ಶಾಲೆ ಶುರು, ಮುಗಿಯದ ಜ್ವರ; ಮಕ್ಕಳಲ್ಲೂ ದೀರ್ಘಾವಧಿಯ ಕೋವಿಡ್ !

By Suvarna News  |  First Published Jul 8, 2022, 1:04 PM IST

ಮಕ್ಕಳಿಗೆ (Children) ಶಾಲೆ ಶುರುವಾಯ್ತು. ಆದರೆ ಆರೋಗ್ಯ ಸಮಸ್ಯೆ (Health problem) ಮಾತ್ರ ಕಡಿಮೆ ಆಗ್ತಾನೇ ಇಲ್ಲ. ಎರಡು ದಿನ ಶಾಲೆಗೆ ಹೋಗುವ ಮಕ್ಕಳು ಮತ್ತೆರಡು ದಿನ ಹುಷಾರಿಲ್ಲವೆಂದು ರಜೆ ಹಾಕಬೇಕಾಗುತ್ತದೆ. ಮಕ್ಕಳಲ್ಲಿ ಅಗಾಗ ಕಾಣಿಸಿಕೊಳ್ತಿರೋ ಜ್ವರ (Fever), ಶೀತ, ಸುಸ್ತಿಗೆ ಕಾರಣವಾಗಗಿರೋದು ಲಾಂಗ್ ಕೋವಿಡ್ ಸಿಂಪ್ಟಮ್ಸ್. ಆ ಬಗ್ಗೆ ತಿಳ್ಕೊಳ್ಳೋಣ.


ಕಳೆದ ಎರಡು ವರ್ಷಗಳಿಂದ ಜನಜೀವನವನ್ನು ತಲ್ಲಣಗೊಳಿಸಿದ್ದ ಕೊರೋನಾ (Corona) ಕಡಿಮೆಯಾಯ್ತು ಎಂದು ಜನರು ನಿರಾಳವಾಗಿದ್ದರು. ಆದ್ರೆ ಈಗ ಮತ್ತೆ ಸೋಂಕಿನ (Virus) ಪ್ರಮಾಣ ಹೆಚ್ಚುತ್ತಿದೆ. ಕೋವಿಡ್ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ತಜ್ಞರು ಸಲಹೆ ನೀಡುತ್ತಿದ್ದಾರೆ. ಸರ್ಕಾರಗಳೂ ಜಾಗರೂಕರಾಗಿರುವಂತೆ ಜನರನ್ನು ಎಚ್ಚರಿಸುತ್ತಿವೆ. ಪ್ರಪಂಚದಾದ್ಯಂತ ಅನೇಕ ಜನರು ಈ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಆದರೆ ಅನೇಕ ಜನರು ಕೋವಿಡ್‌ನಿಂದ ಚೇತರಿಸಿಕೊಂಡ ನಂತರ ವರ್ಷಗಳ ಬಳಿಕ ಆರೋಗ್ಯ ಸಮಸ್ಯೆ (Health problem)ಯಿಂದ ಬಳಲುತ್ತಿದ್ದಾರೆ. ಇದನ್ನು ಲಾಂಗ್‌ ಕೋವಿಡ್ ಸಿಂಪ್ಟಮ್ಸ್ (Long covid symptoms) ಎನ್ನಲಾಗುತ್ತಿದೆ. ದೈನಂದಿನ ಜೀವನವು ದೀರ್ಘಕಾಲದ ಕೋವಿಡ್‌ನಿಂದ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವೂ ಹಾಳಾಗುತ್ತದೆ ಎಂದು ಹಲವು ಸಂಶೋಧನೆಗಳು ಬಹಿರಂಗಪಡಿಸಿವೆ.

ಆದರೆ ಈ ದೀರ್ಘ ಕೋವಿಡ್ ವಯಸ್ಕರಲ್ಲಿ ಮಾತ್ರ ಕಂಡುಬರುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದನ್ನು ಮಕ್ಕಳಲ್ಲೂ (Children) ಕಾಣಬಹುದು ಎನ್ನುತ್ತಾರೆ ತಜ್ಞರು. ವಯಸ್ಕರಂತೆಯೇ, ಮಕ್ಕಳು ಹೆಚ್ಚು ಅಥವಾ ಕಡಿಮೆ ತೀವ್ರವಾದ ರೋಗಲಕ್ಷಣಗಳನ್ನು ಅನುಭವಿಸಬಹುದು. 1 ವರ್ಷದಿಂದ 14 ವರ್ಷದೊಳಗಿನ ಮಕ್ಕಳಲ್ಲಿ ದೀರ್ಘಕಾಲದ ಕೋವಿಡ್ ಸಮಸ್ಯೆಗಳು ಕಂಡುಬರುತ್ತವೆ ಎಂಬುದನ್ನು ಯುಕೆ ಮೂಲದ ಸಂಶೋಧಕರ ಗುಂಪು ಇದನ್ನು ಅಧ್ಯಯನ ಮಾಡಿದೆ. ಅಧ್ಯಯನದ ಪ್ರಕಾರ.. ಮಕ್ಕಳಲ್ಲಿ ಕಂಡುಬರುವ ದೀರ್ಘಕಾಲದ ಕೋವಿಡ್ ಲಕ್ಷಣಗಳು ಹೀಗಿವೆ..

Tap to resize

Latest Videos

ದೀರ್ಘಾವದಿಯ ಕೋವಿಡ್ ಅಪಾಯ ಪುರುಷರಿಗಿಂತ ಮಹಿಳೆಯರಿಗೆ ಶೇ.22ರಷ್ಟು ಹೆಚ್ಚು !

ಮಕ್ಕಳಲ್ಲಿ ದೀರ್ಘಾವಧಿಯ ಕೋವಿಡ್‌ ಲಕ್ಷಣಗಳು
ಹಸಿವು ಕಡಿಮೆಯಾಗುವುದು, ಮೂಡ್ ಸ್ವಿಂಗ್, ಕೆಮ್ಮು, ಹೊಟ್ಟೆ ನೋವು ಮತ್ತು ಚರ್ಮದ ದದ್ದುಗಳಂತಹ ಲಕ್ಷಣಗಳು ಮೂರು ವರ್ಷದವರೆಗಿನ ಮಕ್ಕಳಲ್ಲಿ ಕಂಡುಬರುತ್ತವೆ. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ..ಹಠಾತ್ ಅಳುವುದು, ಹೊಟ್ಟೆ ನೋವು, ಆಹಾರ ಸೇವಿಸದಿರುವುದು, ಹಠಮಾರಿತನ, ಹೊಟ್ಟೆ ನೋವಿನಿಂದ ಅಳುವುದು ಮುಂತಾದ ಲಕ್ಷಣಗಳು ಕಾಣಸಿಗುತ್ತವೆ.

ನಾಲ್ಕರಿಂದ 11 ವರ್ಷ ವಯಸ್ಸಿನ ಮಕ್ಕಳಲ್ಲಿ, ಚರ್ಮದ ಮೇಲೆ ಹೆಚ್ಚು ಕಲೆಗಳು, ಮನಸ್ಥಿತಿ ಬದಲಾವಣೆಗಳು ಮತ್ತು ವಸ್ತುಗಳ ಮೇಲೆ ಕೇಂದ್ರೀಕರಿಸಲು ಅಸಮರ್ಥತೆ ಇದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಅಲ್ಲದೆ, ಹೆಚ್ಚಿದ ಕೋಪ ಮತ್ತು ಹಠಮಾರಿ ವರ್ತನೆಯಂತಹ ರೋಗಲಕ್ಷಣಗಳು ಸಹ ಮಕ್ಕಳಲ್ಲಿ ಕಂಡುಬರುತ್ತವೆ. ಕಿರಿಕಿರಿಯು ಸಹ ಪರಿಣಾಮ ಬೀರುತ್ತದೆ. ಅಂತಹ ಮಕ್ಕಳಲ್ಲಿ ಆತ್ಮವಿಶ್ವಾಸ ಕಡಿಮೆ ಇರುತ್ತದೆ. ಅವರಿಗೆ ಸಮಾಲೋಚನೆ ಅಥವಾ ಅಗತ್ಯ ಚಿಕಿತ್ಸೆ ನೀಡಬಹುದು. ಅಂತಹ ಮಕ್ಕಳನ್ನು ಅವರ ಪೋಷಕರು ಬೆಂಬಲಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ.

12 ರಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಏಕಾಗ್ರತೆ ಕೊರತೆ, ಆಯಾಸ, ಜ್ಞಾಪಕ ಶಕ್ತಿ ನಷ್ಟ ಮತ್ತು ಮೂಡ್ ಸ್ವಿಂಗ್‌ಗಳಂತಹ ದೀರ್ಘ ಕೋವಿಡ್ ಲಕ್ಷಣಗಳು ಕಂಡುಬರುತ್ತವೆ. ಇದಲ್ಲದೆ, ಈ ಮಕ್ಕಳು ಶಿಕ್ಷಣದ ಬಗ್ಗೆಯೂ ಗಮನಹರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಕ್ರೀಡೆಯಲ್ಲಿ ಉತ್ಸಾಹ ತೋರಿಸುವುದಿಲ್ಲ. ಕಿರಿಕಿರಿ, ಆತ್ಮವಿಶ್ವಾಸದ ಕೊರತೆ, ಕೋಪ ಮತ್ತು ಮೊಂಡುತನವೂ ಕಂಡುಬರುತ್ತದೆ. ಈ ಸಮಸ್ಯೆಗಳು ಮುಂದುವರಿದರೆ ಮಕ್ಕಳನ್ನು ಖಂಡಿತವಾಗಿಯೂ ವೈದ್ಯರ ಬಳಿ ತೋರಿಸಬೇಕು ಎಂದು ತಜ್ಞರು ಹೇಳುತ್ತಾರೆ.

ಮಧುಮೇಹ ಇರುವವರಿಗೆ ದೀರ್ಘಾವಧಿಯ ಕೋವಿಡ್‌ ಅಪಾಯ ಹೆಚ್ಚು, ಅಧ್ಯಯನದ ಹೊಸ ವಿಶ್ಲೇಷಣೆ

ಜ್ವರ ಶುರುವಾದರೆ ಹತ್ತಕ್ಕೂ ಹೆಚ್ಚು ದಿನ ಇರುತ್ತದೆ; ಪೋಷಕರ ಆತಂಕ
ಮಕ್ಕಳಲ್ಲಿ ಇತ್ತೀಚಿಗೆ ಅನಾರೋಗ್ಯ ಕಾಣಿಸಿಕೊಂಡರೆ ಹತ್ತಕ್ಕೂ ಹೆಚ್ಚು ದಿನ ಇರುತ್ತದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೋನಾ ಮೊದಲ್ಲೆಲ್ಲಾ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜ್ವರ ಟ್ಯಾಬ್ಲೆಟ್ ತೆಗೆದುಕೊಂಡರೂ, ತೆಗೆದುಕೊಳ್ಳದಿದ್ದರೂ ಮೂರ್ನಾಲ್ಕು ದಿನದಲ್ಲಿ ಕಡಿಮೆಯಾಗಿಬಿಡುತ್ತಿತ್ತು. ಆದ್ರೆ ಕೊರೋನಾ ಸೋಂಕು ಹರಡಲು ಆರಂಭವಾದ ನಂತರ ಮಕ್ಕಳು ಸಹ ಬೇಗನೇ ಚೇತರಿಸಿಕೊಳ್ಳುತ್ತಿಲ್ಲ ಎಂದು ಪೋಷಕರು ತಿಳಿಸುತ್ತಾರೆ.

click me!