
ಲೈಂಗಿಕ ಸಮಸ್ಯೆ (Sexual Problem) ಯಿಂದ ಬಳಲ್ತಿದ್ದೀರಾ? ಹಾಗಿದ್ರೆ ವಯಾಗ್ರ (Viagra) ಸೇವನೆ ಮಾಡಿ ಅಂತಾ ನೀವು ಅನೇಕ ಕಡೆ ವಯಾಗ್ರದ ಜಾಹೀರಾತು ನೋಡಿರ್ಬಹುದು. ಆದ್ರೆ ವಯಾಗ್ರ ಮಾತ್ರವಲ್ಲ ದಿನ ನಿತ್ಯ ಸೇವನೆ ಮಾಡುವ ಕೆಲ ಹಣ್ಣುಗಳು ಕೂಡ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದ್ರಲ್ಲಿ ದಾಳಿಂಬೆ ಹಣ್ಣು ಕೂಡ ಒಂದು. ದಾಂಪತ್ಯ ಗಟ್ಟಿಯಾಗ್ಬೇಕೆಂದ್ರೆ ಲೈಂಗಿಕ ಜೀವನ ಕೂಡ ಮುಖ್ಯವಾಗುತ್ತದೆ. ಬದಲಾದ ಜೀವನ ಶೈಲಿ ಹಾಗೂ ಕೆಲಸದ ಒತ್ತಡದಿಂದಾಗಿ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗ್ತಿದೆ. ಅವರ ಫಲವತ್ತತೆ ಇಳಿಕೆಯಾಗ್ತಿದೆ. ಇದ್ರಿಂದ ಅನೇಕ ಸಮಸ್ಯೆಗಳನ್ನು ಪುರುಷರು ಎದುರಿಸುತ್ತಿದ್ದಾರೆ. ಕೆಲವರು ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆದ್ರೆ ಮತ್ತೆ ಕೆಲವರು ಈ ವಿಷ್ಯ ಹೇಳಲು ನಾಚಿಕೊಳ್ತಾರೆ. ಇದೇ ಕಾರಣಕ್ಕೆ ವಯಾಗ್ರ ಸೇವನೆ ಮಾಡ್ತಾರೆ. ಆದ್ರೆ ಮೊದಲೇ ಹೇಳಿದಂತೆ ವಯಾಗ್ರ ಮಾತ್ರವಲ್ಲ ದಾಳಿಂಬೆ (Pomegranate ) ಕೂಡ ನಿಮ್ಮ ಈ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ರಕ್ತ ಕಡಿಮೆಯಾಗಿದೆ ಅಂದ್ರೆ ದಾಳಿಂಬೆ ತಿನ್ನು ಎನ್ನುವ ಮಾತನ್ನು ನೀವು ಕೇಳಿರ್ತೀರಿ. ಗರ್ಭಿಣಿಯರಿಗೆ ದಾಳಿಂಬೆ ಹಣ್ಣು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಈ ದಾಳಿಂಬೆ ಲೈಂಗಿಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.
ದಾಳಿಂಬೆ ಹಣ್ಣು ಅನೇಕ ಅನಾರೋಗ್ಯಕ್ಕೆ ಔಷಧಿಯಾಗಿ ಕೆಲಸ ಮಾಡುತ್ತದೆ. ದಾಳಿಂಬೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ (Anti-Accidents), ಆಂಟಿ ಟ್ಯೂಮರ್ ಮತ್ತು ಅಂಟಿ ವೈರಲ್ ಗುಣವಿದೆ. ದಾಳಿಂಬೆ ಹಣ್ಣು, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲವನ್ನು ಹೊಂದಿದೆ. ರೋಗ ನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸುವುದಲ್ಲದೆ ಮಧುಮೇಹ, ರಕ್ತದೊತ್ತಡವನ್ನು ಸುಧಾರಿಸುವುದರ ಜೊತೆಗೆ ಚರ್ಮಕ್ಕೆ ದಾಳಿಂಬೆ ಹಣ್ಣು ಒಳ್ಳೆಯದು. ದಾಳಿಂಬೆ ಸೆಕ್ಸ್ ಲೈಫ್ ಗೂ ತುಂಬಾ ಒಳ್ಳೆಯದು. ಸೆಕ್ಸ್ ಜೀವನ ಸುಖಮಗೊಳಿಸುತ್ತೆ ಎನ್ನುವ ಕಾರಣಕ್ಕೆ ದಿನದ ಯಾವುದೋ ಸಮಯದಲ್ಲಿ ದಾಳಿಂಬೆ ಸೇವನೆ ಮಾಡಿದ್ರೆ ಪ್ರಯೋಜನವಿಲ್ಲ. ದಾಳಿಂಬೆ ಹಣ್ಣು ಯಾವ ಸಮಯದಲ್ಲಿ ದಾಳಿಂಬೆ ತಿಂದ್ರೆ ಪ್ರಯೋಜನ ಹೆಚ್ಚು ಎಂಬುದನ್ನು ನೀವು ತಿಳಿದುಕೊಳ್ಬೇಕು. ನಂತ್ರ ಹಣ್ಣು ಸೇವಿಸಿ ಲೈಂಗಿಕ ಜೀವನವನ್ನು ಸುಖಮಯ ಮಾಡಿಕೊಳ್ಳಬಹುದು. ಲೈಂಗಿಕ ಶಕ್ತಿ ಹೆಚ್ಚಾಗಲು ಯಾವ ಸಮಯದಲ್ಲಿ ದಾಳಿಂಬೆ ತಿನ್ಬೇಕು ಎಂಬುದನ್ನು ನಾವು ಹೇಳ್ತೇವೆ.
ಪ್ರತಿದಿನ ಒಂದು ನಿಮಿಷ ಈ ಆಸನ ಮಾಡಿದ್ರೆ ಸಾಕು, ಬೊಜ್ಜು ಕರಗಿ ಹೊಟ್ಟೆ ಫ್ಲ್ಯಾಟ್ ಆಗುತ್ತೆ
ಲೈಂಗಿಕ ಶಕ್ತಿ ಹೆಚ್ಚಿಸಲು ಈ ಸಮಯದಲ್ಲಿ ದಾಳಿಂಬೆ ತಿನ್ನಿ :
ರಾತ್ರಿ ಒಂದು ಬೌಲ್ ದಾಳಿಂಬೆ ತಿಂದು ನೋಡಿ : ರಾತ್ರಿ ಮಲಗುವ ಮೊದಲು ಒಂದು ಬೌಲ್ ದಾಳಿಂಬೆಯನ್ನು ತಿನ್ನಬೇಕು ಎಂದು ತಜ್ಞರು ಹೇಳ್ತಾರೆ. ಇದು ಫಲವತ್ತತೆ ಮತ್ತು ಲೈಂಗಿಕ ಕ್ರಿಯೆಯನ್ನು ಸುಧಾರಿಸುತ್ತದೆ. ದಾಳಿಂಬೆಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ ಎಂಬುದು ನಿಮಗೆಲ್ಲ ತಿಳಿದಿದೆ. ಇದು ಹೃದಯವನ್ನು ಆರೋಗ್ಯವಾಗಿಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸಲು ನೀವು ಬಯಸಿದ್ದರೆ ರಾತ್ರಿ ಮಲಗುವ ಮೊದಲು ನೀವು ಒಂದು ಬೌಲ್ ದಾಳಿಂಬೆಯನ್ನು ತಿಂದು ನೋಡಿ.
ಮೊಮೋಸ್ ತಿನ್ನುವಾಗ ಹುಷಾರ್ ! ಫುಡ್ಡೀಗಳಿಗೆ ವಾರ್ನಿಂಗ್ ನೀಡಿದ ಏಮ್ಸ್
ಲೈಂಗಿಕ ಆರೋಗ್ಯಕ್ಕೆ ಶುಂಠಿ (Ginger) : ದಾಳಿಂಬೆ ಹಣ್ಣು ಮಾತ್ರವಲ್ಲದೆ ಶುಂಠಿ ಕೂಡ ಲೈಂಗಿಕ ಜೀವನ ಸುಧಾರಿಸುವಲ್ಲಿ ಮಹತ್ವದ ಕೆಲಸ ಮಾಡುತ್ತದೆ. ಶುಂಠಿ ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ಇದರ ಸೇವನೆಯಿಂದ ಅನೇಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಇದು ನಿಮ್ಮ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಟೆಸ್ಟೋಸ್ಟೆರಾನ್ ಹಾರ್ಮೋನ್ ನಿಮ್ಮ ದೇಹದಲ್ಲಿ ಲೈಂಗಿಕತೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಇದಲ್ಲದೆ, ಹಸಿ ಈರುಳ್ಳಿ ನಿಮಗೆ ಪ್ರಯೋಜನಕಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.