ಫಿಟ್ನೆಸ್ ಹಾಗೂ ಸೌಂದರ್ಯಕ್ಕೆ ಎಲ್ಲರೂ ಮಹತ್ವ ನೀಡ್ತಾರೆ. 60 ವರ್ಷದ ನಂತ್ರವೂ ಫಿಟ್ ಆಗಿರೋದು ಸುಲಭವಲ್ಲ. ಹಾಗಂತ ಅಸಾಧ್ಯವೇನಲ್ಲ. ಕೆಲ ಡಯಟ್ ಪ್ಲಾನ್ ಅನುಸರಿಸಿದ್ರೆ ಇದು ಸಾಧ್ಯ ಎನ್ನುತ್ತಾರೆ ಓಪ್ರಾ.
ತೆರೆ ಮೇಲೆ ಬರುವ ಸೆಲೆಬ್ರಿಟಿಗಳು ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿವಹಿಸ್ತಾರೆ. ಫಿಟ್ನೆಸ್, ಬ್ಯೂಟಿ ಪಾರ್ಲರ್ ಅಂತಾ ಎಷ್ಟೇ ಗಮನ ನೀಡಿದ್ರೂ ವಯಸ್ಸನ್ನು ಮುಚ್ಚಿಡೋದು ಸುಲಭವಲ್ಲ. ನಿಧಾನವಾಗಿ ಅವರ ಸುಕ್ಕುಗಟ್ಟಿದ ಚರ್ಮ ಅವರ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗೋದಿದೆ. ವಯಸ್ಸು 50 ದಾಟುತ್ತಿದ್ದಂತೆ ಅನೇಕ ಸವಾಲುಗಳನ್ನು ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳು ಎದುರಿಸ್ತಾರೆ. 50ರ ವಯಸ್ಸಿನಲ್ಲೂ ಮೂವತ್ತರ ಸೌಂದರ್ಯ ಹೊಂದಿರುವವರು ಬಹಳ ಅಪರೂಪ. ಅವರಲ್ಲಿ ಅಮೆರಿಕದ ಪ್ರಸಿದ್ಧ ಟಾಕ್ ಶೋ ನಿರೂಪಕಿ ಓಪ್ರಾ ವಿನ್‌ಫ್ರೇ ಒಬ್ಬರು.
ಓಪ್ರಾ ವಿನ್‌ಫ್ರೇ (Oprah Winfrey) ಭಿನ್ನ ಶೈಲಿ ವಿಶ್ವಾದ್ಯಂತ ಪ್ರಸಿದ್ಧಿಯಾಗಿದೆ. ಓಪ್ರಾ ವಿನ್‌ಫ್ರೇ ವಯಸ್ಸು ಕಡಿಮೆ ಏನಿಲ್ಲ. ಅವರು 69 ವರ್ಷದಲ್ಲಿದ್ದು, ಈಗ್ಲೂ ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ, ಕೆಲಸ ಮಾಡ್ತಿದ್ದಾರೆ.
ಮಗುವಿನ ತೂಕ-ಎತ್ತರ ಚೆನ್ನಾಗಿರ್ಬೇಕು ಅಂದ್ರೆ ಇಂಥಾ ಪೌಷ್ಠಿಕ ಆಹಾರ ಕೊಡೋದು ಮರೀಬೇಡಿ
ಓಪ್ರಾ ಸೌಂದರ್ಯವತಿ ಅಂದ್ರೆ ತಪ್ಪಾಗೋದಿಲ್ಲ. ಈಗ್ಲೂ 30 -35 ವರ್ಷದ ಜನರನ್ನು ನಾಚಿಸುವಂತ ಫಿಟ್ನೆಸ್ (Fitness) ಮತ್ತು ಸೌಂದರ್ಯ ಹೊಂದಿದ್ದಾರೆ ಓಪ್ರಾ. ಓಪ್ರಾ ಸೌಂದರ್ಯ ಹಾಗೂ ಫಿಟ್ನೆಸ್ ಗುಟ್ಟೇನು ಎನ್ನುವ ಪ್ರಶ್ನೆ ಬಹುತೇಕ ಎಲ್ಲರನ್ನು ಕಾಡುತ್ತದೆ. ಅವರ ಫಿಟ್ನೆಸ್ ಗೆ ಕಾರಣವೇನು ಎಂಬುದನ್ನು ನಾವು ಹೇಳ್ತೇವೆ.
ಓಪ್ರಾ ಫಿಟ್ ಆಗಿರಲು ಕಾರಣ ಅವರ ಡಯಟ್ (Diet). ಇತ್ತೀಚಿಗೆ ಓಪ್ರಾ ತಮ್ಮ ಡಯಟ್ ಪ್ಲಾನ್ ಬಹಿರಂಗಪಡಿಸಿದ್ದಾರೆ. ಇದೇ ಡಯಟ್ ಪ್ಲಾನ್ ಫಾಲೋ ಮಾಡಿ ಸುಮಾರು 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನೀವೂ ತೂಕ ಇಳಿಸಿಕೊಳ್ಳುವ ಪ್ಲಾನ್ ನಲ್ಲಿದ್ದರೆ ಅವರ ಡಯಟ್ ಪ್ಲಾನ್ ಫಾಲೋ ಮಾಡ್ಬಹುದು.
ನಿಯಮಿತವಾಗಿ ಪನೀರ್ ತಿನ್ನೋದ್ರಿಂದ ಬೇಗನೆ ವಯಸ್ಸಾಗೋದಿಲ್ವಾ?
ಓಪ್ರಾ ಡಯಟ್ ಪ್ಲಾನ್ ಏನು? : ಓಪ್ರಾ ವಿನ್‌ಫ್ರೇ ಡಯಟ್ ಯೋಜನೆ ಸ್ವಲ್ಪ ಭಿನ್ನವಾಗಿದೆ. ಅವರು ದಿನಕ್ಕೆ 1700 ಕ್ಯಾಲೋರಿಗಳಷ್ಟು ಆಹಾರ ಸೇವನೆ ಮಾಡ್ತಾರೆ. 1700 ಕ್ಯಾಲೋರಿ ಆಹಾರದಲ್ಲಿ ಶೇಕಡಾ 20ರಷ್ಟು ಪ್ರೋಟೀನ್ ಇರುತ್ತದೆ. ಶೇಕಡಾ 50ರಷ್ಟು ಕಾರ್ಬೋಹೈಡ್ರೇಟ್ ಇರುತ್ತದೆ. ಇದಲ್ಲದೆ ಅವರು ತಮ್ಮ ದೈನಂದಿನ ಆಹಾರದಲ್ಲಿ ಶೇಕಡಾ 30 ರಷ್ಟು ಕೊಬ್ಬಿನ ಆಹಾರವನ್ನು ಸೇವನೆ ಮಾಡ್ತಾರೆ. ತೂಕ ಇಳಿಸಲು ಇದು ಅತ್ಯುತ್ತಮ ಡಯಟ್ ಎನ್ನುತ್ತಾರೆ ಓಪ್ರಾ. ಓಪ್ರಾ ವಿನ್‌ಫ್ರೇ ಆಹಾರದಲ್ಲಿ ಬಹಳಷ್ಟು ಫೈಬರ್ ಸೇವನೆ ಮಾಡ್ತಾರೆ. ಆಹಾರದಲ್ಲಿ 34 ಗ್ರಾಂ ಫೈಬರ್ ಇರುತ್ತದೆ. ಫೈಬರ್ ಸೇವನೆ ಮಾಡುವುದ್ರಿಂದ ಹಸಿವು ಕಡಿಮೆ ಆಗುತ್ತದೆ. ಆಗ ಆಹಾರ ಸೇವನೆ ಕಡಿಮೆಯಾಗುತ್ತದೆ. ಸದಾ ಹೊಟ್ಟೆ ತುಂಬಿದ ಅನುಭವವನ್ನು ಅದು ನೀಡುತ್ತದೆ.
ಓಪ್ರಾ ತಮ್ಮ ಆಹಾರದಲ್ಲಿ ಧಾನ್ಯಗಳು, ಹಣ್ಣು ಮತ್ತು ತರಕಾರಿ ಸೇವನೆ ಮರೆಯೋದಿಲ್ಲ. ಸಮತೋಲನ ಪ್ರಮಾಣದಲ್ಲಿ ಇದ್ರ ಸೇವನೆ ಮಾಡ್ತಾರೆ. ಓಪ್ರಾ, ಕ್ಯಾಲ್ಸಿಯಂಗಾಗಿ ಸೋಯಾಮಿಲ್ಕ್ ಕುಡಿಯುತ್ತಾರೆ. ಇದಲ್ಲದೆ ತಾವು ಮೊಸರು ಸೇವನೆ ಮಾಡೋದಾಗಿ ಓಪ್ರಾ ಹೇಳಿದ್ದಾರೆ. ಅವರ ಆಹಾರದಲ್ಲಿ 1100 ಮಿಗ್ರಾಂ ಕ್ಯಾಲ್ಸಿಯಂ ಕೂಡ ಇರುತ್ತದೆ.
ಓಪ್ರಾ ಬೆಳಗಿನ ಆಹಾರದಲ್ಲಿ ಏನು ಸೇವನೆ ಮಾಡ್ತಾರೆ? : ಓಪ್ರಾ ಬೆಳಗಿನ ಉಪಹಾರದಲ್ಲಿ ಬಾಳೆಹಣ್ಣು, ಕ್ಯಾಲ್ಸಿಯಂ ಭರಿತ ಕಿತ್ತಳೆ ರಸ, ಬಾದಾಮಿ ಸೇವಿಸುತ್ತಾರೆ. ಇದರೊಂದಿಗೆ, ಅವಳು ತನ್ನ ಬೆಳಗಿನ ಉಪಾಹಾರದಲ್ಲಿ ಓಟ್ ಮೀಲ್, ಬ್ಲೂಬೆರ್ರಿ, ವಾಲ್‌ನಟ್ಸ್, ಚಾಕೊಲೇಟ್ ಸ್ಟ್ರಾಬೆರಿ ಸ್ಮೂಥಿಗಳನ್ನು ಸಹ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಧಾನ್ಯದ ಬ್ರೆಡ್, ಫ್ರೈಡ್ ಮೊಟ್ಟೆ , ಟರ್ಕಿ ಸ್ಲೈಸ್ ಮತ್ತು ಕಡಲೆಕಾಯಿ ಬೆಣ್ಣೆ ಬ್ರೆಡ್ ಟೋಸ್ಟ್ ತಿನ್ನುತ್ತಾರೆ.
ಓಪ್ರಾ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ : ಓಪ್ರಾ ಮಧ್ಯಾಹ್ನದ ಊಟಕ್ಕೆ ಒಂದು ಪ್ಲೇಟ್ ಹಣ್ಣು ತಿನ್ನುತ್ತಾರೆ. ಟರ್ಕಿ ಮಾಂಸ, ತರಕಾರಿ, ವೆಜ್ ಬರ್ಗರ್, ಅಣಬೆ, ಟೊಮ್ಯಾಟೊ ಇರುತ್ತದೆ. ಇನ್ನು ರಾತ್ರಿ ಊಟಕ್ಕೆ ಅವರು ಸುಲಭವಾಗಿ ಜೀರ್ಣವಾಗುವ ಆಹಾರ ತಿನ್ನುತ್ತಾರೆ. ವೈಲ್ಡ್ ರೈಸರನ್ನು ಆಲಿವ್ ಎಣ್ಣೆಯಲ್ಲಿ ಬೇಯಿಸಿ ತಿನ್ನುತ್ತಾರೆ. ಗ್ರಿಲ್ಡ್ ಚಿಕನ್ ಬ್ರೆಸ್ಟ್ ಕಟ್ಲೆಟ್ ತಿನ್ನುತ್ತಾರೆ. ತರಕಾರಿ ಹಾಗೂ ಚಿಕನ್ ಪಾಸ್ತಾ ಅವರ ಡಿನ್ನರ್ ನಲ್ಲಿರುತ್ತದೆ.