ಪ್ರತಿ ರಾತ್ರಿ ತಡವಾಗಿ ಮಲಗಿದ್ರೆ ಮಾನಸಿಕ ಆರೋಗ್ಯ ಹಾಳು; ಅಧ್ಯಯನ

By Reshma RaoFirst Published Jul 8, 2024, 1:10 PM IST
Highlights

ರಾತ್ರಿಯಲ್ಲಿ ನಿರ್ದಿಷ್ಟ ಸಮಯದ ನಂತರ ಮಲಗುವುದು ಮಾನಸಿಕ ಆರೋಗ್ಯ ಹಾಳು ಮಾಡುತ್ತದೆ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡುಹಿಡಿದಿದ್ದಾರೆ.

ನಿದ್ರೆಗೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂಬುದು ಎಲ್ಲರಿಗೂ ಗೊತ್ತು. ನಿದ್ರೆ ಸರಿಯಾಗಿ ಆಗದಿದ್ದರೆ ಮರುದಿನ ಪೂರ್ತಿ ತಲೆನೋವು, ಮನಸ್ಸಿಗೆ ಕಿರಿಕಿರಿ, ಏಕಾಗ್ರತೆ ಕೊರತೆ, ಮೈಕೈ ನೋವು- ಹೀಗೆ ಸಾಕಷ್ಟು ಸಮಸ್ಯೆಗಳು ನಮ್ಮ ಅನುಭವಕ್ಕೂ ಬಂದಿರುತ್ತವೆ. 

ಇದೀಗ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು, ರಾತ್ರಿಯಲ್ಲಿ ನಿರ್ದಿಷ್ಟ ಸಮಯದ ನಂತರ ಮಲಗುವುದು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ ಎಂದು ಕಂಡುಹಿಡಿದಿದ್ದಾರೆ.

Latest Videos

ಯುಕೆಯಲ್ಲಿ 73,000 ಕ್ಕಿಂತ ಹೆಚ್ಚು ವಯಸ್ಕರಿಂದ ಪಡೆದ ಡೇಟಾದ ಆಧಾರದ ಮೇಲೆ ಅಧ್ಯಯನವು ಈ ವರದಿ ನೀಡಿದೆ.

ಮುಖೇಶ್ ಅಂಬಾನಿ ತಿಂಗಳೊಂದಕ್ಕೆ ಕಟ್ಟುವ ಮನೆಯ ವಿದ್ಯುತ್ ಬಿಲ್‌ನಲ್ಲಿ ನಾವೊಂದು ದೊಡ್ಡ ಮನೆಯೇ ಕಟ್ಟಿಸ್ಬೋದು!
 

ರಾತ್ರಿ ಬೇಗ ಮಲಗಿ ಬೇಗ ಏಳುವವರು ತಡವಾಗಿ ಮಲಗುವವರಿಗಿಂತ ಉತ್ತಮ ಮಾನಸಿಕ ಆರೋಗ್ಯ ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ ಎಂದು ಅಧ್ಯಯನ ಹೇಳಿದೆ. ಇನ್ನು ತಡವಾಗಿ ಮಲಗುವವರಲ್ಲಿ ಖಿನ್ನತೆಯ ಲಕ್ಷಣ ಹೆಚ್ಚು ಎಂದೂ ಅದು ಹೇಳಿದೆ.
ಅಧ್ಯಯನದ ಲೇಖಕ, ಜೇಮೀ ಝೀಟ್ಜರ್, 'ಕೆಟ್ಟ ನಿದ್ರೆಯು ಕಳಪೆ ಮಾನಸಿಕ ಆರೋಗ್ಯವನ್ನು ಉಂಟು ಮಾಡುತ್ತದೆ' ಎಂದಿದ್ದಾರೆ. 

ನಿಯಮಿತವಾಗಿ 1 AM ನಂತರ ಮಲಗುವುದು ಅರಿವಿನ ದುರ್ಬಲತೆಗೆ ಕಾರಣವಾಗಬಹುದು ಎಂದು ಅವರು ಕಂಡುಕೊಂಡಿದ್ದಾರೆ, ಇದು ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಭಾವನಾತ್ಮಕ ನಿಯಂತ್ರಣದಂತಹ ಕ್ಷೇತ್ರಗಳಿಗೆ ಬಂದಾಗ ಖಿನ್ನತೆ ಮತ್ತು ಆತಂಕದಂತಹ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿರಬಹುದು.

ಜಾನ್ವಿ ಕಪೂರ್ ಬಾಯ್‌ಫ್ರೆಂಡ್ ತಮ್ಮನ ಜೊತೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಡೇಟಿಂಗ್
 

ನೀವು ಪಡೆಯುತ್ತಿರುವ ನಿದ್ರೆಯ ಗುಣಮಟ್ಟದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಅಗತ್ಯ ಬದಲಾವಣೆಯನ್ನು ಮಾಡಲು ನೀವು ಕೆಲವು ಸಣ್ಣ ಕ್ರಮಗಳನ್ನು ತೆಗೆದು ಕೊಳ್ಳಬಹುದು. ನೀವು ಸಾಮಾನ್ಯವಾಗಿ ಪ್ರತಿದಿನ ನಿದ್ರಿಸುವ ಸಮಯವನ್ನು ಗುರುತಿಸಿ ಮತ್ತು ನಿಮ್ಮ ಮಲಗುವ ಸಮಯವನ್ನು ಪ್ರತಿ ವಾರ 15 ನಿಮಿಷ ಮೊದಲಿಗೆ ಬದಲಾಯಿಸಲು ಪ್ರಯತ್ನಿಸಿ. ಹೀಗೇ ನಿಧಾನವಾಗಿ 9-10 ಗಂಟೆಗೆಲ್ಲ ಮಲಗಿ ಬೇಗ ಏಳಲು ರೂಢಿಸಿಕೊಳ್ಳಿ. 

click me!