Health Tips : ಆರೋಗ್ಯಕ್ಕೆ ಒಳ್ಳೆದು ಅಂತಾ ಅತಿಯಾಗಿ ದಾಳಿಂಬೆ ತಿನ್ಬೇಡಿ

By Suvarna NewsFirst Published May 11, 2022, 5:45 PM IST
Highlights

ಆರೋಗ್ಯದ ಬಗ್ಗೆ ಜನರು ಜಾಗೃತರಾಗ್ತಿದ್ದಾರೆ. ಕೊರೊನಾ ನಂತ್ರ ಹಣ್ಣು,ತರಕಾರಿ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಆಹಾರ ಯಾವುದೇ ಇರಲಿ, ಅದನ್ನು ಒಂದು ಪ್ರಮಾಣದಲ್ಲಿ ಸೇವನೆ ಮಾಡ್ಬೇಕು. ಯಾವುದು ಹೆಚ್ಚಾದ್ರೂ ದೇಹ ಸಹಿಸೋದಿಲ್ಲ.
 

ಹಣ್ಣು (Fruit) ಆರೋಗ್ಯಕ್ಕೆ ಒಳ್ಳೆಯದು. ಇದು ಸಾರ್ವಕಾಲಿಕ ಸತ್ಯ. ಅನೇಕರು ಪ್ರತಿ ದಿನ ಹಣ್ಣುಗಳನ್ನು ತಿನ್ನಲು ಇಷ್ಟಪಡ್ತಾರೆ. ದೇಹವನ್ನು ಆರೋಗ್ಯ (Health) ವಾಗಿಟ್ಟುಕೊಳ್ಳಲು ಹಾಗೂ ದೇಹಕ್ಕೆ ಪೋಷಕಾಂಶ (Nutrition) ಗಳನ್ನು ನೀಡಲು ಜನರು ಹಣ್ಣುಗಳನ್ನು ತಿನ್ನುತ್ತಾರೆ. ಹಣ್ಣುಗಳ ವಿಷಯಕ್ಕೆ ಬಂದರೆ ದಾಳಿಂಬೆ (Pomegranate) ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ದಾಳಿಂಬೆ ಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿಯಿದೆ. ಹಾಗೆ ಅನೇಕ ರೀತಿಯ ಪೌಷ್ಟಿಕಾಂಶಗಳು ಅದರಲ್ಲಿದೆ. ದಾಳಿಂಬೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ವೈರಲ್ ಮತ್ತು ಆಂಟಿ ಟ್ಯೂಮರ್ ಗುಣವಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲವಿದೆ. ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಧುಮೇಹ, ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡುವುದಲ್ಲದೆ ಅನೇಕ ರೋಗಗಳಿಗೆ ದಾಳಿಂಬೆ ಹಣ್ಣು ಮದ್ದು. ಮಕ್ಕಳಲ್ಲಿ ಜ್ಞಾಪಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ದಾಳಿಂಬೆ ಹಣ್ಣು ದೂರ ಮಾಡುತ್ತದೆ. ಹಾಗೆಯೇ ಗರ್ಭಿಣಿಯರಿಗೆ ದಾಳಿಂಬೆ ಹಣ್ಣು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ದಾಳಿಂಬೆ ಹಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವ ಕಾರಣ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಹಾಗೆ ಮೂಳೆಗಳನ್ನು ಬಲಪಡಿಸಲು ಇದು ನೆರವಾಗುತ್ತದೆ. ಹೆಚ್ಚಿನ ಜನರು ದಾಳಿಂಬೆ ರಸವನ್ನು ತುಂಬಾ ಇಷ್ಟಪಡುತ್ತಾರೆ. ಬೆಳಿಗ್ಗೆ ಉಪಹಾರದ ಜೊತೆ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಸೇವನೆ ಮಾಡುವವರಿದ್ದಾರೆ. ಆದ್ರೆ ಯಾವುದೂ ಅತಿಯಾಗಬಾರದು. ದಾಳಿಂಬೆ ಕೂಡ ಇದ್ರಿಂದ ಹೊರತಾಗಿಲ್ಲ. ದಾಳಿಂಬೆಯನ್ನು ಅತಿಯಾಗಿ ಸೇವಿಸಿದರೆ, ಅದು ದೇಹಕ್ಕೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡುತ್ತದೆ. ದಾಳಿಂಬೆಯನ್ನು ಹೆಚ್ಚು ತಿನ್ನುವುದರಿಂದ ಕೆಮ್ಮು, ಅಲರ್ಜಿ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ದಾಳಿಂಬೆ ಹಣ್ಣು ಹಾಗೂ ರಸದ ಅತಿಯಾದ ಸೇವನೆಯಿಂದ ಏನೆಲ್ಲ ನಷ್ಟವಿದೆ ಎಂಬುದನ್ನು ನಾವಿಂದು ಹೇಳ್ತೇವೆ. 

ದಾಳಿಂಬೆ ಹಣ್ಣಿನ ಅತಿ ಸೇವನೆಯಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ : 

ಕಾಡಬಹುದು ಕೆಮ್ಮಿನ ಸಮಸ್ಯೆ : ದಾಳಿಂಬೆ ಹಣ್ಣನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ಮಾತ್ರ ಪ್ರಯೋಜನ ಹೆಚ್ಚು. ಆದರೆ ಹೆಚ್ಚು ದಾಳಿಂಬೆಯನ್ನು ಸೇವಿಸಿದ್ರೆ ಕೆಮ್ಮು ಶುರುವಾಗುವ ಸಾಧ್ಯತೆಯಿದೆ. ದಾಳಿಂಬೆ ಹಣ್ಣಿನಲ್ಲಿ ಕೆಲವು ಅಂಶಗಳಿದ್ದು, ಅದು ಗಂಟಲು ನೋವಿಗೆ ಕಾರಣವಾಗುತ್ತದೆ. ನೋಯುತ್ತಿರುವ ಗಂಟಲಿನ ಹೊರತಾಗಿ ನೀವು ನಿರಂತರವಾಗಿ ದಾಳಿಂಬೆಯನ್ನು ತಿನ್ನುತ್ತಿದ್ದರೆ, ಅದು ಕೆಮ್ಮಾಗಿ ನಿಮ್ಮನ್ನು ಕಾಡುತ್ತದೆ.

NEW STUDY : ಎಸ್ಪ್ರೆಸೊ ಕಾಫಿ ಪ್ರಿಯರಿಗೆ ಶಾಕಿಂಗ್…! ಮಹಿಳೆಯರಿಗಿಂತ ಪುರುಷರಿಗೆ ಅಪಾಯಕಾರಿ ಈ ಪಾನೀಯ

ಚರ್ಮದ ಅಲರ್ಜಿಯ ಅಪಾಯ : ದಾಳಿಂಬೆಯ ಮಿತವಾದ ಸೇವನೆ ಚರ್ಮಕ್ಕೆ ಒಳ್ಳೆಯದು. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಚರ್ಮದ ಟೋನರ್ ಆಗಿ ಕೆಲಸ ಮಾಡುತ್ತದೆ. ಆದ್ರೆ ಅತಿಯಾಗಿ ದಾಳಿಂಬೆಯನ್ನು ಸೇವಿಸುತ್ತಿದ್ದರೆ ಅಲರ್ಜಿಯಾಗುವ ಸಾಧ್ಯತೆಯಿರುತ್ತದೆ. ದಾಳಿಂಬೆಯನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ. ಅಲರ್ಜಿ ತುರಿಕೆ ಕೂಡ ನಿಮ್ಮನ್ನು ಕಾಡುವ ಸಾಧ್ಯತೆಯಿದೆ. ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಂಡು ನೀವು ಹಣ್ಣಿನ ಸೇವನೆ ಕಡಿಮೆ ಮಾಡದೆ ಹೋದಲ್ಲಿ  ಕೆಲವೊಮ್ಮೆ ಗಂಭೀರ ಕಾಯಿಲೆಯ ಅಪಾಯವು ಹೆಚ್ಚಾಗುತ್ತದೆ.

ಲೈಂಗಿಕ ಕ್ರಿಯೆ ಮಾಡದಿದ್ದರೆ ಹೀಗೆಲ್ಲಾ ಆಗುತ್ತೆ ಅನ್ನೋದು ನಿಮ್ಗೆ ಗೊತ್ತಿತ್ತಾ ?

ಅಸಿಡಿಟಿಗೆ ಕಾರಣವಾಗುತ್ತೆ ದಾಳಿಂಬೆ ರಸ : ದಾಳಿಂಬೆಯ ಅತಿಯಾದ ಸೇವನೆಯೂ ಅಸಿಡಿಟಿಗೆ ಕಾರಣವಾಗಬಹುದು. ದೇಹಕ್ಕೆ ತನ್ನದೇ ಆದ ಸ್ವಭಾವವಿದೆ. ದೇಹಕ್ಕೆ ಅತಿ ತಣ್ಣನೆಯ ಆಹಾರ ನೀಡಿದ್ರೆ ಸಮಸ್ಯೆಯಾಗುತ್ತದೆ. ಹಾಗೆ ಅತಿ ಬಿಸಿ ಆಹಾರ ನೀಡಿದ್ರೂ ಅದಕ್ಕೆ ಹೊಂದಿಕೊಳ್ಳುವುದು ಕಷ್ಟ. ದಾಳಿಂಬೆ ದೇಹಕ್ಕೆ ತಂಪನ್ನು ನೀಡುತ್ತದೆ. ದಾಳಿಂಬೆಯನ್ನು ಅತಿಯಾಗಿ ಸೇವಿಸುವುದರಿಂದ ಅಸಿಡಿಟಿ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ದಾಳಿಂಬೆ ಹಣ್ಣನ್ನು ಅತಿಯಾಗಿ ಸೇವನೆ ಮಾಡಬಾರದು. 
 

click me!