ನೀರಿನ ಬಾಟಲ್‌ ಹಳದಿ ಬಣ್ಣಕ್ಕೆ ತಿರುಗಿದೆಯೇ ? ಕ್ಲೀನ್ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್‌

By Suvarna NewsFirst Published Sep 23, 2022, 11:11 AM IST
Highlights

ನೀರಿಲ್ಲದೆ ಬದುಕೋದು ಸಾಧ್ಯವೇ ಇಲ್ಲ. ನೀರನ್ನು ಅದೇ ಕಾರಣಕ್ಕೆ ಜೀವ ಜಲ ಎನ್ನುತ್ತಾರೆ. ನೀರು ಪ್ರತಿಯೊಬ್ಬ ಮನುಷ್ಯನಿಗೆ ಅತ್ಯಂತ ಅವಶ್ಯಕ. ಇಡೀ ದೇಹ ಆರೋಗ್ಯವಾಗಿರಲು ನೀರು ಬೇಕು. ಆದ್ರೆ ಆರೋಗ್ಯಕ್ಕೆ ನೀರು ಬೇಕು ಅಂತ ಕ್ಲೀನ್ ಮಾಡದೆ ಬಾಟಲಿಯಲ್ಲಿ ನೀರು ಕುಡಿದರೆ ಆರೋಗ್ಯ ಸಮಸ್ಯೆ ಕಾಡುತ್ತೆ. ಬಾಟಲಿಯನ್ನು ಕ್ಲೀನ್ ಮಾಡೋದು ಹೇಗೆ ? ಇಲ್ಲಿದೆ ಕೆಲವೊಂದು ಟ್ರಿಕ್ಸ್.

ಪ್ರತಿ ದಿನ ಮೂರು ಲೀಟರ್ ನೀರು ಸೇವನೆ ಮಾಡುವಂತೆ ವೈದ್ಯರು ಹೇಳ್ತಾರೆ. ಮತ್ತೆ ಕೆಲವರು ಬಾಯಾರಿಕೆ ಆದಾಗ ನೀರು ಕುಡಿಯುವಂತೆ ಸಲಹೆ ನೀಡ್ತಾರೆ. ಹೆಚ್ಚು ನೀರು ಕುಡಿಯದೇ ಇರುವುದರಿಂದ ದೇಹ ನಿರ್ಜಲೀಕರಣಗೊಳ್ಳುತ್ತದೆ. ಇದ್ರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗೆ ಹೆಲ್ತ್ ಪ್ರಾಬ್ಲೆಮ್ ಕಾಡ್ಬಾರ್ದು ಅಂದ್ರೆ ಸಾಕಷ್ಟು ನೀರು ಕುಡಿಯಬೇಕು. ಹೀಗೆ ಆಗಾಗ ನೀರು ಕುಡಿಯಲು ಬಾಟಲಿಯಲ್ಲಿ ನೀರು ತುಂಬಿಟ್ಟುಕೊಳ್ಳೋ ಅಭ್ಯಾಸ ತುಂಬಾ ಒಳ್ಳೇದು. ಇದ್ರಿಂದ ಹೆಚ್ಚು ಅನಾಯಾಸವಾಗಿ ಆಗಾಗ ನೀರು ಕುಡಿಯಲು ಸಾಧ್ಯವಾಗುತ್ತದೆ. ಆದ್ರೆ ಹೀಗೆ ನೀರು ಕುಡಿಯೋ ಬಾಟಲಿಯನ್ನು ಆಗಾಗ ತೊಳೆಯದಿದ್ದರೆ ಮಾತ್ರ ಆರೋಗ್ಯ ಸಮಸ್ಯೆ ತಪ್ಪೋದಿಲ್ಲ. 

ನೀರಿನ ಬಾಟಲಿ (Water Bottle)ಯನ್ನು ವಾರಕ್ಕೊಮ್ಮೆ ಆಳವಾಗಿ ಸ್ವಚ್ಛಗೊಳಿಸಬೇಕು. ನೀವು ಹಾಲು (Milk), ಚಹಾ ಅಥವಾ ಯಾವುದೇ ಇತರ ಪಾನೀಯವನ್ನು ಬಾಟಲಿಯಲ್ಲಿ ಕೊಂಡೊಯ್ಯುತ್ತಿದ್ದರೆ, ಅದನ್ನು ಬಿಸಿನೀರಿನಲ್ಲಿ (Hot water) ತೊಳೆಯುವುದು ಉತ್ತಮ. ಆದರೆ ಕಿರಿದಾದ ಬಾಯಿಯಿರುವ ಬಾಟಲಿಯನ್ನು ತೊಳೆಯುವುದು ಹಲವರಿಗೆ ತಲೆನೋವು (Headache) ತರುವ ವಿಷಯ. ಎಷ್ಟು ತೊಳೆದರೂ ಕ್ಲೀನ್ ಆಗಲ್ಲ. ಬಾಟಲಿ ಬಣ್ಣಗೆಟ್ಟಿದೆ ಎಂದು ಬೇಜಾರು ಮಾಡಿಕೊಳ್ಳುತ್ತಾರೆ. ನಿಮ್ಗೂ ಅದೇ ಚಿಂತೇನಾ ? ಹಾಗಿದ್ರೆ ಸುಲಭವಾಗಿ ನೀರಿನ ಬಾಟಲಿ ಕ್ಲೀನ್ ಮಾಡುವುದು ಹೇಗೆ ನಾವ್ ಹೇಳ್ತಿವಿ. 

ಫಿಲ್ಟರ್ ನೀರು v/s ಕುದಿಸಿದ ನೀರು, ಆರೋಗ್ಯಕ್ಕೆ ಯಾವುದು ಒಳ್ಳೇದು ?

ನೀರಿನ ಬಾಟಲ್‌ ಕ್ಲೀನ್ ಮಾಡುವ ವಿಧಾನ
ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಹಲವು ಬಗೆಯ ಬಾಟಲಿಗಳನ್ನು ಬಳಸುತ್ತಾರೆ. ಕಚೇರಿಗೆ ಕೊಂಡೊಯ್ಯುವ ಬಾಟಲ್‌, ಜಿಮ್‌ನಲ್ಲಿ ಪ್ರಯಾಣಿಸುವ ಜೊತೆಗೆ ಕೊಂಟೊಯ್ಯುವ ಬಾಟಲ್‌, ಮಕ್ಕಳಿಗೆ (Children) ಬೇರೆಯೇ ಬಾಟಲ್ ನಿಗದಿ ಪಡಿಸುತ್ತಾರೆ. ಅನೇಕ ಬಾರಿ, ಬಾಟಲಿಯ ಸಣ್ಣ ಬಾಯಿಯಿಂದಾಗಿ, ನಾವು ಅದನ್ನು ಹೊರಗಿನಿಂದ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಆದರೆ ಒಳಗಿನಿಂದ ಸ್ವಚ್ಛಗೊಳಿಸದ ಕಾರಣ, ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವ ಅಪಾಯವಿದೆ ಎಂದು ನೆನಪಿಡಿ. ಹಾಗಾಗಿ ಬಾಟಲಿಯನ್ನು ಒಳಗಿನಿಂದ ಸ್ವಚ್ಛಗೊಳಿಸಲು ಸುಲಭವಾದ ಮಾರ್ಗವನ್ನು ನಾವು ಇಂದು ನಿಮಗೆ ಹೇಳುತ್ತಿದ್ದೇವೆ.

1. ಸೋಪ್ ಮತ್ತು ಬೆಚ್ಚಗಿನ ನೀರು: ದೈನಂದಿನ ಬಳಕೆಯ ಬಾಟಲಿಯನ್ನು ಸಾಬೂನು (Soap) ಮತ್ತು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ಬಾಟಲಿಯ ಬಾಯಿ ಅಗಲವಾಗಿದ್ದರೆ, ಸ್ಪಾಂಜ್ ಸಹಾಯದಿಂದ ನೀವು ಅದನ್ನು ಒಳಗಿನಿಂದ ಸ್ವಚ್ಛಗೊಳಿಸಬಹುದು. ನೀವು ಇನ್ಸುಲೇಟೆಡ್ ನೀರಿನ ಬಾಟಲಿಯನ್ನು ಹೊಂದಿದ್ದರೆ, ಅದನ್ನು ಬಿಸಿ ನೀರಿನಿಂದ ತುಂಬಿಸಿ ಮತ್ತು 10 ನಿಮಿಷಗಳ ಕಾಲ ಬಿಡಿ. ಅದರಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ.

2. ವಿನೇಗರ್ ಮತ್ತು ಬೆಚ್ಚಗಿನ ನೀರು: ಸೋಪ್ ಮತ್ತು ನೀರಿನಿಂದ ತೊಳೆದ ನಂತರ, ಬಾಟಲಿಯ ನಾಲ್ಕನೇ ಒಂದು ಭಾಗಕ್ಕೆ ವಿನೆಗರ್ ಸೇರಿಸಿ. ಈಗ ಅದಕ್ಕೆ ಬಿಸಿನೀರನ್ನು ಬಿಸಿನೀರನ್ನು ತುಂಬಿಸಿ. ರಾತ್ರಿಯಿಡೀ ಬಾಟಲಿಯಲ್ಲಿ ದ್ರಾವಣವನ್ನು ಬಿಡಿ ಮತ್ತು ಬಾಟಲಿಯನ್ನು ಖಾಲಿ ಮಾಡಿ ಮತ್ತು ಬಾಟಲಿಯನ್ನು ಶುದ್ಧ ನೀರಿನಿಂದ ತೊಳೆಯಿರಿ.

ತಾಮ್ರದಲ್ಲಿಟ್ಟ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಏನೆವೆ ಲಾಭ?

3. ಅಡಿಗೆ ಸೋಡಾ ಮತ್ತು ಬಿಸಿ ನೀರು: ಬಾಟಲಿಯಲ್ಲಿ ಎರಡು ಚಮಚ ಅಡಿಗೆ ಸೋಡಾವನ್ನು ಹಾಕಿ ಮತ್ತು ಬಿಸಿ ನೀರನ್ನು ಸೇರಿಸುವ ಮೂಲಕ ಅದನ್ನು ಮೇಲಕ್ಕೆ ತುಂಬಿಸಿ. ಈಗ ಬಾಟಲಿಯ ಮೇಲೆ ಕ್ಯಾಪ್ ಹಾಕಿ ಮತ್ತು ಅದನ್ನು ಅಲ್ಲಾಡಿಸಿ. ಇದರ ನಂತರ ಮುಚ್ಚಳವನ್ನು ತೆಗೆದುಹಾಕಿ ಮತ್ತು ಕೆಲವು ಗಂಟೆಗಳ ಕಾಲ ಹಾಗೆ ಬಿಡಿ. ಇದರ ನಂತರ ಬಾಟಲಿಯನ್ನು ಖಾಲಿ ಮಾಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ.

4. ಬ್ಲೀಚ್ ಮತ್ತು ತಣ್ಣೀರು: ನೀರಿನ ಬಾಟಲಿಯಿಂದ ಬರುವ ವಾಸನೆ (Smell)ಯನ್ನು ಹೋಗಲಾಡಿಸಲು ಬ್ಲೀಚ್ ತಣ್ಣೀರಿನ ವಿಧಾನವು ತುಂಬಾ ಒಳ್ಳೆಯದು. ಬಾಟಲಿಗೆ ಒಂದು ಚಮಚ ಅಡಿಗೆ ಸೋಡಾ ಮತ್ತು ತಣ್ಣೀರು ಹಾಕಿ ಮತ್ತು ರಾತ್ರಿಯಿಡೀ ಇರಿಸಿ. ಬೆಳಿಗ್ಗೆ ಅದನ್ನು ಖಾಲಿ ಮಾಡಿ, ಅದನ್ನು ಸೋಪಿನಿಂದ ಸ್ವಚ್ಛಗೊಳಿಸಿ ಮತ್ತು ಒಣಗಿಸಿ. ಹೀಗೆ ಮಾಡುವುದರಿಂದ ಬಾಟಲಿ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಇಂಥಾ ಬಾಟಲಿಯಲ್ಲಿ ನೀರು ಕುಡಿದರೆ ಆರೋಗ್ಯ (Health)ಕ್ಕೂ ಯಾವುದೇ ರೀತಿಯ ತೊಂದರೆಯಿಲ್ಲ. ಕಾಯಿಲೆಗಳು ಕಾಡುವ ಭಯವೂ ಇಲ್ಲ. 

click me!