
ನಿದ್ರೆ ನಮ್ಮ ಉಸಿರಿನಂತೆ. ಒಂದು ದಿನ ನಿದ್ರೆ ಮಾಡದೆ ಹೋದ್ರೆ ನಮ್ಮ ಆರೋಗ್ಯ ಸ್ಥಿತಿ ಹದಗೆಡುತ್ತದೆ. ಇತ್ತೀಚಿನ ದಿನಗಳಲ್ಲಿ ನಿದ್ರೆಗೆ ಜನರು ಮಹತ್ವ ನೀಡ್ತಿಲ್ಲ. ಕಳಪೆ ಜೀವನಶೈಲಿ ಮತ್ತು ತಡರಾತ್ರಿ ಮಲಗುವುದ್ರಿಂದ ಅನೇಕ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ನಿದ್ರೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಿದ್ರೆಗೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಮಾತನಾಡಲು ಪ್ರತಿ ವರ್ಷ ವಿಶ್ವ ನಿದ್ರಾ ದಿನವನ್ನು ಆಚರಿಸುತ್ತಾರೆ. ವರ್ಲ್ಡ್ ಸ್ಲೀಪ್ ಸೊಸೈಟಿಯಿಂದ 2008 ರಲ್ಲಿ ಇದ್ರ ಆರಂಭವಾಯ್ತು. ಪ್ರತಿ ವರ್ಷ ಮಾರ್ಚ್ ಮೂರನೇ ಶುಕ್ರವಾರದಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್ 17 ರಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ನಿದ್ರಾ ದಿನವನ್ನು ಆಚರಿಸುತ್ತ ಬರಲಾಗಿದೆ. ನಾವಿಂದು ನಿದ್ರೆಗೆ ಸಂಬಂಧಿಸಿದಂತೆ ಕೆಲ ಸಂಗತಿಯನ್ನು ನಿಮಗೆ ಹೇಳ್ತೇವೆ.
ವಿಶ್ವ ನಿದ್ರಾ ದಿನದ (World Sleep Day) 2023ರ ಥೀಮ್ ಏನು? : ಆರೋಗ್ಯ (Health) ಕ್ಕೆ ನಿದ್ರೆ ಅತ್ಯಗತ್ಯ ಇದು 2023 ರ ವಿಶ್ವ ನಿದ್ರಾ ದಿನದ ಥೀಮ್ ಆಗಿದೆ. ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಜೊತೆಗೆ ನಿದ್ರೆ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡುತ್ತದೆ. ಆದ್ರೆ ಅನೇಕ ಜನರು ನಿದ್ರೆಯನ್ನು ಉತ್ತಮ ಆರೋಗ್ಯದ ಅಗತ್ಯ ಅಂಶವೆಂದು ಪರಿಗಣಿಸುವುದಿಲ್ಲ. ವಿಶ್ವ ನಿದ್ರಾ ದಿನವು ನಿದ್ರೆಯಿಂದ ಆರೋಗ್ಯಕ್ಕೆ ಎಷ್ಟು ಲಾಭ ಎಂಬುದನ್ನು ತಿಳಿಸುವ ಪ್ರಯತ್ನ ನಡೆಸುತ್ತದೆ.
WORLD SLEEP DAY: ಸರ್‌ಪ್ರೈಸ್..ಉದ್ಯೋಗಿಗಳಿಗೆ ನಿದ್ದೆ ಮಾಡಲು ರಜೆ ನೀಡಿದ ಬೆಂಗಳೂರಿನ ಕಂಪೆನಿ
ನಿದ್ರೆಗೆ ಸಂಬಂಧಿಸಿದಂತೆ ಮಹಾತ್ಮರು ಅನೇಕ ಮಾಹಿತಿಯನ್ನು ನಮಗೆ ನೀಡಿದ್ದಾರೆ. ನಿದ್ರೆಗೆ ಸಂಬಂಧಿಸಿದಂತೆ ಕೆಲ ಕೋಟ್ಸ್, ಸಂದೇಶಗಳು ಇಲ್ಲಿವೆ. ನೀವು ನಿಮ್ಮ ಆಪ್ತರಿಗೆ ಈ ಸಂದೇಶವನ್ನು ರವಾನೆ ಮಾಡುವ ಮೂಲಕ ನಿದ್ರೆ ಮಹತ್ವವನ್ನು ತಿಳಿಸಬಹುದು.
• ನಿದ್ರೆಯು ಆರೋಗ್ಯ ಮತ್ತು ನಮ್ಮ ದೇಹಗಳನ್ನು ಒಟ್ಟಿಗೆ ಜೋಡಿಸುವ ಚಿನ್ನದ ಸರಪಳಿಯಾಗಿದೆ. - ಥಾಮಸ್ ಡೆಕ್ಕರ್
• ಹತಾಶೆ ಮತ್ತು ಭರವಸೆಯ ನಡುವಿನ ಉತ್ತಮ ಸೇತುವೆ ಉತ್ತಮ ರಾತ್ರಿಯ ನಿದ್ರೆ. - ಇ. ಜೋಸೆಫ್ ಕಾಸ್ಮನ್
• ಒಂದು ಒಳ್ಳೆಯ ನಗು ಮತ್ತು ದೀರ್ಘ ನಿದ್ರೆ ಎರಡು ಅತ್ಯುತ್ತಮ ಚಿಕಿತ್ಸೆಯಾಗಿದೆ. - ಐರಿಶ್ ಗಾದೆ
• ನಿದ್ರೆ ಅತ್ಯುತ್ತಮ ಧ್ಯಾನ. - ದಲೈ ಲಾಮಾ
• ನಿದ್ರೆ ನಮ್ಮಲ್ಲಿರುವ ಪ್ರಮುಖ 'ದುರಸ್ತಿ ಮತ್ತು ಮರುಸ್ಥಾಪನೆ' ಸಾಧನವಾಗಿದೆ. - ಡಾ. ನೀಲ್ ಸ್ಟಾನ್ಲಿ
• ನಿದ್ರೆ ನಮ್ಮ ಬ್ಯಾಟರಿಗಳನ್ನು ರೀಚಾರ್ಜ್ ಮಾಡಲು ಮತ್ತು ಹೊಸ ದಿನದ ತಯಾರಿಗೆ ಅತ್ಯುತ್ತಮ ಮಾರ್ಗವಾಗಿದೆ. - ಅರಿಯಾನಾ ಹಫಿಂಗ್ಟನ್
• ನಿದ್ರೆ ಒಂದು ಸುಂದರ ವಿಷಯ, ಇದು ಸಾವಿನ ಸಣ್ಣ ತುಂಡಿದ್ದ ಹಾಗೆ. - ಹೋಮರ್ ಸಿಂಪ್ಸನ್
• ಒಳ್ಳೆಯದ ದಿನ ಸಂತೋಷದ ನಿದ್ರೆ ತರುತ್ತದೆ. - ಲಿಯೊನಾರ್ಡೊ ಡಾ ವಿನ್ಸಿ
• ಆಯಾಸವು ಅತ್ಯುತ್ತಮ ದಿಂಬು - ಬೆಂಜಮಿನ್ ಫ್ರಾಂಕ್ಲಿನ್
Health Tips: ತೂಕ ಇಳಿಸೋಕೆ ಅಂತ ಈ ಡಯಟ್ ಮಾಡಿ ಪ್ರಾಣ ಕಳ್ಕೋಬೇಡಿ
• ನಾನು ನಿದ್ದೆ ಮತ್ತು ವಿಶ್ರಾಂತಿಯನ್ನು ಹೊರತುಪಡಿಸಿ ಯಾವುದೇ ವ್ಯಾಯಾಮವನ್ನು ತೆಗೆದುಕೊಂಡಿಲ್ಲ. - ಮಾರ್ಕ್ ಟ್ವೈನ್
• ನನಗೆ ಉತ್ತಮವಾದ ವಿಷಯವೆಂದರೆ ನಿದ್ರೆ. ನಂತರ ನಾನು ಕನಸು ಕಾಣಬಹುದು. - ಮರ್ಲಿನ್ ಮನ್ರೋ
• ನಿದ್ದೆ ಮಾಡುವುದು ನನ್ನ ಔಷಧ, ನನ್ನ ಹಾಸಿಗೆಯೇ ನನ್ನ ಡೀಲರ್ ಮತ್ತು ನನ್ನ ಅಲಾರಾಂ ಪೊಲೀಸ್. – ಅಜ್ಞಾತ
• ಉಸಿರಾಟದಷ್ಟೇ ನಿದ್ರೆ ಕೂಡ ಮುಖ್ಯ. ಆದ್ದರಿಂದ ಪ್ರತಿದಿನ ಉತ್ತಮ ನಿದ್ರೆ ಮಾಡಿ. ಹ್ಯಾಪಿ ವರ್ಲ್ಡ್ ಸ್ಲೀಪ್ ಡೇ 2023
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.