ಮೂತ್ರಪಿಂಡ ನಮ್ಮ ದೇಹದ ಅತಿ ಮುಖ್ಯ ಅಂಗಗಳಲ್ಲಿ ಒಂದು. ಅದರಲ್ಲಿ ಏರುಪೇರಾದ್ರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಮೂತ್ರಪಿಂಡದ ಅನಾರೋಗ್ಯ ಸಾವಿಗೂ ಕಾರಣವಾಗುತ್ತದೆ. ಇದಕ್ಕೆ ನಮ್ಮ ಅಭ್ಯಾಸವೇ ಮುಖ್ಯ ಕಾರಣ.
ದೇಹದ ಆರೋಗ್ಯಕ್ಕೆ ಕಿಡ್ನಿ ಬಹಳ ಮುಖ್ಯ. ಮೂತ್ರಪಿಂಡದ ಆರೋಗ್ಯ ಸರಿಯಾಗಿದ್ದರೆ ಇಡೀ ದೇಹ ಆರೋಗ್ಯವಾಗಿದ್ದಂತೆ. ದೇಹದಲ್ಲಿರುವ ವಿಷವನ್ನು ಮೂತ್ರಪಿಂಡ ಹೊರಹಾಕುತ್ತದೆ. ಆದರೆ ನಮ್ಮ ಆಹಾರ ಪದ್ಧತಿಯಿಂದಾಗಿ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಯಕೃತ್ತಿಗೆ ಹಾನಿಯಾಗುತ್ತದೆ. ಇಂದು ನಾವು ಮೂತ್ರಪಿಂಡದ ಆರೋಗ್ಯ ಹಾಳು ಮಾಡುವ ಆಹಾರ ಹಾಗೂ ಅಭ್ಯಾಸಗಳು ಯಾವುವು ಎಂಬುದನ್ನು ಹೇಳ್ತೇವೆ.
ಮೂತ್ರಪಿಂಡ (Kidney) ದ ಆರೋಗ್ಯ ಹಾಳು ಮಾಡುತ್ತೆ ಈ ಅಭ್ಯಾಸ :
undefined
ನೋವು (Pain) ನಿವಾರಕ ಮಾತ್ರೆ ಸೇವನೆ : ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ನೋವು ಕಾಣಿಸಿಕೊಂಡ್ರೂ ಜನರು ನೋವಿನ ಮಾತ್ರೆ ಸೇವಿಸ್ತಾರೆ. ಅತಿಯಾದ ನೋವಿನ ಮಾತ್ರೆ ಸೇವನೆ ಆರೋಗ್ಯ (Health) ಕ್ಕೆ ಒಳ್ಳೆಯದಲ್ಲ. ಅದು ಮೂತ್ರಪಿಂಡದ ಆರೋಗ್ಯವನ್ನು ಹಾಳು ಮಾಡುತ್ತದೆ. ಈಗಾಗಲೇ ಮೂತ್ರಪಿಂಡದ ಸಮಸ್ಯೆ ಹೊಂದಿದ್ದರೆ ನೋವು ನಿವಾರಕ ಮಾತ್ರೆಗಳನ್ನು ಎಂದಿಗೂ ಸೇವನೆ ಮಾಡಬೇಡಿ.
ಉಪ್ಪಿನಿಂದ ಹಾಳಾಗುತ್ತೆ ಮೂತ್ರಪಿಂಡದ ಆರೋಗ್ಯ : ಉಪ್ಪಿನಲ್ಲಿ ಸೋಡಿಯಂನಲ್ಲಿ ಪ್ರಮಾಣ ಅಧಿಕವಾಗಿದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ. ಆಹಾರಕ್ಕೆ ಅತಿ ಹೆಚ್ಚು ಉಪ್ಪು ಬಳಸುವುದನ್ನು ಬಿಡಿ. ಹಾಗೆಯೇ ಊಟದ ಸಂದರ್ಭದಲ್ಲಿ ಹೆಚ್ಚುವರಿ ಉಪ್ಪು ಬಳಸಬೇಡಿ.
ಸಂಸ್ಕರಿಸಿದ ಆಹಾರದಿಂದ ದೂರವಿರಿ : ಸಂಸ್ಕರಿಸಿದ ಆಹಾರಗಳು ಬಹಳಷ್ಟು ಸೋಡಿಯಂ ಮತ್ತು ರಂಜಕವನ್ನು ಹೊಂದಿರುತ್ತವೆ. ಇದು ಮೂತ್ರಪಿಂಡದ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಹೆಚ್ಚಿನ ರಂಜಕ ಸೇವನೆ ಮಾಡುವುದ್ರಿಂದ ಮೂತ್ರಪಿಂಡಗಳಿಗೆ ಮತ್ತು ಮೂಳೆಗಳಿಗೆ ಹಾನಿಯಾಗುತ್ತದೆ.
ನೀರು ಕುಡಿಯೋದನ್ನು ಮರೆಯಬೇಡಿ : ನೀರು ದೇಹಕ್ಕೆ ಬಹಳ ಮುಖ್ಯ. ದೇಹ ನಿರ್ಜಲಗೊಂಡ್ರೆ ಒಂದೊಂದೇ ಅನಾರೋಗ್ಯ ಕಾಡಲು ಶುರುವಾಗುತ್ತದೆ. ಮೂತ್ರಪಿಂಡವನ್ನು ಆರೋಗ್ಯವಾಗಿಡಲು ನೀರು ಬಹಳ ಮುಖ್ಯ. ಸಾಕಷ್ಟು ನೀರನ್ನು ಕುಡಿಯದಿದ್ದರೆ ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಹಾಗಾಗಿ ಪ್ರತಿ ದಿನ 8 ಲೋಟ ನೀರನ್ನು ಕುಡಿಯಲು ಮರೆಯದಿರಿ.
ಮೂತ್ರಪಿಂಡದ ಆರೋಗ್ಯಕ್ಕೆ ಉತ್ತಮ ನಿದ್ರೆ : ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಉತ್ತಮ ನಿದ್ರೆ ಬಹಳ ಮುಖ್ಯ. ನಿದ್ರಾಹೀನತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿದ್ರೆ ಸಮಸ್ಯೆಯಾಗ್ತಿದೆ ಎಂದಾದ್ರೆ ಮಲಗುವ ವಿಧಾನದಲ್ಲಿ ಬದಲಾವಣೆ ಮಾಡಬೇಕು. 24 ಗಂಟೆಗಳಲ್ಲಿ ಕನಿಷ್ಠ 8 ಗಂಟೆ ನಿದ್ದೆ ಮಾಡುವುದು ಬಹಳ ಅವಶ್ಯಕ.
ಶುಗರ್ ಇದ್ಯಾ ? ಚಿಂತೆ ಬಿಡಿ, ಅನ್ನದ ಬದಲು ಅವಲಕ್ಕಿ ತಿನ್ನಿ
ಮಾಂಸಾಹಾರದಿಂದ ದೂರವಿರಿ : ಮಾಂಸವನ್ನು ಅತಿಯಾಗಿ ಸೇವನೆ ಮಾಡುವುದ್ರಿಂದ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಆಮ್ಲ ಉತ್ಪತ್ತಿಯಾಗುತ್ತದೆ. ಇದು ಮೂತ್ರಪಿಂಡಕ್ಕೆ ಹಾನಿಯುಂಟು ಮಾಡುತ್ತದೆ. ಅಲ್ಲದೆ ಆಸಿಡೋಸಿಸ್ ಗೆ ಕಾರಣವಾಗಬಹುದು. ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಬಯಸುವವರು ಯಾವುದೇ ಕಾರಣಕ್ಕೂ ಹೆಚ್ಚು ಮಾಂಸ ಸೇವನೆ ಮಾಡಬೇಡಿ.
ಹೆಚ್ಚು ಸಕ್ಕರೆಯುಳ್ಳ ಆಹಾರ : ಅತಿಯಾದ ಸಕ್ಕರೆ ಸೇವನೆ ಮಾಡುವುದ್ರಿಂದ ಸ್ಥೂಲಕಾಯ ಹೆಚ್ಚಾಗುತ್ತದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ತಿನ್ನುವುದ್ರಿಂದ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವೂ ನಿಮ್ಮನ್ನು ಕಾಡುತ್ತದೆ. ಇದರಿಂದ ಮೂತ್ರಪಿಂಡ ಹಾನಿಗೊಳಗಾಗುತ್ತದೆ.
ಧೂಮಪಾನದಿಂದ ಕಿಡ್ನಿಗೆ ಹಾನಿ : ಧೂಮಪಾನ ಶ್ವಾಸಕೋಶ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ ಧೂಮಪಾನ ಮೂತ್ರಪಿಂಡಕ್ಕೂ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಅತಿಯಾದ ಪ್ರಮಾಣದಲ್ಲಿ ಧೂಮಪಾನ ಮಾಡುವುದ್ರಿಂದ ಮೂತ್ರದಲ್ಲಿ ಪ್ರೋಟೀನ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ.
ಮದ್ಯಪಾನದಿಂದ ಮೂತ್ರಪಿಂಡಕ್ಕೆ ಹಾನಿ : ಪ್ರತಿದಿನ ಆಲ್ಕೊಹಾಲ್ ಸೇವಿಸುವುದು ಒಳ್ಳೆಯದಲ್ಲ. ಆಲ್ಕೋಹಾಲ್ ಸೇವನೆ ಕೂಡ ಮೂತ್ರಪಿಂಡದ ಆರೋಗ್ಯವನ್ನು ಹಾಳು ಮಾಡುತ್ತದೆ.
ಐಸ್‌ಕ್ರೀಂ ತಿಂದು ನೀರು ಕುಡಿಯೋದು ಸಿಕ್ಕಾಪಟ್ಟೆ ಡೇಂಜರಸ್
ದೀರ್ಘಕಾಲದವರೆಗೆ ಕುಳಿತುಕೊಂಡ್ರೆ ಆರೋಗ್ಯ ಹಾಳು : ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದ್ರಿಂದಲೂ ಅನೇಕ ಸಮಸ್ಯೆ ಎದುರಾಗುತ್ತದೆ. ಇದ್ರಿಂದ ದೈಹಿಕ ಚಟುವಟಿಕೆ ಇರೋದಿಲ್ಲ. ಇದು ಮೂತ್ರಪಿಂಡದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಂಡು ಓಡಾಡಬೇಕು. ಸಣ್ಣಪುಟ್ಟ ವ್ಯಾಯಾಮ ಮಾಡಬೇಕು.