುಬಿಡಲು ಬಯಸುವುದು ಹೆಚ್ಚು. ಆದರೆ, ಮಳೆಗಾಲದಲ್ಲಿ ಸ್ನಾನ ಮಾಡದೆ ಇದ್ದರೆ ನಮಗೇ ನಷ್ಟವಾಗುತ್ತದೆ. ಯಾವುದೇ ಕಾಲದಲ್ಲಿ ಸ್ನಾನ ಮಾಡುವುದು ಅತ್ಯಗತ್ಯ. ಇದರಿಂದ ದೇಹಾರೋಗ್ಯ ಚೆನ್ನಾಗಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮಳೆಗಾಲದಲ್ಲಂತೂ ಪ್ರತಿದಿನ ಮೈಗೆ ಸ್ನಾನ ಮಾಡಲೇಬೇಕು. ಅದರಲ್ಲೂ ಬಿಸಿಯಾದ ನೀರಿನಿಂದ ಸ್ನಾನ ಮಾಡಬೇಕು. ಬಿಸಿ ನೀರಿನ ಸ್ನಾನದಿಂದ ದೇಹಕ್ಕೆ ಚೈತನ್ಯ ದೊರೆಯುತ್ತದೆ. ನೀವೂ ಕೂಡ ಮಳೆಗಾಲದಲ್ಲಿ ಸ್ನಾನಕ್ಕೆ ಬೇಸರಿಸಿಕೊಳ್ಳುವ ಪೈಕಿ ಆಗಿದ್ದರೆ ಆ ಅಭ್ಯಾಸದಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಅರಿತುಕೊಳ್ಳಿ.
• ಸೋಂಕು (Infection)
ಮಳೆಗಾಲದಲ್ಲಿ (Monsoon) ವಿವಿಧ ಸೋಂಕುಗಳು ಕಂಡುಬರುತ್ತವೆ. ಸ್ನಾನ ಮಾಡದೆ ಇದ್ದರೆ ನಮ್ಮ ದೇಹದ ಮೃತ ಕೋಶಗಳು (Dead Cell) ಚರ್ಮದ (Skin) ಮೇಲೆಯೇ ಉಳಿದುಕೊಳ್ಳುತ್ತವೆ. ಕಂಕುಳಲ್ಲಿ ಮೃತ ಕೋಶಗಳು ಹೆಚ್ಚಿ ಸೋಂಕಿನ ಭಯ ಹೆಚ್ಚಾಗುತ್ತದೆ. ಮೃತ ಕೋಶಗಳು ದೇಹದೆಲ್ಲೆಡೆ ಹರಡಿ ಸೋಂಕಿನ ಅಪಾಯ ದುಪ್ಪಟ್ಟಾಗುತ್ತದೆ. ಸ್ನಾನ (Bathing) ಮಾಡುವುದರಿಂದ ಚರ್ಮದ ಆರೋಗ್ಯ (Health) ಚೆನ್ನಾಗಿರುತ್ತದೆ. ತಜ್ಞರ ಪ್ರಕಾರ, ಸ್ನಾನ ಮಾಡದೆ ಇದ್ದಾಗ ಚರ್ಮದಲ್ಲಿ ತುರಿಕೆ ಸೇರಿದಂತೆ ಹಲವಾರು ಕಿರಿಕಿರಿಗಳು ಹೆಚ್ಚಬಹುದು. ಕುತ್ತಿಗೆ ಸೇರಿದಂತೆ ದೇಹದ ಹಲವು ಭಾಗಗಳು ಕಪ್ಪಾಗಿರುವುದು ಸಾಮಾನ್ಯ. ಸ್ನಾನ ಮಾಡದಿರುವಾಗ ಈ ಕಪ್ಪು ಇನ್ನಷ್ಟು ಹೆಚ್ಚಬಹುದು. ಬಿಸಿನೀರಿನ ಸ್ನಾನ ಮಾಡುವುದರಿಂದ ಶೀತ (Cold), ನೆಗಡಿಯ ಅಪಾಯ ಕಡಿಮೆ. ಸೋಂಕು ಬಂದರೂ ಕಫ ಕಟ್ಟಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತದೆ.
ಮಳೆಗಾಲದಲ್ಲಿ ಯಾವ ಆಹಾರ ಸೇವಿಸಿದ್ರೆ ಏನಾಗುತ್ತೆ?
undefined
• ವಾಸನೆ (Smell)
ಮಳೆಗಾಲದಲ್ಲಿ ಬಟ್ಟೆಗಳಿಂದ ಮುಗ್ಗುಲು ವಾಸನೆ ಬರುವುದು ಹೆಚ್ಚು. ಇದಕ್ಕೆ ಫಂಗಸ್ (Fungus) ಕಾರಣ. ತೇವಾಂಶ ಅಧಿಕ ಪ್ರಮಾಣದಲ್ಲಿರುವುದರಿಂದ ಫಂಗಸ್ ಹೆಚ್ಚಿ ತೊಳೆದ ಬಟ್ಟೆಗಳೂ ಸಹ ಅಲ್ಪ ವಾಸನೆ ಹೊಂದಿರುತ್ತವೆ. ಹೀಗಿರುವಾಗ ಸ್ನಾನವನ್ನೂ ಮಾಡದೆ ಇದ್ದರೆ ದುರ್ಗಂಧ ಬೀರುವ ಬ್ಯಾಕ್ಟೀರಿಯಾ ಉತ್ಪಾದನೆಯಾಗಿ ದೇಹದಿಂದ ವಾಸನೆ ಬರುತ್ತದೆ. ದೇಹದ ಒಳಗಿನ ವಿಷಯುಕ್ತ (Toxic) ಪದಾರ್ಥಗಳು ಹೊರ ಹೋಗದೆ ಹಾನಿಯಾಗುತ್ತದೆ.
• ರೋಗ ನಿರೋಧಕ (Immunity) ಶಕ್ತಿ ಕುಂದುತ್ತದೆ
ಸ್ನಾನ ಮಾಡದೆ ಇದ್ದಾಗ ದೇಹದಲ್ಲಿ ಇರಬಹುದಾದ ವೈರಸ್ (Virus) ಹಾಗೂ ಬ್ಯಾಕ್ಟೀರಿಯಾ ತೊಳೆದು ಹೋಗದೆ ಅಲ್ಲಿಯೇ ಇರುತ್ತವೆ. ಇದರಿಂದ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿರುವುದಿಂದ ಚರ್ಮವೂ ಸಹ ಅದಕ್ಕೆ ತೀವ್ರವಾಗಿ ಸ್ಪಂದಿಸುತ್ತದೆ. ದೇಹ ಅಂಟುಅಂಟಾಗುತ್ತದೆ. ಸ್ನಾನ ಮಾಡದಿರುವಾಗ ಜಿಡ್ಡಿನಂಶ (Oily) ಇನ್ನೂ ಹೆಚ್ಚಾಗಿ ವಿವಿಧ ರೋಗಾಣುಗಳು ಅಂಟಿಕೊಳ್ಳಬಹುದು. ನಿಮಗೆ ಗೊತ್ತೇ? ಚಳಿಗಾಲಕ್ಕಿಂತಲೂ ಮಳೆಗಾಲದಲ್ಲಿ ಸ್ನಾನವನ್ನು ಸ್ಕಿಪ್ ಮಾಡುವುದರಿಂದ ಅಪಾಯ ಹೆಚ್ಚು.
Monsoon Hair Care: ತಲೆಯಲ್ಲಿ ತುರಿಕೆನಾ? ಕೂದಲ ಆರೋಗ್ಯಕ್ಕೆ ಹೀಗ್ಮಾಡಿ
• ದೇಹದಲ್ಲಿ ಆಲಸ್ಯ ಹೆಚ್ಚುತ್ತದೆ
ಮಳೆಗಾಲದಲ್ಲಿ ಸ್ನಾನ ಮಾಡದೆ ಇರುವುದರಿಂದ ದೇಹದ ಆಲಸ್ಯ ಹೆಚ್ಚಾಗುತ್ತದೆ. ಬಿಸಿಯಾದ ನೀರಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತಪರಿಚಲನೆ (Blood Circulation) ಹೆಚ್ಚುತ್ತದೆ. ನರವ್ಯೂಹಕ್ಕೆ ವಿಶ್ರಾಂತಿ (Rest) ದೊರೆಯುತ್ತದೆ. ಆಗ ಆಲಸ್ಯವೂ ದೂರವಾಗಿ, ಮೈ ಹಗುರವಾಗುತ್ತದೆ. ಒಂದೊಮ್ಮೆ ನೀವು ಸ್ನಾನ ಮಾಡದೆ ಇದ್ದರೆ ನರವ್ಯೂಹಕ್ಕೆ ಶಾಂತಿ ಲಭಿಸುವುದಿಲ್ಲ. ನಿಮಗೆ ತಿಳಿದಿರಬಹುದು, ಸ್ನಾನ ಮಾಡುವುದರಿಂದ ಮಾಂಸಖಂಡಗಳು (Muscle) ಸಡಿಲವಾಗಿ ನೋವು ನಿವಾರಣೆಯಾಗುತ್ತದೆ. ಆದರೆ, ಸ್ನಾನ ಮಾಡದೆ ಇದ್ದರೆ ಈ ಸುಖದಿಂದ ವಂಚಿತರಾಗುತ್ತೇವೆ. ನೋವು (Pain) ಕಡಿಮೆ ಆಗುವುದಿಲ್ಲ.