ನರಸಿಂಹರಾಜಪುರ (ಸೆ.29) ಪ್ರತಿಯೊಬ್ಬರೂ ಅಬಾ ಕಾರ್ಡನ್ನು ಕಡ್ಡಾಯವಾಗಿ ಮಾಡಿಸಬೇಕಾಗಿದ್ದು ಅಬಾ ಕಾರ್ಡಿನ ಐ.ಡಿ ನಂಬರ್‌ನಿಂದ ರೋಗಿಯ ಎಲ್ಲಾ ವೈದ್ಯಕೀಯ ದಾಖಲೆಗಳು ಲಭ್ಯವಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೀರಪ್ರಸಾದ್ ತಿಳಿಸಿದರು.
ವೈದ್ಯ ದಂಪತಿಯ ಆಯುಷ್ಮಾನ್ ಭಾರತ್ ದಂಧೆ ಪತ್ತೆ: ಆರೋಗ್ಯವಂತರನ್ನು ಹೋಟೆಲ್‌ನಲ್ಲಿ ಇರಿಸಿ ನಕಲಿ ಚಿಕಿತ್ಸೆ
undefined
ಅವರು ಬುಧವಾರ ಸೋಷಿಯಲ್ ವೆಲ್‌ಫೇರ್ ಸೊಸೈಟಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ಎಸ್.ಡಬ್ಲ್ಯೂ.ಎಸ್ ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಇಲಾಖೆಯ ಸೇವೆಯ ಮಾಹಿತಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮೀಣ ಸೇವಾ ಕೇಂದ್ರಗಳಲ್ಲಿ ಆಧಾರ್ ಕಾರ್ಡ್, ಮೊಬೈಲ್ ನಂಬರ್ ನೀಡಿದರೆ ಅಭಾ ಕಾರ್ಡು ಲಭ್ಯವಾಗಲಿದೆ. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಅಭಾ ಕಾರ್ಡಿನಲ್ಲಿರುವ ಐಡಿ ನಂಬರಿಗೆ ದಾಖಲಾಗುತ್ತದೆ. ಮುಂದೆ ಯಾವುದೇ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಹಿಂದೆ ಮಾಡಿರುವ ಎಲ್ಲಾ ಚಿಕಿತ್ಸೆಯ ಮಾಹಿತಿ ಅಬಾ ಕಾರ್ಡಿನಲ್ಲಿ ಸಿಗಲಿದೆ. ಹೆಲ್ತ್ ಸ್ಪೆಷಲ್ ರಿಜಿಸ್ಟರ್‌ನಲ್ಲೂ ದಾಖಲಾಗುತ್ತದೆ ಎಂದರು.
ಇತ್ತೀಚಿಗೆ ರೇಬೀಸ್ ಖಾಯಿಲೆ ಜಾಸ್ತಿಯಾಗುತ್ತಿದ್ದು ಹುಚ್ಚು ಹಿಡಿದ ನಾಯಿ ಹಸುವಿಗೆ ಕಚ್ಚದಂತೆ ಜಾಗ್ರತೆ ವಹಿಸಬೇಕು. ಹುಚ್ಚು ನಾಯಿ ಕಡಿದ ಹಸುವಿನ ಹಾಲನ್ನು ಬಿಸಿ ಮಾಡಿ ಕುಡಿಯಬೇಕು. ಕೋವಿಡ್ ಲಸಿಕೆ ಹಾಕಿದ್ದರಿಂದ ಕೋವಿಡ್ ಕಾಯಿಲೆ ಕಡಿಮೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕೋವಿಡ್ ಬೂಸ್ಟ್ ಡೋಸ್ ಹಾಕಿಸಿಕೊಳ್ಳಬೇಕು. ಸೆಪ್ಟಂಬರ್ 30ರವರೆಗೂ ಕೋವಿಡ್ ಬೂಸ್ಟ್ ಉಚಿತವಾಗಿರುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆಯ ದಂತ ವೈದ್ಯ ಡಾ.ಶ್ರೀನಿವಾಸ್ ಅವರು ದಂತ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾತನಾಡಿ, ಬಿಪಿಎಲ್ ಕಾರ್ಡು ಹೊಂದಿರುವ ಬಡವರಿಗೆ ಉಚಿತವಾಗಿ ದಂತ ಬಾಗ್ಯ ಯೋಜನೆಯಡಿ ಹಲ್ಲುಗಳನ್ನು ಕಟ್ಟಿಸಿಕೊಡಲಾಗುವುದು. ಎಲೆ ಅಡಿಕೆ ಜೊತೆ ತಂಬಾಕು ಹಾಕಬಾರದು. ಇದರಿಂದ ಹಲ್ಲುಗಳು ಹಾಳಾಗುವುದರ ಜತೆಗೆ ಕ್ಯಾನ್ಸರ್ ಸಹ ಬರಲಿದೆ ಎಂದರು.
ಸೋಷಿಯಲ್ ವೆಲ್‌ಫೇರ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿ, ಕಳೆದ 32 ವರ್ಷಗಳಿಂದ ನಮ್ಮ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮ ರೂಪಿಸಿದೆ. ಮಹಿಳಾ ಸ್ವಸಹಾಯ ಸಂಘ ಹುಟ್ಟು ಹಾಕಿ ಉದ್ಯೋಗ ತರಬೇತಿ ನೀಡಿ ಮಹಿಳೆಯರಿಗೆ ಆರ್ಥಿಕ ನೆರವು ನೀಡಿದ್ದೇವೆ ಎಂದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪುನೀತ್, ತಾಲೂಕು ಆರೋಗ್ಯ ಶಿಕ್ಷಾಧಿಕಾರಿ ಪಿ.ಪಿ.ಬೇಬಿ, ಸರ್ಕಾರಿ ಆಸ್ಪತ್ರೆಯ ಆರೋಗ್ಯ ಮಿತ್ರ ಕಾರ್ಯಕ್ರಮದ ಉಷಾ, ಕ್ಷಯ ರೋಗ ಘಟಕದ ಹಿರಿಯ ಚಿಕಿತ್ಸಾ ಮೇಲ್ವೀಚಾರಕ ಪವನ್ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಸೋಷಿಯಲ್ ವೆಲ್‌ಫೇರ್ ಸೊಸೈಟಿಯ ಸಹಾಯಕ ನಿರ್ದೇಶಕ ರೆ.ಫಾ. ಜೋಬಿ ವಹಿಸಿದ್ದರು. ಆರೋಗ್ಯ ಇಲಾಖೆಯ ಅನ್ನಮ್ಮ ಉಪಸ್ಥಿತರಿದ್ದರು.
ಎಲ್ಲರೂ Ayushman Bharat Card ಪಡೆಯಲಿ -ಡಿಸಿ ಮುಗಿಲನ್
ಇದೇ ಸಂದರ್ಭದಲ್ಲಿ ಸೋಷಿಯಲ್ ವೆಲ್‌ಫೇರ್ ಸೊಸೈಟಿಯಿಂದ ಕೃಷಿ ಚಟುವಟಿಕೆ ಮಾಡಲು ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸಲಾಯಿತು. ಸುನಿ ಸ್ವಾಗತಿಸಿದರು. ಗಾಯಿತ್ರಿ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ವಂದಿಸಿದರು.