ಅಲೋಪತಿಯಲ್ಲಿ ಕ್ಯಾನ್ಸರ್, ಹೈ ಬಿಪಿ, ಮಧುಮೇಹಕ್ಕೆ ಔಷಧಿ ಇಲ್ಲ: ಮತ್ತೆ ವಿವಾದ ಸೃಷ್ಟಿಸಿದ ಬಾಬಾ ರಾಮ್‌ದೇವ್‌..!

Published : Mar 21, 2023, 01:43 PM ISTUpdated : Mar 21, 2023, 02:28 PM IST
 ಅಲೋಪತಿಯಲ್ಲಿ ಕ್ಯಾನ್ಸರ್, ಹೈ ಬಿಪಿ, ಮಧುಮೇಹಕ್ಕೆ ಔಷಧಿ ಇಲ್ಲ: ಮತ್ತೆ ವಿವಾದ ಸೃಷ್ಟಿಸಿದ ಬಾಬಾ ರಾಮ್‌ದೇವ್‌..!

ಸಾರಾಂಶ

ಹಸುವಿನ ಹಾಲಿನ ಪ್ರಾಮುಖ್ಯತೆ ಮತ್ತು ಅದರ ವೈದ್ಯಕೀಯ ಗುಣಗಳ ಬಗ್ಗೆಯೂ ಹೇಳಿದ ಬಾಬಾ ರಾಮ್‌ದೇವ್, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಹಾಗೂ, ಇದು ನೈಸರ್ಗಿಕವಾಗಿ ಅನೇಕ ರೋಗಗಳನ್ನು ಗುಣಪಡಿಸುತ್ತದೆ, ಪ್ರಪಂಚದಾದ್ಯಂತ ಜನರು ಅದನ್ನು ಹೊಂದಿದ್ದಾರೆ ಎಂದೂ ಅವರು ಹೇಳಿದರು.

ನವದೆಹಲಿ (ಮಾರ್ಚ್‌ 21, 2023): ಯೋಗ ಗುರು ಬಾಬಾ ರಾಮ್‌ದೇವ್‌ ಅವರು ಮತ್ತೊಮ್ಮೆ ಅಲೋಪತಿ ವೈದ್ಯ ಪದ್ಧತಿಯನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಾರೆ. ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಅಲೋಪತಿಯಲ್ಲಿ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಆಯುರ್ವೇದದ ಮೂಲಕ ಅವುಗಳನ್ನು ಮೂಲದಿಂದಲೇ ನಿರ್ಮೂಲನೆ ಮಾಡಬಹುದು ಎಂದೂ ಹೇಳಿದ್ದಾರೆ. 
 
ಉತ್ತರಾಖಂಡ ಆಯುರ್ವೇದ ವಿಶ್ವವಿದ್ಯಾನಿಲಯ ಮತ್ತು ದೀನದಯಾಳ್ ಕಾಮಧೇನು ಗೌಶಾಲ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಆಯುರ್ವೇದ ಕಾನ್ಕ್ಲೇವ್-2023 ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಖ್ಯಾತ ಯೋಗ ಗುರುಗಳು ಈ ಹೇಳಿಕೆಗಳನ್ನು ನೀಡಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಸಂಪುಟ ಸಚಿವ ಸತ್ಪಾಲ್ ಮಹಾರಾಜ್ ಮತ್ತು ಆಯುರ್ವೇದ ವಿಶ್ವವಿದ್ಯಾಲಯದ ಉಪಕುಲಪತಿ ಸುನಿಲ್ ಜೋಶಿ ಅವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನು ಓದಿ: ಅಲೋಪಥಿ ವಿರುದ್ಧ ಬಾಬಾ ರಾಮ್‌ದೇವ್‌ ಟೀಕೆ: ಸುಪ್ರೀಂಕೋರ್ಟ್‌ ಆಕ್ರೋಶ

ಹಸುವಿನ ಹಾಲಿನ ಪ್ರಾಮುಖ್ಯತೆ ಮತ್ತು ಅದರ ವೈದ್ಯಕೀಯ ಗುಣಗಳ ಬಗ್ಗೆಯೂ ಹೇಳಿದ ಬಾಬಾ ರಾಮ್‌ದೇವ್, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಹಾಗೂ, ಇದು ನೈಸರ್ಗಿಕವಾಗಿ ಅನೇಕ ರೋಗಗಳನ್ನು ಗುಣಪಡಿಸುತ್ತದೆ, ಪ್ರಪಂಚದಾದ್ಯಂತ ಜನರು ಅದನ್ನು ಹೊಂದಿದ್ದಾರೆ ಎಂದೂ ಅವರು ಹೇಳಿದರು.

ಅಲ್ಲದೆ, ತಮ್ಮ (ಪತಂಜಲಿ) ಸಂಸ್ಥೆಯಲ್ಲಿ ಗೋಮೂತ್ರದ ಸಾರ ಮತ್ತು ಆಯುರ್ವೇದ ಔಷಧಗಳ ಸಂಯೋಜನೆಯಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಗುಣಪಡಿಸಲಾಗಿದೆ ಎಂದೂ ಬಾಬಾ ರಾಮ್‌ದೇವ್ ಹೇಳಿದ್ದಾರೆ. ಈ ವೇಳೆ,  ಆಯುರ್ವೇದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಯೋಗ ಗುರು, ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಅಲೋಪತಿಯಲ್ಲಿ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಆಯುರ್ವೇದದಲ್ಲಿ ಈ ಎಲ್ಲ ಕಾಯಿಲೆಗಳಿಗೆ ಪರಿಹಾರವಿದೆ ಎಂದು ಹೇಳಿದರು.

ಇದನ್ನೂ ಓದಿ: ಕೊರೋನಾ ಬಳಿಕ ದೇಶದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದ ಬಾಬಾ ರಾಮ್‌ದೇವ್‌!

ಯೋಗ ಗುರು ರಾಮದೇವ್ ಈ ಹಿಂದೆಯೂ ಅಲೋಪತಿ ಔಷಧದ ವಿರುದ್ಧ ಇಂತಹ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಕೋವಿಡ್‌ನ 2ನೇ ಅಲೆಯ ವೇಳೆ ದೇಶಾದ್ಯಂತ ಸಾವಿರಾರು ಜನರು ಬಲಿಯಾದಾಗ, ರಾಮ್‌ದೇವ್ ಅವರು ‘’ಲಕ್ಷಗಟ್ಟಲೆ ಜನರು ಅಲೋಪತಿ ಔಷಧಿಗಳಿಂದ ಮೃತಪಟ್ಟಿದ್ದಾರೆ, ಅವರು ಚಿಕಿತ್ಸೆ ಅಥವಾ ಆಮ್ಲಜನಕವನ್ನು ಪಡೆಯದೆ ಸತ್ತವರಿಗಿಂತ ಹೆಚ್ಚು ಎಂದು 2021 ರಲ್ಲಿ ವಿಡಿಯೋವೊಂದರಲ್ಲಿ ಹೇಳಿದ್ದರು. ಅಲ್ಲದೆ, ಯೋಗ ಗುರುಗಳು ಅಲೋಪತಿಯನ್ನು "ಮೂರ್ಖ ಮತ್ತು ದಿವಾಳಿ" ವಿಜ್ಞಾನ ಎಂದೂ ಕರೆದಿದ್ದರು. ಹಾಗೂ, ಕೊರೊನಾ ವೈರಸ್ ಲಸಿಕೆಯ ಎರಡೂ ಡೋಸ್ ಪಡೆದ ನಂತರವೂ ಭಾರತದಲ್ಲಿ ಹಲವಾರು ವೈದ್ಯರು ಮೃತಪಟ್ಟಿದ್ದಾರೆ ಎಂದೂ ಅವರು ಹೇಳಿದ್ದರು. ಇದಕ್ಕೆ ಸುಪ್ರೀಂಕೋರ್ಟ್‌ ಸಹ ಆಕ್ರೋಶ ವ್ಯಕ್ತಪಡಿಸಿತ್ತು.

ಈ ಹಿನ್ನೆಲೆ, ಮಾಧ್ಯಮ ಹೇಳಿಕೆಯನ್ನು ನೀಡಿದ್ದ ಐಎಂಎ, ರಾಮ್‌ದೇವ್ ಅವರು ತಿಳುವಳಿಕೆ ಇಲ್ಲದೆ ಹೇಳಿಕೆಗಳನ್ನು ನೀಡುವ ಮೂಲಕ ಮತ್ತು ವೈಜ್ಞಾನಿಕ ಔಷಧವನ್ನು ಮಾನನಷ್ಟಗೊಳಿಸುವ ಮೂಲಕ ಜನರನ್ನು ದಾರಿ ತಪ್ಪಿಸಿದ್ದರಿಂದ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡಿತ್ತು. ಹಾಗೆ, ಸಾಂಕ್ರಾಮಿಕ ಸಮಯದಲ್ಲಿ ಜೀವಗಳನ್ನು ಉಳಿಸಲು ಶ್ರಮಿಸುತ್ತಿರುವಾಗ ರಾಮ್‌ದೇವ್ ಅಲೋಪತಿ ಮತ್ತು ಆಧುನಿಕ ಔಷಧದ ಅಭ್ಯಾಸ ಮಾಡುವವರ ಖ್ಯಾತಿಯನ್ನು ಹಾಳುಮಾಡುತ್ತಿದ್ದಾರೆ ಎಂದೂ ಭಾರತೀಯ ವೈದ್ಯರ ಉನ್ನತ ಸಂಘ ಹೇಳಿತ್ತು. ಅಲ್ಲದೆ, ಬಾಬಾ ರಾಮ್‌ದೇವ್‌ಗೆ ಆಯುರ್ವೇದದ ಬಗ್ಗೆ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡದಂತೆ ದೆಹಲಿ ಹೈಕೋರ್ಟ್ ಕೇಳಿಕೊಂಡಿತ್ತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!