
ಬೇಸಿಗೆಯಲ್ಲಿ ಬೇಡವೆಂದರೂ ಹೆಚ್ಚುವ ತೂಕಕ್ಕೆ ಪರಿಹಾರ ಕಂಡುಕೊಳ್ಳುವುದು ಸ್ವಲ್ಪ ಕಷ್ಟ. ಏಕೆಂದರೆ ದೈನಂದಿನ(Daily) ಆಹಾರ(Food) ಸೇವನೆಯಲ್ಲಿ ಕೊಂಚ ಏರಿಳಿತ ಕಾಣುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ದಿನವೂ ತೆಗೆದುಕೊಳ್ಳುವ ಕ್ಯಾಲೋರಿ(Calorie) ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚಿರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಲ್ಲೂ(Elders) ಸಡನ್ ಆಗಿ ತೂಕ ಹೆಚ್ಚುತ್ತದೆ. ಅದಕ್ಕೆ ಕಾರಣ ಹಲವಾರು ಇವೆ. ಬೇಸಿಗೆಯಲ್ಲಿ ಮಕ್ಕಳು ಮನೆಯಲ್ಲಿರುವುದರಿಂದ ಸಕ್ಕರೆ(Sugar) ಇರುವ ತಂಪಾದ ಪಾನೀಯಗಳ(Cold Drinks) ಸೇವನೆಯಿಂದಾಗಿ ಹಾಗೂ ಕರೆದ ತಿಂಡಿಗಳ ಸೇವನೆಯಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮತ್ತೆ ಕೆಲವರಲ್ಲಿ ನಿದ್ರಾಹೀನತೆಯು ಆಹಾರದ ಕಡುಬಯಕೆಗಳನ್ನು ಹೆಚ್ಚಿಸುವ ಮತ್ತು ತೂಕ ಹೆಚ್ಚಿಸಲು ಮತ್ತೊಂದು ಕಾರಣ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಅನಗತ್ಯವಾದ ತೂಕ ಹೆಚ್ಚಳಕ್ಕೆ ಆಯರ‍್ವೇದದಲ್ಲಿ ಪರಿಹಾರ ಇದೆ ಎಂದು ಡಾ. ದೀಕ್ಷಾ ಭವಸಾರ್ ತಿಳಿಸಿದ್ದಾರೆ. ಅದು ಹೇಗೆ? ಈ ಬಗ್ಗೆ ಇಲ್ಲಿದೆ ಮಾಹಿತಿ.
1. ಸರಳ ತಿಂಡಿ ಸೇವನೆ
ಬೇಸಿಗೆಯೆಲ್ಲಿ ಜರ‍್ಣಶಕ್ತಿ(Digestion) ಕಡಿಮೆ ಇರುತ್ತದೆ. ಹಾಗಾಗಿ ಹೊಟ್ಟೆ ತುಂಬುವ ರೀತಿಯಲ್ಲಿ ಆಹಾರ ಸೇವನೆ ಬೇಡ. ತಜ್ಞರು ಹೇಳುವಂತೆ ಮೂರು ಹೊತ್ತು(Three Times) ಹೊಟ್ಟೆ ತುಂಬುವ ಹಾಗೆ ಊಟ ಮಾಡಿದರೆ ತೂಕ ಹೆಚ್ಚುತ್ತದೆ. ಹಾಗಾಗಿ ಹಸಿವಿಲ್ಲದಿದ್ದಾಗ ಬೆಳಗಿನ ತಿಂಡಿ(Breakfast) ಸ್ಕಿಪ್(Skip) ಮಾಡುವುದು ಅಥವಾ ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದು. ಅಂದರೆ ಹಣ್ಣು, ತರಕಾರಿ, ಡ್ರೆöÊ ಫ್ರೂಟ್ಸ್ಗ(Dry Fruits)ಳನ್ನು ಬೆಳಗಿನ ತಿಂಡಿಯಲ್ಲಿ ಸೇವಿಸುವುದು ಒಳ್ಳೆಯದು.
ಎಲ್ಲರನ್ನೂ ಬಿಡದೇ ಕಾಡೋ ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಮನೆ ಮದ್ದು
2. ಪಾನೀಯ ಮತ್ತು ಹರ್ಬಲ್ ಟೀ ಸೇವನೆ
ಬೇಸಿಗೆ ಎಂದಾಕ್ಷಣ ಬಾಯಾರಿಕೆ(Thirst) ಕಾಮನ್. ಬಾಯಾರಿಕೆ ನೀಗುವಷ್ಟು ಏನಾದರೂ ತಂಪಾಗಿರುವುದನ್ನು ಕುಡಿಯಬೇಕು ಎಂದೆನಿಸುವುದು ಸಾಮಾನ್ಯ. ಹೀಗೆ ಬೇಕು ಎಂದು ನಮ್ಮ ದೇಹ(Body) ಪ್ರಚೋದಿಸುತ್ತದೆ. ಆಯರ‍್ವೇದದ ಪ್ರಕಾರ ನೈರ‍್ಗಿಕವಾಗಿ(Natural) ಸಿಗುವ ಅಂದರೆ ಮಣ್ಣಿನ ಮಡಿಕೆ(Clay Pot) ನೀರು ಹಾಗೂ ಗಿಡಮೂಲಿಕೆಗಳಿಂದ ಮಾಡಿದ ಪಾನೀಯಗಳ ಸೇವನೆ ಒಳ್ಳೆಯದು. ಅಂದರೆ ಕೊತ್ತಂಬರಿ ಸೊಪ್ಪು(Coriander), ದಾಸವಾಳ(Hibiscus), ಗುಲಾಬಿ(Rose), ಒಂದೆಲಗ(ಬ್ರಾಹ್ಮಿ)Brahmi), ಜೀರಿಗೆ(Cumin), ಪುದೀನ(Mint), ಸೌತೇಕಾಯಿಗಳ(Cucumber) ಜ್ಯೂಸ್ ಮನೆಯಲ್ಲೇ ಮಾಡಿ ಕುಡಿಯುವುದು ಒಳ್ಳೆಯದು. ಇವು ತೂಕ ಕಡಿಮೆ ಮಾಡುವುದಲ್ಲದೆ ದೇಹವನ್ನು ತಂಪಾಗಿರಿಸಲು ಸಹಕಾರಿಯಾಗಿದೆ.
ಬೇಸಿಗೆಯಲ್ಲಿ ಅರಿಶಿನವನ್ನು ಮುಖಕ್ಕೆ ಹಚ್ಚಬಹುದೇ?
3. ಹಣ್ಣುಗಳ ಸೇವನೆ
ಬೇಸಿಗೆಯಲ್ಲಿ ಸಾಮಾನ್ಯವಾಗಿ ಸಿಗುವ ಮಾವಿನ ಹಣ್ಣು(Mango), ಕಲ್ಲಂಗಡಿ(Watermelon), ಕರಬೂಜ, ಸಪೋಟ(Chikku) ಹಣ್ಣುಗಳನ್ನು ಊಟದ ನಂತರ ಅಂದರೆ ಸಂಜೆಯ(Evening) ಸಮಯದಲ್ಲಿ ಮಿಲ್ಕ್ ಶೇಕ್(Milk Shake) ಮಾಡಿ ಕುಡಿಯುವುದಕ್ಕಿಂತ ಈಡಿಯಾಗಿ(Whole) ಸೇವಿಸುವುದು ಒಳ್ಳೆಯದು. ಏಕೆಂದರೆ ಜ್ಯೂಸ್ ಮಾಡಿ ಕುಡಿದಲ್ಲಿ ಅದಕ್ಕೆ ಸಕ್ಕರೆ(Sugar) ಹಾಕುವುದರಿಂದ ತೂಕ ಹೆಚ್ಚಿಸಬಹುದು. ಹಾಗಾಗಿ ಆಯರ‍್ವೇದದಲ್ಲಿ ಈಡೀ ಹಣ್ಣು ಸೇವಿಸುವುದು ಒಳ್ಳೆಯದೆಂದು ಭಾವಸಾರ್ ತಿಳಿಸಿದ್ದಾರೆ. ರಾತ್ರಿ ಮಲಗುವ ಮುನ್ನ(Night Before Sleep) ಒಂದು ಲೋಟ ಹಾಲು(Milk) ಕುಡಿಯುವುದು, ಹಣ್ಣು ತಿನ್ನುವುದು ಒಳ್ಳೆಯದು. ಇದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಪರ‍್ಣ ಹಣ್ಣು ತಿನ್ನುವಾಗ ಅಗಿಯುವುದರಿಂದಾಗಿ ಡೈಜೇಷನ್(Digestion) ಹಾಗೂ ದೇಹದಲ್ಲಿ ಶಕ್ತಿ ಹೆಚ್ಚಿಸುತ್ತದೆ.
4 ಊಟಕ್ಕೂ ಮೊದಲು ಏನು ತಿನ್ನಬೇಡಿ
ಬೇಸಿಗೆಯಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ರಾತ್ರಿ(Night) ಕಡಿಮೆ ಹಗಲು(Day) ಜಾಸ್ತಿ ಇರುತ್ತದೆ. ಹಾಗಾಗಿ ಸಾಮನ್ಯವಾಗಿ ಜನರು ಹಗಲಲ್ಲಿ ಹೆಚ್ಚಿನ ಸಮಯ(Time) ಕಳೆಯುತ್ತಾರೆ ಹಾಗೂ ಲೇಟ್ ಆಗಿ ರಾತ್ರಿ ಊಟ(Dinner) ಮಾಡುತ್ತಾರೆ. ಕೆಲವರು ಬೆಳದಿಂಗಳಲ್ಲಿ ಊಟ ಮಾಡಲು ಇಚ್ಚಿಸುತ್ತಾರೆ. ಇನ್ನು ಕೆಲವರು ಸಂಜೆ ಸಮಯ ಹೊರಗೆ ಸುತ್ತಿ ಅಲ್ಲೇ ಏನಾದರೂ ತಿನ್ನುತ್ತಾರೆ. ರಾತ್ರಿ ತಡವಾಗಿ ಮಲಗುವುದರಿಂದ ರಾತ್ರಿ 10ರಿಂದ 2 ಗಂಟೆಯಲ್ಲಿ ಮತ್ತೆ ಹಸಿವಾಗಬಹುದು(Hungry). ಇದು ಪಿತ್ತ(Pita) ಪ್ರಾಬಲ್ಯದ ಸಮಯವಾಗಿದ್ದು, ಹಸಿವು ಹೆಚ್ಚಿಸುತ್ತದೆ ಎಂದು ಆಯರ‍್ವೇದದಲ್ಲಿ ಹೇಳಲಾಗಿದೆ. ಈ ಸಂರ‍್ಭದಲ್ಲಿ ಒಂದು ವೇಳೆ ಆಹಾರ ಸೇವಿಸಿದ್ದೇ ಆದಲ್ಲಿ ಅಜರ‍್ಣವಾಗುವುದು(Indigestion) ಸಹಜ ಇದರಿಂದ ತೂಕವೂ ಹೆಚ್ಚುತ್ತದೆ. ಹಾಗಾಗಿ ರಾತ್ರಿ 8ರ ಒಳಗೆ ಊಟ ಮುಗಿಸುವುದು ಒಳ್ಳೆಯದು ಎನ್ನಲಾಗಿದೆ.
Ayurvedic Tips : ಆರೋಗ್ಯಕ್ಕೆ ಈ ಹಣ್ಣು ಅಮೃತವಾದ್ರೂ ತಪ್ಪಾಗಿ ಸೇವನೆ ಮಾಡಿದ್ರೆ ಅಪಾಯ ಹೆಚ್ಚು
5. ಚಟುವಟಿಕೆಯಿಂದಿರಿ
ಬೇಸಿಗೆಯಲ್ಲಿ ವ್ಯಾಯಾಮ(Exercise) ಮಾಡುವುದು ಬಹಳ ಮುಖ್ಯ. ಬಿಸಿಲು, ಸೆಕೆ ಎಂದು ತಂಪಾದ ಆಹಾರ ಸೇವಿಸುತ್ತಿದ್ದರೆ ಖಂಡಿತ ಅದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ದಿನ ನಿತ್ಯ ಸರಳ ವ್ಯಾಯಾಮ, ಯೋಗ(Yoga), ಡ್ಯಾನ್ಸ್(Dance), ಪ್ರಾಣಾಯಾಮ(Pranayama), ಸ್ವಿಮ್ಮಿಂಗ್(Swimming) ಮಾಡುವುದು ದೇಹಕ್ಕೆ ಅಗತ್ಯ ಹಾಗೂ ತೂಕ ನಿಯಂತ್ರಣದಲ್ಲಿರಲು ಸಹಕಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.