ಕೆಲವರ ಮನೆ ಔಷಧಿ ಅಂಗಡಿಯಾಗಿರುತ್ತೆ. ಹೊಟ್ಟೆ ನೋವು ಹೋಗಿ ತಿಂಗಳಾದ್ರೂ ಮಾತ್ರೆ ಬಾಯಿಗೆ ಹೋಗ್ತಿರುತ್ತದೆ. ಈ ಮಾತ್ರೆ ಸೇವನೆ ಬಿಟ್ರೆ ಮತ್ತೆ ನೋವು ಶುರುವಾಗ್ಬಹುದು ಎಂಬ ಭಯದಲ್ಲೇ ಔಷಧಿ ತಿನ್ನುತ್ತಾರೆ. ಇದನ್ನ ಪದೇ ಪದೇ ಮಾಡ್ತಿದ್ದರೆ ಹುಷಾರ್..
ಹೊಸ ವೈದ್ಯನಿಗಿಂತ ಹಳೆ ರೋಗಿ ಉತ್ತಮ ಎಂಬ ಮಾತಿದೆ. ಅನೇಕ ವರ್ಷಗಳಿಂದ ಒಂದೇ ರೋಗದಿಂದ ಬಳಲುತ್ತಿರುವ ರೋಗಿಗೆ ಯಾವ ಮಾತ್ರೆ ತೆಗೆದುಕೊಂಡ್ರೆ ತನಗೆ ಗುಣವಾಗುತ್ತೆ ಎನ್ನುವ ಸಂಗತಿ ತಿಳಿದಿರುತ್ತದೆ. ಆದ್ರೆ ಇನ್ನು ಕೆಲವರಿರ್ತಾರೆ, ಅವರಿಗೆ ರೋಗ ಗುಣವಾದ್ರೂ, ವೈದ್ಯರು ಮಾತ್ರೆ ತೆಗೆದುಕೊಳ್ಳೋದನ್ನು ನಿಲ್ಲಿಸಿ ಅಂತಾ ಹೇಳಿದ್ರೂ ಮಾತ್ರೆ ಸೇವನೆ ಬಿಡೋದಿಲ್ಲ. ಮನೆ, ಚಿಕ್ಕ ಔಷಧಿ ಮಳಿಗೆಯಾಗಿರುತ್ತದೆ. ನೆಗಡಿಯಿಂದ ಹಿಡಿದು ದೊಡ್ಡ ದೊಡ್ಡ ಖಾಯಿಲೆಗೆ ಬಳಸುವ ಮಾತ್ರೆಗಳನ್ನು ಕೂಡ ಅವರು ಇಟ್ಟುಕೊಂಡಿರ್ತಾರೆ. ಸಣ್ಣ ತಲೆನೋವು ಬಂದ್ರೆ ಸಾಕು ಮಾತ್ರೆ ಸೇವನೆ ಮಾಡ್ತಾರೆ.
ಮಾತ್ರೆ ಅಥವಾ ಔಷಧಿ (Medicin) ನಮ್ಮ ರೋಗ (Disease) ವನ್ನು ಬೇಗ ಗುಣಪಡಿಸುತ್ತದೆ ನಿಜ. ಆದ್ರೆ ಇದಕ್ಕೂ ಒಂದು ಮಿತಿಯಿದೆ. ಆದ್ರೆ ಕೆಲವರು ಸಣ್ಣ ಸಣ್ಣ ರೋಗಕ್ಕೂ ಮಾತ್ರೆ ತೆಗೆದುಕೊಳ್ಳೋದಲ್ಲದೆ ರೋಗ ಗುಣವಾದ್ರೂ ಮಾತ್ರೆ ಮುಂದುವರೆಸ್ತಾರೆ. ಇದನ್ನು ನಾವು ಔಷಧಿ ವ್ಯಸನ (Addiction) ಎಂದು ಕರೆಯಬಹುದು. ಮದ್ಯ ವ್ಯಸನ, ಧೂಮಪಾನ ವ್ಯಸನದಂತೆ ಔಷಧಿ ವ್ಯಸನ ಕೂಡ ಅನೇಕರಿಗಿರುತ್ತದೆ. ನಾವಿಂದು ಈ ಔಷಧಿ ವ್ಯಸನದ ಲಕ್ಷಣಗಳನ್ನು ನಿಮಗೆ ಹೇಳ್ತೇವೆ.
undefined
ಅನಾರೋಗ್ಯವಿಲ್ಲವೆಂದ್ರೂ ಔಷಧಿ ಸೇವನೆ : ತಲೆ ನೋವು ಬಂದಾಗ, ಹೊಟ್ಟೆ ನೋವು ಬಂದಾಗ ಇಲ್ಲವೆ ಜ್ವರ ಬಂದಾಗ ಮಾತ್ರೆ ಸೇವನೆ ಮಾಡೋದು ಸಹಜ. ಆದ್ರೆ ತಲೆ ನೋವು ಬರಬಹುದು, ಹೊಟ್ಟೆ ನೋವು ಬರಬಹುದು ಎನ್ನುವ ಕಾರಣಕ್ಕೆ ಮಾತ್ರೆ ಸೇವನೆ ಮಾಡೋದು ವ್ಯಸನ. ಕಾಯಿಲೆ ಇಲ್ಲದಿದ್ದರೂ ಔಷಧಿ ಸೇವಿಸುತ್ತಲೇ ಇರೋದು ಔಷಧಿ ವ್ಯಸನದ ಲಕ್ಷಣವಾಗಿದೆ. ಈ ವ್ಯಸನಕ್ಕೆ ಒಳಗಾದವರು ಔಷಧಿ ಸೇವನೆ ನಿಲ್ಲಿಸಿದ್ರೆ ವಿಚಿತ್ರವಾಗಿ ಆಡ್ತಾರೆ. ನಡುಕ ಶುರುವಾಗುತ್ತದೆ, ಖಿನ್ನತೆಗೆ ಒಳಗಾಗುತ್ತಾರೆ, ಹೊಟ್ಟೆಯುಬ್ಬರ, ಬೆವರು, ತಲೆನೋವು, ಆಯಾಸದಂತಹ ಸಮಸ್ಯೆ ಅವರನ್ನು ಕಾಡುತ್ತದೆ.
ಸ್ವಯಂ ನಿಯಂತ್ರಣ (Self Control) ಅಸಾಧ್ಯ : ಔಷಧಿ ವ್ಯಸನಿಗಳಾಗಿರುವವರು ಏನೇ ಮಾಡಿದ್ರೂ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಸ್ವಯಂ ನಿಯಂತ್ರಣವನ್ನು ಅವರು ಕಳೆದುಕೊಳ್ಳುತ್ತಾರೆ. ಖಾಯಿಲೆ ಗುಣವಾಗಿದೆ ಎಂಬ ಸಂಗತಿ ತಿಳಿದಿದ್ದರೂ ಅವರು ಔಷಧಿ ಬಿಡುವುದಿಲ್ಲ. ಅತಿಯಾದ ಔಷಧಿ ಸೇವನೆಯಿಂದ ಅವರ ಆರೋಗ್ಯದ ಮೇಲೆ ಅಡ್ಡಪರಿಣಾಮವಾಗ್ತಿರುತ್ತದೆ. ಆದ್ರೂ ಅವರು ಮಾತ್ರೆ ಸೇವನೆ ನಿಲ್ಲಿಸುವುದಿಲ್ಲ.
ನಿಗದಿಗಿಂತ ಹೆಚ್ಚು ಔಷಧಿ (Medicine) ಸೇವನೆ : ಯಾವುದೇ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ನಿಗದಿತ ಪ್ರಮಾಣದ ಔಷಧವನ್ನು (Quantity of Medicine) ನೀಡಲಾಗುತ್ತದೆ. ಆದರೆ ವ್ಯಕ್ತಿ ಔಷಧಿ ವ್ಯಸನಿಯಾಗಿದ್ದರೆ ನಿಗದಿಗಿಂತ ಹೆಚ್ಚು ಮಾತ್ರೆಯ ಅವಶ್ಯಕತೆಯಿರುತ್ತದೆ. ರೋಗದಿಂದ ಚೇತರಿಸಿಕೊಳ್ಳಲು ವೈದ್ಯರು ನೀಡಿದ್ದಕ್ಕಿಂತ ಹೆಚ್ಚು ಔಷಧಿಬೇಕೆಂದು ಭಾವಿಸ್ತಾರೆ. ಹಾಗೆ ಸೇವನೆ ಮಾಡ್ತಾರೆ. ಮಾತ್ರೆ ಸೇವನೆ ಮಾಡಿ ಮಾಡಿ ಅವರ ದೇಹ ಒಗ್ಗಿಕೊಂಡಿರುತ್ತದೆ. ಹಾಗಾಗಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರೆ ಸೇವಿಸಿದ್ರೆ ದೇಹ ರಿಯಾಕ್ಟ್ ಮಾಡುವುದಿಲ್ಲ ಎಂದು ಅವರು ನಂಬುತ್ತಾರೆ.
ಎಚ್ಚರವಾಗಿಬಿಡುತ್ತೆ, ನಿದ್ರೆಯೇ ಬರೋಲ್ಲ ಎನ್ನೋರಿಗೆ ಇಲ್ಲಿವೆ ಟಿಪ್ಸ್
ದಿನನಿತ್ಯದ ಕೆಲಸದಲ್ಲಿ ತೊಂದರೆ : ಸದಾ ಮಾತ್ರೆ ಸೇವನೆ ಮಾಡುವ ಜನರು ತಿಳಿಯದೆ ಕೆಲ ವಿಷ್ಯದಲ್ಲಿ ಆಸಕ್ತಿ ಕಳೆದುಕೊಂಡಿರುತ್ತಾರೆ. ಈ ಹಿಂದೆ ಇಷ್ಟಪಡ್ತಿದ್ದ ವಿಷಯಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಅಡುಗೆ ಮಾಡುವುದಾಗಲಿ ಅಥವಾ ಕಚೇರಿ ಕೆಲಸ ಮಾಡುವುದಾಗಲಿ ಅವರಿಗೆ ಸಮಸ್ಯೆಯಾಗುತ್ತದೆ.
ಇನ್ನೇನು ದ್ರಾಕ್ಷಿ ಸೀಸನ್, ಸರಿಯಾಗಿ ತೊಳೆದು ಬಳಸೋದ ಮರೀಬೇಡಿ
ಔಷಧಿ ವ್ಯಸನದಿಂದ ನಿದ್ರೆಯಲ್ಲಿ ವ್ಯತ್ಯಾಸ : ಪ್ರತಿ ದಿನ ಮಾತ್ರೆ ಸೇವನೆ ಮಾಡುವ ಜನರು, ಖಾಯಿಲೆಯಿಲ್ಲದೆ ಹೋದ್ರೂ ಔಷಧಿ ತಿನ್ನುವ ಜನರು ನಿದ್ರೆ ಸಮಸ್ಯೆ ಎದುರಿಸುತ್ತಾರೆ. ದಿನದಿಂದ ದಿನಕ್ಕೆ ಔಷಧಿ ಅವರ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಆಹಾರದಲ್ಲಿಯೂ ಅವರು ರುಚಿ ಕಳೆದುಕೊಳ್ತಾರೆ. ಮೊದಲಿಗಿಂತ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡ್ತಾರೆ.