ತಲೆನೋವು ಬಂದ್ರೆ ಸಹಿಸಿಕೊಳ್ಳೋದು ಕಷ್ಟ. ಅದ್ರಲ್ಲೂ ಮೈಗ್ರೇನ್ ತಲೆನೋವು ಬಂದ್ರೆ ತಲೆ ನೋವು ಮಾತ್ರವಲ್ಲ ಬೇರೆ ಬೇರೆ ಸಮಸ್ಯೆ ಕಾಡುತ್ತದೆ. ಅದ್ರಿಂದ ಸುಧಾರಿಸಿಕೊಳ್ಳೋಕೆ ವಾರ ಬೇಕು. ಪದೇ ಪದೇ ಮೈಗ್ರೇನ್ ಬರ್ತಿದೆ ಅಂದ್ರೆ ನಿಮ್ಮ ಆಹಾರ ಪದ್ಧತಿ ಸರಿಯಿಲ್ಲ ಎಂದರ್ಥ.
ನಾವು ಸೇವನೆ ಮಾಡುವ ಪ್ರತಿಯೊಂದು ಆಹಾರ (Food) ವೂ ನಮ್ಮ ಆರೋಗ್ಯ (Health) ದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಆಹಾರ ತಕ್ಷಣ ಪರಿಣಾಮ ಬೀರಿದ್ರೆ ಮತ್ತೆ ಕೆಲ ಆಹಾರಗಳು ದೀರ್ಘಾವದಿಯಲ್ಲಿ ಪರಿಣಾಮ ತೋರಿಸುತ್ತವೆ. ಕೆಟ್ಟ ಆಹಾರ ಪದ್ಧತಿ ಕೆಟ್ಟ ಆರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಈಗಿನ ಜೀವನ ಶೈಲಿ (Lifestyle) ಯಿಂದಾಗಿ ಅನೇಕ ಸಮಸ್ಯೆ ಜನರನ್ನು ಕಾಡ್ತಿದೆ. ಅದ್ರಲ್ಲಿ ಮೈಗ್ರೇನ್ (Migraine) ಕೂಡ ಒಂದು. ಅನೇಕರು ಈ ಮೈಗ್ರೇನ್ ಸಮಸ್ಯೆಗೆ ಒಳಗಾಗಿದ್ದಾರೆ. ಮೈಗ್ರೇನ್ ಜೀವನಶೈಲಿಯ ಕಾಯಿಲೆಯಾಗಿದೆ. ಇದನ್ನು ಔಷಧಿ ಮೂಲಕ ಗುಣಪಡಿಸಲಾಗದು. ನಿಮ್ಮ ಜೀವನಶೈಲಿ, ಆಹಾರ ಪದ್ಧತಿಯನ್ನು ಸುಧಾರಿಸುವ ಮೂಲಕ ಅದನ್ನು ಸರಿಪಡಿಸಬಹುದು. ಮೈಗ್ರೇನ್ ಸಮಸ್ಯೆಯಿದೆ ಎನ್ನುವವರು ತಮ್ಮ ಆಹಾರದ ಮೇಲೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಬಾಯಿ ಕೇಳುತ್ತೆ ಎನ್ನುವ ಕಾರಣಕ್ಕೆ ಆಹಾರ ತಿನ್ನದೆ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಹಾರ ಸೇವನೆ ಮಾಡ್ಬೇಕಾಗುತ್ತದೆ. ಇಂದು ನಾವು ಮೈಗ್ರೇನ್ ಹೊಂದಿರುವವರು ಯಾವ ಆಹಾರದಿಂದ ದೂರವಿರಬೇಕೆನ್ನುವ ಬಗ್ಗೆ ಮಾಹಿತಿ ನೀಡ್ತೇವೆ.
ಮೈಗ್ರೇನ್ ಸಮಸ್ಯೆ ಇರುವವರು ಇದ್ರಿಂದ ದೂರವಿರಿ :
ಅಪ್ಪಿತಪ್ಪಿಯೂ ಇದನ್ನು ಸೇವಿಸ್ಬೇಡಿ : ಎಜ್ಡ್ ಚೀಸ್ (Aged Cheese), ಟೈರಮೈನ್ ಅನ್ನು ಹೊಂದಿರುತ್ತದೆ. ಇದು ಮೈಗ್ರೇನ್ ಗೆ ಕಾರಣವಾಗಬಹುದು. ದೀರ್ಘಾವಧಿಯ ಬಳಕೆಗಾಗಿ ಚೀಸ್ ಅನ್ನು ನಿರ್ದಿಷ್ಟ ತಾಪಮಾನದಲ್ಲಿ ಇರಿಸಲಾಗುತ್ತದೆ. ಅಂತಹ ಚೀಸನ್ನು ಎಜ್ಡ್ ಚೀಸ್ ಎಂದು ಕರೆಯಲಾಗುತ್ತದೆ. ಮೈಗ್ರೇನ್ ನಿಂದ ಬಳಲುತ್ತಿರುವವರು ಈ ಚೀಸ್ ಸೇವನೆ ಮಾಡಿದ್ರೆ ತುಂಬಾ ಹಾನಿ ಅನುಭವಿಸಬೇಕಾಗುತ್ತದೆ.
ಕರಂಡೆ ಹಣ್ಣು ತಿಂದ್ರೆ ರಕ್ತಹೀನತೆಯ ಸಮಸ್ಯೆ ಇರಲ್ಲ
ಕಾಫಿ (Coffee) ಯಿಂದ್ಲೂ ದೂರವಿರಿ : ಸಾಮಾನ್ಯವಾಗಿ ತಲೆನೋವು ಬಂದಾಗ ಟೀ, ಕಾಫಿ ಕುಡಿಯುತ್ತೇವೆ. ಇದು ಪರಿಹಾರವನ್ನು ನೀಡುತ್ತದೆ ನಿಜ. ಆದರೆ ಮೈಗ್ರೇನ್ ನಲ್ಲಿ ಕಾಫಿ ಸೇವನೆ ತಪ್ಪು. ಮೈಗ್ರೇನ್ ನೋವಿ (Pain) ನಲ್ಲಿ ಕಾಫಿ ಕುಡಿಯುವುದರಿಂದ ನೋವು ಮತ್ತಷ್ಟು ಹೆಚ್ಚಾಗುತ್ತದೆ. ಕಾಫಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಕೆಫೀನ್ ಮೆದುಳಿನ ನರಗಳ ಕೆಲಸಕ್ಕೆ ಅಡ್ಡಿಪಡಿಸುತ್ತದೆ. ಈ ಕಾರಣದಿಂದಾಗಿ, ಮೆದುಳಿನಲ್ಲಿನ ರಕ್ತ ಪರಿಚಲನೆಯು ನಿಧಾನಗೊಳ್ಳುತ್ತದೆ ಮತ್ತು ವ್ಯಕ್ತಿಯು ತೀವ್ರವಾದ ತಲೆನೋವು ಅಥವಾ ಅರ್ಧ ತಲೆ ನೋವನ್ನು ಅನುಭವಿಸುತ್ತಾನೆ. ಮೈಗ್ರೇನ್ ಸಮಸ್ಯೆಯಿರುವವರು ಸದಾ ಕಾಫಿಯಿಂದ ದೂರವಿದ್ರೆ ಒಳ್ಳೆಯದು.
ಚಾಕೊಲೇಟ್ ಬೇಡ್ವೇಬೇಡ : ಎಲ್ಲರಿಗೂ ಚಾಕೊಲೇಟ್ ಇಷ್ಟ. ಆದರೆ ಮೈಗ್ರೇನ್ ನಿಂದ ಬಳಲುತ್ತಿರುವ ವ್ಯಕ್ತಿಗೆ ಇದು ಹಾನಿಕಾರಕ. ಚಾಕೊಲೇಟ್‌ನಲ್ಲಿ ಕಂಡುಬರುವ ಕೆಫೀನ್ ಮತ್ತು ಬೀಟಾ-ಫೀನೈಲೆಥೈಲಮೈನ್ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದರಿಂದಾಗಿ ವ್ಯಕ್ತಿಗೆ ಮೈಗ್ರೇನ್ ಕಾಡಲು ಶುರುವಾಗುತ್ತದೆ.
Health Tips : ಒಂದೇ ಕಾಲಲ್ಲಿ ಬ್ಯಾಲೆನ್ಸ್ ಮಾಡೋಕಾಕ್ತಿಲ್ವಾ? ಎಚ್ಚರ
ಸಿಟ್ರಸ್ ಹಣ್ಣುಗಳ ಸೇವನೆಯಿಂದ್ಲೂ ಹೆಚ್ಚಾಗುತ್ತೆ ಮೈಗ್ರೇನ್ ನೋವು : ತಲೆನೋವು ಬರ್ತಿದ್ದಂತೆ ಕೆಲವರು ನಿಂಬೆ ಪಾನಕ ಸೇವನೆ ಮಾಡ್ತಾರೆ. ಆದ್ರೆ ಇದು ಮೈಗ್ರೇನ್ ಹೆಚ್ಚು ಮಾಡ್ಬಹುದು. ಯಾಕೆಂದ್ರೆ ಸಿಟ್ರಸ್ ಹಣ್ಣುಗಳು ಮೈಗ್ರೇನ್ ಗೆ ಅಪಾಯಕಾರಿ. ಕಿತ್ತಳೆ, ನಿಂಬೆ ಮತ್ತು ಕಿವಿಯಂತಹ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವೆಂದು ಪರಿಗಣಿಸಲಾಗಿದೆ. ಈ ಎಲ್ಲಾ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ. ಆದರೆ ಮೈಗ್ರೇನ್ ನಿಂದ ಬಳಲುತ್ತಿರುವವರು ಇದ್ರಿಂದ ದೂರವಿರುವುದು ಒಳ್ಳೆಯದು.
ಮೈಗ್ರೇನ್ ಆರಂಭದ ಲಕ್ಷಣ ಏನು ಗೊತ್ತಾ ? : ಆರಂಭದಲ್ಲಿಯೇ ಮೈಗ್ರೇನ್ ಲಕ್ಷಣ ಗೊತ್ತಾದ್ರೆ ಬೇಗ ನೀವು ಅದ್ರಿಂದ ಹೊರಗೆ ಬರಬಹುದು. ಮೈಗ್ರೇನ್ ಸಮಸ್ಯೆಯಿರುವವರಿಗೆ ಆಹಾರದ ಬಯಕೆ, ಆಯಾಸ, ನಿಶಕ್ತಿ , ಖಿನ್ನತೆ, ಅಧಿಕ ರಕ್ತದೊತ್ತಡ, ಕುತ್ತಿಗೆ ಮತ್ತು ಹೊಟ್ಟೆಯ ಬಿಗಿತ, ವಾಂತಿ ಕಾಣಿಸಿಕೊಳ್ಳುತ್ತದೆ. ಗಾಢ ಬೆಳಕು ಹಾಗೂ ದೊಡ್ಡ ಧ್ವನಿ ಅವರಿಗೆ ಕಿರಿಕಿರಿಯುಂಟು ಮಾಡುತ್ತದೆ.