ಹಾರ್ಟ್‌ ಅಟ್ಯಾಕ್ ಆದ್ರೆ ಆರೋಗ್ಯವನ್ನು ಹೀಗೆ ನೋಡ್ಕೊಳ್ಳಿ

Published : Jun 25, 2022, 04:30 PM ISTUpdated : Jun 25, 2022, 04:34 PM IST
ಹಾರ್ಟ್‌ ಅಟ್ಯಾಕ್ ಆದ್ರೆ ಆರೋಗ್ಯವನ್ನು ಹೀಗೆ ನೋಡ್ಕೊಳ್ಳಿ

ಸಾರಾಂಶ

ಹೃದಯಾಘಾತ (Heartattack) ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿದೆ. ಹೀಗಿರುವಾಗ ಒಂದು ಸಾರಿ ಹಾರ್ಟ್‌ ಅಟ್ಯಾಕ್ ಆದ ಬಳಿಕ ಜೀವನಶೈಲಿ (Lifestyle) ಹೇಗಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಆ ಕುರಿತಾದ ಮಾಹಿತಿ ಇಲ್ಲಿದೆ.

ಹೃದಯಾಘಾತವು (Heartattack) ಹೃದಯ ಸ್ನಾಯುವಿನ ರಕ್ತದ ಹರಿವು ಅನಿರೀಕ್ಷಿತವಾಗಿ ಕಡಿತಗೊಂಡಾಗ ಮತ್ತು ಹೃದಯ ಸ್ನಾಯುಗಳಿಗೆ ಹಾನಿಯನ್ನುಂಟುಮಾಡಿದಾಗ ಸಂಭವಿಸುವ ಗಂಭೀರ ಸ್ಥಿತಿಯಾಗಿದೆ. ಹಿಂದೆಯೆಲ್ಲಾ ವಯಸ್ಸಾದವರಿಗೆ ಹೃದಯಾಘಾತವಾಗುವ ಅಪಾಯ (Danger) ಹೆಚ್ಚಿತ್ತು. ಆದರೆ ಈಗ ಹಾಗಲ್ಲ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತವು ಅತ್ಯಂತ ಅಸಾಮಾನ್ಯವಾಗಿದೆ. ಕೆಲವೊಬ್ಬರು ಒಂದು ಬಾರಿ ಹಾರ್ಟ್‌ ಅಟ್ಯಾಕ್‌ ಆದಾಗಲೇ ಸಾವನ್ನಪ್ಪುತ್ತಾರೆ. ಕೆಲವೊಬ್ಬರು ತಕ್ಷಣವೇ ಚಿಕಿತ್ಸೆ ದೊರೆಯುವ ಕಾರಣ ಬದುಕುಳಿಯುತ್ತಾರೆ. ಆದಷ್ಟು ಆರೋಗ್ಯ (Health)ವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಆದರೂ ಕೆಲವೊಮ್ಮೆ ಹೃದಾಯಾಘಾತ ಉಂಟಾಗುತ್ತದೆ. ಒಮ್ಮೆ ಹೃದಯಕ್ಕೆ ಅಪಾಯವಾದ ಮೇಲೆ ಎಚ್ಚೆತ್ತುಕೊಳ್ಳುವುದು ಅಗತ್ಯ. ಹೀಗೆ ಒಂದು ಬಾರಿ ಹಾರ್ಟ್ ಅಟ್ಯಾಕ್ ಆಗಿ ಸಾವಿನಿಂದ ಪಾರಾಗಿ ಬಂದ ಮೇಲೆ ಜೀವನಶೈಲಿ (Lifestyle)ಯನ್ನು ಹೇಗಿಟ್ಟುಕೊಳ್ಳಬೇಕು ? ಯಾವೆಲ್ಲಾ ಅಭ್ಯಾಸವನ್ನು ಬಿಟ್ಟು ಬಿಡಬೇಕು. ಇಲ್ಲಿದೆ ಮಾಹಿತಿ. 

ಔಷಧಿ (Medicine)ಯನ್ನು ನಿಯಮಿತವಾಗಿ ಸೇವಿಸಿ: ಹೃದಯಾಘಾತದ ನಂತರ, ನಿಮಗೆ ಬೀಟಾ-ಬ್ಲಾಕರ್‌ಗಳು, ಸ್ಟ್ಯಾಟಿನ್‌ಗಳು ಅಥವಾ ಆಸ್ಪಿರಿನ್‌ನಂತಹ ಔಷಧಿಗಳನ್ನು ಶಿಫಾರಸು ಮಾಡಬಹುದು. ಇವುಗಳನ್ನು ನಿಯಮಿತವಾಗಿ ಸೇವಿಸಲು ಅಭ್ಯಾಸ ಮಾಡಿಕೊಳ್ಳಿ. ಒಂದು ವಾರದ ಮೌಲ್ಯದ ಔಷಧಿಗಳೊಂದಿಗೆ ನೀವು ಪೂರ್ವ ಲೋಡ್ ಮಾಡುವ ಮಾತ್ರೆ ಪೆಟ್ಟಿಗೆಯನ್ನು ಬಳಸುವುದನ್ನು ಪರಿಗಣಿಸಿ. ಅಥವಾ ಡೋಸ್‌ಗೆ ಸಮಯ ಬಂದಾಗ ನೆನಪಿಸಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ರಿಮೈಂಡರ್ ಇಟ್ಟುಕೊಳ್ಳಿ.

Heart Attack Risk: ಈ ಸ್ವಭಾವ ಇದ್ದೋರಿಗೆ, ಹೃದ್ರೋಗ ಕಾಡೋದು ಹೆಚ್ಚು

ಮನಸ್ಸಿಗೆ ಹೆಚ್ಚು ಒತ್ತಡ ಹಾಕಿಕೊಳ್ಳಬೇಡಿ: ಹೆಚ್ಚಿನ ಜನರು ಸಣ್ಣ ವಿಷಯಕ್ಕೂ ಅನಗತ್ಯ ಟೆನ್ಶನ್‌ (Tension) ಮಾಡಿಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಹೃದಯದ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಇದು ಹೃದಯದ ಮೇಲೆ ಒತ್ತಡ ಬೀಳುವಂತೆ ಮಾಡುತ್ತದೆ. ಹೀಗಾಗಿ ಆದಷ್ಟು ಒತ್ತಡ ಮುಕ್ತವಾಗಿರಿ. ಒಂದು ಬಾರಿ ಅಪಾಯ ಸಂಭವಿಸಿದ ಮೇಲೆ ಎಚ್ಚರಿಕೆಯಿಂದ ಇರುವುದು ಮುಖ್ಯ. 

ಡಯೆಟ್‌ (Diet) ಅಭ್ಯಾಸ ಅಳವಡಿಸಿಕೊಳ್ಳಿ: ಹೃದಯದ ಆರೋಗ್ಯ ಚೆನ್ನಾಗಿರಬೇಕಾದರೆ ಆಹಾರಕ್ರಮವೂ ಚೆನ್ನಾಗಿರಬೇಕು. ನಿಮ್ಮ ಡಯೆಟ್‌ನಲ್ಲಿ ತರಕಾರಿಗಳು, ಹಣ್ಣುಗಳು, ಬೀಜಗಳು, ದ್ವಿದಳ ಧಾನ್ಯಗಳು, ಜೊತೆಗೆ ಮೀನು, ನೇರ ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನ ಆಹಾರಗಳನ್ನು ಸೇರಿಸಿಕೊಳ್ಳಿ. ಎಣ್ಣೆಯುಕ್ತ ಜಂಕ್‌ ಫುಡ್‌ಗಳು, ಎಣ್ಣೆ ಹಾಕಿದ ಚಪಾತಿ, ಮೈದಾ ಆಹಾರಗಳನ್ನು ತಿನ್ನಬೇಡಿ. ಹೀಗೆ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಶೇಖರಣೆಯಾಗುವುದು ತಪ್ಪುತ್ತದೆ. ಹೃದಯವೂ ಆರೋಗ್ಯವಾಗಿರುತ್ತದೆ.

ದುಶ್ಚಟಗಳನ್ನು ಬಿಟ್ಟುಬಿಡಿ: ಧೂಮಪಾನ (Smoking), ಮಧ್ಯಪಾನ ಇಂಥಾ ಯಾವ ಅಭ್ಯಾಸವೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಒಮ್ಮೆ ಹಾರ್ಟ್‌ ಅಟ್ಯಾಕ್ ಆದ ನಂತರ ಇಂಥಾ ಅಭ್ಯಾಸವಿದ್ದರೆ ಸಂಪೂರ್ಣವಾಗಿ ಬಿಟ್ಟುಬಿಡಿ.  ಇಲ್ಲದಿದ್ದರೆ ಇದು ಮತ್ತೊಮ್ಮೆ ಗಂಭೀರವಾಗಿ ಹೃದಾಯಾಘಾತ ಸಂಭವಿಸುವಂತೆ ಮಾಡಬಹುದು. 

ಹೃದಯಾಘಾತದ ಅಪಾಯವನ್ನು ತಪ್ಪಿಸಬೇಕೇ? ಹಾಗಿದ್ರೆ ಮಿಸ್ ಮಾಡದೆ ಇದನ್ನ ತಿನ್ನಿ

ಯೋಗ, ಧ್ಯಾನದ ಅಭ್ಯಾಸ ಮಾಡಿಕೊಳ್ಳಿ: ಮಾನಸಿಕವಾಗಿ ಆರಾಮವಾಗಿದ್ದರೆ ಹೃದಯವೂ ಆರೋಗ್ಯವಾಗಿರುತ್ತದೆ. ಅಲ್ಲದೆ ಪ್ರತಿದಿನ ಒಂದಷ್ಟು ದೈಹಿಕ ಚಟುವಟಿಕೆಗಳನ್ನು ಮಾಡುವ ಮೂಲಕ ದೇಹದಲ್ಲಿ ಕೊಬ್ಬು ಶೇಖರಣೆಯಾಗದಂತೆ ನೋಡಿಕೊಳ್ಳಿ. ಅದಕ್ಕಾಗಿ ಯೋಗ,ಧ್ಯಾನ, ಪ್ರಾಣಾಯಾಮದಂತಹ ಅಭ್ಯಾಸ ಮಾಡಿಕೊಳ್ಳಿ. ಹೃದಯವನ್ನು ಆರೋಗ್ಯವಾಗಿಡುವ ಒಂದಷ್ಟು ಯೋಗಾಸನಗಳನ್ನು ತರಬೇತುದಾರರ ಬಳಿ ಸರಿಯಾಗಿ ಕಲಿತುಕೊಳ್ಳುವುದು ಒಳ್ಳೆಯದು.

ನೋವು ಕಾಣಿಸಿಕೊಂಡಾಗ ನಿರ್ಲಕ್ಷಿಸಬೇಡಿ: ಸಾಮಾನ್ಯವಾಗಿ ಒಂದು ಬಾರಿ ಹೃದಾಯಾಘಾತವಾದ ಮೇಲೆ ಇನ್ನೊಂದು ಬಾರಿ ಯಾವಾಗ ಬೇಕಾದರೂ ಸಂಭವಿಸಬಹುದು. ಆದ್ದರಿಂದ ಎದೆಯಲ್ಲಿ ಸಣ್ಣದಾಗಿ ನೋವು ಕಾಣಿಸಿಕೊಂಡರೂ ಅದನ್ನು ಕಡೆಗಣಿಸದೆ ವೈದ್ಯರನ್ನು ಭೇಟಿ ಮಾಡಿ. ಆಸಿಡಿಟಿ, ಗ್ಯಾಸ್ಟ್ರಿಕ್‌ ನೋವೆಂದು ಸುಮ್ಮನಿರಬೇಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!