Facial Yoga: ಮುಖದ ಸೌಂದರ್ಯ ಹೆಚ್ಚಬೇಕಾ? ಫೇಶಿಯಲ್‌ ಯೋಗ ಮಾಡಿ

By Suvarna News  |  First Published Aug 1, 2022, 12:26 PM IST

ಫೇಶಿಯಲ್‌ ಯೋಗದ ಪ್ರಯೋಜನಗಳು ಒಂದೆರಡಲ್ಲ. ಮುಖಕ್ಕೆ ಸಂಬಂಧಿಸಿ ಮಾಡುವ ನಿರ್ದಿಷ್ಟ ಕ್ರಿಯೆಗಳಿಂದ ಮುಖದ ಚರ್ಮದಲ್ಲಿ ಹೊಳಪು ಮೂಡುತ್ತದೆ. ಮುಖದ ಮಾಂಸಖಂಡಗಳು ರಿಲ್ಯಾಕ್ಸ್‌ ಆಗುವ ಜತೆಗೆ ಸುಕ್ಕುಗಳು ಕಡಿಮೆ ಆಗುತ್ತವೆ. 
 


ಯೋಗದ ಮಹತ್ವವನ್ನು ಇಂದು ವಿಶ್ವವೇ ಅರಿತಿದೆ. ಭಾರತೀಯರು ಮಾತ್ರವಲ್ಲ, ವಿದೇಶಿಯರು ಸಹ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಕೆ ಮಾಡಿಕೊಂಡಿದ್ದಾರೆ. ಎಷ್ಟೋ ಸೆಲೆಬ್ರಿಟಿಗಳು ಯೋಗದಿಂದಲೇ ತಮ್ಮ ಫಿಟ್‌ ನೆಟ್‌ ಕಾಪಾಡಿಕೊಂಡಿದ್ದಾರೆ. ವಯಸ್ಸಾದರೂ ಸೌಂದರ್ಯವನ್ನು ಉಳಿಸಿಕೊಂಡಿದ್ದಾರೆ. ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಿ, ನಮ್ಮೊಳಗಿನ ಚೈತನ್ಯವನ್ನು ಉದ್ದೀಪಿಸುವ ಯೋಗ ಧನಾತ್ಮಕ ಚಿಂತನೆಯನ್ನು ಬಲಪಡಿಸುತ್ತದೆ. ಹಾಗೆಯೇ ಮುಖಕ್ಕೂ ಯೋಗದ ಮೂಲಕ ವಿಶೇಷ ಕಳೆ ನೀಡಲು ಸಾಧ್ಯ. ಫೇಶಿಯಲ್‌ ಯೋಗ ಎನ್ನುವುದು ಇತ್ತೀಚಿನ ಟ್ರೆಂಡ್‌ ಕೂಡ ಹೌದು. ಸಲೂನ್‌ ಹಾಗೂ ಚರ್ಮರೋಗ ತಜ್ಞರ ಹೊರತಾಗಿ ಮುಖದ ಯೋಗಾಸನ ಸೌಂದರ್ಯವನ್ನು ಎತ್ತಿ ಹಿಡಿಯುತ್ತದೆ. ಫೇಶಿಯಲ್‌ ಯೋಗದಲ್ಲಿ ಹಲವು ವಿಧಗಳಿವೆ. ಮೀನಿನಂತೆ ಮುಖವನ್ನು ಉದ್ದ ಮಾಡುವುದು, ನಸುನಗುತ್ತ ಓಂ ಪಠಣ ಮಾಡುವುದು, ಹುಬ್ಬುಗಳನ್ನು ಮೇಲಕ್ಕೆ ಎತ್ತರಿಸುವುದು, ಕಣ್ಣಿನ ರೆಪ್ಪೆಗಳನ್ನು ಪಕ್ಕಕ್ಕೆ ಎಳೆದು ವಿಸ್ತರಿಸುವುದು ಹಾಗೂ ಉಸಿರಾಟದ ವ್ಯಾಯಾಮಗಳು ಮುಖಕ್ಕೆ ವಿಶೇಷ ಕಳೆ ನೀಡಬಲ್ಲವು. ಇವುಗಳಿಂದ ಮುಖದ ಚರ್ಮ ಕುಸಿಯುವುದಿಲ್ಲ. ನೆರಿಗೆ ಉಂಟಾಗುವುದಿಲ್ಲ. ಮುಖದ ಚರ್ಮ ಬಿಗಿಯನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೆ, ಮುಖದ ಮಾಂಸಖಂಡಗಳು ರಿಲ್ಯಾಕ್ಸ್‌ ಹೊಂದುತ್ತವೆ.

ಫೇಶಿಯಲ್‌ ಯೋಗದಿಂದ ಹಲವಾರು ಪ್ರಯೋಜನಗಳಿವೆ. ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ಮುಖಕ್ಕೆ ಸಂಬಂಧಿಸಿ ಮಾಡುವ ಯೋಗಾಸನಗಳು ಮುಖದ ಆರೋಗ್ಯಕ್ಕೂ ಕೊಡುಗೆ ನೀಡುತ್ತವೆ. ಮುಖದ ಚರ್ಮದಲ್ಲಿ ಕಳೆ ತುಂಬುವ ಕೊಲಾಜನ್‌ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ನಾವು ದಿನವೂ ಮಾತನಾಡುವಾಗ, ನಗುವಾಗ, ವಿವಿಧ ಭಂಗಿಗಳನ್ನು ಮಾಡುವಾಗ ಮುಖಕ್ಕೆ ವ್ಯಾಯಾಮ ತನ್ನಿಂತಾನೇ ಆಗುತ್ತಿರುತ್ತದೆ. ಆದರೆ, ಯೋಗದಿಂದ ಇನ್ನಷ್ಟು ಪ್ರಯೋಜನವುಂಟು. 

Latest Videos

undefined

•    ಮುಖದ ಒತ್ತಡ ಕಡಿಮೆ ಮಾಡುತ್ತದೆ (Reduces Face Stress)
ಕೆಲವೊಮ್ಮೆ ನಿಮ್ಮ ಅನುಭವಕ್ಕೆ (Experience) ಬಂದಿರಬಹುದು. ಕೋಪ (Anger) ಬಂದಾಗ, ಮನಸ್ಸಿನ ಭಾವನೆಗಳು (Feelings) ಏರಿಳಿತ ಆದಾಗ ಮುಖದ ಮಾಂಸಖಂಡಗಳು (Muscles) ಸೋಲುತ್ತವೆ. ಅವುಗಳಲ್ಲಿ ಏನೋ ವಿಚಿತ್ರ ಸಂಚಲನ ಆಗುತ್ತಿರುತ್ತದೆ. ಆದರೆ, ಫೇಶಿಯಲ್‌ ಯೋಗ (Facial Yoga) ಮಾಡುವುದರಿಂದ ಮಾಂಸಖಂಡಗಳು ರಿಲ್ಯಾಕ್ಸ್‌ (Relax) ಹೊಂದುತ್ತವೆ. ನರವ್ಯೂಹದ ಪ್ರಭಾವ ಕಡಿಮೆಗೊಳಿಸುತ್ತವೆ. 

Skin Care Yoga: ಕಾಂತಿಯುತ ಮುಖಕ್ಕಾಗಿ ಸರಳ ಯೋಗ ಹೇಳಿಕೊಟ್ಟ ಮಲೈಕಾ

•    ಚರ್ಮಕ್ಕೆ ಬಣ್ಣ (Skin Tone) ಬರುತ್ತದೆ, ಸುಕ್ಕುಗಳು (Wrinkles) ಮೃದುವಾಗುತ್ತವೆ
ವಯಸ್ಸಾಗುತ್ತಿದ್ದಂತೆ ಸಹಜವಾಗಿ ಕೊಲಾಜನ್‌ (Collagen) ಮಟ್ಟ ಕಡಿಮೆ ಆಗುತ್ತದೆ. ಇದರಿಂದಾಗಿ ಚರ್ಮ (Skin) ಸಡಿಲವಾಗುತ್ತದೆ. ಕುಸಿಯುತ್ತದೆ ಹಾಗೂ ಸುಕ್ಕುಗಳು ಮೂಡುತ್ತವೆ. ನಿರ್ದಿಷ್ಟ ವ್ಯಾಯಾಮದಿಂದ ಕೊಲಾಜನ್‌ ಉತ್ಪಾದನೆ ಹೆಚ್ಚುವ ಜತೆಗೆ ಈ ಎಲ್ಲ ಕೊರತೆಗಳು ನಿವಾರಣೆ ಆಗುತ್ತವೆ. ಮಾಂಸಖಂಡಗಳಲ್ಲಿ ಸಡಿಲತೆ ಮಾಯವಾಗಿ ಸುಕ್ಕುಗಳು ಕಡಿಮೆ ಆಗುತ್ತವೆ. ನಿಯಮಿತವಾಗಿ ಫೇಶಿಯಲ್‌ ವ್ಯಾಯಾಮ (Exercise) ಮಾಡಿದರೆ ಚರ್ಮದ ಬಣ್ಣದಲ್ಲಿ ಹೊಳಪು (Radiate) ಹೆಚ್ಚುತ್ತದೆ. ಸುಕ್ಕುಗಳು ಮೃದುವಾಗುತ್ತವೆ, ಅಂದರೆ ಸುಕ್ಕುಗಳ ಆಳ ಕಡಿಮೆ ಆಗುತ್ತದೆ. ಇದರಿಂದ ನಿಮ್ಮ ಮುಖ ಮೃದುವಾಗಿ (Soft) ಹಾಗೂ ಯೌವನಭರಿತವಾಗಿ (Younger) ಕಾಣುತ್ತದೆ.

•    ಮುಖದಲ್ಲಿ ಹೊಸ ಹೊಳಪು ಮತ್ತು ಖಚಿತತೆ (Perfection)
ಫೇಶಿಯಲ್‌ ಯೋಗ ಜೀವಕೋಶಗಳಿಗೆ (Cell) ಆಮ್ಲಜನಕ ತಲುವುಂತೆ ಮಾಡುತ್ತದೆ. ಹಾಗೂ ಮೈಕ್ರೊಸರ್ಕ್ಯುಲೇಷನ್‌ ಪ್ರಕ್ರಿಯೆ ಹೆಚ್ಚಾಗುತ್ತದೆ. ಪರಿಣಾಮವಾಗಿ ಮುಖದ ಕಾಂಪ್ಲೆಕ್ಷನ್‌ (Complexion) ಹೆಚ್ಚುತ್ತದೆ, ಮುಖದ ಚರ್ಮಕ್ಕೆ ಖಂಡಿತವಾಗಿ ಹೊಳಪು ಬರುತ್ತದೆ ಹಾಗೂ ಮೃದುತ್ವ ಹೆಚ್ಚುತ್ತದೆ. 

Face Yoga For Beauty: ವಯಸ್ಸಾದರೂ ಯಂಗ್ ಆಗಿ ಕಾಣಬೇಕಾದರೆ ಹೀಗೆ ಮಾಡಿ

•    ಉಸಿರಾಟದ ವ್ಯಾಯಾಮ (Breathing Exercise)
ಉಸಿರಾಟದ ವ್ಯಾಯಾಮಗಳ ಪ್ರಯೋಜನ ಒಂದೆರಡಲ್ಲ. ಮುಖ್ಯವಾಗಿ ಇವುಗಳಿಂದ ಭಾವನೆಗಳನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುತ್ತದೆ. ಆಗ ಮುಖದಲ್ಲಿ ಶಾಂತಿ (Peace) ಮತ್ತು ಸ್ಥಿರತೆ ಕಾಣುತ್ತದೆ. ಅದು ಸೌಂದರ್ಯಕ್ಕೂ ಕೊಡುಗೆ ನೀಡುತ್ತದೆ. ಕಣ್ಣುಗಳಲ್ಲೂ ಮೃದುತ್ವ ಮೂಡುತ್ತದೆ. ವಿಶ್ವಾಸಾರ್ಹ ಭಾವನೆ ಮೂಡಲು ಸಹಕಾರಿ ಆಗುತ್ತದೆ. ಪ್ರಾಣಾಯಾಮದಂತಹ ವಿವಿಧ ಉಸಿರಾಟದ ವ್ಯಾಯಾಮಗಳು ದೇಹ ಮತ್ತು ಮನಸ್ಸಿನ ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗುತ್ತವೆ. ಇವುಗಳಿಂದ ಮುಖದಲ್ಲಿ ಆತ್ಮವಿಶ್ವಾಸ ಹೆಚ್ಚಿ ವಿಶಿಷ್ಟ ಕಳೆ ಮೂಡುತ್ತದೆ.  
 

click me!