ಲೂಸ್ ಮೋಷನ್ ಆದ್ರೆ ಸಾಕಪ್ಪ ಸಾಕು ಎನ್ನಿಸುತ್ತದೆ. ಔಷಧಿ ತೆಗೆದುಕೊಂಡ್ರೆ ಅದ್ರ ಸೈಡ್ ಇಫೆಕ್ಟ್ ಜಾಸ್ತಿ. ಹಾಗಾಗಿ ಬೇಧಿಯಾದ್ರೆ ಔಷಧಿ ತೆಗೆದುಕೊಳ್ಳುವ ಬದಲು ಮನೆ ಮದ್ದನ್ನು ಬಳಸಿ ನೋಡಿ.
ಲೂಸ್ ಮೋಷನ್ ಯಾವಾಗ ಶುರುವಾಗುತ್ತೆ ಅನ್ನೋದು ಗೊತ್ತಾಗೋದಿಲ್ಲ. ಆಹಾರದಲ್ಲಿ ಏರುಪೇರಾದ ತಕ್ಷಣ ಕೆಲವರಿಗೆ ಬೇಧಿ ಶುರುವಾಗುತ್ತದೆ. ನಾಲ್ಕೈದು ಬಾರಿ ಹೋದ್ರೆ ಹೇಗೋ ತಡೆದುಕೊಳ್ಳಬಹುದು. ಆದ್ರೆ ದಿನಕ್ಕೆ 15 – 20 ಸಲ ಹೋಗುವವರಿದ್ದಾರೆ. ಇದ್ರಿಂದ ದೇಹದಲ್ಲಿರುವ ನೀರಿನ ಅಂಶ ಕಡಿಮೆಯಾಗುತ್ತದೆ. ವಿಪರೀತ ಸುಸ್ತು ಕಾಡುತ್ತದೆ. ಹಾಸಿಗೆಯಿಂದ ಏಳಲೂ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಬರುತ್ತದೆ. ಸಾಮಾನ್ಯವಾಗಿ ಬೇಧಿ ಅಂದ್ರೆ ಜನರು ನಗ್ತಾರೆ. ಆದ್ರೆ ಬೇಧಿ ಸಮಸ್ಯೆ ಶುರುವಾದಾಗ್ಲೇ ಅದ್ರ ಕಷ್ಟ ಗೊತ್ತಾಗೋದು. ಮಾರುಕಟ್ಟೆಯಲ್ಲಿ ಲೂಸ್ ಮೋಷನ್ ನಿಯಂತ್ರಣಕ್ಕೆ ಕೆಲ ಮಾತ್ರೆಗಳು ಲಭ್ಯವಿದೆ. ಆದ್ರೆ ಅನೇಕ ಬಾರಿ ಈ ಮಾತ್ರೆಗಳೂ ಪ್ರಯೋಜನಕ್ಕೆ ಬರೋದಿಲ್ಲ. ಲೂಸ್ ಮೋಷನ್ ಹೆಚ್ಚಾಗಿದೆ ಎಂದ ಸಂದರ್ಭದಲ್ಲಿ ನೀವು ಕೆಲ ಮನೆ ಮದ್ದನ್ನು ಬಳಸಬಹುದು. ಇದ್ರಿಂದ ಲೂಸ್ ಮೋಷನ್ ನಿಲ್ಲುವುದಲ್ಲದೆ ದೇಹಕ್ಕೆ ಸ್ವಲ್ಪ ಶಕ್ತಿ ಬರುತ್ತದೆ. ಇಂದು ನಾವು ಲೂಸ್ ಮೋಷನ್ ನಿಯಂತ್ರಣಕ್ಕೆ ಮನೆ ಮದ್ದುಗಳನ್ನು ಹೇಳ್ತೇವೆ.
ಮನೆ ಮದ್ದನ್ನು ಹೇಳುವ ಮೊದಲು ನೀವು ಲೂಸ್ ಮೋಷನ್ (Loose Motion) ಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಸಾಮಾನ್ಯವಾಗಿ ಲೂಸ್ ಮೋಷನ್ ಗೆ ಕಾರಣ ಆಹಾರ (food) ಪದ್ಧತಿ. ಕಲುಷಿತ ಆಹಾರ ಸೇವನೆಯಿಂದ ಭೇದಿ ಶುರುವಾಗುತ್ತದೆ. ಇದಲ್ಲದೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾದ್ರೂ ಲೂಸ್ ಮೋಷನ್ ಕಾಡುವುದಿದೆ. ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ತಿನ್ನುವುದ್ರಿಂದ ಹಾಗೂ ದೇಹದಲ್ಲಿ ಮೆಗ್ನೀಸಿಯಮ್ (Magnesium) ಪ್ರಮಾಣ ಹೆಚ್ಚಾದಾಗ ಲೂಸ್ ಮೋಷನ್ ಶುರುವಾಗುತ್ತದೆ.
ಲೂಸ್ ಮೋಷನ್ ಗೆ ಮನೆ ಮದ್ದು :
ನೀರು (Water) : ದೇಹ ಹೈಡ್ರೇಟ್ ಮಾಡುವುದು ಬಹಳ ಮುಖ್ಯ. ನೀರಿನ ಅಂಶ ಕಡಿಮೆಯಾಗಿ ಲೂಸ್ ಮೋಷನ್ ಶುರುವಾಗಿರುತ್ತದೆ. ಲೂಸ್ ಮೋಷನ್ ಶುರುವಾದ್ಮೇಲೆ ದೇಹದಲ್ಲಿರುವ ನೀರಿನ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತದೆ. ಇಂಥ ಸಂದರ್ಭದಲ್ಲಿ ನೀವು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ನೀರು ದೇಹವನ್ನು ಹೈಡ್ರೇಟ್ ಮಾಡುತ್ತದೆ. ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಲೂಸ್ ಮೋಷನ್ ಶುರುವಾಗ್ತಿದ್ದಂತೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.
ನಿಂಬೆ ಹಣ್ಣಿನ ಪಾನಕ (Lemon Juice) : ನೀರು ಕುಡಿಯಲು ಆಗ್ತಿಲ್ಲ ಎನ್ನುವವರು ನಿಂಬೆ ಹಣ್ಣಿನ ಪಾನಕ ಮಾಡಿ ಸೇವನೆ ಮಾಡಬಹುದು. ನಿಂಬೆ ಹಣ್ಣಿನ ಪಾನಕವನ್ನು ಅನೇಕ ರೀತಿಯಲ್ಲಿ ತಯಾರಿಸಲಾಗುತ್ತದೆ. ನಿಂಬೆ ರಸಕ್ಕೆ ನೀರು ಬೆರೆಸಿ, ಸಕ್ಕರೆ ಹಾಕಿ, ಚಿಟಕಿ ಉಪ್ಪನ್ನು (Salt) ಹಾಕಿ ಕುಡಿದ್ರೆ ಒಳ್ಳೆಯದು. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಜೊತೆಗೆ ದೇಹಕ್ಕೆ ಶಕ್ತಿ ನೀಡುತ್ತದೆ. ನಿಂಬೆ ಹಣ್ಣಿನ ಪಾನಕ, ಭೇದಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ನಿಂಬೆ ಪಾನಕವನ್ನು ನೀವು ದಿನಕ್ಕೆ 2- 3 ಬಾರಿ ಸೇವನೆ ಮಾಡಬೇಕು. ಇದು ದೇಹದಲ್ಲಿ ಖನಿಜಗಳನ್ನು ಉತ್ಪಾದಿಸಲು ನೆರವಾಗುತ್ತದೆ.
ನೀರಿನ ಬಾಟಲ್ ಹಳದಿ ಬಣ್ಣಕ್ಕೆ ತಿರುಗಿದೆಯೇ ? ಕ್ಲೀನ್ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್
ಹಣ್ಣಿನ ಜ್ಯೂಸ್ ಮತ್ತು ಮಜ್ಜಿಗೆ (Butter Milk): ಇದಲ್ಲದೆ ಮಜ್ಜಿಗೆ ಅಥವಾ ಹಣ್ಣಿನ ಜ್ಯೂಸ್ ಕೂಡ ಒಳ್ಳೆಯದು. ದೇಹಕ್ಕೆ ಹೆಚ್ಚಿನ ದ್ರವ ಪದಾರ್ಥ ಹೋಗುವಂತೆ ನೀವು ನೋಡಿಕೊಳ್ಳಬೇಕು. ಹಣ್ಣಿನ ಜ್ಯೂಸನ್ನು ಮನೆಯಲ್ಲಿಯೇ ಮಾಡಿ ಸೇವನೆ ಮಾಡಿ. ಪ್ಯಾಕೇಟ್ ಜ್ಯೂಸ್ ಸೇವನೆ ಮಾಡಲು ಹೋಗ್ಬೇಡಿ. ಇದ್ರಲ್ಲಿ ಸಕ್ಕರೆ ಪ್ರಮಾಣ (Sugar Level) ಹೆಚ್ಚಿರುತ್ತದೆ. ಹಾಗೆಯೇ ಹಣ್ಣಿನ ಸಂಪೂರ್ಣ ಪೋಷಕಾಂಶ ನಿಮಗೆ ಅದರಲ್ಲಿ ಸಿಗೋದಿಲ್ಲ.
ಲೂಸ್ ಮೋಷನ್ ಗೆ ಮಖನಾ ಉತ್ತಮ : ನೀವು ಲೂಸ್ ಮೋಷನ್ ನಿಂದ ಬಳಲುತ್ತಿದ್ದರೆ ಮಖನಾ ತಿನ್ನಿ. ಮಖನಾ ಕಮಲದ ಹೂವಿನ ಬೀಜವಾಗಿದೆ. ಇದ್ರಲ್ಲಿ ಸಾಕಷ್ಟು ಪೋಷಕಾಂಶವಿದೆ.
High Blood Pressure ಬೇಡವೆಂದರೆ ಈ ಆಹಾರ ಮುಟ್ಟಬೇಡಿ
ದಾಳಿಂಬೆ ಹಣ್ಣು ಮತ್ತು ಎಲೆ : ಲೂಸ್ ಮೋಷನ್ ಶುರುವಾದಾಗ ನೀವು ದಾಳಿಂಬೆ ಹಣ್ಣನ್ನು ಸೇವನೆ ಮಾಡಬೇಕು. ಇದು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ದಾಳಿಂಬೆ ರಸ ಅಥವಾ ಹಣ್ಣು ತಿನ್ನುವ ಜೊತೆಗೆ ನೀವು ಲೂಸ್ ಮೋಷನ್ ಆದಾಗ ದಾಳಿಂಬೆ ಎಲೆಯನ್ನು ಬಳಸಬಹುದು. ದಾಳಿಂಬೆ ಎಲೆಯನ್ನು ನೀರಿಗೆ ಹಾಕಿ ಅದನ್ನು ಕುದಿಸಿ, ಆ ನೀರನ್ನು ಕುಡಿಯುವುದ್ರಿಂದ ಲೂಸ್ ಮೋಷನ್ ಕಡಿಮೆಯಾಗುತ್ತದೆ.