
ಬೆಳಿಗ್ಗೆ ಎದ್ದ ತಕ್ಷಣ ಮನೆ ಕ್ಲೀನ್ (House clean) ಮಾಡೋದು ಮಹಿಳೆಯರ ಒಂದು ಟಾಸ್ಕ್. ಒಂದು ದಿನ ಬಿಡದೆ ಪ್ರತಿ ದಿನ ಮನೆಯ ಮೂಲೆ ಮೂಲೆ ಕ್ಲೀನ್ ಮಾಡೋರಿದ್ದಾರೆ. ಇನ್ನು ಕೆಲವರು ದಿನಕ್ಕೆ ಎರಡು ಬಾರಿ ಪೊರಕೆ ಹಿಡಿತಾರೆ. ಮನೆ ಕ್ಲೀನ್ ಮಾಡೋದು ಕೆಟ್ಟ ಕೆಲ್ಸವಲ್ಲ. ಮನೆಯಲ್ಲಿ ಹೆಚ್ಚು ಧೂಳಿದ್ರೆ ಅದು ತೂಕ ಹೆಚ್ಚಿಸೋಕೆ ಕಾರಣವಾಗುತ್ತದೆ ಅಂತ ಸ್ಟಡಿಯೊಂದು ವರದಿ ಮಾಡಿತ್ತು. ಈಗ ಇದೇ ಕ್ಲೀನಿಂಗ್ ಚಟ ನಿಮ್ಮ ಶ್ವಾಸಕೋಶದ ಆರೋಗ್ಯ ಹಾಳು ಮಾಡುತ್ತೆ ಎಂಬ ವರದಿ ಬಹಿರಂಗವಾಗಿದೆ. ಇಲ್ಲಿ ನೀವು ಬರೀ ಪೊರಕೆ ಹಿಡಿದು ಮನೆ ಕ್ಲೀನ್ ಮಾಡಿದ್ರೆ ನಿಮ್ಮ ಆರೋಗ್ಯ ಹಾಳಾಗೋದಿಲ್ಲ ಎಂಬುದನ್ನು ನೆನಪಿಡಿ. ನೀವು ಮನೆ ಕ್ಲೀನ್ ಮಾಡಲು ಬಳಸುವ ಸ್ಪ್ರೇ ನಿಮ್ಮ ಶ್ವಾಸಕೋಶಕ್ಕೆ ಹಾನಿ. ನಿಯಮಿತವಾಗಿ ನೀವು ಈ ಕ್ಲೀನಿಂಗ್ ಸ್ಪ್ರೇ (cleaning spray) ಬಳಸಿದ್ರೆ ದಿನಕ್ಕೆ ಒಂದು ಪ್ಯಾಕ್ ಸಿಗರೇಟು ಸೇದಿದಷ್ಟೆ ಹಾನಿಕರ ಅಂತ ಸ್ಟಡಿ ಹೇಳಿದೆ.
ಅಧ್ಯಯನ ಹೇಳಿದ್ದೇನು? : ನೆಲದ ಮೇಲೆ ಕೀಟಾಣು ಇರ್ಬಾರದು, ನೆಲ ಹೊಳೆಯಬೇಕು, ಮನೆ ಸುಹಾಸನೆಭರಿತವಾಗಿರಬೇಕು ಎನ್ನುವ ಕಾರಣಕ್ಕೆ ಅನೇಕರು ಈ ಕ್ಲೀನಿಂಗ್ ಸ್ಪ್ರೇ ಬಳಕೆ ಮಾಡ್ತಾರೆ. ಮಾರುಕಟ್ಟೆಯಲ್ಲಿ ನಾನಾ ಕ್ಲೀನಿಂಗ್ ಸ್ಪ್ರೇ ಲಭ್ಯವಿದೆ. ಆದ್ರೆ ನಾವು ನೀವೆಲ್ಲ ಬಳಸುವ ಈ ಸ್ಪ್ರೇ ನಮ್ಮ ಆರೋಗ್ಯ ಹಾಳು ಮಾಡುತ್ತೆ ಅಂದ್ರೆ ನಂಬೋದು ಕಷ್ಟ. ಅಮೇರಿಕನ್ ಥೋರಾಸಿಕ್ ಸೊಸೈಟಿಯ ಅಮೇರಿಕನ್ ಜರ್ನಲ್ ಆಫ್ ರೆಸ್ಪಿರೇಟರಿ ಅಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್ನಲ್ಲಿ ಇದಕ್ಕೆ ಸಂಬಂಧಿಸಿದ ವರದಿ ಪ್ರಕಟವಾಗಿದೆ. ಸಂಶೋಧನೆಯ ಪ್ರಕಾರ, ನಾರ್ವೆಯ ಬರ್ಗೆನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸರಾಸರಿ 34 ವರ್ಷ ವಯಸ್ಸಿನ 6,000 ಜನರ ಮೇಲೆ ಅಧ್ಯಯನ ನಡೆಸಿದ್ದಾರೆ. ಇವರು ಎರಡು ದಶಕಗಳ ಕಾಲ ಸ್ವಚ್ಛತೆಗೆ ಕ್ಲೀನರ್ ಬಳಸ್ತಿದ್ದರು. ಈ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುವ ಮಹಿಳೆಯರ ಶ್ವಾಸಕೋಶದ ಕೆಲ್ಸ ನಿಧಾನವಾಗಿತ್ತು. ದಿನಕ್ಕೆ 20 ಸಿಗರೇಟ್ ಸೇದುವ ಮಹಿಳೆಯರಷ್ಟು ಶ್ವಾಸಕೋಶದಲ್ಲಿ ಬದಲಾವಣೆಯಾಗಿತ್ತು.
ಕೆಲಸದಲ್ಲಿ stress ಆಯ್ತಾ? ತಲೆ ನೋವಾ? ತಲೆನೇ ಓಡ್ತಿಲ್ವಾ? ಫಟಾಫಟ್ ರಿಸಲ್ಟ್ಗೆ accupressure therapy
ಸ್ವಚ್ಛಗೊಳಿಸುವ ಸ್ಪ್ರೇಗಳು ಮತ್ತು ಉತ್ಪನ್ನಗಳಿಂದ ಬರುವ ಸಣ್ಣ ಕಣಗಳು ಉಸಿರಾಟದ ಮೇಲೆ ಪರಿಣಾಮ ಬೀರುತ್ತವೆ. ಪ್ರತಿ ನಿತ್ಯ ಅದನ್ನು ಬಳಕೆ ಮಾಡುವ ಮಹಿಳೆಯರಿಗೆ ಇದ್ರ ಪರಿಣಾಮ ತಕ್ಷಣ ಅರಿವಿಗೆ ಬರುವುದಿಲ್ಲ. ದೀರ್ಘಕಾಲ ಅದನ್ನು ಬಳಕೆ ಮಾಡ್ತಾ ಬಂದಂತೆ ಶ್ವಾಸಕೋಶದ ಸಾಮರ್ಥ್ಯ ಕಡಿಮೆ ಆಗ್ತಾ ಬರುತ್ತದೆ ಎಂದು ಅಧ್ಯಯನ ಹೇಳಿದೆ.
ಕ್ಲೀನಿಂಗ್ ಉತ್ಪನ್ನಗಳನ್ನು ವಾರಕ್ಕೊಮ್ಮೆ ಬಳಸುವುದು ಕೂಡ ಅಪಾಯಕಾರಿ ಎಂದು ಇನ್ನೊಂದು ಅಧ್ಯಯನ ಹೇಳಿದೆ. ವಾರಕ್ಕೊಮ್ಮೆ, ನೆಲವನ್ನು ಸ್ವಚ್ಛಗೊಳಿಸಲು ಸೋಂಕುನಿವಾರಕಗಳನ್ನು ಬಳಸುವ ದಾದಿಯರಿಗೆ ಶ್ವಾಸಕೋಶದ ಕಾಯಿಲೆ ಬರುವ ಅಪಾಯ ಶೇಕಡಾ 24 ರಿಂದ 32 ರಷ್ಟು ಹೆಚ್ಚು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಹೃದಯಾಘಾತಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್ ಈ ರೀತಿ ಔಷಧಿಯಿಲ್ಲದೆಯೂ ನಿವಾರಣೆಯಾಗುತ್ತೆ!
ಮನೆಯ ಸ್ವಚ್ಛತೆ ಹೇಗೆ ಮಾಡಬೇಕು? : ನಿಯಮಿತವಾಗಿ ಮನೆ ಕ್ಲೀನ್ ಮಾಡುವವರು ನೀರು ಅಥವಾ ಮೈಕ್ರೋಫೈಬರ್ ಬಟ್ಟೆಯಿಂದ ಮನೆಯನ್ನು ಸ್ವಚ್ಛಗೊಳಿಸಬೇಕು. ಸ್ಪ್ರೇಗಳಿಂದ ಸ್ವಚ್ಛಗೊಳಿಸುವ ಕೋಣೆಯಲ್ಲಿ ಸರಿಯಾಗಿ ಗಾಳಿ ಆಡುವಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ಸ್ಪ್ರೇ ಬಳಕೆಯನ್ನು ತಪ್ಪಿಸಿ. ಅನಿವಾರ್ಯ ಎಂದಾಗ ಮುಖಕ್ಕೆ ಮಾಸ್ಕ್ ಬಳಸಿ. ನೀವು ಮಾಡುವ ಸಣ್ಣ ಬದಲಾವಣೆಗಳು ನಿಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.