
ಪಂಜಾಬ್‌ನ ಮೊಗಾದಲ್ಲಿರುವ ಮೆಡಿಸಿಟಿ ಆಸ್ಪತ್ರೆಯ ವೈದ್ಯರು 40 ವರ್ಷ ವಯಸ್ಸಿನ ರೋಗಿಯ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಬೆಚ್ಚಿಬಿದ್ದರು. ಯಾಕೆಂದರೆ ಆತನ ಹೊಟ್ಟೆಯೊಳಗಿಂದ ಸಿಕ್ಕ ವಸ್ತುಗಳು ಒಂದೆರಡಲ್ಲ. ಪಿನ್, ಇಯರ್‌ಫೋನ್‌ಗಳು, ಲಾಕೆಟ್‌ಗಳು, ಸ್ಕ್ರೂಗಳು ಮತ್ತು ರಾಖಿಗಳನ್ನು ಒಳಗೊಂಡಂತೆ ಅವರ ಹೊಟ್ಟೆಯೊಳಗೆ ವಿಚಿತ್ರವಾದ ವಸ್ತುಗಳ ಸಂಗ್ರಹವೇ. ರೋಗಿಯು ನಿರಂತರವಾದ ಅಧಿಕ ಜ್ವರ ಮತ್ತು ಅಸಹನೀಯ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನದಿಂದ ತೀವ್ರವಾದ ವಾಕರಿಕೆ, ಹೊಟ್ಟೆಯ ಅಸ್ವಸ್ಥತೆಯಿದೆ ಎಂದು ಹೇಳಿದ ಕಾರಣ ವೈದ್ಯರು ಎಕ್ಸ್‌ರೇ ಪರೀಕ್ಷೆಯನ್ನು ಮಾಡಿಸಿದರು. ಫಲಿತಾಂಶ ಬಂದಾಗ ವೈದ್ಯರ ತಂಡಕ್ಕೇ ಶಾಕ್ ಆಯಿತು.
ಎಕ್ಸ್-ರೇ ಫಲಿತಾಂಶಗಳು ಮನುಷ್ಯನ ಹೊಟ್ಟೆಯೊಳಗೆ ಲೋಹಗಳ ರಾಶಿಯೇ ಇರುವುದನ್ನು ಬಹಿರಂಗಪಡಿಸಿತು. ಸೂಕ್ಷ್ಮವಾದ ಮೂರು ಗಂಟೆಗಳ ಶಸ್ತ್ರಚಿಕಿತ್ಸಾ ವಿಧಾನದಲ್ಲಿ, ವೈದ್ಯರು ಕೌಶಲ್ಯದಿಂದ ಅವರ ದೇಹದಿಂದ ವಸ್ತುಗಳನ್ನು ಸಂಗ್ರಹಿಸಿ ಹೊರತೆಗೆದರು. ಹೊಟ್ಟೆಯಿಂದ ಹೊರತೆಗೆದ ಸುಮಾರು ನೂರು ವಸ್ತುಗಳ ಪೈಕಿ ಇಯರ್‌ಫೋನ್‌ಗಳು, ವಾಷರ್‌ಗಳು, ನಟ್ಸ್ ಮತ್ತು ಬೋಲ್ಟ್‌ಗಳು, ವೈರ್‌ಗಳು, ರಾಖಿಗಳು, ಲಾಕೆಟ್‌ಗಳು, ಬಟನ್‌ಗಳು, ರ್ಯಾಪರ್‌ಗಳು ಮತ್ತು ಸೇಫ್ಟಿ ಪಿನ್ ಕೂಡ ಸೇರಿವೆ.
ಒಂದಲ್ಲ ಎರಡಲ್ಲ, ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 15 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
ಆಸ್ಪತ್ರೆಯ ನಿರ್ದೇಶಕರಾದ ಡಾ.ಅಜ್ಮೀರ್ ಕಲ್ರಾ ಈ ಬಗ್ಗೆ ಮಾನಾಡಿ, ಈ ವಿಚಿತ್ರ ಪ್ರಕರಣವು ನನ್ನ ಹಲವಾರು ವರ್ಷಗಳ ವೈದ್ಯಕೀಯ ಅನುಭವದಲ್ಲಿ ಮೊದಲನೆಯದು ಎಂದು ತಿಳಿಸಿದ್ದಾರೆ. ರೋಗಿಯು ಎರಡು ವರ್ಷಗಳ ಕಾಲ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಆಪರೇಷನ್ ಮಾಡಿ ವ್ಯಕ್ತಿಯ ಹೊಟ್ಟೆಯೊಳಗಿರುವ ಎಲ್ಲಾ ವಸ್ತುವನ್ನು ಹೊರತೆಗೆದರೂ ಪರಿಸ್ಥಿತಿ ಇನ್ನೂ ಸರಿ ಹೋಗಿಲ್ಲ. ಇದು ಇನ್ನೂ ಹೆಚ್ಚು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯೂ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ರೋಗಿಯ ಕುಟುಂಬವು ವ್ಯಕ್ತಿ ಯಾವಾಗ ಇಷ್ಟೆಲ್ಲಾ ವಸ್ತುಗನ್ನು ನುಂಗಿದ ಎಂಬ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರೋಗಿಯು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದ ಮತ್ತು ಹೊಟ್ಟೆ ನೋವು ಮತ್ತು ನಿದ್ರಾಹೀನತೆಯಿಂದ ಆಗಾಗ ದಾಖಲು ಮಾಡುತ್ತಿದ್ದೆವು ಎಂದಿದ್ದಾರೆ. ಎಕ್ಸ್‌ರೇ ತೆಗೆದು ನೋಡಿದ ಕಾರಣ ಅಸ್ವಸ್ಥೆಗೆ ನಿಜವಾದ ಕಾರಣ ಗೊತ್ತಾಗಿದೆ.
ಮಹಿಳೆ ನೆತ್ತಿ ಮೇಲೆ ಬೆಳೆದ ಗೋಲಿಗಳ ಚೀಲ, ಅಚ್ಚರಿ ಪ್ರಕರಣಕ್ಕೆ ಬೆಂಗಳೂರು ವೈದ್ಯರ ಯಶಸ್ವಿ ಸರ್ಜರಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.