ವಿಟಮಿನ್ ಡಿ ಗೆ ಸೂರ್ಯನ ಕಿರಣ ಅಗತ್ಯ. ಕಿಟಕಿ ಗಾಜಿನಿಂದ ಹಾಸಿಗೆಗೆ ಸೂರ್ಯನ ಕಿರಣ ಬರುತ್ತೆ, ಮತ್ತ್ಯಾಕೆ ಹೊರಗೆ ಹೋಗ್ಬೇಕು ಅಂತಾ ನೀವು ಆಲೋಚನೆ ಮಾಡ್ತಿದ್ದೀರಾ? ಗಾಜಿನಿಂದ ಬರುವ ಕಿರಣಕ್ಕೂ, ನೇರವಾಗಿ ಚರ್ಮ ಸ್ಪರ್ಶಿಸುವ ಕಿರಣಕ್ಕೂ ವ್ಯತ್ಯಾಸವಿದ್ಯಾ? ಅದಕ್ಕೆ ಉತ್ತರ ಇಲ್ಲಿದೆ.
ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಡಿ ಬಹಳ ಪ್ರಯೋಜನಕಾರಿ. ಇದು ಕೇವಲ ಮೂಳೆಗಳು, ಹಲ್ಲುಗಳು ಮತ್ತು ಸ್ನಾಯುಗಳನ್ನು ಮಾತ್ರ ಬಲಪಡಿಸುವುದಿಲ್ಲ. ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಅಂಶಗಳನ್ನು ಹೀರಿಕೊಳ್ಳಲು ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಇದ್ರಿಂದ ಹೆಚ್ಚಾಗುವುದಲ್ಲದೆ ನಮ್ಮ ದೇಹ ರೋಗದಿಂದ ದೂರವಿರಲು, ಶಕ್ತಿ ಪಡೆಯಲು ವಿಟಮಿನ್ ಡಿ ನೆರವಾಗುತ್ತದೆ.
ನಿಮ್ಮ ದೇಹದಲ್ಲಿ ವಿಟಮಿನ್ ಡಿ (Vitamin D) ಕಡಿಮೆಯಾಗಿದೆ ಅಂದ್ರೆ ಬೆನ್ನು ನೋವು, ಆಯಾಸ, ದೌರ್ಬಲ್ಯ, ಖಿನ್ನತೆ, ಕೂದಲು ಉದುರುವಿಕೆಯಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸೂರ್ಯ (Sun) ನ ಬೆಳಕು ವಿಟಮಿನ್ ಡಿ ನೀಡುವ ಅತ್ಯಂತ ದೊಡ್ಡ ಮೂಲವೆಂಬುದು ನಮಗೆಲ್ಲ ತಿಳಿದಿದೆ. ಹಾಗಾಗಿಯವೇ ವಿಟಮಿನ್ ಡಿಯನ್ನು ಸನ್ ಶೈನ್ ವಿಟಮಿನ್ ಎಂದೂ ಕರೆಯಲಾಗುತ್ತದೆ. ದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಸೂರ್ಯನ ಬೆಳಕಿಗೆ ನಮ್ಮ ಮೈ ಒಡ್ಡಬೇಕು. ಸೂರ್ಯನ ಬೆಳಕಿಗೆ ಪ್ರತಿ ದಿನ ಅರ್ಧಗಂಟೆಯಾದ್ರೂ ನಿಲ್ಲಬೇಕೆಂದು ತಜ್ಞರು ಸಲಹೆ ನೀಡ್ತಾರೆ.
undefined
Mental Health: ಕೆಲ್ಸ ಹೇಗಿದೆ ಅಂದ್ರೆ ಸ್ಟ್ರೆಸ್ ಅಂತ ಹೇಳೋದು ಬಿಟ್ಬಿಡಿ!
ವಿಟಮಿನ್ ಡಿಗೆ ಸಂಬಂಧಿಸಿದಂತೆ ಜನರಲ್ಲಿ ಸಾಕಷ್ಟು ಪ್ರಶ್ನೆಗಳಿವೆ. ಕಿಟಕಿ (Window) ಗಾಜಿನಿಂದ ಬರುವ ಸೂರ್ಯನ ಬೆಳಕು ಮನುಷ್ಯರಿಗೆ ವಿಟಮಿನ್ ಡಿ ಅನ್ನು ನೀಡುತ್ತದೆಯೇ ಎಂಬುದು ಕೂಡ ಒಂದು ಪ್ರಶ್ನೆ. ಸೂರ್ಯನ ಬೆಳಕು ನಿಮಗೆ ವಿಟಮಿನ್ ಡಿ ಅನ್ನು ಒದಗಿಸುವುದಿಲ್ಲ, ಆದರೆ ನಿಮ್ಮ ದೇಹವು ವಿಟಮಿನ್ ಡಿ ಅನ್ನು ಉತ್ಪಾದಿಸುತ್ತದೆ ಎನ್ನುತ್ತಾರೆ ತಜ್ಞರು, ನಿಮ್ಮ ಚರ್ಮ (Skin) ವು ಸೂರ್ಯನ ನೇರಳಾತೀತ ಕಿರಣಗಳೊಂದಿಗೆ ಸಂಪರ್ಕಕ್ಕೆ ಬಂದಾಗ, ಅದು ದೇಹದಲ್ಲಿ ವಿಟಮಿನ್ ಡಿ ಅನ್ನು ಉತ್ಪಾದಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ನಮ್ಮ ದೇಹದಲ್ಲಿ ಉತ್ಪಾದನೆಯಾದ ವಿಟಮಿನ್ ಡಿಯನ್ನು ನಮ್ಮ ದೇಹ ಕ್ಯಾಲ್ಸಿಯಂ ಹೀರಿಕೊಳ್ಳಲು, ಮೂಳೆಗಳನ್ನು ಬಲಗೊಳಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಹಾರ್ಮೋನ್ ಸಮತೋಲನದಂತಹ ಅನೇಕ ಕಾರ್ಯಗಳಿಗೆ ಬಳಸುತ್ತದೆ.
ವಿಟಮಿನ್ ಡಿ ಯ ಎಲ್ಲಾ ಪ್ರಯೋಜನಗಳನ್ನು ಪಡೆಯಲು, ಸೂರ್ಯನ ಬೆಳಕು ಚರ್ಮದೊಂದಿಗೆ ನೇರ ಸಂಪರ್ಕವನ್ನು ಹೊಂದಿರುವುದು ಅವಶ್ಯಕ.ಹಾಗಂತ ಎಲ್ಲ ಸಮಯದಲ್ಲೂ ಸೂರ್ಯನ ಕಿರಣ ಚರ್ಮದ ಸಂಪರ್ಕಕ್ಕೆ ಬಂದ್ರೆ ಒಳ್ಳೆಯದಲ್ಲ. ಸೂರ್ಯನ ಕಿರಣ ನಿಮ್ಮ ಚರ್ಮಕ್ಕೆ ತಾಗುತ್ತಿದ್ದಂತೆ ಚರ್ಮದಲ್ಲಿ ಉರಿಯುಂಟಾದ್ರೆ ಆ ಸಮಯದಲ್ಲಿ ನೀವು ಸೂರ್ಯನ ಕಿರಣ ತೆಗೆದುಕೊಳ್ಳೋದನ್ನು ತಪ್ಪಿಸಬೇಕು. ಯಾಕೆಂದ್ರೆ ಇದು ವಿಕಿರಣವನ್ನು ಹೊಂದಿರುತ್ತದೆ ಎನ್ನುತ್ತಾರೆ ತಜ್ಞರು. ನೀವು ಯಾವ ದೇಶದಲ್ಲಿದ್ದೀರಿ, ಯಾವ ಪ್ರದೇಶದಲ್ಲಿ ಇದ್ದೀರಿ ಎಂಬುದು ಕೂಡ ಇಲ್ಲಿ ಮಹತ್ವಪಡೆಯುತ್ತದೆ. ಸೂರ್ಯನ ಕಿರಣದಿಂದ ನಿಮಗೆ ಯಾವುದೇ ಉರಿಯುಂಟಾಗ್ತಿಲ್ಲ ಎಂದಾದ್ರೆ ನೀವು ಕನಿಷ್ಠ 15 ನಿಮಿಷದಿಂದ ಗರಿಷ್ಠ ಒಂದು ಗಂಟೆಯವರೆಗೆ ಸೂರ್ಯನ ಕಿರಣದಡಿ ಇದ್ರೆ ಮಾತ್ರ ಲಾಭ ಹೆಚ್ಚು ಎನ್ನುತ್ತಾರೆ ತಜ್ಞರು.
ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುತ್ತವೆ ಈ ಆಯುರ್ವೇದ ಮೂಲಿಕೆಗಳು!
ಮೂಲ ಪ್ರಶ್ನೆಗೆ ಬರೋದಾದ್ರೆ ಕಿಟಕಿಯ ಗ್ಲಾಸ್ ನಿಂದ ಸೂರ್ಯನ ಕಿರಣ ಹಾದು ಬಂದು ನಿಮ್ಮ ದೇಹಕ್ಕೆ ಸ್ಪರ್ಶಿಸಿದ್ರೆ ಅದ್ರಿಂದ ಪ್ರಯೋಜನವಿಲ್ಲ. ನಿಮಗೆ ಸೂರ್ಯನ ಕಿರಣದಿಂದ ಸಿಗಬೇಕಾದ ಯಾವುದೇ ಪೋಷಕಾಂಶ ಸಿಗೋದಿಲ್ಲ. ಸೂರ್ಯನ ಕಿರಣ ನೇರವಾಗಿ ನಿಮ್ಮ ಚರ್ಮದ ಸಂಪರ್ಕಕ್ಕೆ ಬರಬೇಕು ಎನ್ನುತ್ತಾರೆ ತಜ್ಞರು.
ಇವುಗಳಿಂದ ಸಿಗುತ್ತೆ ವಿಟಮಿನ್ ಡಿ : ಸೂರ್ಯನ ಕಿರಣವಲ್ಲದೆ ನಿಮಗೆ ಕೆಲ ಆಹಾರದಿಂದ ವಿಟಮಿನ್ ಡಿ ಸಿಗುತ್ತದೆ. ಹಸುವಿನ ಹಾಲನ್ನು ವಿಟಮಿನ್ ಡಿ ಮೂಲವಾಗಿದೆ. ಮೊಟ್ಟೆಗಳನ್ನು ವಿಟಮಿನ್ ಡಿ ಆಹಾರವಾಗಿ ಸೇವನೆ ಮಾಡಬಹುದು. ಮೀನು, ಕಿತ್ತಳೆ ಹಣ್ಣಿನ ರಸ, ಅಣಬೆ, ಮೀನಿನ ಎಣ್ಣೆ, ಧಾನ್ಯಗಳು,ಸೋಯಾ, ಬೆಣ್ಣೆ, ಮೊಸರಿನ ಸೇವನೆಯಿಂದ ನೀವು ವಿಟಮಿನ್ ಡಿ ಪಡೆಯಬಹುದು.