
ರಾತ್ರಿಯ ವೇಳೆಯಲ್ಲಿ ಅನೇಕ ಜನರು ಕಾಲುನೋವಿನ( Leg pain)ಸಮಸ್ಯೆಯನ್ನು ಅನುಭವಿಸುತ್ತಾರೆ. ಪ್ರತಿನಿತ್ಯ ಕಾಲು ನೋವಿನಿಂದ(Leg pain) ಬಳಲುವುದರಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.ನಿದ್ದೆ ಸರಿಯಾಗಿ ಅಗಿಲ್ಲವೆಂದರೆ ಇಡೀ ದಿನ ಉತ್ಸಾಹದಿಂದ ಕೂಡಿರುವುದಿಲ್ಲ.ನಿದ್ರೆ ಸರಿಯಾಗಿ ಬಂದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಆದ್ರೆ ಅದಕ್ಕೆ ಅಡ್ಡಿಯಾದರೆ ಆರೋಗ್ಯದ ಜೊತೆಗೆ ಸೌಂದರ್ಯವೂ ಹಾಳಾಗುತ್ತೆ. ಈ ರೀತಿ ಆಗಬಾರದು ಎಂದರೆ ಯಾವುದೇ ಅಡೆತಡೆ ಇಲ್ಲದೆ ರಾತ್ರಿ ನಿದ್ದೆ ಮಾಡಬೇಕು.ಆದರೆ ಕೆಲವರಲ್ಲಿ ಕಾಡುವಂತಹ ಈ ಕಾಲು ನೋವಿನಿಂದ ಆರೋಗ್ಯ ಹಾಳಾಗುತ್ತದೆ. ಕಾಲುಮುರಿವು ಎಂದರೆ ಪಾದಗಳಲ್ಲಿ ತೀವ್ರವಾದ ನೋವು ಉಂಟಾಗುವುದು. ಇದು ವಿಶೇಷವಾಗಿ ಮಂಡಿ, ಪಾದ ಅಥವಾ ಕಾಲಿನ ಕೆಳಭಾಗದಲ್ಲಿ ಸಂಭವಿಸುತ್ತವೆ. ಈ ಸಮಸ್ಯೆಗೆ ಹಲವು ಕಾರಣಗಳಿವೆ ಮತ್ತು ಅದಕ್ಕೆ ಸರಿಯಾದ ಪರಿಹಾರಗಳನ್ನು ಅಳವಡಿಸಿಕೊಳ್ಳುವುದರಿಂದ ಬಹುಮಟ್ಟಿಗೆ ಮಂಡಿ ಹಾಗೂ ಕಾಲಿನ ನೋವನ್ನ ನಿಯಂತ್ರಿಸಬಹುದು.
ರಾತ್ರಿ ಸಮಯದಲ್ಲಿ ಕಂಡು ಬರುವ ಕಾಲು ಸೆಳೆತ (Leg Cramps) ಕೆಲವರನ್ನು ಹೈರಾಣಾಗಿಸುತ್ತದೆ. ನಿದ್ರೆ(Sleep) ಮಾಡಲಾಗದೆಯೇ ನೋವಿನಿಂದ ಪದೇ ಪದೇ ಎಚ್ಚರವಾಗುವುದರಿಂದ ರಾತ್ರಿ ಆಗುವುದೇ ಬೇಡ ಎನಿಸುವಷ್ಟು ಕೋಪ ಬರುತ್ತದೆ.ಕಾಲುಮುರಿವಿಗೆ ಮುಖ್ಯವಾಗಿ ಕಾರಣ ಎಂದರೆ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದರಿಂದ, ಪೊಟ್ಯಾಸಿಯಂ, ಮೆಗ್ನೀಷಿಯಂ ಅಥವಾ ಕ್ಯಾಲ್ಸಿಯಂ ದೇಹದಲ್ಲಿ ಕಡಿಮೆಯಾದರೆ, ಹೆಚ್ಚು ಕಾಲ ನಿಲ್ಲುವುದು ಅಥವಾ ಹೆಚ್ಚು ವ್ಯಾಯಾಮ, ಔಷಧಿಳನ್ನ ಹೆಚ್ಚಾಗಿ ಸೇವಿಸುವುದು, ಸಕ್ಕರೆ ಕಾಯಿಲೆ ಅಥವಾ ನರಸಂಬಂಧಿತ ಸಮಸ್ಯೆಗಳು ಕಾಲು ಮತ್ತು ಮಂಡಿ ನೋವಿಗೆ ಕಾರಣವಾಗುತ್ತದೆ. ಹಾಗೇ ಶಾಖ, ಉಕ್ಕುವ ಬಟ್ಟೆ ಅಥವಾ ಬಿಗಿಯಾದ ಪಾದರಕ್ಷೆಗಳ ಬಳಕೆ ರಕ್ತಪರಿಚಲನ ತೊಂದರೆ ಉಂಟುಮಾಡಬಹುದು.
ಕಾಲುಗಳಿಗೆ ಸರಿಯಾದ ಚಲನೆ ಇಲ್ಲದಿದ್ದರೆ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.ಹಾರ್ಮೋನಲ್ ಬದಲಾವಣೆಗಳು (ಗರ್ಭಧಾರಣೆ/ಮೆನೋಪಾಝ್)ಈ ಸಂದರ್ಭಗಳಲ್ಲಿ ದೇಹದಲ್ಲಿ ಬದಲಾವಣೆಗಳು ಸಂಭವಿಸುತ್ತವೆ, ಇದು ಕಾಲುಮುರಿವಿಗೆ ಕಾರಣವಾಗಬಹುದು.ನಿದ್ರೆಗೆ ಮುನ್ನ ತಣ್ಣನೆಯ ವ್ಯಾಯಾಮ – ಹಗುರವಾದ ಕಾಲು ಸ್ಟ್ರೆಚಿಂಗ್ ಅಥವಾ ಪಾದ ಮಸಾಜ್(Massage)ಕೂಡ ಕಾಲು ನೋವನ್ನು ಕಡಿಮೆ ಮಾಡಬಹುದು. ಬಿಸಿ ಪ್ಯಾಕ್ ಇಡುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ತುಳಸಿ ಅಥವಾ ನಿಂಬೆ ಎಣ್ಣೆ ಬಳಸಿ ಪಾದ ಮಾಸಾಜ್ ಮಾಡಿದರೂ ವಿಶ್ರಾಂತಿ ಸಿಗಬಹುದು.ಮಲಗುವಾಗ ಕಾಲುಗಳ ಕೆಳಗೆ ಚಿಕ್ಕ ದಿಂಬು ಇಟ್ಟು ಮಲಗಿಕೊಳ್ಳುವುದರಿಂದ ಕಾಲು ನೋವನ್ನ ತಡೆಯಬಹುದು. ಒತ್ತಡದಲ್ಲಿ ಇರುವುದು ಕೂಡ ಈ ನೋವಿಗೆ ಕಾರಣವಾಗಬಹುದು. ಆದ್ದರಿಂದ ಮಾನಸಿಕ ಸಮತೋಲನವೂ ಮುಖ್ಯ.
ರಾತ್ರಿಯಲ್ಲಿ ಕಂಡು ಬರುವ ಕಾಲು ನೋವು ಹಾಗೂ ಸೆಳೆತವನ್ನು ತಡೆಯುವುದು ಹೇಗೆ?
ಹೆಚ್ಚಾಗಿ ನೀರು ಕುಡಿಯಿರಿ(Hydrate)
ದೇಹದ ನಿರ್ಜಲೀಕರಣ ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು, ಆದ್ದರಿಂದ ಪ್ರತಿನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಿರಿ. ಎರಡರಿಂದ ಮೂರು ಲೀಟರ್‌ನಷ್ಟು ನೀರನ್ನ ಕುಡಿಯುವುದು ಉತ್ತಮ. ಅಲ್ಲದೆ, ಮಲಗುವ ಮುನ್ನ ಆಲ್ಕೋಹಾಲ್ ಸೇವಿಸಬೇಡಿ. ಅದು ಸ್ನಾಯು ಅಂಗಾಂಶಗಳಿಗೆ ಹಾನಿ ಮಾಡುತ್ತದೆ. ಜೊತೆಗೆ ವಿಟಮಿನ್ ಬಿ ಮತ್ತು ಡಿ, ಕಬ್ಬಿಣ, ಸತು ಮತ್ತು ಪೊಟ್ಯಾಸಿಯಮ್ ಕೊರತೆಗೆ ಕಾರಣವಾಗಬಹುದು.
ಮಸಾಜ್ ಮಾಡಿ(Massage)
ರಾತ್ರಿ ವೇಳೆ ಕಾಲು ಸೆಳೆತ ಕಾಣಿಸಿಕೊಂಡರೆ, ನೋವು ಕಂಡು ಬರುತ್ತಿರುವ ಜಾಗವನ್ನು ಎರಡೂ ಕೈಗಳಿಂದ ಮಸಾಜ್ ಮಾಡಲು ಪ್ರಯತ್ನಿಸಿ. ಇದು ಬಿಗಿಯಾದ ಸ್ನಾಯುವನ್ನು ತ್ವರಿತವಾಗಿ ಸಡಿಲಗೊಳಿಸಲು ಸಹಾಯ ಮಾಡುತ್ತದೆ.ಮಸಾಜ್ (Massage)ಮಾಡುವಾಗ ಕೊಬ್ಬರಿ ಎಣ್ಣೆಯನ್ನ ಬಳಸಿ ಮಸಾಜ್ ಮಾಡಬಹುದು.
ಶಾಖ ನೀಡಿ
ಶಾಖವು ಬಿಗಿಯಾಗಿರುವ ಸ್ನಾಯುಗಳನ್ನು ಸಡಿಲ ಮಾಡಿ ಕಾಲಿನ ಸೆಳೆತದಿಂದ ನಿಮಗೆ ಪರಿಹಾರ ನೀಡುತ್ತದೆ. ಯಾವ ಜಾಗದಲ್ಲಿ ನೋವು ಬರುತ್ತಿದೆ ಎಂಬುದನ್ನು ಕಂಡು ಹಿಡಿದು ಅದರ ಮೇಲೆ ಬಿಸಿ ಟವಲ್, ಹಾಟ್ ಪ್ಯಾಡ್ ಅಥವಾ ಬಿಸಿ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ. ಕಾಲು ಸೆಳೆತ ಬಹ ತೀವ್ರವಾಗಿದ್ದರೆ ಬಿಸಿನೀರಿನ ಸ್ನಾನವನ್ನು ಕೂಡ ಮಾಡಬಹುದು. ಬಿಸಿ ನೀರಿನ ಸ್ನಾನ ಮಾಡುವಾಗ ಬಿಸಿ ನೀರು(Hot Water) ಹಾಗೂ ತಣ್ಣೀರನ್ನ(Cold Water) ಬಳಸಿ. ಪ್ರತಿನಿತ್ಯ ಬಿಸಿ ನೀರಿನಿಂದ ಸ್ನಾನ ಮಾಡಿ ಮಲಗಿದರೆ ಕಾಲು ನೋವು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ಆರೋಗ್ಯಕರ ಆಹಾರವನ್ನ ಸೇವಿಸಿ (Eat Helthy Food)
ಮೆಗ್ನೀಸಿಯಮ್(Magnesium )ಕೊರತೆಯು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ಕಂಡುಕೊಂಡಿವೆ. ಹಾಗಾಗಿ ಮೆಗ್ನೀಸಿಯಮ್(Magnesium) ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡಿ. ನಿಮ್ಮ ದೇಹದ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವಲ್ಲಿ ಮೆಗ್ನೀಸಿಯಮ್ ಅತ್ಯಗತ್ಯ. ಜೊತೆಗೆ ಕ್ಯಾಲ್ಸಿಯ(Calcium)ಇರುವಂತಹ ಆಹಾರಗಳನ್ನೂ ಸೇವಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.