ಗರ್ಭಿಣಿ ತೂಕ ಕಡಿಮೆಯಾಗೋದು ಒಳ್ಳೇ ಲಕ್ಷಣವಲ್ಲ, ಅಪಾಯ ತಪ್ಪಿಸಿ

By Suvarna News  |  First Published Sep 29, 2022, 12:29 PM IST

ಗರ್ಭಾವಸ್ಥೆಯಲ್ಲಿ ತೂಕ ಕಡಿಮೆಯಾಗುವುದು ಒಳ್ಳೆಯದಲ್ಲ. ಇದರಿಂದ ಮಗು ಮತ್ತು ತಾಯಿಗೆ ಅನೇಕ ತೊಂದರೆಗಳು ಉಂಟಾಗುತ್ತವೆ. ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಉತ್ತಮ  ಎಂಬ ಮಾಹಿತಿ ಇಲ್ಲಿದೆ.


ಮಹಿಳೆಯರ ಜೀವನದಲ್ಲಿ ಗರ್ಭಧಾರಣೆಯು ಸಂಭ್ರಮದ ಕ್ಷಣ. ಪ್ರತಿಕ್ಷಣವೂ ಆಕೆ ಮಗುವಿನ ಜನನಕ್ಕಾಗಿ ಕಾಯುತ್ತಿರುತ್ತಾಳೆ. ಈ ವೇಳೆ ಆಕೆಯ ಆರೋಗ್ಯ ತುಂಬಾ ಮುಖ್ಯ. ಯಾಕೆಂದರೆ ಗರ್ಭಧಾರಣೆ ವೇಳೆ ಮಹಿಳೆಯ ದೇಹದಲ್ಲಿ ಹಾರ್ಮೋನ್ ವೈಪರಿತ್ಯದಿಂದ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಶುರುವಾಗುತ್ತವೆ. ಅದರಲ್ಲಿಯೂ ಮುಖ್ಯವಾಗಿ ಆಕೆಯ ತೂಕ ಹೆಚ್ಚಾಗುವುದು. ಇದಕ್ಕೆ ಕಾರಣ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಹಾಗೂ ಪೌಷ್ಟಿಕ ಆಹಾರದ ಸೇವನೆ. ಇದು ಸಾಮಾನ್ಯ ಸಂಗತಿ. ಆದರೆ ಈ ವೇಳೆ ಕೆಲವು ಗರ್ಭಿಣಿಯರ ತೂಕ ಇಳಿಕೆಯಾಗುತ್ತದೆ. ಗರ್ಭಿಣಿ ಹಾಗೂ ಹೊಟ್ಟೆಯಲ್ಲಿರುವ ಮಗುವಿಗೆ ತುಂಬಾ ಕಡಿಮೆ ತೂಕವು ಆರೋಗ್ಯಕರವಲ್ಲ. ಇದರಿಂದ ಕೆಲವು ತೊಂದರೆ ಆಗುವ ಸಾಧ್ಯತೆಯಿದೆ. ಅವುಗಳ ವಿವರ ಮತ್ತು ಗರ್ಭಿಣಿಯು ಎಷ್ಟು ತೂಕ ಇರಬೇಕೆಂಬ ಮಾಹಿತಿನ ಇಲ್ಲಿದೆ.

ಗರ್ಭಿಣಿಯ ತೂಕ ಕಡಿಮೆಯಾದರೆ ಏನು ತೊಂದರೆ?
ಗರ್ಭಿಣಿಗೆ (pregnant) ತೂಕವು ತುಂಬಾ ಮುಖ್ಯ. ಇದು ಪೂರ್ತಿ ಹೆಚ್ಚಾದರೂ ಸಮಸ್ಯೆಯೇ, ಹಾಗೂ ಕಡಿಮೆಯಾದರೂ ತೊಂದರೆ. ಗರ್ಭದೊಳಗಿನ ಭ್ರೂಣ ತಾಯಿಯ ಆಹಾರವನ್ನೇ ಪಡೆದು ಬೆಳೆಯುತ್ತಾ ಹೋಗುವುದರಿಂದ, ಗರ್ಭಾವಸ್ಥೆಯಲ್ಲಿನ ತೂಕವು ತಾಯಿಯ (Mother) ಜೊತೆಗೆ ಮಗುವಿನ (Baby) ಆರೋಗ್ಯಕ್ಕೂ ಅಗತ್ಯ. ಗರ್ಭಿಣಿಯರಿಗೆ ಮುಖ್ಯವಾಗಿ ಕಬ್ಬಿಣ ಮತ್ತು ಫೋಲಿಯೇಟ್’ನಂತಹ ಅಗತ್ಯ ಪೋಷಕಾಂಶಗಳು ಅವಶ್ಯಕ. ಆದರೆ ಕಡಿಮೆ ತೂಕ ಹೊಂದಿದ್ದರೆ ಇವುಗಳ ಕೊರತೆ ಉಂಟಾಗುತ್ತದೆ. ಇದು ಗರ್ಭಪಾತದ (Miscarriage) ಅಪಾಯವನ್ನು ಹೆಚ್ಚಿಸುತ್ತದೆ. ಕಡಿಮೆ ತೂಕದಿಂದ ತಾಯಿ ಮತ್ತು ಮಗುವಿಗೆ ಹಲವಾರು ಕಾಯಿಲೆಗಳು ಬರುವ ಸಾಧ್ಯತೆಯಿದೆ. ರೋಗನಿರೋಧಕ ಶಕ್ತಿಯ ಕೊರತೆಯು ಮಗುವು ಬಹಳ ಬೇಗನೆ ಸೋಂಕಿಗೆ ಗುರಿಯಾಗುವಂತೆ ಮಾಡುತ್ತದೆ. ಇನ್ನು ತಾಯಿ ಕಡಿಮೆ ತೂಕ ಇದ್ದರೆ ಮಗು ಕೂಡ ಕಡಿಮೆ ತೂಕ ಇರುತ್ತದೆ. ಮಗು ಕಡಿಮೆ ತೂಕವಿದ್ದರೆ ಸೆರೆಬ್ರಲ್ ಪಾಲ್ಸಿ, ಕಲಿಕೆಯ ತೊಂದರೆಗಳು, ದೃಷ್ಟಿ ಮತ್ತು ಶ್ರವಣದ ತೊಂದರೆಗಳು ಹೆಚ್ಚಾಗುವ ಅಪಾಯವಿರುತ್ತದೆ. ಗರ್ಭಾವಸ್ಥೆಯಲ್ಲಿ ಪೋಷಣೆಯ ಕೊರತೆಯಿಂದಾಗಿ ಕಡಿಮೆ ತೂಕದ ಮಗು ಜನಿಸಬಹುದು. ತಾಯಿ ಮತ್ತು ಮಗು ಸಾವಿನ ಸಂಭವ ಹೆಚ್ಚಿರುತ್ತದೆ.

Tips for Pregnants: ಹೆರಿಗೆಯ ನಂತರ ಇವು ಬೇಕೇ ಬೇಕು… ಇಲ್ಲಾಂದ್ರೆ, ನರ್ಸ್ ಸಹ ಸಹಾಯಕ್ಕೆ ಬರೋದಿಲ್ಲ!

Latest Videos

undefined

ಗರ್ಭಾವಸ್ಥೆಯಲ್ಲಿ ಎಷ್ಟು ತೂಕ ಇರಬೇಕು?
ಗರ್ಭಿಣಿ ಹಾಗೂ ಹೊಟ್ಟೆಯಲ್ಲಿರುವ ಮಗುವಿಗೆ ತುಂಬಾ ಕಡಿಮೆ ಹಾಗೂ ಹೆಚ್ಚಿನ ತೂಕವು (weight) ಎರಡೂ ಆರೋಗ್ಯಕರವಲ್ಲ. ಗರ್ಭಾವಸ್ಥೆಯಲ್ಲಿ ಇರುವಾಗ ಉಂಟಾದ ತೂಕದ ಏರುಪೇರು  ಡೆಲಿವರಿ ಬಳಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.  ಇದರಿಂದ ಕೆಲವು ತೊಂದರೆ ಆಗುವ ಸಾಧ್ಯತೆಯಿದೆ. ಗರ್ಭಿಣಿಯ ಆರೋಗ್ಯಕ್ಕೆ (health) ತೂಕವು ಎಷ್ಟು ಅವಶ್ಯಕವೋ, ಮಗುವಿನ ಆರೋಗ್ಯಕ್ಕೂ ಅಷ್ಟೇ ಅಗತ್ಯ. ಹೀಗಾಗಿ ಗರ್ಭಾವಸ್ಥೆಯಲ್ಲಿ ತೂಕದ ಬಗ್ಗೆ ಅಗತ್ಯ ಗಮನಹರಿಸುವುದು ಒಳಿತು. ಮತ್ತು ತಿಂಗಳಿಗೊಮ್ಮೆ ಆರೋಗ್ಯ ಮತ್ತು ತೂಕದ ಪರಿಶೀಲನೆ ಮಾಡಿಸಿಕೊಳ್ಳುವುದು ಅಗತ್ಯ. ಗರ್ಭಧಾರಣೆಯ ಮೊದಲ 3 ತಿಂಗಳುಗಳಲ್ಲಿ ಗರ್ಭಿಣಿಯರು ಸುಮಾರು 2 ರಿಂದ 4 ಕೆಜಿ ಮತ್ತು ಉಳಿದ ಗರ್ಭಾವಸ್ಥೆ ದಿನಗಳಲ್ಲಿ ವಾರಕ್ಕೆ 1 ಕೆಜಿ ತೂಕ ಹೆಚ್ಚಿಸಬೇಕು. ಸಾಮಾನ್ಯವಾಗಿ 10 ರಿಂದ 14 ಕೆಜಿ, ಸರಾಸರಿ 12 ಕೆಜಿ ತೂಕವನ್ನು ಪಡೆಯಬೇಕು. ಹೀಗಿದ್ದರೆ ಭ್ರೂಣ (embryo) ಮತ್ತು ತಾಯಿಯ ಆರೋಗ್ಯ (Mothers' Health) ಮೇಲೆ ಯಾವುದೇ ಸಮಸ್ಯೆಯಾಗುವುದಿಲ್ಲ. ಹಾಗೂ ಆರೋಗ್ಯವಂತ ಮಗುವಿನ (Healthy Kid) ಜನ್ಮ ಆಗುತ್ತದೆ ಎಂಬುದು ವೈದ್ಯರ ಮಾತು.

 ಗರ್ಭಾವಸ್ಥೆಯಲ್ಲಿ ಕ್ರಾಸ್ ಲೆಗ್ ಮಾಡಿ ಕುಳಿತುಕೊಳ್ಳೋದು ಸುರಕ್ಷಿತವೇ?

ಒಟ್ಟಾರೆ ಹೇಳುವುದಾದರೆ ಆರೋಗ್ಯಕರ ಗರ್ಭಧಾರಣೆ ಮತ್ತು ಆರೋಗ್ಯಕರ ಮಗುವಿಗೆ ಸಮತೋಲನ ತೂಕ (weight) ಅಗತ್ಯ. ಗರ್ಭಾವಸ್ಥೆಯಲ್ಲಿ ತಾಯಿಯು (Mother) ಎಷ್ಟು ತೂಕ ಹೆಚ್ಚಿಸಿಕೊಳ್ಳಬೇಕು, ಯಾವಾಗ ಹೆಚ್ಚಿಸಿಕೊಳ್ಳಬೇಕು ಎಂಬುದು ತಿಳಿದಿರಬೇಕು. ಗರ್ಭಿಣಿಯಾದಾಗ ಕಡಿಮೆ ತೂಕ ಹೊಂದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಈ ವೇಳೆ ವೈದ್ಯರ ಸಲಹೆಯನ್ನು ಪಡೆದು ಅನುಸರಿಸಿದರೆ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

 

click me!