ಕಣ್ಣಿಲ್ಲದೆ ಒಂದು ಜೀವನವನ್ನು ಊಹಿಸೋಕೆ ಸಾಧ್ಯವಿದೆಯಾ ? ಗಿಡ, ಮರ, ಹಕ್ಕಿ, ಪ್ರಾಣಿ, ಬಣ್ಣ, ಮತ್ತೊಬ್ಬ ವ್ಯಕ್ತಿ ಹೀಗೆ ಸಮಸ್ತ ಜಗತ್ತನ್ನು ನಾವು ಕಣ್ಣಿನಿಂದಲೇ ನೋಡಲು ಸಾಧ್ಯವಾಗೋದು. ಕತ್ತಲೆ ಹೊರತುಪಡಿಸಿದರೆ ಎಲ್ಲಾ ಸಮಯದಲ್ಲೂ ಎಲ್ಲವನ್ನು ವೀಕ್ಷಿಸುವ ಸಾಮರ್ಥ್ಯ ಕಣ್ಣಿನ ದೃಷ್ಟಿಗಿದೆ. ಇಂಥಾ ಕಣ್ಣಿನ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವ ದೃಷ್ಟಿಯಿಂದ ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. ಆ ಬಗ್ಗೆ ಹೆಚ್ಚು ತಿಳಿಯೋಣ.
ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಅಕ್ಟೋಬರ್ 13ರಂದು ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. 1998ರ ಅಕ್ಟೋಬರ್ 8ರಂದು ಮೊದಲ ವಿಶ್ವ ದೃಷ್ಟಿ ದಿನವನ್ನು ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಫೌಂಡೇಶನ್ (LCIF) ತನ್ನ ಸೈಟ್ ಫಸ್ಟ್ ಅಭಿಯಾನದ ಮೂಲಕ ಆರಂಭಿಸಿತು. ಈ ಸಂಸ್ಥೆಯು ಜಾಗತಿಕವಾಗಿ ದೃಷ್ಟಿ, ಕಣ್ಣಿನ ಆರೈಕೆ, ಕಣ್ಣಿನ ರೋಗಗಳಿಂದ ಬಳಲುವ ಅಪಾಯ ಮತ್ತು ದೃಷ್ಟಿ ಪುನಃಸ್ಥಾಪಿಸುವ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಬಳಿಕ ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಅಂತಾರಾಷ್ಟ್ರೀಯ ಅಂಧತ್ವ ತಡೆಗಟ್ಟುವಿಕೆ ಸಂಸ್ಥೆ (IAPB) ಇದನ್ನು ಮುಂದುವರೆಸಿಕೊಂಡು ಬಂದಿದೆ.
ವಿಶ್ವ ದೃಷ್ಟಿ ದಿನದ ಇತಿಹಾಸ
1970ರ ದಶಕದ ಮಧ್ಯಭಾಗದಲ್ಲಿ ಸರ್ ಜಾನ್ ವಿಲ್ಸನ್ ಜಾಗತಿಕ ಕುರುಡುತನದ ಸಮಸ್ಯೆಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದರು. ಇದು ಜನವರಿ 1, 1975ರಂದು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ದಿ ಪ್ರಿವೆನ್ಶನ್ ಆಫ್ ಬ್ಲೈಂಡ್‌ನೆಸ್ ರಚನೆಗೆ ಕಾರಣವಾಯಿತು. ಸರ್ ಜಾನ್ ವಿಲ್ಸನ್ ಸ್ಥಾಪಕ ಅಧ್ಯಕ್ಷರಾಗಿ. ವರ್ಲ್ಡ್ ಬ್ಲೈಂಡ್ ಯೂನಿಯನ್ (WBU) ಮತ್ತು ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನೇತ್ರವಿಜ್ಞಾನ (ICO) ಇದರ ಸ್ಥಾಪಕ ಸದಸ್ಯರಾಗಿದ್ದರು. ವಿಶ್ವ ದೃಷ್ಟಿ ದಿನ (World Sight Day)ದಂದು ರೋಗಗಳು, ಮತ್ತು ದೃಷ್ಟಿ ಮರುಸ್ಥಾಪಿಸುವ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ವಿಶ್ವ ದೃಷ್ಟಿ ದಿನವನ್ನು ಜಾಗತಿಕವಾಗಿ ಸುಮಾರು 200 ಸದಸ್ಯ ಸಂಸ್ಥೆಗಳು ಬೆಂಬಲಿಸುತ್ತವೆ.
ಕಣ್ಣಿನ ದೃಷ್ಟಿ ಮಂದ ಆಗ್ತಿದ್ಯಾ ? ಡೈಲೀ ಮಾಡೋ ಇಂಥಾ ತಪ್ಪೇ ಕಾರಣವಾಗಿರ್ಬೋದು
ವಿಶ್ವ ದೃಷ್ಟಿ ದಿನದ ಮಹತ್ವ
ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಮೂಲಭೂತ ಆರೋಗ್ಯ ಸೌಲಭ್ಯಗಳು (Health facilities) ದೊರಕುತ್ತಿಲ್ಲ. ಹೀಗಾಗಿಯೇ ಹಲವು ಕಾಯಿಲೆಗಳಿಂದ ಕುರುಡುತನದ ಸಮಸ್ಯೆ ಹೆಚ್ಚಾಗ್ತಿದೆ. ಕುರುಡುತನದ ಹೆಚ್ಚಿನ ಕಾರಣಗಳು ತಡೆಗಟ್ಟಬಹುದಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಸರಿಯಾದ ಚಿಕಿತ್ಸೆ (Treatment)ಗಳಿಲ್ಲದ ಕಾರಣ ಇದು ದೃಷ್ಟಿಹೀನತೆಗೆ (Blindness) ಕಾರಣವಾಗುತ್ತದೆ. ನಿಮ್ಮ ಕಣ್ಣುಗಳನ್ನು ಕಾಳಜಿ ವಹಿಸುವ ಸಾಧನವಾಗಿ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಬಗ್ಗೆ ವಿಶ್ವ ದೃಷ್ಟಿ ದಿನದಂದು ಜಾಗೃತಿ (Awareness) ಮೂಡಿಸಬಹುದಾಗಿದೆ.
ವಿಶ್ವ ದೃಷ್ಟಿ ದಿನ 2022ರ ಥೀಮ್
ಕಳೆದ ವರ್ಷದ ಥೀಮ್‌ನ್ನು ಮುಂದುವರೆಸುತ್ತಾ, ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ದಿ ಪ್ರಿವೆನ್ಶನ್ ಆಫ್ ಬ್ಲೈಂಡ್ನೆಸ್ (IAPB) ಈ ವರ್ಷದ ಥೀಮ್ ಕೂಡ 'ನಿಮ್ಮ ಕಣ್ಣುಗಳನ್ನು ಪ್ರೀತಿಸು' ಎಂಬುದಾಗಿ ದೃಢಪಡಿಸಿದೆ. ಕಳೆದ ವರ್ಷದ ಅಭಿಯಾನದ (Campaign) ಯಶಸ್ಸಿನ ನಂತರ ಈ ಥೀಮ್‌ನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 3.5 ಮಿಲಿಯನ್ ಜನರು ತಮ್ಮ ಕಣ್ಣಿನ ಆರೋಗ್ಯಕ್ಕೆ (Health) ಆದ್ಯತೆ ನೀಡಲು ವಾಗ್ದಾನ ಮಾಡಿದರು.
ಕಣ್ಣುಗಳಲ್ಲಿ ಈ ಬದಲಾವಣೆ ಕಂಡ್ರೆ ಕಬ್ಬಿಣಾಂಶದ ಕೊರತೆ ಇದೆ ಎಂದರ್ಥ
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬಹುದು ?
ಕಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡುವುದು ಮತ್ತು ಕಣ್ಣುಗಳನ್ನು ಪ್ರೀತಿಸುವುದು ನಿಮ್ಮ ಜೀವನದ ಧ್ಯೇಯವೆಂದು ಪರಿಗಣಿಸಿ. ಕಣ್ಣುಗಳು ಮತ್ತು ದೃಷ್ಟಿಯ ಮಹತ್ವದ ಬಗ್ಗೆ ನಿಮ್ಮ ಕುಟುಂಬ, ಪ್ರೀತಿಪಾತ್ರರು ಮತ್ತು ಇತರರಲ್ಲಿ ಅರಿವು ಮೂಡಿಸಿ. ದಿನಚರಿ ಮತ್ತು ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಗಳ ಮೂಲಕ ಅನೇಕ ಕಣ್ಣಿನ ಕಾಯಿಲೆಗಳು ಮತ್ತು ಸಮಸ್ಯೆಗಳನ್ನು ತಡೆಗಟ್ಟಬಹುದು.
ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವನೆ, ಧೂಮಪಾನ ಮತ್ತು ಮಾದಕ ವಸ್ತುಗಳಿಂದ ದೂರವಿರಿ. ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಬಳಸುವಾಗ, ಅವುಗಳಿಂದ ನಿಮ್ಮ ಕಣ್ಣುಗಳನ್ನು ಸ್ವಲ್ಪ ದೂರವಿರಿಸಿ ಕುಳಿತುಕೊಳ್ಳಿ. ಕಣ್ಣಿನ ಸಮಸ್ಯೆಗಳ ಬಗ್ಗೆ ಅರಿವಿರಲಿ. ಸಮಯೋಜಿತ ತಪಾಸಣೆಗೊಳಗಾಗಿನಿಮಗೆ ಕಣ್ಣಿನ ಸೋಂಕು ಅಥವಾ ತೀವ್ರ ದೃಷ್ಟಿ ಸಮಸ್ಯೆಯಿದ್ದರೆ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ.