ಬ್ಯಾಗ್​ನಲ್ಲಿ ಹೃದಯ ಹೊತ್ತು ಸಾಗುವ ಮಹಿಳೆ! ಹಾರ್ಟೇ ಇಲ್ಲದ ಈಕೆ ವಿಚಿತ್ರ ಸ್ಟೋರಿ ಕೇಳಿ..

Published : Apr 21, 2025, 05:14 PM ISTUpdated : Apr 21, 2025, 05:32 PM IST
ಬ್ಯಾಗ್​ನಲ್ಲಿ ಹೃದಯ ಹೊತ್ತು ಸಾಗುವ ಮಹಿಳೆ! ಹಾರ್ಟೇ ಇಲ್ಲದ ಈಕೆ ವಿಚಿತ್ರ ಸ್ಟೋರಿ ಕೇಳಿ..

ಸಾರಾಂಶ

ಲಂಡನ್​ನ ಈ ಮಹಿಳೆಗೆ ಹೃದಯವೇ ಇಲ್ಲ. ಬ್ಯಾಗ್​ನಲ್ಲಿ ಇರುವ ಕೃತಕ ಹೃದಯದಿಂದಲೇ ಈಕೆ ಕಾರ್ಯ ನಿರ್ವಹಿಸುತ್ತಾಳೆ. ಅಬ್ಬಬ್ಬಾ ಎನ್ನುವ ಸ್ಟೋರಿ ಕೇಳಿ...   

ಏನಾದರೂ ಕೆಟ್ಟ ಕೆಲಸ ಮಾಡಿದಾಗ ಛೇ ಅವರಿಗೆ ಹೃದಯನೇ ಇಲ್ಲಾ ಅನ್ನೋದು ಮಾಮೂಲು. ಆದರೆ ನಿಜಕ್ಕೂ ಹೃದಯನೇ ಇಲ್ಲದಿದ್ದರೆ? ಇದೇನಿದು ತಮಾಷೇನಾ ಎಂದು ಕೇಳಬಹುದು. ಆದರೆ ಇಲ್ಲೊಬ್ಬ ಮಹಿಳೆಗೆ ನಿಜಕ್ಕೂ ಹೃದಯ ಇಲ್ಲ. ಅವರ ಹೃದಯ ಇರುವುದು ಅವರ ಬ್ಯಾಗ್​ನಲ್ಲಿ. ಯಾರದ್ದೋ ಜೀವ ಗಿಳಿಯಲ್ಲಿತ್ತು, ಇನ್ನೆಲ್ಲೋ ಇತ್ತು ಎಂದು ಕಥೆಯಲ್ಲಿ ಕೇಳಿದಂತೆಯೇ ನಿಜ ಜೀವನದಲ್ಲಿ ಈ ಮಹಿಳೆಯ ಜೀವ ಇರುವುದು ಆಕೆ ಹೊತ್ತುಕೊಳ್ಳುವ ಬ್ಯಾಗ್​ನಲ್ಲಿ! ವಿಚಿತ್ರ ಎಂದರೂ ಹೃದಯವೇ ಇಲ್ಲದ ಈ ಮಹಿಳೆಯರ ಅಬ್ಬಾ ಎನ್ನುವ ಸ್ಟೋರಿ ಇಲ್ಲಿದೆ ನೋಡಿ.

ಈಕೆಯ ಹೆಸರು ಸೆಲ್ವಾ ಹುಸೇನ್.  ಲಂಡನ್​ನ ಮಹಿಳೆ ಇವರು. ಇವರು  ಯಾವಾಗಲೂ ತಮ್ಮ ಬೆನ್ನಿನ ಮೇಲೆ 6 ಕಿಲೋಗ್ರಾಂಗಳಷ್ಟು ತೂಕದ ರಕ್‌ಬ್ಯಾಕ್ ಅನ್ನು ಹೊತ್ತುಕೊಂಡು ಹೋಗುತ್ತಾರೆ, ಏಕೆಂದರೆ ಅದರಲ್ಲಿ ಅವರ ಹೃದಯ ಇದೆ!  ಸೆಲ್ವಾ 2017 ರಲ್ಲಿ ಜೀವಕ್ಕೆ ಅಪಾಯ ಎದುರಾಗುವಂಥ ಸಮಸ್ಯೆಗೆ ಒಳಗಾದ ಸಂದರ್ಭದಲ್ಲಿ ಅವರಿಗೆ ಆಪರೇಷನ್​ ಮಾಡಲಾಗಿತ್ತು. ಆ ಸಮಯದಲ್ಲಿ,  ಅವರ ಹೃದಯವನ್ನು ಈ ಬ್ಯಾಗ್​ನಲ್ಲಿ ಹಾಕಲಾಗಿತ್ತು. ಅಂದ  ಮಾತ್ರಕ್ಕೆ ಇದು ಅವರ ಅಸಲಿ ಹೃದಯವು ಅಲ್ಲ, ಬದಲಿಗೆ  ಕೃತಕ ಹೃದಯ. ಈ ಬ್ಯಾಗ್​ನಲ್ಲಿ  ಬ್ಯಾಟರಿಗಳು, ವಿದ್ಯುತ್ ಮೋಟಾರ್ ಮತ್ತು ಪಂಪ್ ಇದ್ದು, ಅದು ಅವರ ಎದೆಯಲ್ಲಿರುವ ಪ್ಲಾಸ್ಟಿಕ್ ಕೋಣೆಗಳಿಗೆ ಶಕ್ತಿ ತುಂಬಲು ಟ್ಯೂಬ್‌ಗಳ ಮೂಲಕ ಗಾಳಿಯನ್ನು ತಳ್ಳುತ್ತದೆ, ಇದು ಅವರ ದೇಹದ ಸುತ್ತಲೂ ರಕ್ತವನ್ನು ತಳ್ಳುತ್ತದೆ. ಈ ಮೂಲಕ ಮಾಮೂಲು ಹೃದಯ ಮಾಡುವ ಕೆಲಸವನ್ನು ಈ ಕೃತಕ ಹೃದಯ ಮಾಡುತ್ತದೆ. 

ಇನ್ಸುಲಿನ್​, ಮಾತ್ರೆ ಇಲ್ಲದೇ ಮಧುಮೇಹದಿಂದ ಮುಕ್ತಿ ಪಡೆದ ಸಚಿವ ಅಮಿತ್​ ಶಾ ಮಾತು ಕೇಳಿ

 ಜೂನ್ 2017 ರಲ್ಲಿ ಅವರಿಗೆ ತೀವ್ರ ಉಸಿರಾಟದ ತೊಂದರೆ ಉಂಟಾದಾಗ ಅವರು ಹೇಗೊ ಕಾರನ್ನು ಓಡಿಸಿಕೊಂಡು  ಎಸೆಕ್ಸ್‌ನ ಕ್ಲೇಹಾಲ್‌ನಲ್ಲಿರುವ ತಮ್ಮ ಕುಟುಂಬ ವೈದ್ಯರ ಬಳಿಗೆ ಹೋಗುವಲ್ಲಿ  ಯಶಸ್ವಿಯಾದರು.  ಅಲ್ಲಿ ಪರೀಕ್ಷೆ ಮಾಡಿದಾಗ ಅವರು ತೀವ್ರ ಹೃದಯ ವೈಫಲ್ಯದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದರು. ವೈದ್ಯರು ಅವರ ಜೀವವನ್ನು ಉಳಿಸಲು ಹೆಣಗಾಡುತ್ತಿದ್ದಂತೆ ಅವರನ್ನು ನಾಲ್ಕು ದಿನಗಳ ನಂತರ ಇನ್ನೊಂದು ಆಸ್ಪತ್ರೆಗೆ ಶಿಫ್ಟ್​ ಮಾಡಲಾಯಿತು.  ಅವರ ದುರ್ಬಲ ಹೃದಯಕ್ಕೆ ಸಹಾಯ ಮಾಡಲು ಬೆಂಬಲ ಪಂಪ್ ಮಾಡುವುದೂ ಕಷ್ಟವಾಗಿತ್ತು.  ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗದಷ್ಟು ಹೃದಯ ದುರ್ಬಲವಾಗಿತ್ತು.  

ಆಗ ಆಕೆಯ ಪತಿ ಸೆಲ್ವಾಗೆ ಕೃತಕ ಹೃದಯ ನೀಡಲು ಒಪ್ಪಿಕೊಂಡರು. ವೈದ್ಯರು ಆಕೆಯ ರೋಗಪೀಡಿತ ನೈಸರ್ಗಿಕ ಹೃದಯವನ್ನು ತೆಗೆದುಹಾಕಿ, ಅದನ್ನು ಕೃತಕ ಇಂಪ್ಲಾಂಟ್ ಮತ್ತು ಬೆನ್ನಿನ ಮೇಲೆ ವಿಶೇಷ ಘಟಕದೊಂದಿಗೆ ಬದಲಾಯಿಸಿದರು. ಇದೇನಾದರೂ ಕೈಕೊಟ್ಟರೆ,  ಮತ್ತೊಂದು ಹೃದಯವನ್ನು ಅಳವಡಿಸಲು ಅವಕಾಶ ಇದೆ.  ಕೃತಕ ಹೃದಯವು ಆಕೆಯ ದೇಹದ ಸುತ್ತಲೂ ನಿಮಿಷಕ್ಕೆ 138 ಬಡಿತಗಳಲ್ಲಿ ರಕ್ತವನ್ನು ಪೂರೈಕೆ ಮಾಡುತ್ತದೆ. ಅದು ಆಕೆಯ ಎದೆ ಕಂಪಿಸುವಂತೆ ಮಾಡುತ್ತದೆ. ಆಕೆಯ ಬೆನ್ನುಹೊರೆಯಲ್ಲಿರುವ ಮೋಟಾರ್ ನಿರಂತರವಾಗಿ ಪಂಪ್ ಮಾಡುತ್ತದೆ ಮತ್ತು ಗಿರ್ರನೆ ಶಬ್ದವನ್ನು ಉತ್ಪಾದಿಸುತ್ತದೆ.

ಬೆನ್ನುಹೊರೆಗೆ ಸಂಪರ್ಕಗೊಂಡಿರುವ ಎರಡು ದೊಡ್ಡ ಪ್ಲಾಸ್ಟಿಕ್ ಟ್ಯೂಬ್‌ಗಳು ಆಕೆಯ ಹೊಟ್ಟೆಯ ಮೂಲಕ ಆಕೆಯ ದೇಹವನ್ನು ಪ್ರವೇಶಿಸಿ ಎದೆಯವರೆಗೆ ಚಲಿಸುತ್ತವೆ. ನಂತರ ಅವು ಆಕೆಯ ಎದೆಯ ಕುಹರದೊಳಗಿನ ಎರಡು ಬಲೂನ್‌ಗಳನ್ನು ಗಾಳಿಯಿಂದ ತುಂಬಿಸುತ್ತವೆ, ಇದು ಆಕೆಯ ದೇಹದ ಸುತ್ತಲೂ ರಕ್ತವನ್ನು ತಳ್ಳಲು ನಿಜವಾದ ಹೃದಯದ ಕೋಣೆಗಳಂತೆ ಕಾರ್ಯನಿರ್ವಹಿಸುತ್ತದೆ. £86,000 (ರೂ. 88.72 ಲಕ್ಷ) ವೆಚ್ಚದ ಕೃತಕ ಹೃದಯವನ್ನು ಅಮೆರಿಕದ ಕಂಪನಿಯೊಂದು ತಯಾರಿಸಿ ಆರು ಗಂಟೆಗಳ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸೆಲ್ವಾ ಅವರ ದೇಹದೊಳಗೆ ಅಳವಡಿಸಿತು. ಈ ಶಸ್ತ್ರಚಿಕಿತ್ಸೆಯನ್ನು ಡಾ. ಡಯಾನಾ ಗಾರ್ಸಿಯಾ ಸಾಯೆಜ್ ನಿರ್ವಹಿಸಿದರು ಮತ್ತು ಹೇರ್ಫೀಲ್ಡ್ ನ ಕಸಿ ಶಸ್ತ್ರಚಿಕಿತ್ಸೆಯ ಮುಖ್ಯಸ್ಥ ಆಂಡ್ರೆ ಸೈಮನ್ ಸಹಾಯ ಮಾಡಿದರು.

ಎರಡೇ ಎರಡೇ ಪುಡಿ- ಬಿಳಿಗೂದಲು ಫುಲ್​ ಮಾಯ: ಪ್ರಖ್ಯಾತ ಆಯುರ್ವೇದ ವೈದ್ಯರ ಸಲಹೆ ಕೇಳಿ
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ
ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?