ಅಲ್ಕೋಹಾಲ್‌ಗೆ ಮೊಸಳೆ ರಕ್ತ ಸೇರಿಸಿ ಕುಡಿಯೋ ಉದ್ಯಮಿ, ದೇಹ ಫಿಟ್ ಆಗಿಡೋ ಟಾನಿಕ್ ಅಂತೆ!

By Vinutha Perla  |  First Published May 19, 2023, 4:30 PM IST

ಆರೋಗ್ಯ ಚೆನ್ನಾಗಿರಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ದೇಹವನ್ನು ಫಿಟ್ ಆಗಿಡಲು ಒಬ್ಬೊಬ್ಬರು ಒಂದೊಂದು ರೀತಿಯ ಕ್ರಮವನ್ನು ಅನುಸರಿಸುತ್ತಾರೆ. ಯೋಗ, ವ್ಯಾಯಾಮ, ವಾಕಿಂಗ್, ಜಾಗಿಂಗ್ ಮೊದಲಾದವುಗಳನ್ನು ಮಾಡ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ವಯಸ್ಸಾದ್ರೂ ಫಿಟ್ ಆಗಿರೋಕೆ ಮೊಸಳೆ ರಕ್ತ ಕುಡೀತಾರೆ.


ಫಿಟ್ ಆಂಡ್ ಫೈನ್ ಆಗಿರಬೇಕೆಂದು ಯಾರು ತಾನೇ ಬಯಸಲ್ಲ ಹೇಳಿ. ಇದಕ್ಕಾಗಿ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಾರೆ. ಯೋಗ, ವ್ಯಾಯಾಮ, ವಾಕಿಂಗ್, ಜಾಗಿಂಗ್ ಮೊದಲಾದವುಗಳನ್ನು ಮಾಡ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ವಯಸ್ಸಾದ್ರೂ ಫಿಟ್ ಆಗಿರೋಕೆ ಮೊಸಳೆ ರಕ್ತ ಕುಡೀತಾರಂತೆ. ನಂಬೋಕೆ ಕಷ್ಟವಾದರೂ ಇದು ನಿಜ. ಥಾಯ್ ಉದ್ಯಮಿ ವಯಸ್ಸಾದರೂ ಫಿಟ್ ಆಗಿರಲು ದಿನಕ್ಕೆ ಎರಡು ಬಾರಿ ಮೊಸಳೆ ರಕ್ತವನ್ನು ಕುಡಿಯುತ್ತಾರೆ. ದಕ್ಷಿಣ ಥಾಯ್ಲೆಂಡ್‌ನ ಉದ್ಯಮಿಯೊಬ್ಬರು ಇತ್ತೀಚೆಗೆ ತಮ್ಮ ಉತ್ತಮ ಆರೋಗ್ಯದ ರಹಸ್ಯವೆಂದರೆ ಮೊಸಳೆ ರಕ್ತವನ್ನು ಅಲ್ಕೋಹಾಲ್‌ನೊಂದಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯುವುದು ಎಂದು ಹೇಳಿರುವ ವಿಚಾರ ಎಲ್ಲೆಡೆ ವೈರಲ್‌ ಆಗಿದೆ.

ಬೆಳಗ್ಗೆ, ರಾತ್ರಿ ಮೊಸಳೆ ರಕ್ತದ ಕಾಕ್‌ಟೈಲ್ ಕುಡಿಯೋ ಉದ್ಯಮಿ
ಥೈಲ್ಯಾಂಡ್‌ನ ಟ್ರಾಂಗ್ ಪ್ರಾಂತ್ಯದ 52 ವರ್ಷ ವಯಸ್ಸಿನ ರೋಜಾಕಾರ್ನ್ ನ್ಯಾನೊನ್, ಲಾವೊ ಖಾವೊ ಎಂಬ ಥಾಯ್ ಸ್ಪಿರಿಟ್‌ನೊಂದಿಗೆ ಬೆರೆಸಿದ ಮೊಸಳೆಯ ರಕ್ತ (Crocodile Blood)ದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತೇನೆ ಎಂದು ತಿಳಿಸಿದ್ದಾರೆ. ಮಾತ್ರವಲ್ಲ ಮಲಗುವ ಮುನ್ನ ಅಂತಹ ಮತ್ತೊಂದು ಕಾಕ್‌ಟೈಲ್‌ನ್ನು ಕುಡಿಯುತ್ತೇನೆ ಎಂದು ತಿಳಿಸಿದ್ದಾರೆ. 'ನಾನು ದೈಹಿಕವಾಗಿ (Physical) ತುಂಬಾ ದುರ್ಬಲನಾಗಿದ್ದೆ ಮತ್ತು ಎಲ್ಲಾ ಸಮಯದಲ್ಲೂ ಸುಸ್ತಾದ ಅನುಭವವಾಗುತ್ತಿತ್ತು. ಆದರೆ ಮೊಸಳೆ ರಕ್ತವನ್ನು ಕುಡಿಯಲು ಪ್ರಾರಂಭಿಸಿದಾಗಿನಿಂದ, ಹೆಚ್ಚು ಶಕ್ತಿಯುತವಾಗಿದ್ದೇನೆ (Strong)' ಎಂದು ರೋಜಾಕಾರ್ನ್ ಹೇಳಿದ್ದಾರೆ. ಮೊಸಳೆಯ ರಕ್ತವು ಹಲವಾರು ಅಂಗಗಳಿಗೆ (Organs), ರಕ್ತಕ್ಕೆ ಮತ್ತು ನರಮಂಡಲಕ್ಕೆ ಅದ್ಭುತಗಳನ್ನು ಮಾಡುತ್ತದೆ ಎಂದು ಅವರು ನಂಬುತ್ತಾರೆ.

Latest Videos

undefined

ಹಸಿ ರಕ್ತದ ಪುಡ್ಡಿಂಗ್ ತಿಂದ ಮಹಿಳೆ, ಮೆದುಳು ಸೇರಿತ್ತು ಹುಳುಗಳ ರಾಶಿ!

ಮೊಸಳೆ ರಕ್ತ ಕುಡಿದು ಸ್ಟ್ರಾಂಗ್ ಆಗಿದ್ದಾನಂತೆ ವ್ಯಕ್ತಿ
ಬಾನ್ ಫೋ ಉಪಜಿಲ್ಲೆಯ ಮೊಸಳೆ ಫಾರ್ಮ್‌ನ ಮಾಲೀಕ ವಾಂಚೈ ಚೈಕರ್ಡ್ ಅವರು ಕಾಕ್ಟೈಲ್ ಅನ್ನು ಮಾರಾಟ ಮಾಡುತ್ತಿದ್ದುದನ್ನು ಕಂಡುಹಿಡಿದ ನಂತರ ನ್ಯಾನೊನ್ ಎರಡು ತಿಂಗಳ ಹಿಂದೆ ಲಾವೊ ಖಾವೊದೊಂದಿಗೆ ಬೆರೆಸಿದ ಮೊಸಳೆ ರಕ್ತವನ್ನು ಕುಡಿಯಲು ಪ್ರಾರಂಭಿಸಿದರು. ಮೊಸಳೆಗಳು ಕಡಿಮೆ ರಕ್ತವನ್ನು ಹೊಂದಿರುತ್ತವೆ.  ಕೇವಲ ಒಂದು ಅಥವಾ ಎರಡು ಗ್ಲಾಸ್‌ಗಳು. ಹೀಗಾಗಿ ನ್ಯಾನೊನ್‌ ಅದನ್ನು ಅಲ್ಕೋಹಾಲ್‌ನೊಂದಿಗೆ ಬೆರೆಸಿ ಕುಡಿಯುತ್ತಾರೆ, ಟ್ರಾಂಗ್ ಪ್ರಾಂತ್ಯದ ಅತಿದೊಡ್ಡ ಮೊಸಳೆ ಸಾಕಣೆ ಕೇಂದ್ರವನ್ನು ವಾಂಚೈ ಹೊಂದಿದ್ದಾರೆ. 

ಅಲ್ಕೋಹಾಲ್‌ನೊಂದಿಗೆ ಮೊಸಳೆಯ ರಕ್ತದ ಮಿಶ್ರಣವು ರಕ್ತ ಪರಿಚಲನೆಗೆ (Blood circulation) ಸಹಾಯ ಮಾಡುತ್ತದೆ, ಕೆಂಪು ರಕ್ತ ಕಣಗಳನ್ನು ಬಲಪಡಿಸುತ್ತದೆ, ಪ್ಲೇಟ್‌ಲೆಟ್ ಎಣಿಕೆ ಮತ್ತು ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ ಮತ್ತು ಮೊಟ್ಟೆ ಮತ್ತು ವೀರ್ಯ (Sperm) ಕೋಶಗಳನ್ನು ಪೋಷಿಸುತ್ತದೆ ಎಂದು ರೋಜಾಕಾರ್ನ್ ನ್ಯಾನೊನ್ ಹೇಳುತ್ತಾರೆ. ಮಾತ್ರವಲ್ಲ ಮೊಸಳೆಯ ರಕ್ತವು ಬಂಜೆತನವನ್ನು ಸಹ ಗುಣಪಡಿಸುತ್ತದೆ ಎಂದಿದ್ದಾರೆ.

ಕಾಕ್‌ಟೇಲ್‌ ಕಲರ್‌ಫುಲ್ ಆಗ್ಲಿ ಅಂತ ತನ್ನ ರಕ್ತವನ್ನೇ ಬೆರೆಸಿದ ಉದ್ಯೋಗಿ, ರುಚಿ ಕೆಟ್ಟಿದೆ ಎಂದ ಗ್ರಾಹಕರು!

ಮೂರರಿಂದ ನಾಲ್ಕು ವರ್ಷ ವಯಸ್ಸಿನ ಮೊಸಳೆಗಳನ್ನು ಸಾಮಾನ್ಯವಾಗಿ ವಿವಾದಾತ್ಮಕ ಕಾಕ್ಟೈಲ್ ಮಾಡಲು ಸಾಯಿಸಲಾಗುತ್ತದೆ. ಏಕೆಂದರೆ ಅದು ಪ್ರಬಲವಾದಾಗ ಅವರ ರಕ್ತವು ಅತ್ಯಂತ ಶಕ್ತಿಯುತ ಪರಿಣಾಮವನ್ನು ಬೀರುತ್ತದೆ. ಒಂದು ಮೊಸಳೆಯಿಂದ ಸುಮಾರು 100 ಸಿಸಿ ರಕ್ತವನ್ನು ಮಾತ್ರ ಹೊರತೆಗೆಯಬಹುದು, ಇದು ಕೇವಲ ಎರಡು ಗ್ಲಾಸ್‌ಗಳಿಗೆ ಮಾತ್ರ ಸಾಕಾಗುತ್ತದೆ ಎಂದು ತಿಳಿದುಬಂದಿದೆ.

ವರದಿಗಳ ಪ್ರಕಾರ, ಒಂದು ಲೋಟ ಮೊಸಳೆ ರಕ್ತದ ಕಾಕ್‌ಟೈಲ್‌ನ ಬೆಲೆ ಸುಮಾರು 800 ರೂ. ಥೈಲ್ಯಾಂಡ್‌ನಾದ್ಯಂತ ಇದಕ್ಕೆ ಭಾರಿ ಬೇಡಿಕೆಯಿದೆ. ಈ ಕಾರಣದಿಂದ ಆ ದೇಶದ ಜನರು ಆರ್ಥಿಕವಾಗಿ ಪ್ರಗತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದೇಶದಲ್ಲಿ ಮೊಸಳೆ ಮಾಂಸ (Meat)ವನ್ನೂ ಮಾರಾಟ ಮಾಡಲಾಗುತ್ತದೆ. ಇದರ ಬೆಲೆ ಕೆಜಿಗೆ 500 ರೂಪಾಯಿಗಿಂತ ಹೆಚ್ಚು. ಅಷ್ಟೇ ಅಲ್ಲ, ಮೊಸಳೆ ಸೊಪ್ಪು ಕೆ.ಜಿ.ಗೆ 75 ಸಾವಿರ ರೂ.ಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಅದರ ಹೊರತಾಗಿ ಚರ್ಮದ (Skin) ಸೂಟ್, ಬೆಲ್ಟ್ ಇತ್ಯಾದಿಗಳನ್ನು ಮೊಸಳೆ ಚರ್ಮದಿಂದ ತಯಾರಿಸಲಾಗುತ್ತದೆ

click me!