ಬೋರ್ನ್‌ವಿಟಾದಿಂದ ಚಿಕ್ಕ ಮಕ್ಕಳಲ್ಲಿ ಶುಗರ್, ಲೀಗಲ್ ನೋಟಿಸ್ ಬೆನ್ನಲ್ಲೇ ವೈರಲ್ ವಿಡಿಯೋ ಡಿಲೀಟ್!

By Suvarna News  |  First Published Apr 15, 2023, 3:48 PM IST

ಬೋರ್ನ್‌ವಿಟಾ ಚಿಕ್ಕ ಮಕ್ಕಳಲ್ಲಿ ಶುಗರ್ ಸಮಸ್ಯೆಗೆ ಕಾರಣಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲೊಂದು ವಿಡಿಯೋ ಭಾರಿ ವೈರಲ್ ಆಗಿತ್ತು. ಬಾಲಿವುಡ್ ನಟರು, ಮಾಜಿ ಕ್ರಿಕೆಟಿಗರು ಈ ವಿಡಿಯೋ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಕ್ಯಾಡ್‌ಬರಿ ಸಂಸ್ಥೆ ಇದೀಗ ಈ ವಿಡಿಯೋ ಮಾಡಿ ಪೋಸ್ಟ್ ಮಾಡಿದ ವ್ಯಕ್ತಿಗೆ ಲೀಗಲ್ ನೋಟಿಸ್ ನೀಡಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮಿಡಿಯಾ ಇನ್ಲುಫ್ಲುಯೆನ್ಸರ್ ವಿಡಿಯೋ ಡಿಲೀಟ್ ಮಾಡಿದ್ದಾನೆ.


ನವದೆಹಲಿ(ಏ.15): ಮಕ್ಕಳಿಗೆ ಸಾಮಾನ್ಯವಾಗಿ ಬೋರ್ನ್‌ವಿಟಾ ಸೇರಿದಂತೆ ಹಲವು ವಿಟಮ್ ಡ್ರಿಂಕ್ ನೀಡುವುದು ಸಾಮಾನ್ಯ. ಪೋಷಕರು, ಮಕ್ಕಳನ್ನು ಸೆಳೆಯಲು ಬಗೆ ಬಗೆಯ ಜಾಹೀರಾತು ನೀಡುತ್ತಾರೆ. ಮಕ್ಕಳ ಬೆಳವಣಿಗೆ, ಬುದ್ಧಿಶಕ್ತಿ, ರೋಗನಿರೋಧಕ ಶಕ್ತಿ ಸೇರಿದಂತೆ ಹಲವು ವಿಚಾರಗಳು ಈ ಜಾಹೀರಾತಿನಲ್ಲಿ ಎಲ್ಲರನ್ನೂ ಸೆಳೆಯುವಂತಿರುತ್ತದೆ. ಇದರ ವಿರುದ್ದ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಇತ್ತೀಚೆಗೆ ಸೋಶಿಯಲ್ ಮಿಡಿಯಾ ಇನ್ಲುಫ್ಲುಯೆನ್ಸರ್ ರೇವಂತ್ ಹಿಮತಾಸಿಂಗ್ಕ ಬೋರ್ನ್‌ವಿಟಾ ವಿರುದ್ಧ ವಿಡಿಯೋ ಒಂದನ್ನು ಮಾಡಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿತ್ತು.ಜಾಹೀರಾತು ನೋಡಿ ಪೋಷಕರು ಮಕ್ಕಳಿಗೆ ಬೋರ್ನ್‌ವಿಟಾ ಕಡ್ಡಾಯ ಮಾಡುತ್ತಿದ್ದಾರೆ. ಆದರೆ ಈ ಜಾಹೀರಾತಿನಲ್ಲಿ ಹೇಳಿರುವಂತೆ ಯಾವೂದೂ ಇಲ್ಲ. ಇಷ್ಟೇ ಅಲ್ಲ ಇದರಿಂದ ಚಿಕ್ಕ ಮಕ್ಕಳಲ್ಲಿ ಶುಗರ್ ಆರೋಗ್ಯ ಸಮಸ್ಯೆ ಕಾಣಿಸುತ್ತಿದೆ ಎಂದು ವಿಡಿಯೋ ಮಾಡಿದ್ದರು. ಆದರೆ ಬೋರ್ನ್‌ವಿಟಾ ಮಾತ್ರಸಂಸ್ಥೆ ಕ್ಯಾಡ್‌ಬರಿ ಇದೀಗ ಲೀಗಲ್ ನೋಟಿಸ್ ಕಳುಹಿಸಿದೆ. ಇದರಿಂದ ರೇವಂತ್ ಹಿಮತಾಸಿಂಗ್ಕ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.

ಬೋರ್ನ್‌ವಿಟಾ ಜಾಹೀರಾತಿನಲ್ಲಿ ಇದು ಪೌಷ್ಠಿಕಾಂಶದಿಂದ ಕೂಡಿದೆ. ಇದರಿಂದ ರೋಗನಿರೋಧಕ ಶಕ್ತಿ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ. ಈ ಮೂಲಕ ಬೋರ್ನ್‌ವಿಟಾ ಜಾಹೀರಾತು ಜನರನ್ನು ದಾರಿ ತಪ್ಪಿಸುತ್ತಿದೆ.  ಸರ್ಕಾರ ಈ ರೀತಿಯ ಸುಳ್ಳು ಜಾಹೀರಾತಿಗೆ ಅನುಮತಿ ನೀಡಿರುವುದು ಯಾಕೆ? ಈ ರೀತಿಯ ಜಾಹೀರಾತಿನಿಂದ ಪೋಷಕರ ಮಕ್ಕಳಿಗೆ ಬೋರ್ನ್‌ವಿಟಾ ಕುಡಿಸುತ್ತಿದ್ದಾರೆ. ಇಷ್ಟೇ ಅಲ್ಲ ಚಿಕ್ಕ ಮಕ್ಕಳು ಜೀವಮಾನವಿಡಿ ಶುಗರ್ ಸಮಸ್ಯೆಯಿಂದ ಬಳಲುವಂತಾಗಿದೆ ಎಂದು ರೇವಂತ್ ಹಿಮತಾಸಿಂಗ್ಕ ವಿಡಿಯೋದಲ್ಲಿ ಹೇಳಿದ್ದರು.

Tap to resize

Latest Videos

ಮಕ್ಕಳಿಗೆ ಸಾಫ್ಟ್ ಡ್ರಿಂಕ್ಸ್ ನೀಡೋ ಮುನ್ನ ಇದನ್ನೊಮ್ಮೆ ಓದಿ

ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ 12 ಮಿಲಿಯನ್ ವೀಕ್ಷಣೆ ಕಂಡಿತ್ತು. ಎಲ್ಲರೂ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಬಾಲಿವುಟ್ ನಟ ಹಾಗೂ ರಾಜಕಾರಣಿ ಪರೇಶ್ ರಾವಲ್, ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದರು. 

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೋರ್ನ್‌ವಿಟಾ ಸಂಕಷ್ಟಕ್ಕೆ ಸಿಲುಕಿತು. ತಕ್ಷಣವೇ ಕ್ಯಾಡ್‌ಬರಿ ಸಂಸ್ಥೆ ಏಪ್ರಿಲ್ 9 ರಂದು ಹಿಮತಾಸಿಂಗ್ಕಗೆ ಲೀಗಲ್ ನೋಟಿಸ್ ನೀಡಿತು.ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಕ್ಯಾಡ್‌ಬರಿ ಸಂಸ್ಥೆ,  ಬೋರ್ನ್‍ವಿಟಾ A, C, D ಸೇರಿದಂತೆ ಹಲವು ವಿಟಮಿನ್ ಹೊಂದಿದೆ. ಪೌಷ್ಠಿಕಾಂಶಗಳನ್ನು ಹೊಂದಿರುವ ಬೋರ್ನ್‌ವಿಟಾ ಆರೋಗ್ಯವರ್ಧನೆಗೆ ಸಹಾಯ ಮಾಡಲಿದೆ.

 

ಬೇಸಿಗೆಯಲ್ಲಿ ಮಕ್ಕಳನ್ನು ಕಾಡುವ ನಿರ್ಜಲೀಕರಣ ನಿವಾರಣೆ ಹೇಗೆ?

ಲೀಗಲ್ ನೋಟಿಸ್ ಬೆನ್ನಲ್ಲೇ ಹಿಮತಾಸಿಂಗ್ಕ ಸಾಮಾಜಿಕ ಮಾಧ್ಯಮಗಳಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ. ತಾವು ಹಂಚಿಕೊಂಡಿದ್ದ ಎಲ್ಲಾ ಮಾಧ್ಯಮಗಳಲ್ಲಿ ವಿಡಿಯೋ ಡಿಲೀಟ್ ಮಾಡಿರುವ ಹಿಮತಾಸಿಂಗ್ಕ, ಬಳಿಕ ಕ್ಯಾಡ್‌ಬರಿ ಸಂಸ್ಥೆಗೆ ಕಾನೂನಾತ್ಮಕ ಹೋರಾಟ ಮುಂದುವರಿಸದಂತೆ ಮನವಿ ಮಾಡಿದ್ದಾರೆ. ಜನರಲ್ ಆಗಿ ಮಕ್ಕಳ ಆಸಕ್ತಿ ಹಾಗೂ ಶುಗರ್ ಸಮಸ್ಯೆ ಕುರಿತು ಹೇಳಿದ್ದೇನೆ. ಇದಕ್ಕೆ ಬೋರ್ನ್‌ವಿಟಾ ಉದಾಹರಣೆಯಾಗಿ ಬಳಸಿಕೊಂಡಿದ್ದೇನೆ. ಇದರಲ್ಲಿ ಬ್ಯಾಂಡ್‌ಗೆ ಧಕ್ಕೆ ತರುವ ಯಾವುದೇ ಉದ್ದೇಶವಿರಲಿಲ್ಲ. ಹೀಗಾಗಿ ಕಾನೂನು ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದಾರೆ.

click me!