Put The Phone Away: ಮಲಗುವ ಮುನ್ನ ಮೊಬೈಲ್ ಬಳಸಿದ್ರೆ ಆರೋಗ್ಯಕ್ಕೆ ತೊಂದ್ರೆ

Suvarna News   | Asianet News
Published : Mar 12, 2022, 03:19 PM IST
Put The Phone Away: ಮಲಗುವ ಮುನ್ನ ಮೊಬೈಲ್ ಬಳಸಿದ್ರೆ ಆರೋಗ್ಯಕ್ಕೆ ತೊಂದ್ರೆ

ಸಾರಾಂಶ

ಇವತ್ತಿನ ಕಾಲದಲ್ಲಿ ಎಲ್ಲಿ ಹೋದ್ರೂ ಬಂದ್ರೂ ಎಲ್ಲರ ಕೈಯಲ್ಲಿ ಮೊಬೈಲ್ (Mobile) ಅಂತೂ ಇದ್ದೇ ಇರುತ್ತೆ. ಎದ್ದಾಗ, ಕುಳಿತಾಗ, ಸ್ನಾನ ಮಾಡುವಾಗ, ಊಟ ಮಾಡುವಾಗ, ಮಲಗುವಾಗ ಹೀಗೆ ಯಾವಾಗಲೂ ಮೊಬೈಲ್ ಅಂತೂ ಪಕ್ಕ ಇರಲೇಬೇಕು. ಉಳಿದೆಲ್ಲವನ್ನೂ ಬಿಟ್ಬಿಡಿ, ಆದ್ರೆ ಮಲಗುವಾಗ ಮೊಬೈಲ್ ಯೂಸ್ ಮಾಡೋದ್ರಿಂದ ಆರೋಗ್ಯ (Health)ಕ್ಕೆ ಎಷ್ಟ ತೊಂದ್ರೆಯಿದೆ ಗೊತ್ತಾ ?

ಮೊಬೈಲ್‌ (Mobile) ಇಲ್ಲದೆ ಜೀವನವಿಲ್ಲ ಎಂಬಂತಾಗಿದೆ ಜಗತ್ತು. ಬೆಳಗ್ಗಿನ ಅಲಾರಂ, ಫುಡ್ ಆರ್ಡರ್‌, ಎಕ್ಸರ್‌ಸೈಸ್‌, ಶಾಪಿಂಗ್‌, ಆಫೀಸಿಗೆ ಹೋಗಲು ಕ್ಯಾಬ್ ಬುಕ್‌ ಹೀಗೆ ಎಲ್ಲಾ ವಿಚಾರಕ್ಕೂ ಎಲ್ಲರೂ ಮೊಬೈಲ್‌ನ್ನೇ ಅವಲಂಬಿಸುತ್ತಿದ್ದಾರೆ. ಬೋರಾದಾಗ ಸಾಥ್ ನೀಡಲು ಸೋಷಿಯಲ್ ಮೀಡಿಯಾ (Social Media)ಗಳು, ಗುರುತು ಪರಿಚಯ ಇಲ್ಲದ ಫ್ರೆಂಡ್ಸ್‌ಗಳು, ಅರ್ಥವೇ ಇಲ್ಲದ ವೀಡಿಯೋ ಮಾಡಿ ಪೋಸ್ಟ್ ಮಾಡುವ ಅಪರಿಚಿತರು ಎಲ್ಲರೂ ಇದ್ದಾರೆ. ಹೀಗಾಗಿಯೇ ಮೊಬೈಲ್ ಎಲ್ಲರಿಗೂ ಅನಿವಾರ್ಯವಾಗಿಬಿಟ್ಟಿದೆ.

ಇವತ್ತಿನ ಜನರೇಷನ್ ಅಂತೂ ಟಿವಿ ಮುಂದೆ ಕೂರೋದು ಕಡಿಮೆ. ಹೊಸ ಮೂವಿ, ವೆಬ್‌ಸಿರೀಸ್ ಅಂತ ಮೂರೂ ಹೊತ್ತು ಮೊಬೈಲ್‌ಗೆ ಅಂಟಿಕೊಂಡಿರುತ್ತಾರೆ. ಎದ್ದಾಗ, ಕುಳಿತಾಗ, ಸ್ನಾನ ಮಾಡುವಾಗ, ಊಟ ಮಾಡುವಾಗ, ಮಲಗುವಾಗ ಹೀಗೆ ಯಾವಾಗಲೂ ಮೊಬೈಲ್ ಅಂತೂ ಪಕ್ಕ ಇರಲೇಬೇಕು. ಉಳಿದೆಲ್ಲವನ್ನೂ ಬಿಟ್ಬಿಡಿ, ಆದ್ರೆ ಮಲಗುವಾಗ ಮೊಬೈಲ್ ಯೂಸ್ ಮಾಡೋದ್ರಿಂದ ಆರೋಗ್ಯ (Health)ಕ್ಕೆ ಎಷ್ಟ ತೊಂದ್ರೆಯಿದೆ ಗೊತ್ತಾ ?

Dry mouth at night: ರಾತ್ರಿ ಸಿಕ್ಕಾಪಟ್ಟೆ ಬಾಯಿ ಒಣಗಿದ್ರೆ ಏನ್ಬಾಡ್ಮೇಕು?

ಮಲಗುವ ಮುನ್ನ ಮೊಬೈಲ್ ಬಳಸಿದ್ರೆ ಆರೋಗ್ಯಕ್ಕೆ ತೊಂದ್ರೆಯಾಗುತ್ತಾ ?
ಬೆಡ್‌ಲ್ಲಿ ಬಿದ್ಕೊಳ್ಳೋದು ಮೊಬೈಲ್‌ ಸ್ಕ್ರೋಲ್ ಮಾಡೋದು ಇದು ಇವತ್ತಿನ ಜನರೇಷನ್‌ನ ಫೇವರಿಟ್ ಹಾಬಿ. ಕಣ್ಣು ದಣಿದಷ್ಟೂ ವೀಡಿಯೋಗಳನ್ನು ನೋಡುತ್ತಲೇ ಇರುತ್ತಾರೆ. ಕೆಲವೊಬ್ಬರು ಮುಂಜಾನೆಯ ವರೆಗೆ ಕುಳಿತು ಮೂವಿ, ವೆಬ್‌ ಸಿರೀಸ್‌ಗಳನ್ನು ನೋಡುವುದಿದೆ. ಮತ್ಯಾವಾಗ ನಿದ್ದೆ ಬಂತೂ ಗೊತ್ತೇ ಆಗಿರುವುದಿಲ್ಲ.  ಬೆಳಗ್ಗೆದ್ದು ಮತ್ತದೇ ದಿನಚರಿ. ಆದ್ರೆ ಈ ರೀತಿ ಮಲಗೋವಾಗ ಮೊಬೈಲ್ ಬಳಸೋದು ನಿದ್ದೆ (Sleep)ಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. 

ಚಲನಚಿತ್ರಗಳು, ದೂರದರ್ಶನ, ಅಥವಾ ಯೂಟ್ಯೂಬ್‌ ವೀಡಿಯೊಗಳನ್ನು ವೀಕ್ಷಿಸುವಂತಹ ಮಾಧ್ಯಮ ಬಳಕೆಯಿಂದ ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಇತ್ತೀಚಿನ ಸಂಶೋಧನೆಯು ಪರಿಶೀಲಿಸಿದೆ. ಅಧ್ಯಯನವನ್ನು 'ಜರ್ನಲ್ ಆಫ್ ಸ್ಲೀಪ್ ರಿಸರ್ಚ್' ನಲ್ಲಿ ಪ್ರಕಟಿಸಲಾಗಿದೆ. ಕೋವಿಡ್‌, ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಜನರು ಈ ರೀತಿ ಮೊಬೈಲ್ ಬಳಸುತ್ತಾ ಮಲಗುವ ಅಭ್ಯಾಸ ಇನ್ನಷ್ಟು ಹೆಚ್ಚಾಗಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಸ್ಲೀಪ್ ಡಿಸಾರ್ಡರ್ಸ್ ಸ್ಪೆಷಲಿಸ್ಟ್, ಹರ್ನೀತ್ ವಾಲಿಯಾ ಮೊಬೈಲ್‌ ಸ್ಕ್ರೋಲ್ ಮಾಡುತ್ತಾ ಮಲಗೋದ್ರಿಂದ ಏನು ತೊಂದ್ರೆಯಾಗುತ್ತೆ ಅನ್ನೋದನ್ನು ಹೇಳುತ್ತಾರೆ.

ಟ್ರೈ ಮಾಡಿ Aroma Therapy, ಮನಸ್ಸಾಗುವುದು ಹ್ಯಾಪಿ ಹ್ಯಾಪಿ

ಮೆದುಳಿಗೆ ವಿಶ್ರಾಂತಿ ಸಿಗುವುದಿಲ್ಲ
ಸ್ಮಾರ್ಟ್‌ಫೋನ್‌ಗಳನ್ನು ನಮ್ಮನ್ನು ಹೆಚ್ಚು ಉತ್ಪಾದಕವಾಗಿಸಲು ಮತ್ತು ನಮ್ಮ ಜೀವನವನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾಗಿದೆ. ನಮ್ಮನ್ನು ರಂಜಿಸಲು ಮತ್ತು ಮಾಹಿತಿಯನ್ನು ಒದಗಿಸಲು ಅವುಗಳನ್ನು ಸಿದ್ಧಪಡಿಸಲಾಗಿದೆ. ಆದರೆ ದೀಪಗಳನ್ನು ಆಫ್ ಮಾಡಿ ಮತ್ತು ನಿದ್ರೆಗೆ ಹೋಗುವ ಸಮಯ ಬಂದಾಗ, ನಮ್ಮ ಮೆದುಳಿಗೆ ವಿಶ್ರಾಂತಿ ಬೇಕಾಗುತ್ತದೆ. ಆದರೆ ಮಲಗುವ ಸಮಯದಲ್ಲೂ ಮೊಬೈಲ್ ಬಳಸುವುದರಿಂದ ಮೆದುಳಿಗೆ ವಿಶ್ರಾಂತಿ ಸಿಗುವುದಿಲ್ಲ. ಇದು ಮನಸ್ಸಿನ ಮೇಲೆ ಒತ್ತಡ (Pressure) ಬೀಳಲು ಕಾರಣವಾಗುತ್ತದೆ.

ನಿದ್ದೆ ಬರುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ
ಮೊಬೈಲ್‌ನ್ನು ಸ್ಕ್ರೋಲ್ ಮಾಡುತ್ತಾ ಇರುವ ಅಭ್ಯಾಸ ನಿದ್ದೆ ಬರುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ನಿದ್ರಿಸುವುದು ಶಾಂತಿಯುತ, ಸಂತೋಷ ಮತ್ತು ವಿಶ್ರಾಂತಿ (Rest)ಯ ಅನುಭವವಾಗಿರಬೇಕು. ಮಲಗುವ ಸಮಯಕ್ಕೆ ತುಂಬಾ ಹತ್ತಿರದಲ್ಲಿ ನಿಮ್ಮ ಫೋನ್‌ನೊಂದಿಗೆ ತೊಡಗಿಸಿಕೊಳ್ಳುವುದು ಆ ಭಾವನೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

ಸ್ಮಾರ್ಟ್‌ಫೋನ್‌ನ ನೀಲಿ ಬೆಳಕು ಮೆದುಳಿಗೆ ಕೆಟ್ಟದ್ದು
ಸ್ಮಾರ್ಟ್‌ಫೋನ್ ಹೊರಸೂಸುವ ನೀಲಿ ಬೆಳಕು ಕೇವಲ ದೃಷ್ಟಿಗೆ ಮಾತ್ರವಲ್ಲ, ಮೆದುಳಿಗೆ ಕೂಡಾ ಕೆಟ್ಟದು. ನೀಲಿ ಬೆಳಕಿನಿಂದ ದೇಹದಲ್ಲಿ ಮೆಲಟೋನಿನ್‌ ಪ್ರಮಾಣ ಕಡಿಮೆಯಾಗುತ್ತದೆ. ಮೆಲಟೋನಿನ್ ಎಂಬುದು ನಿದ್ರೆ-ಮತ್ತು ಎಚ್ಚರವಾಗಿರುವ ಪರಿಸ್ಥಿತಿಯನ್ನು ನಿಯಂತ್ರಿಸುವ ಜವಾಬ್ದಾರಿಯುತ ಹಾರ್ಮೋನ್ ಆಗಿದೆ. ಆದ್ದರಿಂದ ದೇಹದಲ್ಲಿ ಇದರ ಪ್ರಮಾಣ ಕಡಿಮೆಯಾದಾಗ ನೀವು ದಿನಪೂರ್ತಿ ಆಯಾಸ ಮತ್ತು ಕಿರಿಕಿರಿಯನ್ನು ಅನುಭವಿಸಬಹುದು.

ಮಲಗುವ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ನೋಡಲು ಸಿಗುವ ಕೆಲವೊಂದು ಘಟನೆಗಳು ಮನಸ್ಸಿನ ಮೇಲೆ ಒತ್ತಡವನ್ನುಂಟು ಮಾಡಬಹುದು.  ಮಲಗುವ ಮುನ್ನ ನಿಮ್ಮ ಫೋನ್ ಅನ್ನು ಪರಿಶೀಲಿಸುವುದು ವಿಚಲಿತ ಭಾವನೆಗಳು, ಆಲೋಚನೆಗಳು ಮತ್ತು ಆತಂಕಗಳಿಗೆ ಕಾರಣವಾಗಬಹುದು ಎಂದು ಡಾ. ವಾಲಿಯಾ ಹೇಳುತ್ತಾರೆ. ಇದು ನಿದ್ರೆಯನ್ನು ವಿಳಂಬಗೊಳಿಸುತ್ತದೆ. ಈ ಭಾವನೆಗಳು ನಿದ್ದೆ ಬರದೆ ಗಂಟೆಗಟ್ಟಲೆ ಚಾವಣಿಯತ್ತ ದೃಷ್ಟಿ ಹಾಯಿಸುವಂತೆ ಮಾಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ