ಹೋಗಿದ್ದು ಕ್ಯಾನ್ಸರ್ ಪರೀಕ್ಷೆಗೆ, ಹೊಟ್ಟೇಲಿದ್ದ ಜೀವಂತ ಕೀಟ ನೋಡಿ ಡಾಕ್ಟರ್ಸ್ ಶಾಕ್!

By Suvarna NewsFirst Published Nov 24, 2023, 2:43 PM IST
Highlights

ಹೊಟ್ಟೆ, ಕಿವಿ ಸೇರಿದಂತೆ ನಮ್ಮ ದೇಹದೊಳಗೆ ಅದೇನೇನು ಸೇರ್ತಿದ್ಯೋ ಗೊತ್ತಿಲ್ಲ. ಬೀಜ ನುಂಗಬೇಡ, ಹೊಟ್ಟೆಯಲ್ಲೇ ಮರವಾಗುತ್ತೆ ಅಂತಾ ದೊಡ್ಡವರು ತಮಾಷೆಗೆ ಹೇಳ್ತಿದ್ದ ಮಾತೂ ಈ ಸುದ್ದಿ ಕೇಳಿದ್ಮೇಲೆ ಸತ್ಯವಾಗ್ಬಹುದೇನೋ ಅನ್ನಿಸ್ತಿದೆ. 
 

ವೈದ್ಯಕೀಯ ಜಗತ್ತು ದಿನೇ ದಿನೇ ಹೊಸ ಹೊಸ ಆವಿಷ್ಕಾರಗಳನ್ನು, ಚಿಕಿತ್ಸೆಗಳನ್ನು ಕಂಡುಹಿಡಿಯುತ್ತಿದೆ. ವಿವಿಧ ರೀತಿಯ ರೋಗಗಳು ಹುಟ್ಟಿಕೊಂಡಂತೆ ರೋಗಕ್ಕೆ ಕಾರಣವಾಗುವ ವೈರಸ್ ಗಳ ವಿರುದ್ಧ ಹೋರಾಡಲು ವೈದ್ಯರುಗಳು ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಈ ಮೂಲಕ ದಿನೇ ದಿನೇ ಹೊಸ ಹೊಸ ವಿಷಯವನ್ನು ತಿಳಿದುಕೊಳ್ಳುತ್ತಾರೆ.

ಇತ್ತೀಚೆಗೆ ಹಿಂದೆಂದೂ ಕಂಡು ಕೇಳರಿಯದ ಎಷ್ಟೋ ಖಾಯಿಲೆ (Disease)ಗಳು ಹುಟ್ಟಿಕೊಳ್ಳುತ್ತಿವೆ. ಏನೋ ಚಿಕ್ಕ ಸಮಸ್ಯೆ ಇರಬಹುದು ಎಂದುಕೊಂಡು ವೈದ್ಯ (Doctor) ರನ್ನು ಸಂಪರ್ಕಿಸಿದರೆ ಅದು ನಮ್ಮ ಊಹೆಗೂ ಮೀರಿದ ಸಮಸ್ಯೆಯಾಗಬಹುದು. ಅನೇಕ ಬಾರಿ ಇಂತಹ ಅದೆಷ್ಟೋ ಸಮಸ್ಯೆಗಳು ನಡೆದಿವೆ. ಹೊಟ್ಟೆ (Stomach) ನೋವು ಎಂದು ವೈದ್ಯರ ಬಳಿ ಬಂದ ವ್ಯಕ್ತಿಯ ಹೊಟ್ಟೆಯಲ್ಲಿ, ಕಲ್ಲು, ಹುಳ ಅಥವಾ ಪಿನ್, ಸೂಜಿ, ಪ್ಲಾಸ್ಟಿಕ್ ಸಿಕ್ಕಿವೆ. ಕಿವಿ ನೋವು ಎಂದವರ ಕಿವಿಯಲ್ಲಿ ಹುಳ ಮುಂತಾದವುಗಳು ದೊರೆತ ಉದಾಹರಣೆಗಳೂ ಸಾಕಷ್ಟಿವೆ. ಹೀಗೆ ವೈದ್ಯಲೋಕಕ್ಕೇ ಸವಾಲೆನಿಸುವ ಅನೇಕ ಘಟನೆಗಳು ದಿನೇ ದಿನೇ ನಡೆಯುತ್ತಿರುತ್ತವೆ. ಇಂತಹುದೇ ಒಂದು ಘಟನೆ ಅಮೆರಿಕದಲ್ಲಿಯೂ ನಡೆದಿದೆ.  

ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಹಾರ್ಟ್‌ಅಟ್ಯಾಕ್‌, ಕುಸಿದು ಬಿದ್ದು ವೈದ್ಯೆ ಸಾವು

ಕ್ಯಾನ್ಸರ್ ರೋಗಿಯ ಹೊಟ್ಟೆಯಲ್ಲಿತ್ತು ನೊಣ : ಇತ್ತೀಚೆಗೆ ಕ್ಯಾನ್ಸರ್ ಒಂದು ಸಾಮಾನ್ಯ ಖಾಯಿಲೆ ಎನಿಸಿಕೊಂಡಿದೆ. ಚಿಕ್ಕವರು ದೊಡ್ಡವರೆನ್ನದೆ ಅನೇಕ ಮಂದಿ ಕ್ಯಾನ್ಸರ್ ಗೆ ಒಳಗಾಗಿದ್ದಾರೆ. ಅಮೆರಿಕದ 63 ವರ್ಷದ ಒಬ್ಬ ವ್ಯಕ್ತಿ ಕೂಡ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಹಾಗಾಗಿ ಈತ ನಿಯಮಿತವಾಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಈತನಿಗೆ ಕ್ಯಾನ್ಸರ್ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಈತನ ಶರೀರದ ಒಳಗೆ ಇರುವ ಜೀವಿಯನ್ನು ನೋಡಿ ಹೌಹಾರಿದ್ದಾರೆ. ಈ ಪ್ರಕರಣವನ್ನು ಅಮೆರಿಕದ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಪ್ರಕಟಿಸಿದೆ.

ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿ ಮಿಸೌರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಕ್ಯಾನ್ಸರ್ ಚಿಕಿತ್ಸೆಯ ಸಲುವಾಗ ವೈದ್ಯರು ಈತನಿಗೆ ಕೊಲೊನೋಸ್ಕೋಪಿ ಮಾಡಿದರು. ಈ ಪ್ರಕ್ರಿಯೆಯಲ್ಲಿ ವ್ಯಕ್ತಿಯ ಶರೀರದೊಳಗೆ ಕ್ಯಾಮರಾ ಹಾಕಲಾಗುತ್ತದೆ. ಈ ವ್ಯಕ್ತಿಗೆ ಕರುಳಿನ ಕ್ಯಾನ್ಸರ್ ಆಗಿದ್ದರಿಂದ ಈತನ ಕರುಳಿನೊಳಗೆ ಕ್ಯಾಮರಾ ಅಳವಡಿಸಲಾಯಿತು. ಕ್ಯಾಮರಾ ಅಳವಡಿಸಿದ ನಂತರ ಈ ವ್ಯಕ್ತಿಯ ಕರುಳಿನಲ್ಲಿ ಜೀವಂತವಾಗಿರುವ ನೊಣ ಪತ್ತೆಯಾಗಿತ್ತು.

ಯಾವುದೇ ರೀತಿಯ ಗ್ಯಾಸ್ಟ್ರಿಕ್ ಎಸಿಡ್ ಗಳಿಂದ ಸಾವನ್ನಪ್ಪದೇ ವ್ಯಕ್ತಿಯ ಶರೀರದಲ್ಲಿ ಜೀವಂತವಾಗಿ ಕುಳಿತಿರುವ ನೊಣವನ್ನು ನೋಡಿದ ವೈದ್ಯರಿಗೆ ಆಶ್ಚರ್ಯ ಕಾದಿತ್ತು. ಇದನ್ನು ನೋಡಿದ ವೈದ್ಯರು, ಇದು ಬಹಳ ಅಪರೂಪದ ಕೊಲೊನೋಸ್ಕೋಪಿ ಸಂಶೋಧನೆ ಆಗಿದೆ. ನೊಣವು ಜೀವಂತವಾಗಿ ವ್ಯಕ್ತಿಯ ಶರೀರವನ್ನು ಹೇಗೆ ಪ್ರವೇಶಿಸಿತು ಎನ್ನುವುದು ಇನ್ನೂ ಅರ್ಥವಾಗಿಲ್ಲ ಎಂದು ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಹೇಳಿದ್ದಾರೆ. ಕೆಲವೊಮ್ಮೆ ಹಣ್ಣು, ತರಕಾರಿ ಮುಂತಾದವುಗಳಲ್ಲಿರುವ ನೊಣದ ಮೊಟ್ಟೆಗಳು ನಮ್ಮ ಹೊಟ್ಟೆಯ ಆಮ್ಲದಿಂದ ಬದುಕುಳಿದು ನಂತರ ನಮ್ಮ ಕರುಳಿನಲ್ಲಿ ಬೆಳೆಯುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಗರ್ಭಿಣಿಯೂ ಅಲ್ಲ, ಮಗುವೂ ಆಗಿಲ್ಲ, ಆದ್ರೂ ಸ್ತನಗಳಿಂದ ಡಿಸ್ಚಾರ್ಜ್ ಆಗ್ತಿದ್ಯಾ?

ಕ್ಯಾನ್ಸರ್ ರೋಗಿಗೆ ಕೊಲೊನೋಸ್ಕೋಪಿ (Colonoscopy) ಮಾಡುವ 24 ಗಂಟೆ ಮೊದಲು ಕೇವಲ ದ್ರವಾಹಾರವನ್ನು ಮಾತ್ರ ನೀಡಲಾಗಿತ್ತು. ಅದಕ್ಕೂ ಮೊದಲು ಆತ ಪಿಜ್ಜಾ ಮತ್ತು ಸಲಾಡ್ ತಿಂದಿದ್ದ ಎನ್ನಲಾಗಿದೆ. ಆ ಸಮಯದಲ್ಲಿ ಆತನಿಗೆ ಆಹಾರದಲ್ಲಿ ನೊಣ ಇರುವುದು ಕಂಡುಬಂದಿರಲಿಲ್ಲ. ವೈದ್ಯರು ಆ ನೊಣವನ್ನು ಹೊರತೆಗೆಯುವ ಮಾರ್ಗ ಹುಡುಕುತ್ತಿದ್ದಾರೆ. 

ಪಂಜಾಬ್ ನಲ್ಲೂ ನಡೆದಿತ್ತು ಇಂಥ ಘಟನೆ : ಇದೇ ರೀತಿ ಪಂಜಾಬ್ ನ ಒಬ್ಬ ವ್ಯಕ್ತಿಯ ಹೊಟ್ಟೆಯಿಂದ ನಟ್ ಬೋಲ್ಟ್, ಇಯರ್ ಫೋನ್ (Ear Phone), ಸ್ಕ್ರೂ (Screw), ಲಾಕೆಟ್ (Locket) ಮುಂತಾದ ನೂರಕ್ಕೂ ಹೆಚ್ಚು ವಸ್ತುಗಳನ್ನು ಹೊರತೆಗೆದ ಘಟನೆ ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಮಾನಸಿಕ ಅಸ್ವಸ್ಥನಾಗಿದ್ದ (Mentally Ill) ಈತ ಅವುಗಳನ್ನೆಲ್ಲ ಯಾವಾಗ, ಹೇಗೆ ತಿಂದಿದ್ದ ಎನ್ನುವುದು ತಿಳಿದಿರಲಿಲ್ಲ.
 

click me!