ಬರೀ ಎ, ಸಿ ಮಾತ್ರವಲ್ಲ, ದೇಹಕ್ಕೆ ಅಗತ್ಯವುಂಟು ವಿಟಮಿನ್ ಕೆ

By Suvarna News  |  First Published Jun 15, 2022, 3:44 PM IST

ನಮ್ಮ ದೇಹ ಆರೋಗ್ಯವಾಗಿರಲು ಪ್ರತಿ ದಿನ ನಾವಷ್ಟು ಕಸರತ್ತು ಮಾಡ್ತೇವೆ, ಜೊತೆಗೆ ಡಯಟ್ ಹೆಸರಿನಲ್ಲಿ ಕೆಲ ಆಹಾರವನ್ನು ತ್ಯಜಿಸ್ತೇವೆ. ಮತ್ತೆ ಕೆಲವರು ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಮಾಡೋದಿಲ್ಲ. ಇದ್ರಿಂದ ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಸಿಗೋದಿಲ್ಲ. 
 


ದೇಹ (Body) ವು ಆರೋಗ್ಯವಾಗಿ ಮತ್ತು ಸದೃಢವಾಗಿರಲು ವಿವಿಧ ಪೋಷಕಾಂಶಗಳ ಅಗತ್ಯವಿದೆ. ದೇಹದ ಈ ಅಗತ್ಯಗಳನ್ನು  ಪೂರೈಸಲು ಸೂಕ್ತ ಆಹಾರ ಸೇವನೆ ಮಾಡುವಂತೆ ವೈದ್ಯರು ನಮಗೆ ಸಲಹೆ ನೀಡ್ತಿರುತ್ತಾರೆ. ಜೀವಸತ್ವಗಳು, ಖನಿಜಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ನಮ್ಮ ದೇಹದ ಅಂಗಗಳನ್ನು ಆರೋಗ್ಯಕರವಾಗಿಡಲು ಮತ್ತು ದೇಹವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯ. ಜೀವಸತ್ವಗಳ ಬಗ್ಗೆ ನಮಗೆ ತಿಳಿದಿದೆ. ನಮ್ಮ ದೇಹಕ್ಕೆ ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಬಿ 12 ಹೀಗೆ ಅನೇಕ ಜೀವಸತ್ವಗಳು ಬೇಕು. ದೇಹಕ್ಕೆ ವಿಟಮಿನ್-ಕೆ (Vitamin-K) ಅಗತ್ಯವೂ ಬಹಳಷ್ಟಿದೆ. ವಿಟಮಿನ್ ಕೆ ಇಲ್ಲದೆ ಹೋದ್ರೆ ಕೆಲ ಸಮಸ್ಯೆ ಎದುರಿಸಬೇಕಾಗುತ್ತದೆ. 

ರಕ್ತ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯಲ್ಲಿ ವಿಟಮಿನ್-ಕೆ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯು ದೇಹದ ಒಳಗೆ ಮತ್ತು ಹೊರಗೆ ಅತಿಯಾದ ರಕ್ತಸ್ರಾವವನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಮೂಳೆಗಳು ಬೆಳೆಯಲು ಮತ್ತು ಅವುಗಳನ್ನು ಆರೋಗ್ಯಕರವಾಗಿಡಲು ವಿಟಮಿನ್-ಕೆ ಕೂಡ ಅಗತ್ಯ ಎಂದು ವಿಜ್ಞಾನಿಗಳು ನಂಬುತ್ತಾರೆ. ದೇಹದಲ್ಲಿ ವಿಟಮಿನ್-ಕೆ ಕೊರತೆಯಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗಬಹುದು, ಹಾಗೆಯೇ ಅದರ ಕೊರತೆಯನ್ನು ನೀಗಿಸಲು ಯಾವ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ ಎಂದು ನಾವು ಹೇಳ್ತೇವೆ.

Tap to resize

Latest Videos

 ಡಯಾಬಿಟಿಕ್ ರೋಗಿಗಳು ಟ್ರಾವೆಲ್ ಸಂದರ್ಭ ಈ ವಿಷ್ಯಾನ ಮರೆಯಬೇಡಿ

ದೈನಂದಿನ ಜೀವನಕ್ಕೆ ವಿಟಮಿನ್ ಕೆ ಅವಶ್ಯಕ :  ಆರೋಗ್ಯವೇ ಭಾಗ್ಯ ಎನ್ನುವ ಕಾಲವಿದು. ನಾವು ಪ್ರತಿ ದಿನ ಆಹಾರ ಸೇವನೆ ಮಾಡ್ತೇವೆ. ಆದ್ರೆ ಯಾವ ಆಹಾರ ಉತ್ತಮ ಹಾಗೂ ಯಾವ ಆಹಾರ ಕೆಟ್ಟದ್ದು ಎಂಬುದನ್ನು ನೋಡುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಎಲ್ಲಾ ವಯಸ್ಸಿನ ಜನರು ವಿಟಮಿನ್-ಕೆ ಇರುವ ಆಹಾರವನ್ನು ಪ್ರತಿದಿನ ಸೇವಿಸುತ್ತಿರಬೇಕು. ಆರೋಗ್ಯ ತಜ್ಞರ ಪ್ರಕಾರ, ಈ ಪೋಷಕಾಂಶದ ದೈನಂದಿನ ಅವಶ್ಯಕತೆ ಪುರುಷರಿಗೆ 120 ಮೈಕ್ರೋಗ್ರಾಂಗಳು (mcg) ಮತ್ತು ಮಹಿಳೆಯರಿಗೆ 90 ಮೈಕ್ರೋಗ್ರಾಂ ( mcg) ಆಗಿದೆ.    

ವಿಟಮಿನ್ ಕೆ ಕೊರತೆಯಿಂದ ಕಾಡುವ ಸಮಸ್ಯೆಗಳು : ದೇಹದಲ್ಲಿ ವಿಟಮಿನ್-ಕೆ ಕೊರತೆಯಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವಿಟಮಿನ್ ಕೆ ಕೊರತೆಯಿದ್ದವರಿಗೆ ಸಣ್ಣ ಗಾಯವಾದ್ರೂ ಅಧಿಕ ರಕ್ತಸ್ರಾವವಾಗುತ್ತದೆ. ಬಹುಬೇಗ ಗಾಯವಾಗುವುದು, ಉಗುರುಗಳ ಕೆಳಗೆ ರಕ್ತ ಹೆಪ್ಪುಗಟ್ಟಿದಂತೆ ಗೋಚರಿಸುವುದು, ಮಲದ ಬಣ್ಣ ಕಪ್ಪಾಗುವುದು ಅಥವಾ ಮಲದಲ್ಲಿ ರಕ್ತ ಬರುವುದು. ಆದ ಗಾಯ ಬೇಗ ಗುಣವಾಗದೆ ಇರುವುದು ಇವೆಲ್ಲವೂ ದೇಹದಲ್ಲಿ ಅಧಿಕ ರಕ್ತಸ್ರಾವದ ಲಕ್ಷಣದ ಚಿಹ್ನೆಗಳಾಗಿವೆ. 

ವಿಟಮಿನ್-ಕೆ ಕೊರತೆ ನೀಗಿಸುವುದು ಹೇಗೆ ? : ವಿಟಮಿನ್ ಕೆ ಕೊರತೆಯಾದ್ರೆ ಹೆಚ್ಚು ಟೆನ್ಷನ್ ಮಾಡಿಕೊಳ್ಳಬೇಕಾಗಿಲ್ಲ. ಸಾಮಾನ್ಯವಾಗಿ  ತಜ್ಞರು ವಿಟಮಿನ್-ಕೆ ಯ ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳ ಹೆಚ್ಚಿನ ಸೇವನೆಗೆ ಒತ್ತು ನೀಡುತ್ತಾರೆ. ಹಸಿರು ಎಲೆಗಳ ತರಕಾರಿಗಳಾದ ಪಾಲಕ್, ಲೆಟಿಸ್ ಮತ್ತು ಬ್ರೊಕೊಲಿ, ಮಾಂಸ-ಚೀಸ್, ಮೊಟ್ಟೆ, ಕಡಲೆ ಮತ್ತು ಸೋಯಾಬೀನ್ ಇತ್ಯಾದಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ವಿಟಮಿನ್ ಇರುತ್ತದೆ. ಆಹಾರದಲ್ಲಿ ಇವುಗಳನ್ನು ಸೇರಿಸುವ ಮೂಲಕ ಈ ವಿಟಮಿನ್ ಅಗತ್ಯಗಳನ್ನು ಸುಲಭವಾಗಿ ಪೂರೈಸಬಹುದು.  

ಹಲವು ರೋಗಗಳಿಗೆ ಗುಡ್ ಬೈ ಹೇಳುತ್ತೆ ಶೇಂಗಾ

ವಿಟಮಿನ್ ಕೆ ಕೊರತೆಯ ಸಮಸ್ಯೆಗಳು :  ವಯಸ್ಕರಲ್ಲಿ ವಿಟಮಿನ್-ಕೆ ಕೊರತೆ ಕಾಣಿಸಿಕೊಂಡಾಗ ಅದಕ್ಕೆ ಸರಿಯಾದ ಆರೈಕೆ ಹಾಗೂ ಚಿಕಿತ್ಸೆ ಬೇಕು. ಇಲ್ಲದೆ ಹೋದ್ರೆ  ಇದು ಅತಿಯಾದ ರಕ್ತಸ್ರಾವಕ್ಕೆ ಕಾರಣವಾಗಬಹುದು. ಇದು ಅಪಾಯಕಾರಿ. ದೀರ್ಘಕಾಲದಿಂದ ರಕ್ತಸ್ರಾವ ಆಗ್ತಿದ್ದು,ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಮಿದುಳಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಸಾವಿನ ಅಪಾಯವನ್ನೂ ತಳ್ಳಿ ಹಾಕುವಂತಿಲ್ಲ. ಈ ಅಪಾಯದಿಂದ ದೂರವಿರಲು ಪ್ರತಿ ದಿನ ವಿಟಮಿನ್ ಕೆಯುಕ್ತ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿಯಾದ್ರೂ ಸೇವನೆ ಮಾಡಿ. 


 

click me!