ನಡೆಯುವಾಗ ಉಸಿರಾಡೋಕೆ ಕಷ್ಟವಾಗುತ್ತದಾ ? ಏನ್ ಸಮಸ್ಯೆ ತಿಳ್ಕೊಳ್ಳಿ

By Suvarna NewsFirst Published Mar 12, 2022, 5:42 PM IST
Highlights

ಇತ್ತೀಚಿಗೆ ಬದಲಾದ ಜೀವನಶೈಲಿ (Lifestyle)ಯಿಂದ ಹಲವಾರು ಹೊಸ ಹೊಸ ಆರೋಗ್ಯ ಸಮಸ್ಯೆ (Health Problem)ಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿಯೇ ಹೆಚ್ಚಿನವ್ರು ವಾಕಿಂಗ್‌ (Walking), ಜಾಗಿಂಗ್‌ ಮೊದಲಾದ ಅಭ್ಯಾಸಗಳನ್ನು ರೂಢಿ ಮಾಡಿಕೊಂಡಿದ್ದಾರೆ. ಆದ್ರೆ ಕೆಲವೊಬ್ಬರಿಗೆ ನಡೆಯುವಾಗಲೂ ಉಸಿರು (Breathe)ಗಟ್ಟಿದಂತಾಗುತ್ತದೆ. ಇದಕ್ಕೇನು ಕಾರಣ ತಿಳ್ಕೊಳ್ಳೋಣ.

ಉಸಿರಾಟ (Breathe)ದ ತೊಂದರೆ ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಕೆಲವೊಬ್ಬರಿಗೆ ಹೆಚ್ಚು ಕೆಮ್ಮುವಾಗ, ಇನ್ನು ಕೆಲವೊಬ್ಬರಿಗೆ ನಡೆಯುವಾಗ, ಮತ್ತೆ ಹಲವರಿಗೆ ಓಡುವಾಗ, ಅಳುವಾಗ ಉಸಿರಾಡಲು ಕಷ್ಟವಾಗುತ್ತದೆ. ಉಸಿರು ಮೇಲಕ್ಕೆ ಹೋದಾಗ ಸಾಮಾನ್ಯವಾಗಿ ಒಮ್ಮೆಗೇ ಗಾಬರಿಯಾಗುವುದು ಸಹಜ. ನಮ್ಮಲ್ಲಿ ಹಲವರು ಉಸಿರಾಟದ ತೊಂದರೆ ಅನುಭವಿಸಿದಾಗ ವೈದ್ಯರನ್ನು ಸಂಪರ್ಕಿಸದೆಯೇ ಮನೆಮದ್ದುಗಳನ್ನು ಪ್ರಾರಂಭಿಸುತ್ತಾರೆ. ಆದರೆ ಈ ರೀತಿ ಮಾಡಲು ಹೋಗಬೇಡಿ. ಉಸಿರಾಟದ ತೊಂದರೆ ಕೆಲವೊಮ್ಮೆ ಜೀವಕ್ಕೇ ಸಂಚಕಾರವಾಗಬಹುದು. 

ಉಸಿರಾಟದ ತೊಂದರೆ ಹಲವಾರು ಕಾರಣಗಳಿಂದ ಉಂಟಾಗಬಹುದು. ಅದರ ಹಿಂದಿನ ಸರಿಯಾದ ಕಾರಣವನ್ನು ನಿರ್ಣಯಿಸಲು, ಒಬ್ಬರು ಅದರ ಸಂಭವಿಸುವಿಕೆಯನ್ನು ಮತ್ತು ಅದನ್ನು ಪ್ರಚೋದಿಸುವ ಚಟುವಟಿಕೆಗಳನ್ನು ಗಮನಿಸಬೇಕು. ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಯಾವುದು ಸಹಜವಾದದ್ದು ? ಯಾವುದು ಅಪಾಯಕಾರಿ ಎಂಬುದನ್ನು ತಿಳಿದುಕೊಳ್ಳಿ.

ಉಸಿರಾಟದ ತೊಂದರೆ ಕಾಣಿಸಿದರೆ ‘ಪ್ರೋನಿಂಗ್‌’ವ್ಯಾಯಾಮ ಮಾಡಿ!

ಉಸಿರಾಟದ ತೊಂದರೆ ಎಂದರೇನು ? 
ಉಸಿರಾಟದ ತೊಂದರೆ ಎಂದರೆ ದೇಹ (Body)ವು ಉಸಿರಾಡಲು ಸಾಕಷ್ಟು ಗಾಳಿಯನ್ನು ಪಡೆಯದಿದ್ದಾಗ. ಈ ಸಂದರ್ಭದಲ್ಲಿ, ವ್ಯಕ್ತಿಯು ಗಟ್ಟಿಯಾಗಿ ಮತ್ತು ವೇಗವಾಗಿ ಉಸಿರಾಡಲು ಕಷ್ಟಪಡುವುದಾಗಿದೆ. ಇಂಥಾ ಸಂದರ್ಭದಲ್ಲಿ ವ್ಯಕ್ತಿಯು ಗಾಳಿಗಾಗಿ ಏದುಸಿರು ಬಿಡುತ್ತಾನೆ. ಉಸಿರಾಟದ ತೊಂದರೆಗೆ ವೈದ್ಯಕೀಯ ಪದವೆಂದರೆ ಡಿಸ್ಪ್ನಿಯಾ. ಹೆಚ್ಚು ಓಡಿ ಅಭ್ಯಾಸವಿಲ್ಲದವರು ಸ್ವಲ್ಪ ಸಮಯದವರೆಗೆ ಓಡಿದಾಗ ಇಂಥಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೆಟ್ಟಿಲುಗಳ ವಾಕಿಂಗ್ ಅಥವಾ ಸಮ ಮೇಲ್ಮೈಯಲ್ಲಿ ಸಾಮಾನ್ಯವಾಗಿ ನಡೆಯುವಂತಹ ಸಣ್ಣ ದೈಹಿಕ ಕೆಲಸ (Physical Work)ಗಳನ್ನು ಮಾಡಿದ ನಂತರ ಈ ಸಮಸ್ಯೆ ಕಂಡು ಬಂದರೆ ಇದು ಸಾಮಾನ್ಯ ಸಮಸ್ಯೆಯಾಗಿದೆ. 

ಸಂಭವನೀಯ ಕಾರಣಗಳು ಯಾವುವು ? 
ಉಸಿರಾಟದ ತೊಂದರೆಯ ಹಿಂದೆ ಹಲವಾರು ವೈದ್ಯಕೀಯ ಮತ್ತು ವೈದ್ಯಕೀಯೇತರ ಕಾರಣಗಳಿವೆ. ಎತ್ತರದಲ್ಲಿರುವಾಗ ಅಥವಾ ಗಾಳಿ (Air)ಯ ಗುಣಮಟ್ಟವು ಅಪಾಯಕಾರಿ ಮಟ್ಟದಲ್ಲಿದ್ದಾಗ ಅಥವಾ ತಾಪಮಾನವು ತುಂಬಾ ಹೆಚ್ಚಾದಾಗ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಅಥವಾ ಭಾರೀ ತಾಲೀಮು (Exercise) ಮಾಡಿದ ನಂತರವೂ ಉಸಿರಾಟದ ತೊಂದರೆಯನ್ನು ಅನುಭವಿಸುವಂತಾಗುತ್ತದೆ. ವ್ಯಕ್ತಿಯಲ್ಲಿ ಉಸಿರಾಟದ ತೊಂದರೆಯನ್ನು ಉಂಟುಮಾಡುವ ಹಲವಾರು ವೈದ್ಯಕೀಯ ಪರಿಸ್ಥಿತಿಗಳಿವೆ. ಅಲರ್ಜಿ, ಅಸ್ತಮಾ, ಹೃದಯ (Heart) ಸಮಸ್ಯೆಗಳು, ಶ್ವಾಸಕೋಶದ ಕಾಯಿಲೆ, ನ್ಯುಮೋನಿಯಾ, ಬೊಜ್ಜು, ಕ್ಷಯ ಮುಂತಾದ ಸಮಸ್ಯೆಗಳು ಸಹ ಡಿಸ್ಪ್ನಿಯಾವನ್ನು ಉಂಟುಮಾಡುತ್ತವೆ. 

ಗರ್ಭಿಣಿಯರಿಗೆ ಕೇಸರಿ ಸೇವನೆಯ ಅದ್ಭುತ ಪ್ರಯೋಜನಗಳು!!

ಕೋವಿಡ್‌ ಕಾಲದಲ್ಲೂ ಹಲವರು ಉಸಿರಾಟದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ನೋಯುತ್ತಿರುವ ಗಂಟಲು, ಸ್ರವಿಸುವ ಮೂಗು ಮುಂತಾದ ವಿಶಿಷ್ಟವಾದ ರೋಗಲಕ್ಷಣಗಳನ್ನು ಹೊಂದಿರುವ ಅನೇಕ ಜನರು ಸೋಂಕಿನ ಸಮಯದಲ್ಲಿ ಉಸಿರಾಟದ ಸಮಸ್ಯೆಗಳಿಂದ ನರಳುವಂತಾಗುತ್ತದೆ. 

ವೈದ್ಯಕೀಯ ಸ್ಥಿತಿಯು ಉಸಿರಾಟದ ತೊಂದರೆಯ ಕಾರಣವನ್ನು ಅವಲಂಬಿಸಿರುತ್ತದೆ ಏಕೆಂದರೆ ಇದು ಶ್ವಾಸಕೋಶ, ಹೃದಯ, ಮೂತ್ರಪಿಂಡ ಅಥವಾ ಸ್ನಾಯುವಿನ ಸಮಸ್ಯೆಯಿಂದಾಗಿರಬಹುದು. ಆದ್ದರಿಂದ ಶ್ವಾಸಕೋಶ, ಮೂತ್ರಪಿಂಡ, ಹೃದಯ ಅಥವಾ ಯಾವುದೇ ಸ್ನಾಯುವಿನ ವ್ಯವಸ್ಥೆಯ ಪ್ರಮುಖ ಕಾಯಿಲೆಗಳಿಗೆ ಕಾರಣವಾಗಬಹುದು. ರೋಗದ ಆರಂಭಿಕ ಅವಧಿಯಲ್ಲಿ ನಿರ್ಲಕ್ಷ್ಯ ಅಥವಾ ರೋಗನಿರ್ಣಯ ಮಾಡದಿದ್ದರೆ ಮುಖ್ಯವಾಗಿ ಶ್ವಾಸಕೋಶದಲ್ಲಿ ಬದಲಾಯಿಸಲಾಗದ ಬದಲಾವಣೆಗಳಿಗೆ ಕಾರಣವಾಗಬಹುದು.ಈ ಸಮಸ್ಯೆಯು ದೀರ್ಘಕಾಲದ ವರೆಗೆ ಮುಂದುವರಿದರೆ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. 

ಗಮನಿಸಬೇಕಾದ ಇತರ ಲಕ್ಷಣಗಳು ಯಾವುವು ? 
ಎದೆನೋವು, ಎದೆಯಲ್ಲಿ ಭಾರವಾಗುವುದು, ಉಬ್ಬಸ, ಕೆಮ್ಮು, ರಾತ್ರಿಯಲ್ಲಿ ಎಚ್ಚರಗೊಳ್ಳುವುದು, ಗೊರಕೆ, ಆಯಾಸ ಮುಂತಾದ ಇತರ ರೋಗಲಕ್ಷಣಗಳು ಕಂಡು ಬಂದರೂ ಸಹ ಪರೀಕ್ಷೆ ನಡೆಸಬೇಕಯ ಎಂದು ವೈದ್ಯರು ಹೇಳುತ್ತಾರೆ.

ಉಸಿರಾಟದ ಸಮಸ್ಯೆ ಯಾವಾಗ ಅಪಾಯಕಾರಿ ?
ನಡೆಯುವಾಗ, ಓಡುವಾಗ ಉಸಿರಾಟದ ಸಮಸ್ಯೆ ಕಂಡು ಬಂದರೆ ಅಷ್ಟು ಅಪಾಯಕಾರಿಯಲ್ಲ. ಆದರೆ ಈ ಸ್ಥಿತಿಯು ದೀರ್ಘಕಾಲದವರೆಗೆ ಮುಂದುವರಿದರೆ ಖಂಡಿತವಾಗಿಯೂ ವೈದ್ಯರನ್ನು ಭೇಟಿ ಮಾಡಬೇಕು.  ಯಾಕೆಂದರೆ ಈ ಸಮಸ್ಯೆಯು ಇತರ ರೋಗಲಕ್ಷಣಗಳೊಂದಿಗೆ ಸಂಬಂಧ ಹೊಂದಿದ್ದರೆ, ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಯಿದೆ.. ಪ್ರಾಥಮಿಕ ಬೇಸ್‌ಲೈನ್ ಶ್ವಾಸಕೋಶದ ಕಾರ್ಯ ಪರೀಕ್ಷೆ-ಪಲ್ಮನರಿ ಫಂಕ್ಷನ್ ಟೆಸ್ಟ್ (ಪಿಎಫ್‌ಟಿ) ಸಾಮಾನ್ಯವಾಗಿಲ್ಲದಿದ್ದರೆ, ಖಂಡಿತವಾಗಿಯೂ ಒಬ್ಬರು ಶ್ವಾಸಕೋಶಶಾಸ್ತ್ರಜ್ಞರನ್ನು ಭೇಟಿ ಮಾಡಬೇಕು. 

click me!