
ಮಳೆಗಾಲದಲ್ಲಿ, ಜನರು ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಹವಾಮಾನ ಬದಲಾವಣೆಯಿಂದ ಜ್ವರ (Fever), ಶೀತ, ಸ್ರವಿಸುವ ಮೂಗು, ಕೆಮ್ಮು, ಉರಿಯೂತದ ಸೈನಸ್, ಕಿವಿ ದಟ್ಟಣೆ, ಎದೆಯ ದಟ್ಟಣೆ, ದೇಹ ಮತ್ತು ಸ್ನಾಯು ನೋವು, ಉಸಿರಾಟದ ತೊಂದರೆ, ಅಸ್ತಮಾ (Asthama) ಇರುವವರಲ್ಲಿ ಉಬ್ಬಸ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳು ಬೇಗ ಕಡಿಮೆಯಾಗೋದು ಸಹ ಇಲ್ಲ. ಹೀಗಾಗಿ ಜನರು ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಹವಾಮಾನ ಬದಲಾವಣೆಯಿಂದಾಗೋ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವೇನು ?
1. ಮನೆಯೊಳಗೇ ಇರಿ: ನೀವು ಅಲರ್ಜಿಗಳಿಗೆ ಗುರಿಯಾಗಿದ್ದರೆ ಅಥವಾ ಅಸ್ತಮಾದಿಂದ ಬಳಲುತ್ತಿದ್ದರೆ, ಸಾಧ್ಯವಾದಷ್ಟು ಮನೆಯೊಳಗೆ ಇರುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಬಹುತೇಕ ಕಡಿಮೆಯಾಗುತ್ತದೆ. ತೋಟದಲ್ಲಿ ಕೆಲಸ ಮಾಡುವುದನ್ನು ತಪ್ಪಿಸುವುದು ಅಥವಾ ಒದ್ದೆ ನೆಲದಿಂದ ಹುಲ್ಲು, ಕಳೆ ಇತ್ಯಾದಿಗಳನ್ನು ತೆಗೆಯುವುದನ್ನು ತಪ್ಪಿಸಿ. ಮಳೆಗಾಲದಲ್ಲಿ ಮನೆಯಿಂದ ಹೊರ ಹೋಗಿದ್ದಾಗ ಮನೆ ಪ್ರವೇಶಿಸಿದ ಕೂಡಲೇ ಸ್ನಾನ ಮಾಡಿ ಬಟ್ಟೆ ಬದಲಿಸಿ. ವ್ಯಾಯಾಮಕ್ಕಾಗಿ ಬೆಳಗ್ಗೆ ಬೇಗನೆ ಹೋಗುವುದನ್ನು ತಪ್ಪಿಸಿ. ಒಳಾಂಗಣ ವ್ಯಾಯಾಮವನ್ನು ಅಭ್ಯಾಸ ಮಾಡಿ. ದೇಹ ಯಾವಾಗಲೂ ಬೆಚ್ಚಗಿರುವಂತೆ ನೋಡಿಕೊಳ್ಳಿ.
2. ಮಾಸ್ಕ್ ಬಳಸಿ: ಕಣ್ಣಿಗೆ ಕಾಣದ ವೈರಸ್, ಬ್ಯಾಕ್ಟಿರೀಯಾಗಳು ನಿಮ್ಮ ಮೂಗಿನ ಪ್ರದೇಶಕ್ಕೆ ಬರದಂತೆ ತಡೆಯಲು ಮಾಸ್ಕ್ ಧರಿಸುವುದು ಮುಖ್ಯ. ಇದು ಆರೋಗ್ಯ ಹದಗೆಡುವುದನ್ನು ತಪ್ಪಿಸುತ್ತದೆ.
ಮಳೆಯಲ್ಲಿ ಕರಿದ ತಿಂಡಿ ತಿನ್ನೋ ಮಜಾನೇ ಬೇರೆ, ಒಳ್ಳೇದಲ್ಲ ಆರೋಗ್ಯಕ್ಕೆ!
3. ಮೂಗನ್ನು ಸ್ವಚ್ಛ ಮಾಡಿ: ಮೂಗಿನ ಹೊಳ್ಳೆಗಳ ಮೂಲಕ ಹಲವು ಬ್ಯಾಕ್ಟಿರೀಯಾಗಳು ಹರಡುತ್ತವೆ. ಹೀಗಾಗಿ ಮೂಗಿನ ಒಳಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಕ್ರಿಮಿನಾಶಕ ಲವಣಯುಕ್ತ ದ್ರಾವಣದಿಂದ ತೊಳೆಯಬಹುದು, ಇದು ಪರಾಗಗಳು ಮತ್ತು ಲೋಳೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ.
4. ಪರೀಕ್ಷಿಸಿ: ಪ್ರತಿ ಹವಾಮಾನ ಬದಲಾವಣೆಯೊಂದಿಗೆ ಅಲರ್ಜಿಗಳು ಮರುಕಳಿಸುವ ಸಮಸ್ಯೆಯಾಗಿದ್ದರೆ, ಚರ್ಮದ ಪ್ರತಿಕ್ರಿಯೆಗಳಿಗೆ ಪ್ರಚೋದಕಗಳನ್ನು ಕಂಡುಹಿಡಿಯಲು ಪರೀಕ್ಷೆಗಳನ್ನು ಮಾಡಿ. ಕಾರಣಗಳನ್ನು ತಿಳಿದುಕೊಳ್ಳುವ ಮೂಲಕ, ನೀವು ಅದಕ್ಕೆ ಅನುಗುಣವಾಗಿ ಕಾಳಜಿ ವಹಿಸಬಹುದು. ಸೂಕ್ತ ವೈದ್ಯರಿಂದ ಚಿಕಿತ್ಸೆಯನ್ನೂ ಪಡೆಯಬಹುದು.
ಮಳೆಗಾದಲ್ಲಿ ಫಂಗಸ್ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ
ಮಳೆಗಾಲ (Monsoon) ಎಂದರೆ ತೇವಾಂಶ ಮತ್ತು ಫಂಗಸ್ ಹೆಚ್ಚಾಗುವ ಕಾಲ. ನೀವು ದಿನವಿಡೀ ಎಲ್ಲೆಡೆ ತೇವಾಂಶವನ್ನು ಮಾತ್ರ ನೋಡುತ್ತೀರಿ. ಬಟ್ಟೆಗಳಲ್ಲಿ ಒಂಥರ ಸ್ಮೆಲ್ ಬರುತ್ತೆ. ಎಲ್ಲಿ ನೀರಿದೆಯೋ ಅಥವಾ ಹೆಚ್ಚು ತೇವಾಂಶವಿದ್ದರೆ, ಫಂಗಸ್ ಬರಲು ಪ್ರಾರಂಭಿಸುತ್ತದೆ. ಮಳೆಯಿಂದಾಗಿ ಮತ್ತು ಸೂರ್ಯನ ಬೆಳಕು (sunlight) ಸರಿಯಾಗಿ ಬೀಳದ ಕಾರಣ ಅನೇಕ ಬಾರಿ ಬಟ್ಟೆಗಳು ಸರಿಯಾಗಿ ಒಣಗೋದಿಲ್ಲ ಮತ್ತು ಜನರು ಅವುಗಳನ್ನು ಹಾಗೆಯೇ ಅಲ್ಮೆರಾದಲ್ಲಿ ಇಡುತ್ತಾರೆ. ಇದು ಬಟ್ಟೆಗಳ ಮೇಲೆ ಫಂಗಸ್ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ನಿಮ್ಮ ಮನೆಯಲ್ಲಿ ಸೂರ್ಯನ ಬೆಳಕು ಕಡಿಮೆ ಇದ್ದರೆ, ಫಂಗಸ್ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದರಿಂದ ಹಲವು ರೀತಿಯ ಸ್ಕಿನ್ ಇನ್ ಫೆಕ್ಷನ್ ಕಾಣಿಸಿಕೊಳ್ಳುತ್ತೆ.
ಮಳೆಗಾಲದಲ್ಲಿ ಬಿಸಿಬಿಸಿ ಬಿರಿಯಾನಿ, ಕಬಾಬ್ ತಿನ್ನೋ ಮುನ್ನ ಈ ವಿಚಾರ ತಿಳ್ಕೊಂಡಿರಿ
ಯಾವುದಾದರೂ ಒಂದು ಫಂಗಸ್ (fungus) ಇದ್ದರೆ, ಅದು ಬೇಗನೆ ಮನೆಯಲ್ಲಿರುವ ಪೀಠೋಪಕರಣಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಹಾಳು ಮಾಡಲು ಪ್ರಾರಂಭಿಸುತ್ತದೆ. ಹಾಗಿದ್ರೆ ಫಂಗಸ್ ನಿಂದ ವಸ್ತುಗಳನ್ನು ರಕ್ಷಿಸೋದು ಹೇಗೆ ನೋಡೋಣ.
ಮನೆಯಲ್ಲಿ ಶಿಲೀಂಧ್ರ ಇದ್ದರೆ, ಆ ಸ್ಥಳದಲ್ಲಿ ವಿನೆಗರ್ (vinegar) ಸಿಂಪಡಿಸಿ ಮತ್ತು ಅರ್ಧ ಗಂಟೆಗಳ ಕಾಲ ಬಿಡಿ. ಈಗ ಆ ಸ್ಥಳವನ್ನು ಸ್ಕ್ರಬ್ಬಿನಿಂದ ಉಜ್ಜಿ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಬಟ್ಟೆಯಲ್ಲಿ ಶಿಲೀಂಧ್ರಗಳಿದ್ದರೆ, ಬಟ್ಟೆಯನ್ನು ತೊಳೆಯುವಾಗ ನೀರಿನಲ್ಲಿ ವಿನೆಗರ್ ಬಳಸಿ. ಫಂಗಸ್ ತೆಗೆದುಹಾಕಲು ನೀವು ಅಡುಗೆ ಸೋಡಾವನ್ನು (baking soda) ಸಹ ಬಳಸಬಹುದು. ಇದಕ್ಕಾಗಿ, 2 ಟೀಸ್ಪೂನ್ ಅಡುಗೆ ಸೋಡಾ ಮತ್ತು 2 ಕಪ್ ಬೆಚ್ಚಗಿನ ನೀರನ್ನು ಮಿಕ್ಸ್ ಮಾಡಿ ಮತ್ತು ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಅದನ್ನು ಫಂಗಸ್ ಇರುವ ಜಾಗಕ್ಕೆ ಸ್ಪ್ರೇ ಮಾಡಿ. 1 ಗಂಟೆ ನಂತರ, ಅದನ್ನು ಉಜ್ಜಿ ತೊಳೆಯಿರಿ ಮತ್ತು ಒಣಗಿದ ಬಟ್ಟೆಯಿಂದ ಸ್ವಚ್ಛಗೊಳಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.