Breaking: ಮಂಕಿಪಾಕ್ಸ್‌ ಸೆಕ್ಸ್‌ನಿಂದಲೂ ಹರಡುತ್ತೆ ಎಂದ ವಿಶ್ವ ಆರೋಗ್ಯ ಸಂಸ್ಥೆ, ಭಾರತಕ್ಕೆ ಇದ್ಯಾ ಆತಂಕ?

Published : Nov 25, 2023, 07:37 PM IST
Breaking: ಮಂಕಿಪಾಕ್ಸ್‌ ಸೆಕ್ಸ್‌ನಿಂದಲೂ ಹರಡುತ್ತೆ ಎಂದ ವಿಶ್ವ ಆರೋಗ್ಯ ಸಂಸ್ಥೆ, ಭಾರತಕ್ಕೆ ಇದ್ಯಾ ಆತಂಕ?

ಸಾರಾಂಶ

 sexual transmission of Mpox in Congo ಮೊದಲ ಬಾರಿಗೆ, ಕಾಂಗೋದಲ್ಲಿ ಎಂಪಾಕ್ಸ್ ಲೈಂಗಿಕ ಪ್ರಸರಣವನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಸೆಕ್ಸ್‌ನಿಂದಲೂ ಮಂಕಿಫಾಕ್ಸ್‌ ವೈರಸ್‌ ಹರಡುತ್ತದೆ ಎಂದು ತಿಳಿಸಿದೆ.

ನವದೆಹಲಿ (ನ.25): ವಿಶ್ವ ಕರೋನಾದಿಂದ ಚೇತರಿಕೆ ಕಾಣುತ್ತಿರುವ ಹೊತ್ತಿಗಾಗಲೇ ಕೆಲವೊಂದು ವೈರಸ್‌ಗಳು ಆತಂಕ ಸೃಷ್ಟಿ ಮಾಡಿದ್ದವು. ಇದರ ನಡುವೆ ಕಾಂಗೋದಲ್ಲಿ ಸೆಕ್ಸ್‌ನಿಂದಲೂ ಎಂಫಾಕ್ಸ್‌ ಹರಡಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕಾಂಗೋದಲ್ಲಿ ಮೊದಲ ಬಾರಿಗೆ ಎಂಫಾಕ್ಸ್‌ನ ಲೈಂಗಿಕ ಪ್ರಸರಣವನ್ನು ದೃಢಪಡಿಸಿದೆ. ಕಾಂಗೋದಲ್ಲಿ ಇತ್ತೀಚಿನ ವರ್ಷಗಳಲ್ಲಿಯೇ ಅತೀದೊಡ್ಡ ಎಂಫಾಕ್ಸ್‌ ವೈರಸ್‌ ಪರಿಣಾಮವನ್ನು ಕಾಂಗೋ ಎದುರಿಸಿದೆ. ಇದರ ಬೆನ್ನಲ್ಲಿಯೇ ಆಫ್ರಿಕನ್‌ ವಿಜ್ಞಾನಿಗಳು, ಈ ರೋಗವನ್ನು ತಡೆಯಲು ಕಷ್ಟಕರವಾಗಬಹುದು ಎಂದು ಎಚ್ಚರಿಕೆ ನೀಡಿದ್ದು ಆತಂಕಕ್ಕೆ ಕಾರಣವಾಗಿದೆ. ಗುರುವಾರ ಈ ಕುರಿತಾಗಿ ಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿದೆ. ಕಳೆದ ಮಾರ್ಚ್‌ನಲ್ಲಿ ಬೆಲ್ಜಿಯಂ ಮೂಲದ ವ್ಯಕ್ತಿಗೆ ಕಾಂಗೋಗೆ ಪ್ರಯಾಣ ಮಾಡಿದ್ದ, ಈತನಲ್ಲಿ ಎಂಫಾಕ್ಸ್‌ ಅಥವಾ ಮಂಕಿಪಾಕ್ಸ್‌ ಪಾಸಿಟಿವ್‌ ಕಾಣಿಸಿಕೊಂಡಿದೆ. ಕಾಂಗೋದಲ್ಲಿ ಇತರ ಪುರುಷನೊಂದಿಗೆ ಈತ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿ ಎಂದು ಡಬ್ಲ್ಯುಎಚ್‌ಓ ಹೇಳಿದೆ. ಈತ ಸಲಿಂಗಕಾಮಿಯೂ ಆಗಿದ್ದು, ದ್ವಿಲಿಂಗಿ ಪುರುಷರಿಗಾಗಿ ಸಾಕಷ್ಟು  ಕ್ಲಬ್‌ಗಳಿಗೂ ಹೋಗಿದ್ದ ಎಂದು ತಿಳಿಸಿದೆ. ಈತ ಸೆಕ್ಸ್ ಮಾಡಿರುವ ವ್ಯಕ್ತಿಗಳ ಪೈಕಿ, ಐವರಲ್ಲಿ ಎಂಪಾಕ್ಸ್‌ ವೈರಸ್‌ ಕಾಣಿಸಿಕೊಂಡಿದೆ ಎಂದು ಡಬ್ಲ್ಯುಎಚ್‌ಓ ಹೇಳಿದೆ.

"ಇದು ಆಫ್ರಿಕಾದಲ್ಲಿ ಮಂಕಿಪಾಕ್ಸ್ ಲೈಂಗಿಕ ಪ್ರಸರಣದ ಮೊದಲ ಪ್ರಮುಖ ಪುರಾವೆಯಾಗಿದೆ" ಎಂದು ಹಲವಾರು WHO ಸಲಹಾ ಗುಂಪುಗಳಲ್ಲಿರುವ ನೈಜೀರಿಯಾದ ವೈರಾಲಜಿಸ್ಟ್ ಓಯೆವಾಲೆ ಟೊಮೊರಿ ಹೇಳಿದ್ದಾರೆ. "ಈ ರೀತಿಯ ಪ್ರಸರಣ ಇಲ್ಲಿ ನಡೆಯಲು ಸಾಧ್ಯವಿಲ್ಲ ಎಂಬ ಕಲ್ಪನೆಯನ್ನು ಈಗ ಸಂಪೂರ್ಣವಾಗಿ ತಳ್ಳಿಹಾಕಬಹುದು' ಎಂದಿದ್ದಾರೆ.

ಎಂಪಾಕ್ಸ್‌ ದಶಕಗಳಿಂದ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಸೋಂಕಿತ ದಂಶಕಗಳಿಂದ (ಇಲಿ, ಹೆಗ್ಗಣಗಳಂಥ ಪ್ರಾಣಿಗಳು) ಮನುಷ್ಯರಿಗೆ ನೇರವಾಗಿ ದಾಟುತ್ತಿತ್ತು. ಹಾಗೂ ಇದರ ಸೋಂಕು ಕೂಡ ಸೀಮಿತವಾಗಿತ್ತು. ಕಳೆದ ವರ್ಷ, ಯುರೋಪ್‌ನಲ್ಲಿ ಸಲಿಂಗಕಾಮಿ ಮತ್ತು ದ್ವಿಲಿಂಗಿ ಪುರುಷರಲ್ಲಿ ಮುಖ್ಯವಾಗಿ ಲೈಂಗಿಕತೆಯಿಂದ ಸಾಂಕ್ರಾಮಿಕ ರೋಗಗಳು 100 ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಿಸಿದ್ದವು. WHO ಏಕಾಏಕಿ ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿತು ಮತ್ತು ಇದು ಇಲ್ಲಿಯವರೆಗೆ ಸುಮಾರು 91,000 ಪ್ರಕರಣಗಳಿಗೆ ಕಾರಣವಾಗಿದೆ.

ಮಂಗನ ಕಾಯಿಲೆಗೆ ಕಾರಣವಾಗುವ ಮಂಕಿಪಾಕ್ಸ್ ವೈರಸ್ ಸೋಂಕಿತ ಮನುಷ್ಯರು ಅಥವಾ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕದ ಮೂಲಕ ಮತ್ತುಸೋಂಕಿತ ವಸ್ತುಗಳ ಮೂಲಕ ಹರಡುತ್ತದೆ. ಇದನ್ನು ಮೊದಲು 1970 ರಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮಾನವರಲ್ಲಿ ಕಂಡುಹಿಡಿಯಲಾಯಿತು. ಇದು ನೋವಿನ ದದ್ದು, ವಿಸ್ತರಿಸಿದ ದುಗ್ಧರಸ ಗ್ರಂಥಿಗಳು ಮತ್ತು ಜ್ವರಕ್ಕೆ ಕಾರಣವಾಗಬಹುದು. ಹೆಚ್ಚಿನ ಜನರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ, ಆದರೆ ಕೆಲವರು ತುಂಬಾ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಮಂಕಿಪಾಕ್ಸ್‌ಗೆ ಎಂಪಾಕ್ಸ್‌ ಎಂದು ಮರುನಾಮಕರಣ ಮಾಡಿದ WHO

WHO ಪ್ರಕಾರ, 2022 ರಿಂದ, ಕ್ಲಾಡ್ IIb MPXV ಯ ಸಾಂಕ್ರಾಮಿಕ ರೋಗವು ಜಾಗತಿಕವಾಗಿ ಪ್ರಸಾರವಾಗುತ್ತಿದೆ. ಇದು ಆಫ್ರಿಕಾದ ಖಂಡದ ಹೊರಗಿನ ಅನೇಕ ದೇಶಗಳ ಮೇಲೆ ಪರಿಣಾಮ ಬೀರುತ್ತದೆ, ಅದು ಹಿಂದೆಂದೂ ಎಂಪಾಕ್ಸ್‌ಅನ್ನು ವರದಿ ಮಾಡದ ದೇಶಗಳು.ಈ ಸಾಂಕ್ರಾಮಿಕ ರೋಗದ ಹರಡುವಿಕೆಯು ಮುಖ್ಯವಾಗಿ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರಲ್ಲಿ ಲೈಂಗಿಕ ಸಂಪರ್ಕದ ಮೂಲಕ ಹರಡುವಿಕೆಯಿಂದ ಬರುತ್ತದೆ.

ಹರಡ್ತಿದೆ ಮಂಕಿಪಾಕ್ಸ್ ಸೋಂಕು, ಹೃದಯದ ಕಾಯಿಲೆಗೂ ಕಾರಣವಾಗುತ್ತಂತೆ !

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!