
ಚಳಿಗಾಲವನ್ನು ಆರೋಗ್ಯದ ಋತುವೆಂದು ಆರೋಗ್ಯ ತಜ್ಞರು ಪರಿಗಣಿಸ್ತಾರೆ. ಬೇಸಿಗೆ ಬರ್ತಿದ್ದಂತೆ ಒಂದೊಂದೇ ಕಾಯಿಲೆ ನಿಮ್ಮನ್ನು ಸುತ್ತಿಕೊಳ್ಳಲು ಶುರುವಾಗುತ್ತದೆ. ಬೇಸಿಗೆ ಸಂದರ್ಭದಲ್ಲಿ ಡೆಂಗ್ಯೂ, ಮಲೇರಿಯಾ, ವೈರಲ್ ಜ್ವರ, ಅತಿಸಾರದಂತಹ ಸಮಸ್ಯೆ ಕಾಡುತ್ತದೆ. ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸ್ವಲ್ಪ ಸವಾಲಿನ ಸಂಗತಿ. ಯಾಕೆಂದ್ರೆ ಬಾಯಾರಿಕೆ, ಸೆಕೆ ಅಂತಾ ಯಾವ್ ಯಾವುದೋ ಆಹಾರ, ಪಾನೀಯ ಸೇವನೆ ಮಾಡೋಕೆ ಸಾಧ್ಯವಿಲ್ಲ. ಹಾಗೆಯೇ ವಿಶ್ರಾಂತಿ ಅಂತ ಪಾರ್ಕ್ ನಲ್ಲಿ ಕುಳಿತ್ರೂ ಸೊಳ್ಳೆ ಕಾಟದಿಂದ ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಬೇಸಿಗೆಯಲ್ಲಿ ಹುಷಾರು ತಪ್ಪಿದ್ರೆ ಜನರು ಅಲೋಪತಿ ಮೊರೆ ಹೋಗ್ತಾರೆ. ನೀವು ಆಯುರ್ವೇದದಿಂದಲೂ ಆರೋಗ್ಯ ಕಾಪಾಡಿಕೊಳ್ಳಬಹುದು. ಬೇಸಿಗೆಯಲ್ಲಿ ಕಾಡುವ ರೋಗಕ್ಕೆ ಆಯುರ್ವೇದದಲ್ಲೂ ಮದ್ದಿದೆ.
ಬೇಸಿಗೆಯಲ್ಲಿ ಆಯುರ್ವೇದದ ಈ ಮದ್ದು ಬಳಕೆ ಮಾಡಿ :
ಕರ್ಜೂರಡಿ ಮಂಥ (Kharjuradi Mantha ) : ಬೇಸಿಗೆ (Summer ) ಯಲ್ಲಿ ಫಿಟ್ ಆಗಿರಲು ಕರ್ಜೂರಡಿ ಮಂಥ ಉತ್ತಮ ಆಯ್ಕೆಯಾಗಿದೆ. ಇದೊಂದು ಆಯುರ್ವೇದ (Ayurveda) ಔಷಧ. ಇದನ್ನು ಬೇಸಿಗೆಯಲ್ಲಿ ಕಡ್ಡಾಯವಾಗಿ ಸೇವಿಸಬೇಕು ಎನ್ನುತ್ತಾರೆ ಆಯುರ್ವೇದ ತಜ್ಞರು. ಇದನ್ನು ಮಾಡೋದು ತುಂಬಾ ಸುಲಭ.
HEALTH TIPS : ಬೇಸಿಗೆಯಲ್ಲಿ ಬೆಲ್ಲ ತಿನ್ನೋದ್ರಿಂದ ಸಮಸ್ಯೆ ಉಂಟಾಗುತ್ತಾ?
ಕರ್ಜೂರಡಿ ಮಂಥ ಮಾಡಲು ಬೇಕಾಗುವ ಸಾಮಗ್ರಿ : ಹುಣಸೆಹಣ್ಣು, ಕೋಕಂ, ಒಣ ದ್ರಾಕ್ಷಿ, ಖರ್ಜೂರ, ನೆಲ್ಲಿಕಾಯಿ ಮತ್ತು ದಾಳಿಂಬೆ.
ಕರ್ಜೂರಡಿ ಮಂಥ ಮಾಡುವ ವಿಧಾನ : ಮೇಲಿನ ಎಲ್ಲ ಸಾಮಗ್ರಿಗಳನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತ್ರ ಅದನ್ನು ಮ್ಯಾಶ್ ಮಾಡಿ ರಸ ತೆಗೆದು ಸೋಸಿದ ನಂತರ ಕುಡಿಯಬೇಕು. ಇದರಿಂದ ನಿರ್ಜಲೀಕರಣ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ದಿನವಿಡಿ ದೇಹದಲ್ಲಿ ಶಕ್ತಿ ಇರಲು ನೀವು ಇದನ್ನು ಸೇವನೆ ಮಾಡ್ಬೇಕು.
ಕಿಡ್ನಿ ಸ್ಟೋನ್ ಗಿಂತ ಭೀಕರವಾಗಿರುತ್ತೆ ಪಿತ್ತಕೋಶದ ಕಲ್ಲು… ಮನೆಮದ್ದು ಇಲ್ಲಿವೆ
ತರಕಾರಿ – ಹಣ್ಣು ಆಹಾರದಲ್ಲಿರಲಿ : ಹಣ್ಣು ಮತ್ತು ತರಕಾರಿಗೆ ಆಯುರ್ವೇದದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಬೇಸಿಗೆಯಲ್ಲಿ ರಸಭರಿತ, ಸಿಹಿಯಾದ ಮತ್ತು ಹುಳಿ ಮಿಶ್ರಿತ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಅವಶ್ಯಕವಾಗಿ ಸೇವನೆ ಮಾಡಬೇಕು. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದು ಬಹಳ ಮುಖ್ಯ. ಹಣ್ಣು ಹಾಗೂ ತರಕಾರಿಯನ್ನು ಸೇವನೆ ಮಾಡೋದ್ರಿಂದ ದೇಹ ತಂಪಾಗಿರುತ್ತದೆ. ಬೇಸಿಗೆಯಲ್ಲಿ ನೀವು ಕಲ್ಲಂಗಡಿ, ಪೇರಳೆ ಹಣ್ಣು, ಚೆರ್ರಿ ಹಣ್ಣು, ಮಾವು ಮತ್ತು ದ್ರಾಕ್ಷಿ ಹಣ್ಣನ್ನು ತಿನ್ನಬೇಕು. ಬ್ರೊಕೊಲಿ, ಕುಂಬಳಕಾಯಿ, ಹೀರೆಕಾಯಿ ತರಕಾರಿಗಳನ್ನು ತಿನ್ನಬೇಕು. ಇದ್ರಿಂದ ದೇಹ ತಂಪಾಗಿರುತ್ತದೆ. ಪುದೀನಾ, ಏಲಕ್ಕಿ, ಸೋಂಪಿನಂತಹ ಮಸಾಲೆಯನ್ನು ಆಹಾರದಲ್ಲಿ ಬಳಸಿ.
ಬೇಸಿಗೆಯಲ್ಲಿ ಈ ಆಹಾರ ತಿನ್ನಲೇಬೇಡಿ : ಸೋರೆಕಾಯಿ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಜನರು ಅದನ್ನು ಸೇವಿಸ್ತಾರೆ. ಆದ್ರೆ ತಜ್ಞರ ಪ್ರಕಾರ, ಸೋರೆಕಾಯಿ ಜ್ಯೂಸ್ ಸೇವನೆ ಮಾಡಬಾರದು. ಇದು ತ್ವರಿತ ಶಕ್ತಿ ನೀಡುತ್ತದೆ. ದೀರ್ಘಕಾಲದಲ್ಲಿ ನಕಾರಾತ್ಮಕ ಪ್ರಭಾವ ಬೀರುತ್ತದೆ ಎನ್ನುತ್ತಾರೆ ತಜ್ಞರು. ಹಾಗೆಯೇ ಬೇಸಿಗೆ ಸಮಯದಲ್ಲಿ ತಂಪು ಪಾನೀಯ ಸೇವನೆ ಮಾಡಬಾರದು. ಇವೆಲ್ಲ ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ.
ವ್ಯಾಯಾಮ ಹಾಗೂ ಸೂರ್ಯನ ಕಿರಣ ಬಹಳ ಪ್ರಯೋಜನಕಾರಿ : ಬೇಸಿಗೆ ಸಮಯದಲ್ಲಿ ದೇಹಕ್ಕೆ ವ್ಯಾಯಾಮ ನೀಡುವುದು ಅನಿವಾರ್ಯ. ಈಜು, ವ್ಯಾಯಾಮ ಸ್ನಾಯುಗಳಿಗೆ ವ್ಯಾಯಾಮ ನೀಡುತ್ತದೆ. ಇದ್ರಿಂದ ದೇಹ ತಂಪಾಗುತ್ತದೆ. ಪ್ರಾಣಾಯಾಮ, ಅನುಲೋಮ, ವಿಲೋಮ ಮುಂತಾದ ವ್ಯಾಯಾಮವನ್ನು ಕೂಡ ಮಾಡ್ಬೇಕು. ಇದ್ರಿಂದ ಮನಸ್ಸು ಕೂಡ ಶಾಂತವಾಗುತ್ತದೆ.
ಹಾಗೆಯೇ ಸೂರ್ಯನ ಕಿರಣಕ್ಕೆ ದೇಹ ಒಡ್ಡುವುದು ಕೂಡ ಬಹಳ ಒಳ್ಳೆಯದು. ನಮ್ಮ ದೇಹಕ್ಕೆ ವಿಟಮಿನ್ ಡಿ ಅನಿವಾರ್ಯ. ಆದ್ರೆ ಅತಿ ಹೆಚ್ಚು ಸಮಯ ದೇಹವನ್ನು ಬಿಸಿಲಿಗೆ ಒಡ್ಡಿದ್ರೆ ಅತಿಸಾರ ಸಮಸ್ಯೆ ಕಾಡುತ್ತದೆ. ಚರ್ಮ ರೋಗ ಕೂಡ ನಿಮ್ಮನ್ನು ಕಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.