World Mental Health Day: ಆತಂಕವೇ ಬೇರೆ, ಒತ್ತಡವೇ ಬೇರೆ, ನಿಭಾಯಿಸೋದು ಹೇಗೆ?

By Suvarna News  |  First Published Oct 10, 2022, 5:30 PM IST

ಭಾವನೆ ಹಾಗೂ ಮನಸ್ಸಿನ ಉದ್ವೇಗ ಎರಡೂ ಕಾಣಲು ಒಂದೇ ರೀತಿಯಂತಿದ್ದರೂ ಎರಡೂ ಭಿನ್ನ. ಈ ಎರಡೂ ಮಿಕ್ಸ ಆದರೆ ಮಾನಸಿಕ ಆರೋಗ್ಯ ಹದಗೆಡುತ್ತದೆ. ಹಾಗಾದರೆ ಎರಡು ಭಿನ್ನ ಹೇಗೆ? ಸಮಸ್ಯೆಯಿಂದ ಹೊರಬರುವುದಕ್ಕೆ ಮಾಡಬೇಕಾದ ಕೆಲಸಗಳೇನು? ಈ ಬಗ್ಗೆ ಇಲ್ಲಿದೆ ಮಾಹಿತಿ.


ಹೆಚ್ಚಿನ ಜನರು "ಭಾವನೆ' ಮತ್ತು "ಮನಸ್ಸಿನ ಉದ್ವೇಗ' ಎಂಬ ಪದಗಳು ಒಂದೇ ಎಂದು ಭಾವಿಸುತ್ತಾರೆ. ಇವೆರಡು ಸಮನಾರ್ಥಕವಾದರೂ ಪರಸ್ಪರ ಬದಲಾಯಿಸಲಾಗುವುದಿಲ್ಲ. ಸಾಮ್ಯತೆ ಇದ್ದರೂ ಇವೆರಡರ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಮನಸ್ಸಿನ ಉದ್ವೇಗವು ಪ್ರಜ್ಞಾಪೂರ್ವಕವಾಗಿರುವುದಿಲ್ಲ ಮತ್ತು ಅವು ಹುಟ್ಟುಹಾಕುವ ಉದ್ವೇಗವು ಅನುಭವಗಳ ಮೂಲಕ ಮಾತ್ರ ಅನುಭವಿಸಬಹುದು. ಇವು ಸುಪ್ತಾವಸ್ಥೆಯಲ್ಲಿ ಅಥವಾ ಉಪಪ್ರಜ್ಞೆ ಮನಸ್ಸಿನಲ್ಲಿ ಕಾಣಿಸಿಕೊಳ್ಳುತ್ತವೆ. ಭಾವನೆಗಳು ದೈಹಿಕ ಸಂವೇದನೆಗಳು ಮತ್ತು ಮನಸ್ಸಿನ ಉದ್ವೇಗ ಅನುಭವಗಳೆರಡರಿಂದಲೂ ಹೊರಹೊಮ್ಮುತ್ತವೆ. ಅವು ಪ್ರಜ್ಞಾಪೂರ್ವಕ ಅನುಭವ, ಆಲೋಚನೆ ಮತ್ತು ಗ್ರಹಿಕೆಗಳನ್ನು ಆಧರಿಸಿರಬಹುದು. ಅಂತೆಯೇ, ಆತಂಕ ಮತ್ತು ಖಿನ್ನತೆ ಎರಡು ವಿಭಿನ್ನ ಮಾನಸಿಕ ಆರೋಗ್ಯ ಸಮಸ್ಯೆಗಳು.

ಎಲ್ಲಾ ಖಿನ್ನತೆಯು ಆತಂಕವಲ್ಲ
ಜನರು ಬಳಲುತ್ತಿರುವ ಸಾಮಾನ್ಯ ಮಾನಸಿಕ ಆರೋಗ್ಯ ಕಾಳಜಿಗಳು ಖಿನ್ನತೆ ಮತ್ತು ಆತಂಕ. ಈ ಎರಡು ಅದರದೇ ಆದ ಹಲವು ಪ್ರಮುಖ ಚಿಹ್ನೆಗಳಿವೆ. ಆದರೆ ಎಲ್ಲಾ ಖಿನ್ನತೆಯು ಆತಂಕವಲ್ಲ. ಉದಾಹರಣೆಗೆ, ಕಿರಿಕಿರಿಯು ಆತಂಕದ ಸಾಮಾನ್ಯ ಲಕ್ಷಣವಾಗಿದೆ. ಖಿನ್ನತೆ ಇರುವ ಕೆಲವರು ದುಃಖಕ್ಕಿಂತ ಹೆಚ್ಚು ಕಿರಿಕಿರಿಯುಂಟು ಮಾಡುತ್ತಾರೆ. 

Tap to resize

Latest Videos

ಖಿನ್ನತೆ (Depression) ಎಂದರೇನು?
ನೋವು ಅಥವಾ ಕಷ್ಟಕರವಾದ ಸಂದರ್ಭಗಳಲ್ಲಿ ಕಡಿಮೆ, ದುಃಖ ಅಥವಾ ಹತಾಶತೆಯನ್ನು ಅನುಭವಿಸುವುದು ಸಹಜ. ಅದಾಗ್ಯೂ, ಶೂನ್ಯತೆ ಅಥವಾ ದುಃಖದ ಭಾವನೆಗಳು ಎರಡು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ಅವು ಖಿನ್ನತೆಯ ಲಕ್ಷಣಗಳಾಗಿವೆ. ವಿಶೇಷವಾಗಿ ಸಕಾರಾತ್ಮಕ ಘಟನೆಗಳು ಅಥವಾ ಪರಿಸರದಲ್ಲಿನ ಸುಧಾರಣೆಗಳು ಮನಸ್ಥಿತಿಯನ್ನು ಹೆಚ್ಚಿಸಲು ಸಾಧ್ಯವಾಗದಿದ್ದಾಗ ವ್ಯಕ್ತಿಯು ಖಿನ್ನತೆಗೆ ಒಳಗಾಗಬಹುದು.

ಈ ಮಾನಸಿಕ ಆರೋಗ್ಯ ಅಸ್ವಸ್ಥತೆಯು ಸಹಜ ಕೆಲಸಗಳಲ್ಲಿನ ಆಸಕ್ತಿ ಕಡಿಮೆ, ಚಡಪಡಿಕೆ, ಕಿರಿಕಿರಿ, ಕೋಪ, ನಿಧಾನವಾದ ಭಾವನೆ, ಶಕ್ತಿಯ ಕೊರತೆ, ಹಸಿವು ಮತ್ತು ತೂಕದಲ್ಲಿನ ಬದಲಾವಣೆಗಳು, ಜಠರ ಕರುಳಿನ ಸಮಸ್ಯೆಗಳು, ನಿದ್ರೆಯ ಸಮಸ್ಯೆ ಇತ್ಯಾದಿಗಳಿಂದ ನಿರೂಪಿಸಲ್ಪಟ್ಟಿದೆ. ಇತರೆ ರೋಗಲಕ್ಷಣಗಳು ದೀರ್ಘಕಾಲದ ಆಯಾಸವನ್ನು ಒಳಗೊಂಡಿರುತ್ತವೆ. ಕೇಂದ್ರೀಕರಿಸಲು ತೊಂದರೆ, ಮತ್ತು ಆತ್ಮಹತ್ಯೆ, ಸಾಯುವುದು ಅಥವಾ ಸಾವಿನ ಆಲೋಚನೆಗಳು ಈ ಪ್ರಕ್ರಿಯೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತವೆ.

Feeling Anxiety: ಆತಂಕವೇ? ಸಿಂಪಲ್ಲಾಗಿ ನಿವಾರಿಸ್ಕೊಳಿ

ಆತಂಕ ಎಂದರೇನು?
ಆತAಕವು ನಿರಂತರ ಮತ್ತು ಅತಿಯಾದ ಭಯ ಮತ್ತು ದಿನನಿತ್ಯದ ಕಾರ್ಯಾಚರಣೆಗಳ ಬಗ್ಗೆ ಚಿಂತೆಗಳಿAದ ನಿರೂಪಿಸಲ್ಪಟ್ಟಿದೆ. ಕೆಲವರಿಗೆ ಆತಂಕವಾದಾಗ ಜೋರಾಗಿ ಉಸಿರಾಡುವುದು, ಹೃದಯ ಬಡಿತ ಜೋರಾಗುವುದು, ಬೆವರುವುದು ಮತ್ತು ಆಯಾಸ ಅನುಭವಿಸುತ್ತಾರೆ. ವ್ಯಕ್ತಿಯ ಮಾನಸಿಕ ಆರೋಗ್ಯ ಸ್ಥಿತಿಯು ಒತ್ತಡದ ಪ್ರತಿಕ್ರಿಯೆಯ ಭಾಗವಾಗಿದೆ. ಆತಂಕದ ಮುಖ್ಯ ಅಂಶ ಎಂದರೆ ದೈಹಿಕ ಚಡಪಡಿಕೆ, ಕಿರಿಕಿರಿ, ನಿದ್ರೆಯ ಸಮಸ್ಯೆ, ಭಯ, ವಿನಾಶದ ಭಾವನೆ, ನಿರಂತರ ಆಯಾಸ, ಚಿಂತೆಗಳನ್ನು ನಿರ್ವಹಿಸುವಲ್ಲಿ ತೊಂದರೆಗಳನ್ನು ಅನುಭವಿಸುತ್ತಾರೆ.

ಆತಂಕ ಮತ್ತು ಖಿನ್ನತೆಯ ನಡುವಿನ ಅತಿಕ್ರಮಣ
 ಖಿನ್ನತೆ ಮತ್ತು ಆತಂಕವು ಒಟ್ಟಿಗೆ ಇರಬಹುದು. ಖಿನ್ನತೆಯು ಪ್ಯಾನಿಕ್ ಡಿಸಾರ್ಡರ್ ಅಥವಾ ನಿರಂತರ ಆತಂಕದಿAದ ಪ್ರಚೋದಿಸಬಹುದು ಮತ್ತು ಆತಂಕವು ಖಿನ್ನತೆಯ ಲಕ್ಷಣವಾಗಿರಬಹುದು. ಆತಂಕ, ಖಿನ್ನತೆ ಅಥವಾ ಎರಡೂ ಪರಿಸ್ಥಿತಿಗೆ ಒಳಗಾಗಬಹುದು. ಒಂದೇ ರೀತಿಯ ರೋಗಲಕ್ಷಣಗಳಿಗೆ ಒಳಗಾಗುವುದಿಲ್ಲವಾದರೂ, ಎರಡರ ಹಲವಾರು ಅತಿಕ್ರಮಿಸುವ ಲಕ್ಷಣಗಳಿವೆ. ಖಿನ್ನತೆ ಅಥವಾ ಆತಂಕದಿAದ ವ್ಯಕ್ತಿಯು ಅನುಭವಿಸಬಹುದಾದ ಲಕ್ಷಣಗಳು ಬೇರೆ ಬೇರೆ ರೀತಿಯಲ್ಲಿರುತ್ತದೆ. ದೇಹದ ಶಕ್ತಿಯಲ್ಲಿ ಬದಲಾವಣೆ, ಸ್ಪಷ್ಟ ಕಾರಣವಿಲ್ಲದೆ ಹೊಟ್ಟೆಯ ಸಮಸ್ಯೆ, ನೋವು, ಹೆಚ್ಚಿದ ಕಿರಿಕಿರಿ, ನೆನಪಿನ ತೊಂದರೆ, ಗಮನ ಮತ್ತು ಏಕಾಗ್ರತೆ, ಮತ್ತು ನಿದ್ರೆಯ ಮಾದರಿಗಳಲ್ಲಿನ ಬದಲಾವಣೆಗಳು ಉಂಟಾಗುತ್ತದೆ.

Loneliness and Aging: ಹೀಗೆ ಬದುಕಿದ್ರೆ ಬೇಗ ವೃದ್ಧರಾಗ್ತೀರಿ, ಎಚ್ಚರ

ಖಿನ್ನತೆ ಮತ್ತು ಆತಂಕ ಹೇಗೆ ಭಿನ್ನವಾಗಿವೆ? 
ಖಿನ್ನತೆ ಮತ್ತು ಆತಂಕವು ಮೂಡ್ ಡಿಸಾರ್ಡರ್‌ಗಳ ವಿಧಗಳಾಗಿವೆ. ಮುಖ್ಯ ರೋಗಲಕ್ಷಣಗಳು ಎರಡು ಪರಿಸ್ಥಿತಿಗಳ ನಡುವಿನ ಪ್ರಮುಖ ವ್ಯತ್ಯಾಸಗಳಾಗಿವೆ. ಖಿನ್ನತೆಯು ದುಃಖದ ನಿರಂತರ ಭಾವನೆಯನ್ನು ತರುತ್ತದೆ. ವ್ಯಕ್ತಿಯು ಇಷ್ಟವಾದ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಹಾಗೂ ಶಕ್ತಿಯ ಕೊರತೆ ಇರುತ್ತದೆ. ಖಿನ್ನತೆ ಇರುವ ಸ್ವತಃ ನೋವನ್ನು ಅನುಭವಿಸುತ್ತಾರೆ. ಆತಂಕವು ತೀವ್ರವಾದ, ಅನಿಯಂತ್ರಿತ ಚಿಂತೆ ಅಥವಾ ಭಯವನ್ನು ರೂಪಿಸುತ್ತದೆ. ಆತಂಕದ ಮಟ್ಟ ಮತ್ತು ಅಸ್ವಸ್ಥತೆಯ ಪ್ರಕಾರವನ್ನು ಅವಲಂಬಿಸಿ, ಹೊಸ ಜನರನ್ನು ಭೇಟಿ ಮಾಡುವಂತಹ ದೈನಂದಿನ ಚಟುವಟಿಕೆಗಳಲ್ಲಿ ವ್ಯಕ್ತಿಯು ಚಿಂತೆಯನ್ನು ಅನುಭವಿಸಬಹುದು.

ಧನಾತ್ಮಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಖಿನ್ನತೆ ಮತ್ತು ಆತಂಕವನ್ನು ನಿಭಾಯಿಸಲು  ಸಲಹೆಗಳು ಇಲ್ಲಿವೆ
1 ಸ್ವಯಂ ಆರೈಕೆ

ವ್ಯಕ್ತಿಯು ದೈಹಿಕ ಹಾಗೂ ಮಾನಸಿಕವಾಗಿ ಚೆನ್ನಾಗಿರಬೇಕು ಎಂದರೆ ಅಲ್ಲಿ ಸ್ವಯಂ ಆರೈಕೆ ಎನ್ನುವುದು ಬಹಳ ಮುಖ್ಯ. ಸ್ವ ಆರೈಕೆಯು ಒತ್ತಡವನ್ನು ಕಡಿಮೆ ಮಾಡಲು, ಅನಾರೋಗ್ಯದ ಸಾಧ್ಯತೆಗಳನ್ನು ಕಡಿಮೆ ಮಾಡಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಿನ ನಿತ್ಯಯ ಸ್ವಯಂ ಆರೈಕೆ ಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ಮೀಸಲಿಡುವುದರಿಂದ ಗಮನಾರ್ಹ ಪರಿಣಾಮವನ್ನು ಬಿಡಬಹುದು. ಅದಕ್ಕಾಗಿ ಕೆಲ ಚಟುವಟಿಕೆ ಮತ್ತು ನಿಯಮಿತ ವ್ಯಾಯಾಮ ಮಾಡುವುದು, ನಿದ್ರೆಗೆ ಆದ್ಯತೆ ನೀಡುವುದು, ಸ್ವಯಂ ಧನ್ಯವಾದ ಹೇಳುವುದು, ಸಕಾರಾತ್ಮಕತೆಯ ಮೇಲೆ ಕೇಂದ್ರೀಕರಿಸುವುದು ಹೀಗೆ ಮಾಡುವುದು ಬದಲಾವಣೆ ಕಾಣಬಹುದು. 

Mental Health: ಜೀವ ಹಿಂಡುವ ಒಂಟಿತನದಿಂದ ಹೊರ ಬರುವುದು ಹೇಗೆ?

2. ಧ್ಯಾನ (Meditation)
ಆಳವಾದ ವಿಶ್ರಾಂತಿ, ಶಾಂತವಾದ ಮನಸ್ಥಿತಿಗೆ ಧ್ಯಾನ ಒಂದು ಉತ್ತಮ ಮಾರ್ಗವಾಗಿದೆ. ಧ್ಯಾನದ ಸಮಯದಲ್ಲಿ ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಮನಸ್ಸಿನಲ್ಲಿ ತುಂಬಿರುವ ಮತ್ತು ಒತ್ತಡವನ್ನು ಉಂಟುಮಾಡುವ ಎಲ್ಲಾ ಗೊಂದಲಮಯ ಆಲೋಚನೆಗಳನ್ನು ತೆಗೆದುಹಾಕುತ್ತದೆ. ಚಟುವಟಿಕೆಯು ದೈಹಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸುತ್ತದೆ.

3. ಜರ್ನಲ್ ನಿರ್ವಹಿಸಿ 
Journal ನಿರ್ವಹಿಸುವುದು ಎಂದರೆ ಅದು ಡೈರಿ ಬರೆಯುವುದು ಎಂದು. ಇದೊಂದು ಉತ್ತಮ ಅಭ್ಯಾಸವಾಗಿದೆ. ಮಾನಸಿಕ ಆರೋಗ್ಯವನ್ನು ನಿರ್ವಹಿಸುವುದಕ್ಕೆ ಸಹಾಯ ಮಾಡುತ್ತದೆ. ಅಗಾಧ ಭಾವನೆಗಳನ್ನು ಲಿಖಿತ ರೂಪದಲ್ಲಿ ವ್ಯಕ್ತಪಡಿಸುವ ಮೂಲಕ ನಿಭಾಯಿಸಲು ಇದು ಸಹಾಯ ಮಾಡುತ್ತದೆ. ಸಮಸ್ಯೆ, ಕಾಳಜಿ, ಭಯಗಳಿಗೆ ಆದ್ಯತೆ ನೀಡುವುದು. ನಕಾರಾತ್ಮಕ ಆಲೋಚನೆಗಳು ಮತ್ತು ನಡವಳಿಕೆಗಳನ್ನು ಗುರುತಿಸಿ ಮತ್ತು ಸಕಾರಾತ್ಮಕ ಸ್ವ ಚರ್ಚೆಯನ್ನು ಈ ಮೂಲಕ ಮಾಡಬಹುದು. ಇದರಿಂದ ನಮ್ಮ ಚಿತ್ತ ಅಂದರೆ ಆಲೋಚನೆಯನ್ನು ಸುಧಾರಿಸಿಕೊಳ್ಳಲು ಈ ಡೈರಿ ಬರೆಯುವುದು ಸಹಾಯ ಮಾಡುತ್ತದೆ.

4. ಮೈಂಡ್‌ಫುಲ್‌ನೆಸ್ (Mindfulness)
Mindfulness, ಒಂದು ಸಾಧನ ಎಂದರೆ ತಪ್ಪಾಗುವುದಿಲ್ಲ. ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ನಿರ್ವಹಿಸುತ್ತದೆ. ಯೋಗ, ಉಸಿರಾಟ ಮತ್ತು ಧ್ಯಾನದ ತಂತ್ರಗಳೊAದಿಗೆ ಪ್ರಸ್ತುತ ಕ್ಷಣಕ್ಕೆ ಗಮನ ಕೊಡುವ ಒಂದು ಮಾರ್ಗವಾಗಿದೆ. ಅಂತಹ ಸಾವಧಾನತೆಯ ಅಭ್ಯಾಸಗಳ ಮೂಲಕ, ಒಬ್ಬರು ಭಾವನೆಗಳು ಮತ್ತು ಆಲೋಚನೆಗಳ ಬಗ್ಗೆ ಹೆಚ್ಚು ಜಾಗೃತರಾಗಬಹುದು ಮತ್ತು ಅವುಗಳನ್ನು ನಿರ್ವಹಿಸುವಲ್ಲಿ ಹೆಚ್ಚು ಸಮರ್ಥರಾಗಬಹುದು.

Mental Health: ಪಂಚಸೂತ್ರಗಳ ಫಾಲೋ ಮಾಡಿದರೆ, ನೆಮ್ಮದಿ ಜೀವನ ನಿಮ್ಮದು

5. ಮಾನಸಿಕ ಆರೋಗ್ಯ ತಜ್ಞರು 
ರೋಗಲಕ್ಷಣಗಳು ತೀವ್ರ ಮತ್ತು ದುಃಖಕರವಾಗಿದ್ದರೆ, ವ್ಯಕ್ತಿಯು ತಜ್ಞರ ಬಳಿ ಸಹಾಯ ಪಡೆಯಬೇಕು.  ಬೆಂಬಲಿಸುವ ಗುಂಪು, ಮನಶ್ಶಾಸ್ತçಜ್ಞರು ಮತ್ತು ಮನೋವೈದ್ಯರು ಸಮಸ್ಯೆಗಳನ್ನು ನಿರ್ಣಯಿಸಲು ವ್ಯಕ್ತಿ, ಗುಂಪು, ಕುಟುಂಬ ಮತ್ತು ಸಮುದಾಯಗಳೊಂದಿಗೆ ಕೆಲಸ ಮಾಡುತ್ತಾರೆ. ಮಾನಸಿಕ ಆರೋಗ್ಯ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ಸೂಕ್ತವಾದ ಚಿಕಿತ್ಸೆ ಮತ್ತು ಔಷಧಿಗಳನ್ನು ಪಡೆಯಲು, ವ್ಯಕ್ತಿಯು ತಮ್ಮ ಭಾವನೆಗಳನ್ನು ಮತ್ತು ಮನಸ್ಸಿನ ಉದ್ವೇಗವನ್ನು ತಜ್ಞರೊಂದಿಗೆ ಪ್ರಾಮಾಣಿಕವಾಗಿ ಹಂಚಿಕೊಳ್ಳಬೇಕು.

click me!