ಜಗತ್ತಿನ ಸುಂದರ ದೃಶ್ಯಗಳನ್ನು ಸೆರೆ ಹಿಡಿಯುವ ಕಣ್ಣು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾದ ಅಂಗ. ವ್ಯಕ್ತಿಯನ್ನು ಮೊದಲು ಆರ‍್ಷಿಸುವುದೇ ಕಣ್ಣು. ಈ ಸುಂದರ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹಾಗೂ ನೋಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ಕಣ್ಣುಗಳು ಮತ್ತು ಸಂಬಂಧಿತ ಸಮಸ್ಯೆಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
ಜಗತ್ತಿನ ಸುಂದರ ದೃಶ್ಯಗಳನ್ನು ಸೆರೆ ಹಿಡಿಯುವ ಕಣ್ಣು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾದ ಅಂಗ. ವ್ಯಕ್ತಿಯನ್ನು ಮೊದಲು ಆಕರ್ಷಿಸುವುದೇ ಕಣ್ಣು. ಈ ಸುಂದರ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹಾಗೂ ನೋಡಿಕೊಳ್ಳುವುದು ಬಹಳ ಮುಖ್ಯ. ಪ್ರತೀ ವರ್ಷ ಅಕ್ಟೋಬರ್ 13 ರಂದು ವಿಶ್ವ ದೃಷ್ಟಿ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಕುರುಡುತನ ಮತ್ತು ದೃಷ್ಟಿಹೀನತೆಯ ಬಗ್ಗೆ ಗಮನ ಸೆಳೆಯಲು ವಾರ್ಷಿಕ ಜಾಗತಿಕ ಕಾರ್ಯಕ್ರಮವಾಗಿದೆ. ನಮ್ಮ ಕಣ್ಣುಗಳು ಮತ್ತು ಸಂಬAಧಿತ ಸಮಸ್ಯೆಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
ಇತ್ತೀಚೆಗೆ ಟಿವಿ ನೋಡುವುದಕ್ಕಿಂತ ಹೆಚ್ಚಾಗಿ ಲ್ಯಾಪ್‌ಟಾಪ್ ಹಾಗೂ ಫೋನ್ ನೋಡುವುದರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಕಣ್ಣಿಗೆ ಸಂಬAಧಿತ ಹಲವು ಸಮಸ್ಯೆಗಳಿಗೆ ಗುರಿಯಾಗುತ್ತಿರುವುದು ವಿಪರ್ಯಾಸ. ಅದರಲ್ಲೂ ಕೋವಿಡ್ ಬಂದ ನಂತರವAತೂ ಮಕ್ಕಳಿಗೆ ಮನೆಯಿಂದಲೇ ಕ್ಲಾಸ್ ಅಂದರೆ ಆನ್‌ಲೈನ್ ಕ್ಲಾಸ್ ಎಂದ ಮೇಲೆ ಫೋನ್ ಹಾಗೂ ಲ್ಯಾಪ್‌ಟಾಪ್ ಬಳಕೆಯಿಂದಾಗಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು.
ಮಕ್ಕಳಿಂದ ಹಿಡಿದು ವಯಸ್ಕರವರೆಗೂ ದೃಷ್ಟಿಯ ಸಮಸ್ಯೆ ಉಲ್ಭಣಿಸಿತು. ಬಹುತೇಕ ಸಮಯ ಇದರಲ್ಲೇ ಕಳೆಯುವುದರಿಂದ ಕಣ್ಣಿನ ಪರದೆಗಳು ನಮ್ಮ ದೃಷ್ಟಿಯನ್ನು ಹಾನಿ ಮಾಡುತ್ತಿದೆ. ಅತಿ ಹೆಚ್ಚು ಸ್ಮಾರ್ಟ್ಫೋನ್ ಬಳಕೆದಾರರನ್ನು ಹೊಂದಿರುವ ಮೊದಲ ಮೂರು ದೇಶಗಳಲ್ಲಿ ಭಾರತವೂ ಒಂದಾಗಿದೆ. 10 ದಶಲಕ್ಷಕ್ಕೂ ಹೆಚ್ಚು ಜನರು ಕಣ್ಣಿನ ರೆಟಿನಾದ (Retina) ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸ್ಮಾರ್ಟ್ಫೋನ್, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಅತಿಯಾದ ಬಳಕೆ ಭಾರತದಲ್ಲಿ ಹೆಚ್ಚುತ್ತಿರುವ ಕಣ್ಣಿನ ಕಾಯಿಲೆಗಳ ಹಿಂದಿನ ಪ್ರಮುಖ ಕಾರಣವಾಗಿದೆ.
ಕಣ್ಣಿನ ದೃಷ್ಟಿ ಮಂದ ಆಗ್ತಿದ್ಯಾ ? ಡೈಲೀ ಮಾಡೋ ಇಂಥಾ ತಪ್ಪೇ ಕಾರಣವಾಗಿರ್ಬೋದು
undefined
ಉತ್ತಮ ರೆಟಿನಾದ ಆರೋಗ್ಯಕ್ಕೆ ಪ್ರಮುಖ ಸಲಹೆಯೆಂದರೆ ನೇತ್ರಶಾಸ್ತ್ರಜ್ಞರು ಅಥವಾ ನೇತ್ರಶಾಸ್ತಜ್ಞರಿಂದ ನಿಯಮಿತ ಕಣ್ಣಿನ ತಪಾಸಣೆಗೆ ಒಳಗಾಗುವುದು. ಇದು ರೋಗಗಳನ್ನು ತಡೆಗಟ್ಟಲು ಅಥವಾ ಆರಂಭಿಕ ಹಂತಗಳಲ್ಲಿ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಸರಿಯಾದ ಚಿಕಿತ್ಸೆಯೊಂದಿಗೆ ಸಮಯಕ್ಕೆ ರೋಗವನ್ನು ನಿರ್ವಹಿಸಲು ಮತ್ತು ದೃಷ್ಟಿ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ವಯಸ್ಸಿಗೆ ಸಂಬಂಧಿಸಿದ Macular Degeneration(AMD) ಮತ್ತು Diabetic Retinopathy(DR) ನಂತಹ ರೋಗಗಳು ನಿಖರವಾಗಿ ಮತ್ತು ಸರಿಯಾದ ಸಮಯದಲ್ಲಿ ನಿರ್ವಹಿಸದಿದ್ದಲ್ಲಿ ಗಮನಾರ್ಹ ದೃಷ್ಟಿ ನಷ್ಟ ಅಥವಾ ದುರ್ಬಲತೆಗೆ ಕಾರಣವಾಗಬಹುದು.
60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇ.60ರಷ್ಟು ಜನರು ಕೆಲವು ರೀತಿಯ ಕಣ್ಣಿನ ಪೊರೆಯನ್ನು ಅನುಭವಿಸುತ್ತಾರೆ. ಇದು ವಯಸ್ಸಿಗೆ ಸಂಬಂಧಿಸಿದ ಮತ್ತು ಕ್ರಮೇಣ ದೃಷ್ಟಿ ಕಳೆದುಕೊಳ್ಳುವಲ್ಲಿ ಕಾರಣವಾಗುತ್ತದೆ. ಇವರಲ್ಲಿ ಶೇ.40ರಷ್ಟು ರೋಗಿಗಳು ದೃಷ್ಟಿಹೀನತೆಯೊಂದಿಗೆ ಹೆಚ್ಚು ತೀವ್ರತರವಾದ ಪ್ರಕರಣಗಳಿಂದ ಬಳಲುತ್ತಿದ್ದಾರೆ. ಅದಾಗ್ಯೂ, ಕಣ್ಣಿನ ಪೊರೆ ರೋಗಿಗಳು ರೋಗದ ಮುಂದುವರಿದ ಹಂತಗಳಲ್ಲಿ ಬಂದರೂ, ಅವರು ತಮ್ಮ ಸಂಪೂರ್ಣ ದೃಷ್ಟಿಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಚೇತರಿಸಿಕೊಳ್ಳಬಹುದು' ಎಂದು ಮುಂಬೈ ರೆಟಿನಾ ಸೆಂಟರ್‌ನ ಸಿಇಒ ವಿಟ್ರೊರೆಟಿನಲ್ ಸರ್ಜನ್ ಡಾ ಅಜಯ್ ದುದಾನಿ ಹೇಳುತ್ತಾರೆ.
'ಮತ್ತೊಂದೆಡೆ, ಗ್ಲುಕೋಮಾ ಮತ್ತು ರೆಟಿನಾದ ಕಾಯಿಲೆಗಳು ರೋಗಗಳಿಗೆ ಚಿಕಿತ್ಸೆ ನೀಡದೆ ಹೋದರೆ ಕುರುಡುತನ ಸೇರಿದಂತೆ ಬದಲಾಯಿಸಲಾಗದ ಫಲಿತಾಂಶಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಡಯಾಬಿಟಿಕ್ ರೆಟಿನೋಪತಿಯನ್ನು ಪರಿಣಾಮಕಾರಿಯಾಗಿ ಮತ್ತು ಸಮಯೋಚಿತವಾಗಿ ನಿರ್ವಹಿಸುವ ಅಗತ್ಯವಿದೆ. ವರ್ಷಗಳಿಂದ ಮಧುಮೇಹದೊಂದಿಗೆ ಬದುಕುತ್ತಿದ್ದರೆ ಈ ಅಪಾಯವು ಹೆಚ್ಚಾಗುತ್ತದೆ. ಶೇ.20 ವರ್ಷಗಳಿಂದ ಮಧುಮೇಹವನ್ನು ಅನುಭವಿಸುವವರಿಗೆ ಕಣ್ಣಿನ ಕಾಯಿಲೆಯ ಅಪಾಯವು ಶೇ.90ರಷ್ಟಿದೆ. ನನ್ನ 15 ರಿಂದ 20 ರೋಗಿಗಳು ಗ್ಲುಕೋಮಾವನ್ನು ಹೊಂದಿದ್ದಾರೆ, ಇದು ಆಪ್ಟಿಕ್ ನರ ಹಾನಿಗೆ ಕಾರಣವಾಗಬಹುದು ಮತ್ತು ವ್ಯಕ್ತಿಗಳು ಮರು ತಪಾಸಣೆಗೆ ಹಾಜರಾಗದಿದ್ದರೆ ವೇಗವಾಗಿ ಪ್ರಗತಿ ಹೊಂದಬಹುದು.
ಕಣ್ಣು, ಚರ್ಮದಲ್ಲಿ ಈ ಲಕ್ಷಣವಿದ್ದರೆ, ಇರಬಹುದು ಕಿಡ್ನಿ ಸಮಸ್ಯೆ!
"ಅದಾಗ್ಯೂ, ಇಂದು, ನಾವು ಜಾಗೃತಿ ಮೂಡಿಸಲು ಮತ್ತು ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸಲು ತಂತ್ರಜ್ಞಾನ ಪರಿಹಾರಗಳನ್ನು ಸ್ಕೇಲಿಂಗ್ ಮಾಡುವ ಕಡೆಗೆ ಕೆಲಸ ಮಾಡಲಾಗುತ್ತದೆ. ಕಣ್ಣಿನ ಹನಿಗಳು, ನವೀನ ಔಷಧಗಳು, ಲೇಸರ್ ಅಥವಾ ಶಸ್ತ್ರ ಚಿಕಿತ್ಸೆ ಸೇರಿ ನಿಯಮಿತ ಮೇಲ್ವಿಚಾರಣೆಯೊಂದಿಗೆ ಸ್ಥಿತಿಯನ್ನು ನಿಯಂತ್ರಿಸಲಾಗುತ್ತದೆ. ಗ್ಲುಕೋಮಾ ಮತ್ತು ಇತರೆ ಕಣ್ಣಿನ ಕಾಯಿಲೆಗಳಿಗೆ ಅಂತಹ ಚಿಕಿತ್ಸಾ ಆಯ್ಕೆಗಳ ಜ್ಞಾನ ಮತ್ತು ಅನುಸರಣೆ ಅತ್ಯುತ್ತಮ ಕಣ್ಣಿನ ಆರೈಕೆಯನ್ನು ಉತ್ತೇಜಿಸಲು ಅತ್ಯಗತ್ಯ.'