ಆಪರೇಷನ್‌ ಮಾಡಲು ಹೋಗಿ ಇದ್ದೊಂದು ಕಣ್ಣನೂ ತೆಗೆದ ವೈದ್ಯ

Published : Jun 25, 2022, 10:59 AM ISTUpdated : Jun 25, 2022, 11:02 AM IST
ಆಪರೇಷನ್‌ ಮಾಡಲು ಹೋಗಿ ಇದ್ದೊಂದು ಕಣ್ಣನೂ ತೆಗೆದ ವೈದ್ಯ

ಸಾರಾಂಶ

ಸ್ಲೋವಾಕಿಯಾ: ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಆದರೆ ವೈದ್ಯರು ಮಾಡುವ ಕೆಲವೊಂದು ಎಡವಟ್ಟು ಕೆಲವರ ಬದುಕನ್ನ ಸಂಪೂರ್ಣವಾಗಿ ಅಂಧಾಕಾರಕ್ಕೆ ತಳ್ಳುವುದು. ಅದೇ ರೀತಿಯ ಘಟನೆಯೊಂದು ಸ್ಲೋವಾಕಿಯಾದಲ್ಲಿ ನಡೆದಿದೆ. 

ಸ್ಲೋವಾಕಿಯಾ: ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಆದರೆ ವೈದ್ಯರು ಮಾಡುವ ಕೆಲವೊಂದು ಎಡವಟ್ಟು ಕೆಲವರ ಬದುಕನ್ನ ಸಂಪೂರ್ಣವಾಗಿ ಅಂಧಾಕಾರಕ್ಕೆ ತಳ್ಳುವುದು. ಅದೇ ರೀತಿಯ ಘಟನೆಯೊಂದು ಸ್ಲೋವಾಕಿಯಾದಲ್ಲಿ ನಡೆದಿದೆ. ಆಸ್ಪತ್ರೆಗೆ ಒಂದು ಕಣ್ಣಿನಲ್ಲಿ ತೊಂದರೆ ಇದೆ ಎಂದು ಚಿಕಿತ್ಸೆಗೆ ಬಂದ ರೋಗಿ ಈಗ ತನಗಿದ್ದ ಒಂದೇ ಒಂದು ಕಣ್ಣನ್ನು ಕಳೆದುಕೊಂಡು ಸಂಪೂರ್ಣ ಅಂಧನಾಗಿದ್ದಾನೆ. 

ಸ್ಲೋವಾಕಿಯಾದ ಪ್ರಮುಖ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೋಗಿಯು ತನ್ನ ತೊಂದರೆಗೀಡಾದ ಒಂದು ಕಣ್ಣಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದರು. ಆದರೆ ವೈದ್ಯರು ಆ ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ತಪ್ಪಾಗಿ ಸರಿ ಇದ್ದ ಕಣ್ಣಿಗೆ ಚಿಕಿತ್ಸೆ ಮಾಡಲು ಹೋಗಿ ಸರಿ ಇರುವ ಒಂದು ಕಣ್ಣನ್ನು ಕಿತ್ತು ಹಾಕಿದ್ದಾರೆ. ಇದರ ಪರಿಣಾಮ ಈಗ ಈ ರೋಗಿ ಜೀವನ ಪರ್ಯಂತ ತನ್ನ ಕುಟುಂಬವನ್ನು ಅವಲಂಬಿಸುವಂತಾಗಿದೆ. 

ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆಗೆ ಕಾರಣರಾದ ಸೂದ್! ಅಭಿಮಾನಿಗಳ ಮೆಚ್ಚುಗೆ ಸುರಿಮಳೆ!

ಘಟನೆಯ ಬಳಿಕ ಬ್ರಾಟಿಸ್ಲಾವಾ ವಿಶ್ವವಿದ್ಯಾಲಯದ ಆಸ್ಪತ್ರೆಯ ವಕ್ತಾರರು, ಪ್ರಕಟಣೆ ಹೊರಡಿಸಿದ್ದು, ರೋಗಿಗೆ ಹೀಗೆ ಆಪರೇಷನ್ ಮಾಡಿ ಇದ್ದ ಕಣ್ಣನ್ನು ತೆಗೆದ ವೈದ್ಯರು ಇನ್ನು ಮುಂದೆ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ದೃಢಪಡಿಸಿದ್ದಾರೆ ಎಂದು ಸ್ಲೋವಾಕಿಯಾದ ಟಿಎಎಸ್ಆರ್ ಸುದ್ದಿ ಸಂಸ್ಥೆಯು  ವರದಿ ಮಾಡಿದೆ.

ದೇಶದ ಆರೋಗ್ಯ ಮೇಲ್ವಿಚಾರಣಾ ಪ್ರಾಧಿಕಾರವು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಅಂತಹ ವಿನಾಶಕಾರಿ ತಪ್ಪನ್ನು ವೈದ್ಯನೋರ್ವ ಹೇಗೆ ಮಾಡಿದ ಎಂದು ವರದಿಗಳು ಕೇಳುತ್ತಿವೆ. ಸ್ಲೋವಾಕಿಯಾ (Slovakia)ಆರೋಗ್ಯ ವಲಯದಲ್ಲಿ ಅತೀಯಾದ ಕೆಲಸದ ಒತ್ತಡ ಹಾಗೂ ಕೆಲಸದ ಸ್ಥಿತಿ ಹಾಗೂ ವೇತನಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದದಿಂದಾಗಿ ವೈದ್ಯರು ಮನಃಶಾಂತಿಯಿಂದ ಕೆಲಸ ಮಾಡಲಾಗುತ್ತಿಲ್ಲ. ಇದರ ಪರಿಣಾಮ ಹೀಗಾಗುತ್ತಿದೆ ಎಂದು ತಿಳಿದು ಬಂದಿದೆ. ಇವೆಲ್ಲದರ ಪರಿಣಾಮವಾಗಿ ಸ್ಲೋವಾಕಿಯಾದ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯಕೀಯ ಸಿಬ್ಬಂದಿಯ ದೊಡ್ಡ ತಂಡ ವಿಶೇಷವಾಗಿ ಜೆಕ್ ರಿಪಬ್ಲಿಕ್ ಮತ್ತು ಆಸ್ಟ್ರಿಯಾಕ್ಕೆ ನಿರ್ಗಮಿಸಿದೆ ಎಂದು ತಿಳಿದು ಬಂದಿದೆ. 

ರಾಜ್ಯದಲ್ಲಿ ಅತೀ ಹೆಚ್ಚು ಲಿವರ್‌ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ಕೇಂದ್ರ BGS Gleneagles Hospitals
 

ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇಶದಲ್ಲಿ ಪ್ರಸ್ತುತ ಉಳಿದಿರುವ ವೈದ್ಯರ ಮೇಲೆ ಒತ್ತಡವು ಗಮನಾರ್ಹವಾಗಿ ಹೆಚ್ಚಾಗಿದೆ. ಕಳೆದ ವಾರ  ಸುಮಾರು 3,000 ವೈದ್ಯರು ತಮ್ಮ ಕೆಲಸದ ಪರಿಸ್ಥಿತಿಗಳು ಸುಧಾರಿಸದ ಹೊರತು ಕೆಲಸ ತ್ಯಜಿಸಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ ಎಂದು ಲೋಜ್‌ ಯೂನಿಯನ್ ಹೇಳಿದೆ.

ಇಂಗ್ಲೆಂಡ್‌ನಲ್ಲೂ (UK) ವೈದ್ಯರ ಕೊರತೆಯ ಸ್ಥಿತಿ ನಿರ್ಮಾಣವಾಗಿದೆ. 2019ರ ಮಾಹಿತಿ ಪ್ರಕಾರ ವೈದ್ಯರ ಕೊರತೆಯಿಂದಾಗಿ 621 ಎಂದಿಗೂ ಸಂಭವಿಸಬಾರದಂತಹ ಘಟನೆಗಳು 14 ತಿಂಗಳ ಅವಧಿಯಲ್ಲಿ ನಡೆದಿವೆ ಎಂದು ತೋರಿಸುತ್ತಿವೆ. ಈ ಪ್ರಕರಣಗಳಲ್ಲಿ ವೈದ್ಯರು ಮಾಡಬೇಕಾದಲ್ಲಿ ಬಿಟ್ಟು ದೇಹದ ಬೇರೆ ಭಾಗಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಮತ್ತು ಶಸ್ತ್ರಚಿಕಿತ್ಸಾ ಸಾಧನಗಳನ್ನು (ಶಸ್ತ್ರಚಿಕಿತ್ಸೆಯ ಕೈಗವಸುಗಳು, ಎದೆಯ ಡ್ರೈನ್‌ಗಳು ಮತ್ತು ಡ್ರಿಲ್ ಬಿಟ್‌ಗಳು ಸೇರಿದಂತೆ) ಅನೇಕ ಬಾರಿ ರೋಗಿಗಳ ದೇಹದೊಳಗೆ ಬಿಟ್ಟಿದ್ದಾರೆ ಎಂದು ಅಂಕಿ ಅಂಶಗಳು ತೋರಿಸಿವೆ.

ಈಗೇನೋ ನಿಮ್ಮ ಕಣ್ಣುಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಬಹುದು. ಆದರೆ ನಿಮ್ಮ ಕೆಲವು ಸಣ್ಣ-ಪುಟ್ಟ ತಪ್ಪುಗಳಿಂದ ಮುಂದೆ ನೀವು ದೂರದಲ್ಲಿರುವ ವಸ್ತುಗಳನ್ನು ಗುರುತಿಸಲು ಕಷ್ಟಪಡುವುದು, ಬಣ್ಣಗಳನ್ನು ಗುರುತಿಸುವಲ್ಲಿ (Color blindness) ವಿಫಲರಾಗಿರುವುದು, ಅಕ್ಷರಗಳನ್ನು ಓದಲು ಸಾಧ್ಯವಾಗದಿರುವುದು ಹಾಗೂ ಕೆಲವೊಮ್ಮೆ ಹತ್ತಿರದ ವಸ್ತುಗಳು ಕೂಡ ಮಂಜುಮಂಜಾಗಿ ಕಾಣಬಹುದು.  ಹಸಿರು ತರಕಾರಿಗಳು, ಸೊಪ್ಪುಗಳು ಹಾಗೂ ಮೀನು ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ. ಹೆಚ್ಚಿನ ದೃಷ್ಟಿ ಸಮಸ್ಯೆಗಳು ಪ್ರಾರಂಭವಾಗುವುದೇ ನಿದ್ದೆ ಬಿಡುವುದರಿಂದ.  ಹೀಗಾಗಿ ನಿಮ್ಮ ನಿತ್ಯದ ಆಹಾರ ಶೈಲಿಯಲ್ಲಿ ಈ ಹಸಿರು ಸೊಪ್ಪು ಹಾಗೂ ತರಕಾರಿ ಇನ್ನೂ ಮಾಂಸಾಹಾರ ಸೇವನೆ ಮಾಡುವವರು ಮೀನನ್ನು (Fish) ಸೇರಿಸಿಕೊಳ್ಳಿ. ಇದರಿಂದಾಗಿ ಕಣ್ಣಿನ ಆರೋಗ್ಯ ಸುಧಾರಿಸುವುದರ ಜೊತೆಗೆ ದೇಹದ ಇತರ ಭಾಗಗಳಿಗೂ ಕೂಡ ಒಳಿತಾಗುತ್ತದೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?