CT Scans and Cancer: ಪದೇ ಪದೇ ಸಿಟಿ ಸ್ಕ್ಯಾನ್ ಮಾಡಿಸೋದು ಅಪಾಯ, ಕಾಡ್ಬಹುದು ಕ್ಯಾನ್ಸರ್

Published : Apr 23, 2025, 12:28 PM ISTUpdated : Apr 23, 2025, 12:38 PM IST
 CT Scans and Cancer: ಪದೇ ಪದೇ ಸಿಟಿ ಸ್ಕ್ಯಾನ್ ಮಾಡಿಸೋದು ಅಪಾಯ, ಕಾಡ್ಬಹುದು ಕ್ಯಾನ್ಸರ್

ಸಾರಾಂಶ

ಸಿಟಿ ಸ್ಕ್ಯಾನ್‌ನಿಂದ ರೋಗ ಪತ್ತೆ ಸುಲಭವಾದರೂ, ಪದೇ ಪದೇ ಮಾಡಿಸಿಕೊಳ್ಳುವುದು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಅಧ್ಯಯನದ ಪ್ರಕಾರ, ವಾರ್ಷಿಕವಾಗಿ ಶೇ.೫ರಷ್ಟು ಹೊಸ ಕ್ಯಾನ್ಸರ್ ಪ್ರಕರಣಗಳಿಗೆ ಸಿಟಿ ಸ್ಕ್ಯಾನ್ ಕಾರಣ. ವಿಕಿರಣವು ಜೀವಕೋಶಗಳನ್ನು ಹಾನಿಗೊಳಿಸಿ, ಕ್ಯಾನ್ಸರ್‌ಗೆ ದಾರಿ ಮಾಡಿಕೊಡಬಹುದು. ಸಾಧ್ಯವಾದರೆ, ಎಂಆರ್‌ಐ ಅಥವಾ ಅಲ್ಟ್ರಾಸೌಂಡ್‌ನಂತಹ ಪರ್ಯಾಯಗಳನ್ನು ಪರಿಗಣಿಸಿ.

ಸಿಟಿ ಸ್ಕ್ಯಾನ್ (City Scan) ಮೂಲಕ ರೋಗ ಪತ್ತೆ ಮಾಡೋದು ಸುಲಭ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ವೈದ್ಯರು, ಸಣ್ಣ ರೋಗ ಇರಲಿ ಇಲ್ಲ ದೊಡ್ಡ ಖಾಯಿಲೆ ಇರಲಿ, ತಕ್ಷಣ ಸಿಟಿ ಸ್ಕ್ಯಾನ್ ಗೆ ಶಿಫಾರಸ್ಸು ಮಾಡ್ತಾರೆ. ರೋಗಗಳನ್ನು ನಿಖರವಾಗಿ ಮತ್ತು ಸುಲಭವಾಗಿ ಗುರುತಿಸಬಹುದಾದ ತಂತ್ರಜ್ಞಾನ  ಸಿಟಿ ಸ್ಕ್ಯಾನ್ ಆಗಿರುವ ಕಾರಣ, ವೈದ್ಯರಿಗೆ ಖಾಯಿಲೆ ಬಗ್ಗೆ ಸ್ಪಷ್ಟನೆ ಸಿಗುತ್ತದೆ. ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಬಹುದು. ಆದ್ರೆ ಕೆಲ ಅನುಕೂಲ ಹೊಂದಿರುವ ಈ ಸಿಟಿ ಸ್ಕ್ಯಾನ್ ಬಗ್ಗೆ ಅಧ್ಯಯನವೊಂದು ಕಳವಳ ವ್ಯಕ್ತಪಡಿಸಿದೆ.  

ರೋಗಿಗಳು ತಮ್ಮ ರೋಗದ ಸ್ಥಿತಿ ಪತ್ತೆಗೆ ಪದೇ ಪದೇ ಸಿಟಿ ಸ್ಕ್ಯಾನ್ ಗೆ ಒಳಗಾಗ್ತಾರೆ. ಆದ್ರೆ ಈ ಸಿಟಿ ಸ್ಕ್ಯಾನ್ ಕೂಡ ಸುರಕ್ಷಿತವಲ್ಲ. ನೀವು ಪದೇ ಪದೇ ಸಿಟಿ ಸ್ಕ್ಯಾನ್ ಗೆ ಒಳಗಾದ್ರೆ ಅದು ನಿಮ್ಮ ಆರೋಗ್ಯದ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಸಿಟಿ ಸ್ಕ್ಯಾನ್ ವಿಕಿರಣಗಳು ಸುರಕ್ಷಿತವೇ ಇಲ್ಲವೇ ಎನ್ನುವ ಬಗ್ಗೆ ಅಧ್ಯಯನ ನಡೆದಿದೆ.  

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವ 5 ಸರಳ ವಿಧಾನಗಳು ಇಲ್ಲಿವೆ

ಕ್ಯಾನ್ಸರ್ (Cancer) ಗೆ ಸಿಟಿ ಸ್ಕ್ಯಾನ್ ಕಾರಣ ! : JAMA ಇಂಟರ್ನಲ್ ಮೆಡಿಸಿನ್ನಲ್ಲಿ ಅಧ್ಯಯನದ ವರದಿ ಪ್ರಕಟವಾಗಿದೆ. ಅದ್ರ ಪ್ರಕಾರ, ಪದೇ ಪದೇ ಸಿಟಿ ಸ್ಕ್ಯಾನ್ ಗೆ ಒಳಗಾಗುವ ವ್ಯಕ್ತಿ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಅತಿ ಹೆಚ್ಚಿರುತ್ತದೆ ಎಂಬ ಸತ್ಯ ಹೊರ ಬಿದ್ದಿದೆ. ಈ ಅಧ್ಯಯನದ ಪ್ರಕಾರ, ಪ್ರತಿ ವರ್ಷ ಶೇಕಡಾ 5 ರಷ್ಟು ಹೊಸ ಕ್ಯಾನ್ಸರ್ ಪ್ರಕರಣಗಳಿಗೆ ಸಿಟಿ ಸ್ಕ್ಯಾನ್ ಕಾರಣ. ಸಿಟಿ ಸ್ಕ್ಯಾನ್ ವಿಕಿರಣದಿಂದ ಕ್ಯಾನ್ಸರ್ ಉಂಟಾಗುತ್ತದೆ. ವೈದ್ಯಕೀಯ ವಿಜ್ಞಾನದ ಪ್ರಕಾರ, ಸಿಟಿ ಸ್ಕ್ಯಾನ್ನ ಅಪಾಯಕಾರಿ ವಿಕಿರಣವು ಕ್ಯಾನ್ಸರ್ಗೆ ಕಾರಣವಾಗುತ್ತದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಸಿಟಿ ಸ್ಕ್ಯಾನ್ನಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚು.  ಪದೇ ಪದೇ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವುದರಿಂದ ದೇಹ ಸೇರುವ ವಿಕಿರಣ ಜೀವಕೋಶಗಳನ್ನು ಹಾನಿಗೊಳಿಸುತ್ತದೆ. ಜೀವಕೋಶದ ರೂಪಾಂತರಕ್ಕೂ ಇದು ಕಾರಣವಾಗುತ್ತದೆ. ಇದೆ ಮುಂದೆ  ಕ್ಯಾನ್ಸರ್ ಗೆ ಕಾರಣವಾಗುತ್ತದೆ. ವಿಶೇಷವಾಗಿ ಎದೆ ಮತ್ತು ಹೊಟ್ಟೆ ಸಿಟಿ ಸ್ಕ್ಯಾನ್ಗಳಲ್ಲಿ, ವಿಕಿರಣದ ಪ್ರಮಾಣ ಹೆಚ್ಚಾಗಿರುತ್ತದೆ. ಇದು ದೀರ್ಘಕಾಲೀನ ಸಮಸ್ಯೆಗೆ ಕಾರಣವಾಗುತ್ತದೆ. 

ಸಿಟಿ ಸ್ಕ್ಯಾನ್ ಎಷ್ಟು ವಿಕಿರಣ ಹೊಂದಿರುತ್ತದೆ? : ಸಿಟಿ ಸ್ಕ್ಯಾನ್ 100 ರಿಂದ 500 ಎಕ್ಸ್-ಕಿರಣಗಳಿಗೆ ಸಮಾನವಾದ ವಿಕಿರಣವನ್ನು ಉತ್ಪಾದಿಸುತ್ತದೆ. ರೋಗಿ ಪದೇ ಪದೇ ಸಿಟಿ ಸ್ಕ್ಯಾನ್ ಗೆ ಒಳಗಾಗ್ತಿದ್ದರೆ   ದೇಹದ ಮೇಲೆ ವಿಕಿರಣದ ಹೊರೆ ಹೆಚ್ಚಾಗುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಸಿಟಿ ಸ್ಕ್ಯಾನ್ನಿಂದ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ. ತಜ್ಞರ ಪ್ರಕಾರ, ಸಿಟಿ ಸ್ಕ್ಯಾನ್ ನಿಂದ ದೂರ ಇರುವುದು ಬಹಳ ಉತ್ತಮ.

Hair Spa: ಹೇರ್ ಸ್ಪಾನಿಂದ ಪ್ರಯೋಜನ ಏನು? ನೀತಾ ಅಂಬಾ

ಸಿಟಿ ಸ್ಕ್ಯಾನ್ ಗೆ ಪರ್ಯಾಯ ಏನು? : ಅನೇಕ ಬಾರಿ, ಅನೇಕ ಖಾಯಿಲೆಗೆ ಸಿಟಿ ಸ್ಕ್ಯಾನ್ ಅನಿವಾರ್ಯ. ಅಂಥವರು ಏನು ಮಾಡ್ಬೇಕು ಎನ್ನುವ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ. ತಜ್ಞರ ಪ್ರಕಾರ, ಆದಷ್ಟು ಸಿಟಿ ಸ್ಕ್ಯಾನ್ ನಿಂದ ನೀವು ದೂರ ಇರಬೇಕು. ಸಿಟಿ ಸ್ಕ್ಯಾನ್ ಬದಲು ಎಂಆರ್ ಐ ಅಥವಾ ಅಲ್ಟ್ರಾಸೌಂಡ್ ನಿಂದ ನಿಮ್ಮ ರೋಗ ಪತ್ತೆ ಆಗ್ಬಹುದೇ ಎಂಬುದನ್ನು ವಿಚಾರಿಸಿ, ಸಿಟಿ ಸ್ಕ್ಯಾನ್ ಬದಲು ಈ ಚಿಕಿತ್ಸೆಗೆ ಒಳಗಾಗಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ
ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?