ಅಯ್ಯೋ ಸ್ಟ್ರೆಸ್ ಸ್ಟ್ರೆಸ್ ಅನ್ನೋದು ಬಿಡಿ, ಲೈಫನ್ನು ಹೀಗ್ ಎಂಜಾಯ್ ಮಾಡಿ

Published : Jul 08, 2022, 05:25 PM IST
ಅಯ್ಯೋ ಸ್ಟ್ರೆಸ್ ಸ್ಟ್ರೆಸ್ ಅನ್ನೋದು ಬಿಡಿ, ಲೈಫನ್ನು ಹೀಗ್ ಎಂಜಾಯ್ ಮಾಡಿ

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಯಾವುದೇ ವಿಚಾರಕ್ಕಿರಲಿ ಆತಂಕಕ್ಕೊಳಗಾಗುವುದು(Anxiety) ಸರ್ವೇ ಸಾಮಾನ್ಯವಾಗಿದೆ. ಇದನ್ನು ಅಷ್ಟು ಸುಲಭವಾಗಿ ತೆಗೆದು ಹಾಕಲು ಸಾಧ್ಯವಿಲ್ಲ. ಸಣ್ಣ ವಿಷಯಕ್ಕೂ(Small Matter) ನೀವು ಆತಂಕ ಪಡುತ್ತಿದ್ದೀರಾ? ಪದೇ ಪದೇ ಆತಂಕ ನಿಮ್ಮನ್ನು ಆವರಿಸಿದರೆ ಮಾನಸಿಕ ಆರೋಗ್ಯಕ್ಕೆ (Mental Health) ಕೆಟ್ಟ ಪರಿಣಾಮ ಬೀರುತ್ತದೆ. ಆತಂಕವನ್ನು ಹೇಗೆ ದೂರ ಮಾಡಬಹುದು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಇತ್ತೀಚಿನ ದಿನಗಳಲ್ಲಿ ಯಾವುದೇ ವಿಚಾರಕ್ಕಿರಲಿ ಆತಂಕಕ್ಕೊಳಗಾಗುವುದು(Anxiety) ಸರ್ವೇ ಸಾಮಾನ್ಯವಾಗಿದೆ. ಇದನ್ನು ಅಷ್ಟು ಸುಲಭವಾಗಿ ತೆಗೆದು ಹಾಕಲು ಸಾಧ್ಯವಿಲ್ಲ. ಏಕೆಂದರೆ ಖುಷಿ(Happy), ದುಃಖ, ಭಯದಂತೆಯೇ(Fear) ಆತಂಕವೂ(Anxiety) ಭಾವನೆಗಳಲ್ಲಿ ಒಂದು. ಸಣ್ಣ ವಿಷಯಕ್ಕೂ ನೀವು ಆತಂಕ ಪಡುತ್ತಿದ್ದೀರಾ? ಅದರಿಂದ ದೂರ ಇರುವುದು ವಾಸಿ. ಹೇಳುವುದು ಸುಲಭ ಆದರೆ ಅದನ್ನು ಅಳವಡಿಸಿಕೊಳ್ಳುವುದು ಕಷ್ಟ. ಆದರೂ ಪ್ರಯತ್ನಿಸಿ ಏಕೆಂದರೆ ಪದೇ ಪದೇ ಆತಂಕ ನಿಮ್ಮನ್ನು ಆವರಿಸಿದರೆ ಮಾನಸಿಕ ಆರೋಗ್ಯಕ್ಕೆ (Mental Health) ಕೆಟ್ಟ ಪರಿಣಾಮ ಬೀರುತ್ತದೆ. ಹೇಗೆ ಆತಂಕವನ್ನು ದೂರ ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಇಂದಿನ ಪೀಳಿಗೆಯಲ್ಲಿ ಆತಂಕ ಎಂಬುದು ವಿಶ್ವಾದ್ಯಂತ(World Wide) ದೊಡ್ಡ ಸಮಸ್ಯೆಯಾಗಿ(Problem) ಪರಿಣಮಿಸಿದೆ. ಇದು 21ನೇ ಶತಮಾನದ(Century) ಅತ್ಯಂತ ಕೆಟ್ಟ ಮಾನಸಿಕ ಆರೋಗ್ಯ ಮತ್ತು ಸಂಬAಧಿತ ಕಾಯಿಕೆಗಳ(Disease) ಸಾಂಕ್ರಾಮಿಕ ರೋಗಕ್ಕೆ ಸಾಕ್ಷಿಯಾಗಿದೆ. ಇಂದು ಸರಿಸುಮಾರು 275 ಮಿಲಿಯನ್(Million) ಜನರು ಆತಂಕದಿAದ ಬಳಲುತ್ತಿದ್ದಾರೆ. ಇದು ವಿಶ್ವದ ಜನಸಂಖ್ಯೆಯ ಶೇ.4ರಷ್ಟು ಆಗಿದೆ. 170 ರಷ್ಟು ಮಹಿಳೆಯರೇ(Female) ಆತಂಕದಿAದ ಹೆಚ್ಚು ಬಳಲುತ್ತಿದ್ದು, ಪುರುಷರ(Male) ಸಂಖ್ಯೆ 105ರಷ್ಟಿದೆ. ಮನಶ್ಶಾಸ್ತçಜ್ಞರು ಮತ್ತು ವೈದ್ಯರು ಆತಂಕವನ್ನು ನಿಯಂತ್ರಿಸಲು ವಿವಿಧ ಮಾರ್ಗಗಳನ್ನು ತಿಳಿಸಿದ್ದಾರೆ. ಅವು ಯಾವುವು ಇಲ್ಲಿದೆ ಮಾಹಿತಿ.

Fitness Tips : 20 ನಿಮಿಷ ಸ್ಕಿಪ್ಪಿಂಗ್ ಮಾಡಿ ಬೊಜ್ಜಿಗೆ ಬೈ ಬೈ ಹೇಳಿ

1. ಮಂಡಲ
ಸAಸ್ಕೃತದಿAದ(Sanskrit) ರೂಪುಗೊಂಡ ಮಂಡಲ(Mandal) ನಮ್ಮಲ್ಲಿನ ಅತಂಕವನ್ನು ಕಡಿಮೆ ಮಾಡುತ್ತದೆ. ಮಂಡಲ ಎಂದರೆ ಒಂದು ವೃತ್ತ(Circle), ಸಾಮಾನ್ಯವಾಗಿ ಒಂದು ಚಿತ್ರದ(Object) ಮೇಲೆ ಕೇಂದ್ರೀಕರಿಸುವುದು ಎಂದರ್ಥ. ಮಂಡಲ ಮಾಡುವ ಮೂಲಕ ನಿಮ್ಮಲ್ಲಿನ ಆತಂಕವನ್ನು ನಿಯಂತ್ರಿಸಲು ಅತ್ಯಂತ ಆಸಕ್ತಿದಾಯಕ ಮಾರ್ಗವಾಗಿದೆ. ಮಾನಸಿಕ ಆರೋಗ್ಯ ತಜ್ಞರ ಪ್ರಕಾರ ಮಂಡಲಗಳು ಮನಸ್ಸನ್ನು ಸದೃಢವಾಗಿಡುತ್ತಲ್ಲದೆ, ಮಾನಸಿಕ ರೋಗಗಳನ್ನು ಗುಣಪಡಿಸಲು ಚಿಕಿತ್ಸೆ ನೀಡುತ್ತದೆ. 

ಬ್ರೀಥಿಂಗ್ ಆಯಕ್ಟಿವಿಟಿ
ಆತಂಕವನ್ನು ಎದುರಿಸುವಾಗ ಆಳವಾಗಿ ಉಸಿರಾಡುವ(Inhale) ಮತ್ತು ಬಿಡುವ(Exhale) ಬದಲು ನರ್ಸರಿ ರೈಮ್‌ನ ಲಯಕ್ಕೆ ಉಸಿರಾಡಲು ಪ್ರಯತ್ನಿಸಿ. ಈ ಪ್ರಕ್ರಿಯೆಯು ಬಹಳ ಸಹಾಯಕವಾಗಿದೆ. ಏಕೆಂದರೆ ಜನರು ಆತಂಕದಿAದ ಹೈಪರ್ವೆಂಟಿಲೇಟ್(Hyperventilate) ಮಾಡುತ್ತಾರೆ ಮತ್ತು ಸಆಮಾನ್ಯ ಉಸಿರಾಟ ಮತ್ತು ಹೊರಹಾಕುವಿಕೆಯು ಯಾವಾಗಲೂ ಕೆಲಸ ಮಾಡುವುದಿಲ್ಲ. 

ಕೆಲಸದಲ್ಲಿ ತೊಡಗುವುದು
ಆಲೋಚಿಸಲು(Thinking) ಮತ್ತು ಅದರ ಬಗ್ಗೆ ಆಸಕ್ತಿ ವಹಿಸಲು ನೀವೆ ಒಂದಷ್ಟು ಸಮಯ ಮಾಡಿಕೊಳ್ಳಿ. ನಂತರ ಅದರ ಬಗ್ಗೆ ಯೋಚಿಸದಂತೆ ಒಂದಷ್ಟು ಬ್ಯುಸಿ ನೀಡುವ ಕೆಲಸಗಳ(Work) ಕಡೆ ಗಮನಹರಿಸಿ. ಒಂದು ನಿಮಿಷವಾದರೂ ನಿಮಗೆ ನಿರ್ದಿಷ್ಟ ಸಮಯವನ್ನು ನೀಡಿ ಮತ್ತು ಎಲ್ಲಾ ಕೆಟ್ಟ ಸಂಭವನೀಯ ಮಾರ್ಗಗಳ ಬಗ್ಗೆ ಯೋಚಿಸಿ ಮತ್ತು ಅದನ್ನು ಅಲ್ಲಿಯೇ ಬಿಟ್ಟು ಮುಂದಿನ ಕೆಲಸಗಳಿಗೆ ಮುಂದುವರಿಯುವುದು ಒಳ್ಳೆಯದು. ಕೆಲಸಗಳಲ್ಲಿ ತೊಡಗಿಕೊಂಡಷ್ಟು ಆತಂಕ ಕಡಿಮೆಯಾಗುತ್ತದೆ.

ದಿನಚರಿ
ಪ್ರತೀ ದಿನ ಏನಾಯ್ತು, ಏನ್ಮಾಡ್ದೆ ಹೀಗೆ ಎಲ್ಲವನ್ನೂ ಒಂದು ಡೈರಿಯಲ್ಲಿ(Dairy) ಬರೆಯುವ ಅಭ್ಯಾಸ ಬಹಳ ಒಳ್ಳೆಯದು. ಇದರಿಂದ ನಮ್ಮಲ್ಲಿನ ಆತಂಕ ಕಡಿಮೆಯಾಗುವುದಲ್ಲದೆ ಅದಕ್ಕೊಂದು ಪರಿಹಾರವನ್ನು(Solution) ಸ್ವತಃ ಹುಡುಕಿಕೊಳ್ಳಲು ಸಹಾಯವಾಗುತ್ತದೆ. ದೈನಂದಿನ ದಿನಚರಿಯ ಜೊತೆಗೆ ನಿಮ್ಮ ಆಲೋಚನೆ(Thinking) ಮತ್ತು ಭಾವನೆಗಳನ್ನೂ(Feeling) ಬರೆಯುವುದು ಒಳ್ಳೆಯ ಅಭ್ಯಾಸ. ಇದರಿಂದ ಆತಂಕದಿAದ ಹೊರಬರಲು ಸಾಧ್ಯ ಮತ್ತು ಮನಸ್ಸನ್ನೂ ಶಾಂತವಾಗಿಟ್ಟುಕೊಳ್ಳಬಹುದು(Calm). 

ಮೂತ್ರದ ಸೋಂಕು ಕಾಡುತ್ತಿದೆಯೇ? ಮಾನಸಿಕ ಸಮಸ್ಯೆಯೇ ಇದಕ್ಕೆ ಕಾರಣ….

ಸ್ವಯಂ ಕಾಳಜಿ
ವಾಕಿಂಗ್(Walking) ಹೋಗುವುದು, ಕ್ಯಾಂಡಲ್(Candal) ಹಚ್ಚುವುದು, ಒಳ್ಳೆಯ ಪುಸ್ತಕ ಓದುವುದು(Reading Good Books), ವ್ಯಾಯಾಮ(Exercise), ಉತ್ತಮ ಆಹಾರ ಪದಾರ್ಥ ಮಾಡುವುದು(Cooking), ಯೋಗ(Yoga) ಮಾಡುವುದು. ಹೀಗೆ ಮಾಡುವುದರಿಂದ ಒತ್ತಡ(Stress) ಮತ್ತು ಆತಂಕ(Anxiety) ಎರಡೂ ಕಡಿಮೆಯಾಗುತ್ತದಲ್ಲದೆ, ಬದುಕು ಇನ್ನಷ್ಟು ಚೆನ್ನಾಗಿ ರೂಪಿಸಿಕೊಳ್ಳಲು ಸಹಕಾರಿಯಾಗಿದೆ.

ಕೆಫಿನ್ ಕಡಿಮೆ ಮಾಡಿ
ಕೆಫಿನ್(Caffeine) ಅಂಶವು ಕಾಫಿ(Coffee), ಟೀ(Tea), ಚಾಕೋಲೇಟ್(Chocolate), ಎರ್ಜಿ ಡ್ರಿಂಕ್‌ಗಳಲ್ಲಿ (Energy Drinks) ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ದೇಹದಲ್ಲಿನ ಕೇಂದ್ರ ನರ ಮಂಡಲವನ್ನು(Nervous System) ಉತ್ತೇಜಿಸುತ್ತದೆ. ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ಆತಂಕ ಹೆಚ್ಚುತ್ತದಲ್ಲದೆ, ಆರೋಗ್ಯವನ್ನೂ ಹಾಳು ಮಾಡುತ್ತದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!