ಬಾಲ್ಯದಲ್ಲಿಯೇ ಈ ಸಮಸ್ಯೆ ಕಾಣಿಸಿಕೊಂಡರೆ, ಮಕ್ಕಳು ಹೈಟ್ ಆಗೋದು ಕಷ್ಟ ಕಷ್ಟ

By Suvarna News  |  First Published Oct 10, 2022, 5:38 PM IST

ವಿಟಮಿನ್‌ ಡಿ ಕೊರತೆ ಎಲ್ಲರಲ್ಲೂ ಸಾಮಾನ್ಯ. ಆದರೆ, ಬೆಳೆಯುವ ಮಕ್ಕಳಲ್ಲಿ ಇದರ ಕೊರತೆ ಆದರೆ ಬೆಳವಣಿಗೆ ಕುಂಠಿತವಾಗುತ್ತದೆ. ಅವರು ಕುಬ್ಜವಾಗುವ ಜತೆಗೆ ವಯಸ್ಸಾದರೂ ಚಿಕ್ಕವರಂತೆ ಕಾಣುತ್ತಾರೆ. ಬಿಗ್‌ ಬಾಸ್‌ ಸ್ಪರ್ಧಿ ಅಬ್ದು ರೋಜಿಕ್‌ ಬಾಲ್ಯದಲ್ಲಿ ರಿಕೆಟ್ಸ್‌ ಸಮಸ್ಯೆ ಎದುರಿಸಿದ್ದುದರಿಂದಲೇ ಅವರ ದೇಹ ಕುಬ್ಜವಾಗಿದೆ. 


ಕೆಲವರನ್ನು ನೀವು ನೋಡಿರಬಹುದು, ಅವರು ಎತ್ತರ ಇರುವುದಿಲ್ಲ. ಕುಳ್ಳಗಿರುವ ಜತೆಗೆ ಮುಖ ಹಾಗೂ ದೇಹಾಕೃತಿಯಲ್ಲೂ ಚಿಕ್ಕವರಂತೆ ಭಾಸವಾಗುತ್ತಾರೆ. ವಯಸ್ಸು ಏರುತ್ತಿದ್ದರೂ ಅವರು ಮಾತ್ರ ಇರುವಂತೆಯೇ ಇರುತ್ತಾರೆ. ಅವರ ವಯಸ್ಸನ್ನು ಊಹಿಸುವುದು ಸಹ ಕಷ್ಟವಾಗುತ್ತದೆ. ಕನ್ನಡ ಚಿತ್ರರಂಗದ ನಟರಾಗಿದ್ದ ವಾದಿರಾಜ್‌ ಅವರನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇತ್ತೀಚೆಗೆ ಬಿಗ್‌ ಬಾಸ್‌ ಸೀಸನ್‌ ೧೬ ಆರಂಭವಾಗಿದೆ. ಇದರಲ್ಲಿ ಒಬ್ಬ ಸ್ಪರ್ಧಿಯಾಗಿರುವ ಅಬ್ದು ರೋಜಿಕ್‌ ಅವರು ಭಾರೀ ಸುದ್ದಿಯಲ್ಲಿದ್ದಾರೆ. ಏಕೆಂದರೆ ಅವರೂ ಸಹ ಇಂಥದ್ದೇ ಕುಳ್ಳಗಿನ ದೇಹಾಕೃತಿ ಹೊಂದಿದ್ದಾರೆ. ಅವರ ಎತ್ತರ ಕೇವಲ ೩ ಅಡಿ ೧ ಇಂಚು! ಆದರೆ, ವಯಸ್ಸು ೧೯ ವರ್ಷ. ಅಬ್ದು ಅವರು ಜಗತ್ತಿನ ಅತಿ ಕುಳ್ಳಗಿನ ಹಾಡುಗಾರ ಎಂತಲೂ ಅನಿಸಿಕೊಂಡಿದ್ದಾರೆ. ಅವರು ತಮ್ಮ ದೇಹ ಯಾಕಾಗಿ ಎತ್ತರ ಬೆಳೆಯಲಿಲ್ಲ ಎನ್ನುವ ಕುರಿತು ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅಬ್ದು ಅವರಿಗೆ ಐದು ವರ್ಷವಾಗಿದ್ದಾಗ ಅವರಿಗೆ ಹಾರ್ಮೋನ್‌ ಕೊರತೆ ಉಂಟಾಗಿತ್ತು, ಜತೆಗೆ ರಿಕೆಟ್ಸ್‌ ಎನ್ನುವ ಸಮಸ್ಯೆ ಆರಂಭವಾಗಿತ್ತು. ರಿಕೆಟ್ಸ್‌ ಸಮಸ್ಯೆ ವಿಟಮಿನ್‌ ಡಿ ಕೊರತೆಯಿಂದ ಬರುತ್ತದೆ. 

ರಿಕೆಟ್ಸ್‌ (Rickets) ಮಕ್ಕಳಲ್ಲಿ (Children) ಸಾಮಾನ್ಯವಾಗಿ ಕಂಡುಬರುತ್ತದೆ. ಇದರಿಂದ ಮೂಳೆಗಳು (Bones) ಮೃದುವಾಗಿ (Soft) ದುರ್ಬಲವಾಗುತ್ತವೆ. ದೇಹದಲ್ಲಿ ದೀರ್ಘಕಾಲದಿಂದ ವಿಟಮಿನ್‌ ಡಿ (Vitamin D) ಸಮಸ್ಯೆ ಉಂಟಾದಾಗ ಹೀಗಾಗುತ್ತದೆ. ವಿಟಮಿನ್‌ ಡಿ ಕೊರತೆಯಿಂದ (Shortage) ಮೂಳೆಗಳಲ್ಲಿ ಕ್ಯಾಲ್ಸಿಯಂ, ಫಾಸ್ಪರಸ್‌ ಮಟ್ಟವನ್ನು ಮೆಂಟೇನ್‌ ಮಾಡಲು ತೀವ್ರ ತೊಂದರೆ ಎದುರಾಗುತ್ತದೆ. ಆಹಾರದಲ್ಲಿ ವಿಟಮಿನ್‌ ಡಿ ಮತ್ತು ಕ್ಯಾಲ್ಸಿಯಂ (Calcium) ಸೇರಿಸಿಕೊಳ್ಳುವುದರಿಂದ ರಿಕೆಟ್ಸ್‌ ನಿಂದಾಗಿ ಆಗುವ ಮೂಳೆಗಳ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಆದರೆ, ಮಕ್ಕಳಲ್ಲಿ ಯಾವುದೇ ಕಾರಣದಿಂದ ರಿಕೆಟ್ಸ್‌ ಸಮಸ್ಯೆ ಉಂಟಾದರೆ ಚಿಕಿತ್ಸೆಯ ಅಗತ್ಯತೆ ಇರುತ್ತದೆ. 

Health Food ವಿಟಮಿನ್ ಡಿ ಕೊರತೆ ನೀಗಿಸಲು ಸಸ್ಯಹಾರಿಗಳಿಗೆ ಈ ಫುಡ್ ಬೆಸ್ಟ್

Tap to resize

Latest Videos

ರಿಕೆಟ್ಸ್‌ ಲಕ್ಷಣಗಳು
•    ಬೆಳವಣಿಗೆ (Development) ನಿಧಾನವಾಗುವುದು
•    ಮೋಟಾರ್‌ ಸ್ಕಿಲ್ಸ್‌ (Motor Skills) ನಿಧಾನವಾಗುವುದು
•    ಬೆನ್ನುಹುರಿ, ಪೆಲ್ವಿಸ್‌ ಹಾಗೂ ಕಾಲುಗಳಲ್ಲಿ ನೋವು
•    ಮಾಂಸಖಂಡಗಳು (Muscles) ದುರ್ಬಲವಾಗುವುದು

ಮಕ್ಕಳಲ್ಲಿ ರಿಕೆಟ್ಸ್‌ ಉಂಟಾದಾಗ ಮಿದುಳಿನ (Brain) ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಬೆಳವಣಿಗೆ ಕುಂಠಿತವಾಗುತ್ತದೆ. ಕಾಲುಗಳ ಮಂಡಿಗಳ ಬೆಳವಣಿಗೆ ಸ್ಥಗಿತವಾಗುತ್ತದೆ. ಮಣಿಕಟ್ಟು ಗಿಡ್ಡವಾಗುತ್ತದೆ. 
ವಿಟಮಿನ್‌ ಡಿ ಪಡೆದುಕೊಳ್ಳಲು ಸೂರ್ಯಸ್ನಾನ (Sunbath) ಭಾರೀ ಉತ್ತಮ. ಇಂದಿನ ಮಕ್ಕಳು ಹೊರಾಂಗಣ (Outdoor) ಆಟವಾಡುವುದು ಕಡಿಮೆ. ಹೀಗಾಗಿ, ಅವರಿಗೆ ಸೂರ್ಯನ ಕಿರಣಗಳಲ್ಲಿರುವ ಶಕ್ತಿ ದೊರೆಯುವುದಿಲ್ಲ. ಮುಂದುವರಿದ ದೇಶಗಳಲ್ಲಿ ಈ ಸಮಸ್ಯೆ ಅತಿ ಹೆಚ್ಚು. ಅಲ್ಲಿ, ಬಿಸಿಲಿಗೆ (Sun Light) ಬರುವ ಮಕ್ಕಳು ಕಡಿಮೆ. ಬಂದರೂ ಸನ್‌ ಸ್ಕ್ರೀನ್‌ ಹಚ್ಚಿಕೊಳ್ಳುತ್ತಾರೆ. ಇದರಿಂದ ಚರ್ಮ (Skin) ವಿಟಮಿನ್‌ ಡಿ ಉತ್ಪಾದನೆ ಮಾಡುವುದಿಲ್ಲ. ಬೆಳಗಿನ ಸಮಯದ ಬಿಸಿಲಿನಲ್ಲಿ ಅರ್ಧ ಗಂಟೆ ಇದ್ದರೆ ವಿಟಮಿನ್‌ ಡಿ ಧಾರಾಳವಾಗಿ ದೊರೆಯುತ್ತದೆ.

ದೇಹಕ್ಕೆ ವಿಟಮಿನ್ ಡಿ ಬೇಕು, ಅತಿಯಾದರೆ ವಿಷವಾಗುತ್ತೆ!

ಇದೊಂದು ವಿಚಿತ್ರ ಸಮಸ್ಯೆ
ಆಹಾರದ (Food) ಮೂಲಕವೂ ವಿಟಮಿನ್‌ ಡಿ ಪಡೆದುಕೊಳ್ಳಬಹುದು. ಸಾಲ್ಮನ್‌ ಮೀನು, ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್‌ ಡಿ (Vitamin D) ಇರುತ್ತದೆ. ಇವುಗಳನ್ನು ಸೇವಿಸಬಹುದು. ಆದರೆ, ಕೆಲವು ಮಕ್ಕಳಲ್ಲಿ ವಿಚಿತ್ರ ಸಮಸ್ಯೆ ಇರುತ್ತದೆ. ಅವರಿಗೆ ವಿಟಮಿನ್‌ ಡಿ ಅಂಶವನ್ನು ಹೀರಿಕೊಳ್ಳುವಲ್ಲಿ ಸಮಸ್ಯೆ ಉಂಟಾಗುತ್ತದೆ. ಇನ್‌ ಫ್ಲಮೇಟರಿ ಬಾವೆಲ್‌ ಡಿಸೀಸ್‌, ಸಿಸ್ಟಿಕ್‌ ಫೈಬ್ರೊಸಿಸ್‌, ಕಿಡ್ನಿ ಸಮಸ್ಯೆಗಳಿಂದ ವಿಟಮಿನ್‌ ಡಿ ದೇಹದಲ್ಲಿ ಹೀರಿಕೆಯಾಗುವುದಿಲ್ಲ. ಇನ್ನು, ಗರ್ಭಿಣಿಯಾಗಿರುವಾಗ, ಅವಧಿಗಿಂತ ಮೊದಲೇ ಹುಟ್ಟಿದ ಮಗುವಿನಲ್ಲಿ ವಿಟಮಿನ್‌ ಡಿ ಕೊರತೆ ಇರುವುದು ಸಹಜ. ಹಾಗೂ ಕೆಲವು ಔಷಧಗಳಿಂದಲೂ ಇದರ ಕೊರತೆ ಆಗಬಹುದು. ಎದೆ ಹಾಲಿನಲ್ಲಿ (Breast Milk) ವಿಟಮಿನ್‌ ಡಿ ಇರುವುದಿಲ್ಲ. ಹೀಗಾಗಿ, ಕೆಲವು ಮಕ್ಕಳಿಗೆ ವಿಟಮಿನ್‌ ಡಿ ಡ್ರಾಪ್ಸ್‌ (Drops) ಹಾಕುವಂತೆ ವೈದ್ಯರು ಸಲಹೆ ನೀಡುತ್ತಾರೆ.  
 

click me!