ಆಹಾರ ಯಾವಾಗ್ಲೂ ಆರೋಗ್ಯಕರವಾಗಿರಬೇಕು. ಹಾಗೆ ಆಹಾರ ಸೇವನೆ ವಿಧಾನ ಕೂಡ ಆರೋಗ್ಯಕರವಾಗಿರಬೇಕು. ಎಷ್ಟೊಳ್ಳೆ ಆಹಾರವನ್ನೂ ನೀವು ಕೆಟ್ಟ ವಿಧಾನದಲ್ಲಿ ಸೇವನೆ ಮಾಡಿದ್ರೆ ನಷ್ಟ ನಿಮಗಾಗುತ್ತದೆ. ಹಾಗಾಗಿ ನಿಮ್ಮ ಅಭ್ಯಾಸ ಬದಲಿಸಿಕೊಳ್ಳಿ.
ನಾವು ಆಹಾರವನ್ನು ಪಾರ್ಸಲ್ ಕೇಳಿದಾಗ ಸಾಮಾನ್ಯವಾಗಿ ಬೀದಿ ಬದಿ ಅಂಗಡಿಯಿಂದ ಹಿಡಿದು ದೊಡ್ಡ ಹೋಟೆಲ್ ವರೆಗೆ ಎಲ್ಲರೂ ನ್ಯೂಸ್ ಪೇಪರ್ ತೆಗೆದುಕೊಳ್ಳೋದನ್ನು ನೋಡಿರ್ತೇವೆ. ಬಜ್ಜಿಯಿಂದ ಹಿಡಿದು ಬಿರಿಯಾನಿವರೆಗೆ ಎಲ್ಲ ಆಹಾರವನ್ನು ಪೇಪರ್ ನಲ್ಲಿ ಕಟ್ಟಿ ಕೊಡಲಾಗುತ್ತದೆ. ಅದನ್ನು ನಾವು ಮನೆಗೆ ಅಥವಾ ಕಚೇರಿಗೆ ತಂದು ತಿನ್ನೋವರೆಗೆ ಕೆಲವು ಬಾರಿ ಪೇಪರ್ ಅಕ್ಷರಗಳು ದೋಸೆ ಮೇಲೆ ಮೂಡಿರುತ್ತವೆ. ಬಜ್ಜಿ ಬಣ್ಣ ಬದಲಾಗಿರುತ್ತದೆ. ನ್ಯೂಸ್ ಪೇಪರ್ ನಲ್ಲಿ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಪತ್ರಿಕೆಗೆ ಬಳಸುವ ಇಂಕ್‌ನಲ್ಲಿರುವ ರಾಸಾಯನಿಕಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. . ಆಹಾರ ಸುರಕ್ಷತಾ ನಿಯಂತ್ರಕ ಎಫ್‌ಎಸ್‌ಎಸ್‌ಎಐ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ. ಪತ್ರಿಕೆಗಳಲ್ಲಿ ಸುತ್ತಿದ ಆಹಾರವನ್ನು ತಿನ್ನುವುದು ಅಪಾಯಕಾರಿ ಅಭ್ಯಾಸದ ಎಂದು ಎಫ್ ಎಸ್ ಎಸ್ ಎಐ ಜನರಿಗೆ ಎಚ್ಚರಿಕೆ ನೀಡಿದೆ. ಇಂದು ನಾವು ಪೇಪರ್ ನಲ್ಲಿ ಸುತ್ತಿಟ್ಟ ಆಹಾರವನ್ನು ಸೇವನೆ ಮಾಡುವುದ್ರಿಂದ ಏನೆಲ್ಲ ನಷ್ಟವಿದೆ ಎಂಬುದನ್ನು ನಿಮಗೆ ಹೇಳ್ತೆವೆ.
ನ್ಯೂಸ್ ಪೇಪರ್ (Newspaper) ನಲ್ಲಿ ಆಹಾರ (Food) ಸೇವನೆ ಮಾಡಿದ್ರೆ ಆಗುತ್ತೆ ಈ ಎಲ್ಲ ಸಮಸ್ಯೆ :
undefined
ಶ್ವಾಸಕೋಶದ ಕ್ಯಾನ್ಸರ್ (Lung Cancer) ಗೆ ದಾರಿ : ಬಿಸಿಯಾದ ಆಹಾರವನ್ನು ನಾವು ನ್ಯೂಸ್ ಪೇಪರ್ ನಲ್ಲಿ ಸುತ್ತಿಡುತ್ತೇವೆ. ನ್ಯೂಸ್ ಪೇಪರ್ ಶಾಯಿ ಬಿಸಿ ಆಹಾರಕ್ಕೆ ಅಂಟಿಕೊಳ್ಳುತ್ತದೆ. ಆಹಾರದ ಮೂಲಕ ಈ ಶಾಯಿ ನಮ್ಮ ದೇಹ ಸೇರುತ್ತದೆ. ಇದ್ರಿಂದ ಶ್ವಾಸಕೋಶದ ಆರೋಗ್ಯ ಹದಗೆಡುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಶ್ವಾಸಕೋಶದ ಕ್ಯಾನ್ಸರ್ ನಲ್ಲಿ ಕ್ಯಾನ್ಸರ್ ಮೊದಲು ಶ್ವಾಸಕೋಶದ ಭಾಗಗಳಾದ ಬ್ರಾಂಕಿಯೋಲ್ ಅಥವಾ ಅಲ್ವಿಯೋಲಿಗಳ ಜೀವಕೋಶಗಳಿಗೆ ಹರಡುತ್ತದೆ. ತಜ್ಞರ ಪ್ರಕಾರ, ಶ್ವಾಸಕೋಶದ ತೆಳುವಾದ ಪದರದಲ್ಲಿ ಕ್ಯಾನ್ಸರ್ ಅತ್ಯಂತ ವೇಗವಾಗಿ ಹರಡುತ್ತದೆ. ನಿಧಾನವಾಗಿ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಶುರುವಾಗುತ್ತದೆ. ದೀರ್ಘಕಾಲದವರೆಗೆ ವೃತ್ತಪತ್ರಿಕೆಯಲ್ಲಿ ಬಿಸಿ ಆಹಾರವನ್ನು ಸೇವಿಸಿದರೆ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ.
Winter Tips: ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆಯೇ? ಈ ರೀತಿ ದೂರ ಮಾಡಿ
ನಿಮ್ಮ ದೃಷ್ಟಿ (Eyesight ) ಗೆ ಹಾನಿ ಮಾಡುತ್ತೆ ಈ ಅಭ್ಯಾಸ : ಕೆಲವರು ಅನಿವಾರ್ಯ ಕಾರಣದಿಂದ ಪ್ರತಿ ದಿನ ಹೊರಗಿನ ಆಹಾರ ಸೇವನೆ ಮಾಡ್ತಾರೆ. ಅದ್ರಲ್ಲೂ ದಿನಕ್ಕೆ ಮೂರು ಬಾರಿಯೂ ನ್ಯೂಸ್ ಪೇಪರ್ ನಲ್ಲಿ ಸುತ್ತಿಟ್ಟ ಆಹಾರ ಸೇವನೆ ಮಾಡುವವರೂ ಇದ್ದಾರೆ. ಇದು ದೃಷ್ಟಿ ಮೇಲೆ ಪರಿಣಾಮ ಬೀರುತ್ತದೆ. ದೀರ್ಘ ಕಾಲದವರೆಗೆ ನ್ಯೂಸ್ ಪೇಪರ್ ನಲ್ಲಿ ಆಹಾರ ಸೇವನೆ ಮಾಡಿದ್ರೆ ಅದ್ರಲ್ಲಿರುವ ಶಾಯಿ ದೃಷ್ಟಿ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದ್ರಿಂದ ದೃಷ್ಟಿ ಹೋಗಬಹುದು. ಹಿರಿಯ ವಯಸ್ಕರು ಹಾಗೂ ಸಣ್ಣ ಮಕ್ಕಳಲ್ಲಿ ಈ ಅಪಾಯ ಹೆಚ್ಚು ಎನ್ನುತ್ತಾರೆ ತಜ್ಞರು.
WORLD VEGAN DAY: ಸಸ್ಯಾಹಾರಿಗಳಿಗೆ ಹೃದಯಾಘಾತದ ಭಯವಿಲ್ಲ ಅನ್ನೋದು ನಿಜಾನ ?
ನ್ಯೂಸ್ ಪೇಪರ್ ಶಾಯಿ ಯಕೃತ್ತಿನ ಕ್ಯಾನ್ಸರ್ (Cancer)ಗೆ ಕಾರಣವಾಗುತ್ತೆ : ದಿನಪತ್ರಿಕೆಯಲ್ಲಿ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ಯಕೃತ್ತಿನ ಕ್ಯಾನ್ಸರ್ ಉಂಟಾಗುತ್ತದೆ. ಪ್ರತಿ ದಿನ ರಸ್ತೆ ಬದಿಯಲ್ಲಿ ಆಹಾರ ಸೇವನೆ ಮಾಡ್ತೇನೆ ಎನ್ನುವವರು ಪ್ಲೇಟ್ ಬಳಕೆ ಮಾಡೋದು ಒಳ್ಳೆಯದು. ಇಲ್ಲವೆ ಬಾಳೆ ಎಲೆಯನ್ನು ಬಳಕೆ ಮಾಡಬಹುದು. ಪಿತ್ತಜನಕಾಂಗದ ಕ್ಯಾನ್ಸರ್ ಅಲ್ಲದೆ ನ್ಯೂಸ್ ಪೇಪರ್ ನಲ್ಲಿ ಆಹಾರ ತಿನ್ನುವುದ್ರಿಂದ ಮೂತ್ರಕೋಶದ ಕ್ಯಾನ್ಸರ್ ಬರುವ ಅಪಾಯವೂ ಇದೆ ಎನ್ನುತ್ತಾರೆ ತಜ್ಞರು. ಅನೇಕ ರೀತಿಯ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ. ಗ್ಯಾಸ್ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕೂಡ ಜನರನ್ನು ಕಾಡಲು ಶುರುವಾಗುತ್ತದೆ. ಹಾಗಾಗಿ ನ್ಯೂಸ್ ಪೇಪರ್ ನಲ್ಲಿ ಎಂದಿಗೂ ಆಹಾರ ತಿನ್ನಬೇಡಿ. ಸಾಧ್ಯವಾದಷ್ಟು ಸುರಕ್ಷಿತ ವಿಧಾನವನ್ನು ಬಳಸಿ.