Dry mouth at night: ರಾತ್ರಿ ಸಿಕ್ಕಾಪಟ್ಟೆ ಬಾಯಿ ಒಣಗಿದ್ರೆ ಏನ್ಬಾಡ್ಮೇಕು?

By Suvarna NewsFirst Published Mar 12, 2022, 2:33 PM IST
Highlights

ಅನೇಕರು ಸದಾ ಬಾಯಾರಿಕೆ ಎನ್ನುತ್ತಿರುತ್ತಾರೆ. ರಾತ್ರಿ ಆಗಾಗ ಎದ್ದು ನೀರು ಕುಡಿಯುತ್ತಿರುತ್ತಾರೆ. ನೀವೂ ಈ ಒಣ ಬಾಯಿ ಸಮಸ್ಯೆ ಎದುರಿಸುತ್ತಿದ್ದರೆ ಸುಲಭ ಉಪಾಯದ ಮೂಲಕ ಅದನ್ನು ಕಡಿಮೆ ಮಾಡಿಕೊಳ್ಳಬಹುದು. 
 

ರಾತ್ರಿ (Night) ನಿದ್ರೆ (Sleep)ಯಲ್ಲಿದ್ದಾಗ ಬಾಯಿ ಒಣಗಿ (Dry Mouth ) ತಕ್ಷಣ ಎಚ್ಚರವಾಗುತ್ತದೆ. ವೃದ್ಧಾಪ್ಯ (Old Age) ದಲ್ಲಿ ಇದು ಹೆಚ್ಚಾಗಿ ಕಾಡುತ್ತದೆ. ಏಕೆಂದರೆ ವಯಸ್ಸಾದಂತೆ, ಬಾಯಿಯಲ್ಲಿ ಲಾಲಾರಸ (Saliva) ದ ಉತ್ಪಾದನೆಯು ಕಡಿಮೆಯಾಗುತ್ತದೆ. ಬಾಯಿಯ ಶುಷ್ಕತೆಯಿಂದ ಈ ಸಮಸ್ಯೆ ಕಾಡುತ್ತದೆ. ಆದ್ರೆ ವೃದ್ಧರಿಗೆ ಮಾತ್ರವಲ್ಲ ರಾತ್ರಿ ಮಲಗುವಾಗ ಕೆಲ ವಯಸ್ಕರಿಗೂ ಬಾಯಿ ಒಣಗುತ್ತದೆ. ಬಾಯಿ ಒಣಗಲು ಅನೇಕ ಕಾರಣಗಳಿವೆ. ಸದಾ ಔಷಧಿ ತೆಗೆದುಕೊಳ್ಳುವವರಿಗೆ ಬಾಯಿ ಒಣಗುವ ಸಮಸ್ಯೆ ಶುರುವಾಗುತ್ತದೆ.  ಬಾಯಿಯ ಮೂಲಕ ಉಸಿರಾಡುವುದರಿಂದಲೂ ರಾತ್ರಿ ಮಲಗಿದಾಗ ಬಾಯಿ ಒಣಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಜೊತೆ ನೀರು ಕೂಡ ನಿಮ್ಮ ಸಮಸ್ಯೆಗೆ ಕಾರಣವಾಗಬಹುದು. ನೀವು ತುಂಬಾ ಕಡಿಮೆ ನೀರನ್ನು ಕುಡಿಯುತ್ತೀರಿ, ನಿಮ್ಮ ಬಾಯಿ ಆಗಾಗ್ಗೆ ಶುಷ್ಕವಾಗುತ್ತದೆ. ಇದಲ್ಲದೆ ಬಾಯಿ ಒಣಗಲು ಇನ್ನೂ  ಇತರ ಹಲವು ಕಾರಣಗಳಿರಬಹುದು. ಕೆಲ ಮನೆ ಮದ್ದಿನ ಮೂಲಕ ನೀವು ಈ ಸಮಸ್ಯೆಯಿಂದ ಹೊರಗೆ ಬರಬಹುದು. ಇಂದು ನಾವು ಕೆಲ ಉಪಾಯಗಳನ್ನು ಹೇಳ್ತೇವೆ. ಅದನ್ನು ಪಾಲಿಸುವ ಮೂಲಕ,ರಾತ್ರಿ ಬಾಯಿ ಒಣಗುವ ಸಮಸ್ಯೆಯಿದ್ದರೆ ನೀವೂ ಅದನ್ನು ಕಡಿಮೆ ಮಾಡಿಕೊಳ್ಳಿ. 

ಬಾಯಿ ಒಣಗುವ ಸಮಸ್ಯೆಗೆ ಮದ್ದು

ಮೂಗಿನ ಮೂಲಕ ಉಸಿರಾಟ : ಸಾಮಾನ್ಯವಾಗಿ ಉಸಿರಾಟದ ತೊಂದರೆಯಿಂದಾಗಿ ಕೆಲವರು ಮಲಗುವಾಗ ಬಾಯಿ ತೆರೆಯುತ್ತಾರೆ.  ನಂತರ ಅವರು ಮೂಗಿನ ಬದಲು ಬಾಯಿಯ ಮೂಲಕ ಉಸಿರಾಡಲು ಪ್ರಾರಂಭಿಸುತ್ತಾರೆ. ಇದು ನೈಸರ್ಗಿಕವಾಗಿ ಒಣ ಬಾಯಿಗೆ ಕಾರಣವಾಗುತ್ತದೆ. ಆದ್ದರಿಂದ ಮೂಗಿನ ಮೂಲಕ ಉಸಿರಾಡಲು ಸಾಧ್ಯವಾದಷ್ಟು ಪ್ರಯತ್ನಿಸಿ. ಶೀತ ಮತ್ತು ಜ್ವರದಂತ ಯಾವುದೇ ಸಮಸ್ಯೆ ಇದ್ದರೆ, ಅದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿದ್ದೆ ಮಾಡುವಾಗ ಮೂಗು ಕಟ್ಟಿಕೊಂಡರೆ ಬಾಯಿಯ ಮೂಲಕ ಉಸಿರಾಟ ಮಾಡಬೇಡಿ. ಎದ್ದು ಕುಳಿತು ಮೂಗನ್ನು ಸರಿಪಡಿಸಿಕೊಂಡು ಮೂಗಿನ ಮೂಲಕವೇ ಉಸಿರಾಡಿ. 

HEALTH TIPS: ಸಕ್ಕರೆ ತಯಾರಿಸುವಾಗ ಮೂಳೆಯ ಪುಡಿ ಸೇರಿಸುತ್ತಾರಾ?

ಕೆಫೀನ್ ಮತ್ತು ನಿಕೋಟಿನ್ ನಿಂದ ದೂರವಿರಿ : ಬಾಯಿ ಒಣಗುವ ಸಮಸ್ಯೆ ನಿಮಗಿದ್ದರೆ ಕೆಫೀನ್ ಮತ್ತು ನಿಕೋಟಿನ್ ನಿಂದ ದೂರವಿರಿ.  ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ. ಇದರಿಂದಾಗಿ ಬಾಯಿ ಒಣಗುವ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ, ಚಹಾ ಮತ್ತು ಕಾಫಿಯಂತಹ ಕೆಫೀನ್ ಅಂಶವಿರುವ ಆಹಾರ ಸೇವನೆಯನ್ನು ಮಿತಿಗೊಳಿಸಿ. ಇದಲ್ಲದೆ ಬೀಡಿ-ಸಿಗರೇಟ್‌ಗಳಂತಹ ನಿಕೋಟಿನ್ ಹೊಂದಿರುವ ವಸ್ತುಗಳ ಬಳಕೆಯನ್ನು ಸಹ ಸಾಧ್ಯವಾದಷ್ಟು ಕಡಿಮೆ ಮಾಡಿ. ನಿಕೋಟಿನ್ ಕೂಡ ಬಾಯಿ ಶುಷ್ಕತೆಗೆ ಕಾರಣವಾಗುತ್ತದೆ. 

ಮದ್ಯಪಾನದಿಂದ ದೂರವಿರಿ : ಆಲ್ಕೋಹಾಲ್ ಸೇವನೆ ಅಥವಾ ಮೌತ್ ವಾಶ್ ಆಗಿ ಬಳಸುವುದರಿಂದ ಒಣ ಬಾಯಿ ಸಮಸ್ಯೆಯೂ ಹೆಚ್ಚಾಗುತ್ತದೆ. ಈ ಸಮಸ್ಯೆಯಿಂದ ಮುಕ್ತಿಪಡೆಯಬೇಕು ಎನ್ನುವವರು ಆಲ್ಕೋಹಾಲ್ ಸೇವನೆ ಮಾಡ್ಬೇಡಿ. ಇಷ್ಟೇ ಅಲ್ಲ ಆಲ್ಕೋಹಾಲ್ ಹೊಂದಿರುವ ಮೌತ್ವಾಶ್ ಅನ್ನು ಬಳಸಬೇಡಿ. ಇವೆರಡೂ ನಿಮ್ಮ ಬಾಯಿ ಒಣಗುವ ಸಮಸ್ಯೆಯನ್ನು ಹೆಚ್ಚು ಮಾಡುತ್ತವೆ ಎಂಬುದು ನೆನಪಿರಲಿ.

ಹಳೆ ಕೀಲು ನೋವು ಕಾಡುತಿದ್ದರೆ, ತಕ್ಷಣವೇ ಈ ಪರಿಣಾಮಕಾರಿ ಮನೆಮದ್ದು ಟ್ರೈ ಮಾಡಿ!

ಹೆಚ್ಚೆಚ್ಚು ನೀರು ಸೇವನೆ : ನೀರು ಜೀವಜಲ. ಪ್ರತಿಯೊಬ್ಬರಿಗೂ ನೀರು ಅತ್ಯಗತ್ಯ. ದೇಹವನ್ನು ಹೈಡ್ರೇಟ್ ಆಗಿರಲು ದಿನವಿಡಿ ನೀರು ಸೇವನೆ ಮಾಡಬೇಕು. ಪ್ರತಿ ದಿನ 8-10 ಗ್ಲಾಸ್ ನೀರು ಸೇವನೆ ಮಾಡ್ಬೇಕು. ದೇಹದಲ್ಲಿ ನೀರಿನ ಕೊರತೆಯಾದಾಗ ಸಾಮಾನ್ಯವಾಗಿ ಬಾಯಾರಿಕೆಯಾಗುತ್ತದೆ. ದೇಹ ನೀರನ್ನು ಬಯಸುತ್ತದೆ. ಕೆಲವರು ದೇಹ ನೀರು ಬಯಸಿದ್ರೂ ನೀರು ಸೇವನೆ ಮಾಡುವುದಿಲ್ಲ. ದಿನದಲ್ಲಿ ಕೇವಲ ಮೂರ್ನಾಲ್ಕು ಗ್ಲಾಸ್ ನೀರು ಸೇವನೆ ಮಾಡುವುದಿಲ್ಲ. ಅಂಥವರಿಗೆ ಒಣ ಬಾಯಿ ಸಮಸ್ಯೆ ಕಾಡುತ್ತದೆ.  

ನೀರು ಸೇವನೆಯನ್ನು ಹೆಚ್ಚು ಮಾಡುವ ಜೊತೆಗೆ ಉಪ್ಪು ಸೇವನೆಯನ್ನು ಕಡಿಮೆ ಮಾಡಬೇಕು. ಅತಿಯಾದ ಉಪ್ಪು ಸೇವನೆ ಕೂಡ ಒಣ ಬಾಯಿ ಸಮಸ್ಯೆಯನ್ನುಂಟು ಮಾಡುತ್ತದೆ.

click me!