Latest Videos

Healthy Tips: ದಿನ ಈ ಮೂರು ಕೆಲಸ ಮಾಡಿದ್ರೆ ನೀವು ಫಿಟ್ ಆಗಿರ್ತೀರಿ

By Suvarna NewsFirst Published Apr 15, 2023, 3:04 PM IST
Highlights

ಫಿಟ್ನೆಸ್ ಕಾಯ್ದುಕೊಳ್ಳಬೇಕೆಂಬುದು ಎಲ್ಲರ ಬಯಕೆ. ಅದಕ್ಕೆ ಸಮಯ ಸಿಗೋದಿಲ್ಲ ಅನ್ನೋರೇ ಹೆಚ್ಚು. ಫಿಟ್ನೆಸ್ ಗೆ ಹೆಚ್ಚು ಹಣ ಸುರಿದು ದಿನಪೂರ್ತಿ ಇದಕ್ಕೆ ನಿಮ್ಮ ಸಮಯ ಹಾಳು ಮಾಡ್ಬೇಕಾಗಿಲ್ಲ. ಪ್ರತಿ ದಿನ ಒಂದೈದು ನಿಮಿಷ ಫಿಟ್ನೆಸ್ ಗೆ ಮೀಸಲಿಟ್ರೆ ಸಾಕು. 
 

ಸಣ್ಣವರಿರಲಿ ಇಲ್ಲ ದೊಡ್ಡವರಿರಲಿ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗೆ ಹೆಚ್ಚು ಮಹತ್ವ ನೀಡ್ಬೇಕು. ದೀರ್ಘಕಾಲದವರೆಗೆ ಫಿಟ್ ಮತ್ತು ಸುಂದರವಾಗಿ ಕಾಣಲು ಉತ್ತಮ ದಿನಚರಿ ಪಾಲಿಸಬೇಕಾಗುತ್ತದೆ. ಸಣ್ಣ ವಯಸ್ಸಿನಲ್ಲಿ ದಿನಚರಿ ಬಗ್ಗೆ ಹೆಚ್ಚು ಮಹತ್ವ ನೀಡೋದಿಲ್ಲ. ಕೆಲಸ, ಜವಾಬ್ದಾರಿ ಕಾರಣಕ್ಕೆ ಜನರಿಗೆ ಫಿಟ್ನೆಸ್ ಬಗ್ಗೆ ಸಮಯ ನೀಡಲು ಸಾಧ್ಯವಾಗೋದಿಲ್ಲ. ಆದ್ರೆ ಸಣ್ಣ ವಯಸ್ಸಿನಲ್ಲಿ ಮಾಡಿದ ತಪ್ಪು ವಯಸ್ಸಾದಂತೆ ನಮ್ಮನ್ನು ಕಾಡುತ್ತದೆ.  

ನಾವು ಆಯ್ಕೆ ಮಾಡುವ ಅಭ್ಯಾಸ (Practice) ಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ (Health) ದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ನಿಯಮಿತವಾಗಿ ಮತ್ತು ನಿರಂತರವಾಗಿ ಅಳವಡಿಸಿಕೊಳ್ಳುವ ಆರೋಗ್ಯಕರ ಅಭ್ಯಾಸಗಳು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವುದರ ಜೊತೆಗೆ ಸೌಂದರ್ಯ (Beauty) ವನ್ನು ಹೆಚ್ಚಿಸುತ್ತವೆ.  ನಿಮ್ಮ ವಯಸ್ಸು 60 ಆದ್ರೂ ನೀವೂ 40 ವರ್ಷದಂತೆ ಕಾಣ್ಬೇಕು, ಸದಾ ಫಿಟ್ (Fit) ಆಗಿರಬೇಕು, ಆರೋಗ್ಯಕರವಾಗಿರಬೇಕು ಅನ್ನೋದಾದ್ರೆ ನೀವು ಕೆಲ ನಿಯಮಗಳನ್ನು ಪಾಲಿಸಬೇಕು. ವರ್ಷ 60 ಆದ್ಮೇಲೆ ಈ ದಿನಚರಿ ಪಾಲಿಸ್ತೇನೆ ಅಂದ್ರೆ ಪ್ರಯೋಜನವಿಲ್ಲ. ಬಾಲ್ಯದಿಂದಲೇ ನಿಯಮ ಪಾಲಿಸ್ತಾ ಬಂದ್ರೆ ಒಳ್ಳೆಯದು. ಈಗಾಗಲೇ 60 ಆಗಿದೆ ಏನು ಮಾಡ್ಲಿ ಎನ್ನುವವರು ಕೂಡ ಈ ದಿನಚರಿ ಪಾಲನೆ ಮಾಡಿ ಫಿಟ್ನೆಸ್ ಕಾಪಾಡಿಕೊಳ್ಳಲು ಪ್ರಯತ್ನಿಸಬಹುದು.

HEALTH TIPS : ಬೇಸಿಗೆಯಲ್ಲಿ ಬೆಲ್ಲ ತಿನ್ನೋದ್ರಿಂದ ಸಮಸ್ಯೆ ಉಂಟಾಗುತ್ತಾ?

ಅನೇಕರು ಫಿಟ್ನೆಸ್, ಆರೋಗ್ಯ, ಜೀವನಶೈಲಿ ಎಂಬ ಮಾತು ಬಂದಾಗ ಸಮಯವಿಲ್ಲ. ಮುಂದೆ ನೋಡೋಣ ಎನ್ನುತ್ತಾರೆ. ಸಮಯವಿಲ್ಲ ಎನ್ನುವವರು ನೀವಾಗಿದ್ದರೆ ನೀವು ಹೆಚ್ಚೇನು ಸಮಯವನ್ನು ಈ ಕೆಲಸಕ್ಕೆ ನೀಡಬೇಕಾಗಿಲ್ಲ. ರಾತ್ರಿ ಸ್ವಲ್ಪ ಸಮಯ ಹೊಂದಿಸಿಕೊಂಡು ಕೇವಲ ಮೂರು ಕೆಲಸ ಮಾಡಿದ್ರೆ ಸಾಕು. ಆರೋಗ್ಯ ವೃದ್ಧಿಸಿಕೊಳ್ಳಬಹುದು. ಫಿಟ್ನೆಸ್ ಕಾಯ್ದುಕೊಳ್ಳಬಹುದು. 

ಪ್ರತಿ ದಿನ ಈ ನಿಯಮ ಪಾಲಿಸಿದ್ರೆ ನೀವು ಫಿಟ್ ಆಗಿರ್ತೀರಿ : 

ಮೊದಲು ಈ ಕೆಲಸ ಮಾಡಿ : ನಿಮ್ಮ ದಿನ ಆರಾಮವಾಗಿರಬೇಕೆಂದ್ರೆ ನೀವು ಬೆಳಿಗ್ಗೆಯನ್ನು ಆರೋಗ್ಯಕರವಾಗಿ ಪ್ರಾರಂಭಿಸಬೇಕು. 5 ಬಾದಾಮಿ, 2 ವಾಲ್‌ನಟ್ಸ್ ಮತ್ತು 1 ಟೀಚಮಚ ಕುಂಬಳಕಾಯಿ ಮತ್ತು ಸೂರ್ಯಕಾಂತಿ ಬೀಜಗಳನ್ನು ನೀವು ರಾತ್ರಿ ನೆನೆಸಿಡಬೇಕು. ಹಾಗೆಯೇ ತಾಮ್ರದ ಪಾತ್ರೆಯಲ್ಲಿ 1 ಲೋಟದಲ್ಲಿ ನೀರು ಹಾಕಿ ಮುಚ್ಚಿಡಬೇಕು.

Healthy Food : ಹೀರೆಕಾಯಿ ತಿಂದು ಆರೋಗ್ಯ ಕಾಪಾಡ್ಕೊಳ್ಳಿ

ಎರಡನೇ ಕೆಲಸ ಏನು ಗೊತ್ತಾ? : ಉತ್ತಮ ನಿದ್ರೆ ಆರೋಗ್ಯ ವೃದ್ಧಿಸುತ್ತೆ. ಜೊತೆಗೆ ನಿಮ್ಮನ್ನು ಸದಾ ಫಿಟ್ ಆಗಿಡುತ್ತದೆ. ಹಾಗಾಗಿ ಉತ್ತಮ ನಿದ್ರೆಗೆ ಪ್ರಯತ್ನಿಸಿ. ಮಲಗುವ ಕನಿಷ್ಠ 1 ಗಂಟೆ ಮೊದಲು ಎಲ್ಲಾ ಗ್ಯಾಜೆಟ್‌ಗಳನ್ನು ಸ್ವಿಚ್ ಆಫ್ ಮಾಡಿ. ಗ್ಯಾಜೆಟ್‌ಗಳಿಂದ ಹೊರಸೂಸುವ ಬೆಳಕು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್‌ಗಳು ಅಥವಾ ಅಂತಹುದೇ ಗ್ಯಾಜೆಟ್‌ಗಳ ಪರದೆಯಿಂದ ಹೊರಸೂಸುವ ಬ್ಲ್ಯೂ ಲೈಟ್  ನಿದ್ರೆಯ ಹಾರ್ಮೋನ್ ಮೆಲಟೋನಿನ್ ಅನ್ನು ನಿಗ್ರಹಿಸುತ್ತದೆ. ಈ ಕಾರಣದಿಂದಾಗಿ ನಿದ್ರೆ ತಡವಾಗಿ ಬರುತ್ತದೆ. ಇದ್ರಿಂದ ಬೆಳಿಗ್ಗೆ ದಣಿವಿರುತ್ತದೆ.  

ಮೂರನೇ ಕೆಲಸ ಇದನ್ನು ಮಾಡಿ : ನಮ್ಮ ಉಸಿರಾಟ ನಮ್ಮ ಆರೋಗ್ಯವನ್ನು ಕಾಪಾಡೋದ್ರಲ್ಲಿ ದೊಡ್ಡ ಕೆಲಸ ಮಾಡುತ್ತದೆ. ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯಕ್ಕೆ ಶಾಂತ ಮನಸ್ಸು ಬಹಳ ಮುಖ್ಯ. ಪ್ರತಿ ದಿನ ನಿಮ್ಮ ಮನಸ್ಸ ಶಾಂತವಾಗಿರಬೇಕು. ಇದಕ್ಕೆ ನೀವು ಮಂದ ಬೆಳಕಿನಲ್ಲಿ 10 ನಿಮಿಷಗಳ ಕಾಲ ಆಳವಾದ ಉಸಿರಾಟ ಮಾಡಿ. ಆಳವಾಗಿ ಉಸಿರಾಟ ನಡೆಸಿದಾಗ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಈ ಆಮ್ಲಜನಕವು ರಕ್ತದೊಂದಿಗೆ ದೇಹದಾದ್ಯಂತ ಹರಿಯುತ್ತದೆ. ಈ ಕಾರಣದಿಂದಾಗಿ ದೇಹದ ಎಲ್ಲಾ ಭಾಗಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತದೆ. 
 

click me!