Treatment for Depression: ನಿಮಗೆ ಆ ರೀತಿ ಅನಿಸ್ತಿದ್ಯಾ? ಅಷ್ಟು ಬೇಸರವೇ? ಹಾಗಿದ್ರೆ ಅದು ಡಿಪ್ರೆಶನ್‌! ಪರಿಹಾರವೇನು?

Published : Jul 27, 2025, 04:35 PM IST
depression test

ಸಾರಾಂಶ

Depression Causes: ಇಂದು ಸಾಕಷ್ಟು ಜನರು ಡಿಪ್ರೆಶನ್‌ನಿಂದ ಬಳಲುತ್ತಿದ್ದಾರೆ. ಎಷ್ಟೋ ಜನರು ಸಾವಿಗೂ ಶರಣಾಗುತ್ತಿದ್ದಾರೆ. ಇದಕ್ಕೆ ಕಾರಣ ಏನು? ಪರಿಹಾರ ಏನು? 

ಡಿಪ್ರೆಶನ್‌ ( Depression Treatment ) ಬಗ್ಗೆ ಸಮುದ್ಯತಾ ಕಂಜರ್ಪಣೆ ಅವರ ಬರಹವಿದು!

ಈ ಪೀಳಿಗೆಯವರಿಗೆ ಡಿಪ್ರೆಶನ್‌ ಅನ್ನೋದು ಒಂಥರಾ ಫ್ಯಾನ್ಸಿ ಮಾತಾಗಿದೆ. ಯಾರನ್ನು ಕೇಳಿದ್ರೂ ಇದನ್ನೇ ಮಾತಾಡ್ತಾರೆ. Attention seeking, self-centered ಅನ್ನೋ ನೂರಾರು ಮಾತುಗಳು ನಮ್ಮ ಸುತ್ತ ಕೇಳಿಬರುತ್ತವೆ. ಸುತ್ತ ಇರೋ ಸ್ನೇಹಿತರು, ಕೊಲೀಗ್ಸ್‌, ಪರಿಚಯಸ್ಥರು ಯಾರನ್ನು ಮಾತನಾಡಿಸಿದರೂ ಎಷ್ಟು ಚೆನ್ನಾಗಿ ಮಾತಾಡ್ತಾ ಇರೋರು ಕೂಡ ಒಂದಿಷ್ಟು ಗಾಢ ನೋವು ಮೌನದ ಅಲೆಗೆ ಹೆಣಗಾಡುತ್ತಿರುತ್ತಾರೆ.

ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿ ವಿಚಿತ್ರ ಖಿನ್ನತೆ, ಅಭದ್ರತೆ ಹೊತ್ತುಕೊಂಡು ತಿರುಗಾಡುವವರಿಗೆ ಆ ಸಮಸ್ಯೆ ಬಾಲ್ಯದಿಂದಲೇ ಶುರುವಾಗಿರತ್ತೆ. Parental abandonment and childhood traumas are the common causes. ಹಾಗೆಯೇ, ಏ ಸುಮ್ನೆ ಯಾಕೆ ತಲೆಕೆಡಿಸ್ಕೊಳ್ತೀಯ, ಅದೆಲ್ಲ ನಿನ್ನ ತಲೆಲಿ ಅಷ್ಟೇ ಇರೋದು ಅಂತೆಲ್ಲ ಖುಷಿಯಾಗಿ ಮತ್ತು ಅಸೂಕ್ಷ್ಮವಾಗಿ ಮಾತಾಡೋರನ್ನ ಒಮ್ಮೆ ಅವರ ಕುಟುಂಬದ ಬಗ್ಗೆ ಕೇಳಿ. ಅಪ್ಪ ಅಮ್ಮನ ಜೊತೆ ಒಳ್ಳೆ ಬಾಂಧವ್ಯ ಇರತ್ತೆ. ಅಕ್ಕ ತಂಗಿ, ಅಣ್ಣ ತಮ್ಮ ಯಾರಾದರೂ ಇರ್ತಾರೆ.

ನಮ್ಮ ಅಪ್ಪ ಅಮ್ಮಂದಿರ ಜನರೇಶನ್‌ ನಲ್ಲಿ ಇಬ್ಬರೂ ಪೋಷಕರು ದುಡಿಯೋ ಉದಾಹರಣೆಗಳು ಹೆಚ್ಚು. ಮಕ್ಕಳನ್ನ ಅಜ್ಜಿ ಮನೆಲಿ ಬಿಡೋದು, ಯಾರದೋ ಮನೆಯಲ್ಲಿ ಓದಿಸೋದು, ಹಾಸ್ಟೆಲ್‌ ಗೆ ಕಳುಹಿಸೋದು, ಒಂದೇ ಮಗು ಬೇಕು ಅನ್ನೋದು ಹೀಗೆ ಹತ್ತು ಹಲವಾರು ರೀತಿಯ ಬದಲಾವಣೆಗಳು ಶುರು ಆಗಿತ್ತು. Emotional unavailability of parents was there all the time. ಅಪ್ಪ ಅಥವಾ ಅಮ್ಮ ಯಾವಾಗಲೂ ಕೆಲಸದಲ್ಲಿ ಇರೋದು. ಒಂದೇ ಕೂತು ಟಿವಿ ನೋಡೋದು ಅಥವಾ ಸುಮ್ಮನಿರೋದು, ಇಬ್ಬರೂ ಬಂದಾಗ ಕೋಪ ಬರಿಸದೇ ಇರೋದು ಅಷ್ಟೇ ಮಕ್ಕಳ ಧ್ಯೇಯವಾಗೋಕೆ ಶುರುವಾಗಿತ್ತು. ಅಪ್ಪ ಅಮ್ಮನ ಜಗಳ ಕೇಳದ ಹಾಗೆ ಮಾತು ಮರೆಸಿ ಕತೆ ಹೇಳೋಕೆ ಅಜ್ಜಿ ತಾತಂದಿರು ಇರುತ್ತಿರಲಿಲ್ಲ.

ಮಕ್ಕಳ ಮೊದಲನೆಯ ಸರ್ಕಲ್‌ ಬಲವಾಗಿದ್ದಷ್ಟೂ ಅವರಲ್ಲಿ ಆತ್ಮ ವಿಶ್ವಾಸ, ಧೈರ್ಯ, ಖುಷಿ ಹೆಚ್ಚು. ಅಪ್ಪ, ಅಮ್ಮ, ಅಜ್ಜಿ, ತಾತ, ಅಕ್ಕ, ತಂಗಿ, ಅಣ್ಣ, ತಮ್ಮ. ಉಳಿದೆಲ್ಲ ಸ್ನೇಹಿತರು, ಗಂಡ ಹೆಂಡತಿ ಪ್ರೇಮಿ ಎಲ್ಲ ಆಮೇಲೆ. Positive foundation ಇರೋ ವ್ಯಕ್ತಿಗೆ ಉಳಿದೆಲ್ಲ ಉತ್ತಮ ಸ್ನೇಹ ಪ್ರೇಮಗಳು ಸಿಕ್ಕೇ ಸಿಗ್ತವೆ.

ಆ ಮೊದಲನೆಯ ಸರ್ಕಲ್ ಶಿಥಿಲವಾದಷ್ಟೂ ಅಭದ್ರತೆ ಹೆಚ್ಚು. ಬಿಡು ನಮ್ಮಪ್ಪ ಅಮ್ಮನೇ ಏನೂ ಅಂದಿಲ್ಲ ಅನ್ನೋ ಧೈರ್ಯ, ನಮ್ಮಪ್ಪ ಅಮ್ಮ ನಿರೀಕ್ಷೆಯ ಒತ್ತಡ ಹಾಕಿಲ್ಲ, ಅವರಿಗೆ ನಾನು ಖುಷಿಯಾಗಿದ್ರೆ ಸಾಕು ಅನ್ನೋ ನೆಮ್ಮದಿ, ನಮ್ಮನೆಲಿ ಎಲ್ಲಾ ಓಕೆ ಅನ್ನೋ ಆತ್ಮ ವಿಶ್ವಾಸ... ಇದೆಲ್ಲ ಹಲವಾರು ಮಕ್ಕಳಿಗೆ ಬಾಲ್ಯದಿಂದಲೇ ಇರೋದಿಲ್ಲ. ನನ್ನ immediate ಭದ್ರ ಕೋಟೆ ಶಿಥಿಲವಾಗಿದೆ. ಇನ್ನು ಯಾರು ಬೇಕಾದರೂ ಈಟಿ ಎಸೆಯಬಹುದು ಅನ್ನೋದು ಅರಿವಾಗತ್ತೆ. ಎಲ್ಲರೂ ಗ್ರಾಂಟೆಡ್ ತೊಗೊತಾರೆ, ನಿಮ್ಮ ‌ನಿರ್ಧಾರಗಳನ್ನ ಅವಮಾನಿಸ್ತಾರೆ, ಅಥವಾ manipulate ಮಾಡ್ತಾರೆ ಅನ್ನೋ ಭಯ ಶುರುವಾಗತ್ತೆ... And it does happen..

ಯಾರಿಗೆ ನಾವು accountable, ಯಾರಿಗೆ ಅಲ್ಲ ‌ಅನ್ನೋ ದ್ವಂದ್ವ.. ನಮ್ಮ moral anchor ಯಾರು ಅನ್ನೋ ಸಂದಿಗ್ಧದಲ್ಲಿ ಎಡವುವುದು, ಇದೆಲ್ಲ ‌ಅಪಾಯಕಾರಿ. ಹೊರಗಿನ ಯಾವ ವ್ಯಕ್ತಿಯೂ ಆ ಭದ್ರತೆ, ಅಥವಾ unconditional love and care ಕೊಡೋಕೆ ಸಾಧ್ಯ ಇಲ್ಲ, ನಮ್ಮ ಭವಿಷ್ಯದ ಕುರಿತು ಯೋಚಿಸೋಕೆ ಸಾಧ್ಯ ಇಲ್ಲ, ನಮ್ಮ‌ ಜೊತೆ ತಾಳ್ಮೆಯಿಂದ ಇರೋಕೆ ಸಾಧ್ಯ ಇಲ್ಲ‌ ಅಂತ‌ ಅರಿವಾಗೋ ಹೊತ್ತಿಹೆ ಬದುಕು ಅತಂತ್ರ ಆಗಿರತ್ತೆ.

ಈ ನಡುವಿನಲ್ಲಿ ಕರಿಯರ್ ಏನೋ ಆಗಿರತ್ತೆ, ಕೆಲಸದ ಒತ್ತಡಗಳು, ಗೌರವ, ಆದರ್ಶ, ಕನಸು, ಪ್ರೀತಿ ಎಲ್ಲದರ ಒತ್ತಡಗಳು, ಆರ್ಥಿಕ ಸಮಸ್ಯೆಗಳಂತೂ ಕಿತ್ತು ತಿನ್ನೋಕೆ‌‌ ಶುರು ಮಾಡಿರತ್ತೆ. ಕೊನೆಗೆ ಮನುಷ್ಯರ ಮೇಲಿ‌ನ‌‌ ನಂಬಿಕೆ, ಆತ್ಮವಿಶ್ವಾಸ, ಛಲ, ಯಾವುದೂ ಇರದೆ ಕೊರಗ್ತಾರೆ. Some keep fighting all their lives, some succumb to it… ಎಲ್ಲೋ ಕೆಲವರು... Overcome ಮಾಡಬಹುದು...

ದಿನದ ಕೊನೆಗೆ its OK, ನೀನು ಒತ್ತಡ ತೊಗೊಬೇಡ, let's do something ಅನ್ನೋ ಜೀವ ಇಲ್ಲದೇ‌‌ ಇರೋದರ ನೋವು,‌ insecurity ಬೇರೆನೇ.. ಸಾಲಗಳು, ಮಕ್ಕಳ ಓದು, ಭವಿಷ್ಯ, ಆರೋಗ್ಯ ಸಮಸ್ಯೆ ಬಂದಾಗ ಇರೋ ಎಲ್ಲವನ್ನು ಬಳಿದು ಬಾಚೋ ಅನಿವಾರ್ಯತೆ, ಜೊತೆಗೆ ನನಗೇನಾದರೂ ಆದರೆ ಮಕ್ಕಳಿಗೆ ಯಾರಿದಾರೆ ಅನ್ನೋ ಆತಂಕ .. ಇಂಥಾ ನೂರಾರು ಸಂಕಟಗಳಿರತ್ತೆ..

ಮೊನ್ನೆ ಸುಂದರ್ ರಾಜ್ ರವರ ಒಂದು ಸಂದರ್ಶನ ನೋಡಿದೆ. ನಾನು ದುಡಿಯೋದು ನನ್ನ ಮಗಳಿಗೆ, ಮೊಮ್ಮಗನಿಗೆ ಅಂದರು. ಆಕೆ independent ಆಗಬಹುದು. ಆದರೆ, ಅಪ್ಪ ಇದಾನೆ ಅನ್ನೋ ಭಾವನೆ ಆಕೆಯಲ್ಲಿ‌ ಇನ್ನೂ ಆತ್ಮ ವಿಶ್ವಾಸ ತುಂಬಿ ಇನ್ನಷ್ಟು ಉತ್ತಮವಾಗಿ ‌ಕೆಲಸ ಮಾಡೋಕೆ, ನಿಧಾನವಾದರೂ ಒಳ್ಳೆಯದನ್ನೇ ಆಯ್ಕೆ ಮಾಡೋಕೆ ಅನುಕೂಲ ಆಗತ್ತೆ..

ಮಕ್ಕಳಿಗೆ ಬೇರೆಲ್ಲದಕ್ಕಿಂತ ಹೆಚ್ಚಾಗಿ ಅಪ್ಪ ಅಮ್ಮನ ಜೊತೆಗಿನ ಸಂವಹನ, ಮಾತುಕತೆ, ಪ್ರೀತಿ ವಿಶ್ವಾಸ ನಂಬಿಕೆ ಮುಖ್ಯ.‌ ಆ foundation ಇಲ್ಲದ ಕಡೆ ಗಟ್ಟಿಯಾಗಿ ಬೆಳೆಯೋದು ತುಂಬಾ ಕಷ್ಟ. ಒಂದಷ್ಟು ವರ್ಷ ಖಿನ್ನತೆ, ರಿಲೇಷನ್ ಶಿಪ್ ಸಮಸ್ಯೆಗಳು, anger issues ಏನೇನೋ ಅನುಭವಿಸಿ ಕೊನೆಗೆ ಸಮಾಜಕ್ಕೆ ಹೆದರೋಕಾಗತ್ತಾ ಅದು ಇದು ಅಂತ ಒಂದು ಲೈನಲ್ಲಿ ಅದಕ್ಕೆ ಸಮಜಾಯಿಷಿ ಕೊಡೋ ಪ್ರಯತ್ನಗಳೂ ನಡೆಯುತ್ತವೆ...

And... ಎಲ್ಲರ ಜೊತೆ ಇರೋ ಕುಟುಂಬದಲ್ಲಿ ಬೆಳೆದವರಿಗೆ ಉಳಿದವರ ನೋವಿನ ತೀವ್ರತೆಯ ಅರಿವೂ ಆಗೋದಕ್ಕೆ ಸಾಧ್ಯವಿಲ್ಲ.‌ ಅಂಥವರಿಗ ಇದೆಲ್ಲ ಸಣ್ಣಪುಟ್ಟದಕ್ಕೂ ತಲೆ‌ಕೆಡಿಸಿಕೊಳ್ತಾರೆ, ಅಥವಾ ಫ್ಯಾಶನ್ ಇದು ಅನ್ನೋ ಸ್ವಭಾವವೂ ಇರತ್ತೆ...

ನಮ್ಮ ಜನರೇಶನ್ ನಲ್ಲಿ ಎಷ್ಟೋ‌ ಮಂದಿ ಈ ಒದ್ದಾಟ ನೋವಿಗೆ ಬಲಿಯಾಗುತ್ತಲೇ ಇದ್ದಾರೆ.. ಈಗಿನ ಅಪ್ಪ - ಅಮ್ಮಂದಿರಾಗಿ, I think we should break this cycle somewhere..

ಆತ್ಮಹತ್ಯೆಗಳೇ ಸುತ್ತಮುತ್ತ ಕಾಣೋ ನಮ್ಮ ಜನರೇಷನ್ ನ ಸಮಸ್ಯೆ ನಮ್ಮ ಮಕ್ಕಳವರೆಗೂ ಹರಡದ ಹಾಗೆ ತಡೆಯೋ ಅಗತ್ಯ ಬಹಳಷ್ಟಿದೆ. This is a toxic loop.. ನಮ್ಮ ಮಕ್ಕಳೂ ಇದೇ ವಿಷ ವರ್ತುಲದಲ್ಲಿ ನರಳೋದನ್ನ ಈಗಿಂದಲೇ ತಡೆಯೋದು ನಮ್ಮ ಅತಿ ದೊಡ್ಡ ಕರ್ತವ್ಯ. No matter what we are, no matter how stressed we are.. ಮಕ್ಕಳ‌ ಜೊತೆ ಮಾತಾಡೋಣ, ಪ್ರೀತಿಸೋಣ, ಸಮಯ ಕೊಡೋಣ.. ಅವರ ಮಾತು ಕೇಳೋಣ...

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?