ಮಸ್ಕಿಟೋ ಕಾಯಿಲ್ ಹೊಗೆ ಸೊಳ್ಳೆ ಮಾತ್ರವಲ್ಲ, ಮನುಷ್ಯನ ಜೀವವನ್ನೂ ತೆಗೀಬೋದು !

Published : May 11, 2022, 03:24 PM ISTUpdated : May 11, 2022, 03:27 PM IST
ಮಸ್ಕಿಟೋ ಕಾಯಿಲ್ ಹೊಗೆ ಸೊಳ್ಳೆ ಮಾತ್ರವಲ್ಲ, ಮನುಷ್ಯನ ಜೀವವನ್ನೂ ತೆಗೀಬೋದು !

ಸಾರಾಂಶ

ಮಾರುಕಟ್ಟೆಯಲ್ಲಿ ಸೊಳ್ಳೆಗಳನ್ನು ಓಡಿಸಲೆಂದೇ ಹಲವು ರೀತಿಯ ಮಾಸ್ಕಿಟೋ ಕಾಯಿಲ್‌ಗಳು (mosquito coils) ಲಭ್ಯವಿದೆ. ಇವು ಸೊಳ್ಳೆಗಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ನಮ್ಮ ಆರೋಗ್ಯದ (Health) ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವುದು ಮಾತ್ರ ಖಂಡಿತ. ಹೀಗಾಗಿಯೇ ಈ ಸೊಳ್ಳೆ ಕಾಯಿಲ್‌ಗಳನ್ನು ಬಳಸುವ ಮುನ್ನ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು.

ಮಲಗುವಾಗ ನೆಮ್ಮದಿಯಿಂದ ಮಲಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ನೊಣ, ಸೊಳ್ಳೆಗಳ ಕಾಟವಿದ್ದಾಗ ನೆಮ್ಮದಿಯಿಂದ ಮಲಗಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಸೊಳ್ಳೆಗಳ ಕಾಟ ಹೇಗಿರುತ್ತೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತೇ ಇರುತ್ತದೆ. ರಾತ್ರಿ ಹೊತ್ತಿನಲ್ಲಿ ಫ್ಯಾನ್‌, ಕಾಯಿಲ್‌ ಯಾವುದೂ ಇಲ್ಲದಿದ್ದರೆ ಸೊಳ್ಳೆಗಳು ಕಿವಿಯ ಬಳಿ ಗುಂಯ್‌ ಎನ್ನುತ್ತಾ ಕಿರಿಕಿರಿ ಮಾಡುತ್ತವೆ. ಸಾಲದ್ದಕ್ಕೆ ಅವುಗಳು ಕಚ್ಚಿ ಉಂಟಾಗುವ ತುರಿಕೆಯನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಡೆಂಗ್ಯು, ಚಿಕನ್‌ಗುನ್ಯಾ, ಮಲೇರಿಯಾದಂತಹಾ ರೋಗಗಳು ಸಹ ಬರುತ್ತವ. ಹೀಗಾಗಿಯೇ ​ಆರೋಗ್ಯದ (Health) ಮೇಲೆ ಪರಿಣಾಮ ಬೀರೋದು ಬೇಡ ಅಂತ ಹೆಚ್ಚಿನವರು ಮಾಸ್ಕಿಟೋ ಕಾಯಿಲ್‌ (mosquito coils) ಉಪಯೋಗಿಸುತ್ತಾರೆ.

ಮಾರುಕಟ್ಟೆಯಲ್ಲಿ ಸೊಳ್ಳೆಗಳನ್ನು ಓಡಿಸಲೆಂದೇ ಹಲವು ರೀತಿಯ ಮಾಸ್ಕಿಟೋ ಕಾಯಿಲ್‌ಗಳು ಲಭ್ಯವಿದೆ. ಇವು ಸೊಳ್ಳೆಗಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವುದು ಮಾತ್ರ ಖಂಡಿತ. ಹೀಗಾಗಿಯೇ ಈ ಸೊಳ್ಳೆ ಕಾಯಿಲ್‌ಗಳನ್ನು ಬಳಸುವ ಮುನ್ನ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು.

Summer ಬಂತೆಂದರೆ ಸೊಳ್ಳೆ ಕಾಟ, ರಾಸಾಯನಿಕಗಳಿಲ್ಲದೇ ಹೀಗ್ ಓಡಿಸಿ

ಸೊಳ್ಳೆ ಕಾಯಿಲ್‌ಗಳು ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಕೀಟನಾಶಕಗಳನ್ನು ಹೊಂದಿರುವ ಸೊಳ್ಳೆಗಳು ಸೊಳ್ಳೆಗಳನ್ನು ಕೊಲ್ಲುತ್ತವೆ. ಆದರೆ ಆರೊಮ್ಯಾಟಿಕ್ ಪದಾರ್ಥಗಳನ್ನು ಹೊಂದಿರುವವುಗಳು ಸೊಳ್ಳೆಗಳನ್ನು ಹಿಮ್ಮೆಟ್ಟಿಸುತ್ತದೆ ಅಥವಾ ಅವು ಕಚ್ಚುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದರೆ ಈ ಎರಡೂ ಕಾಯಿಲ್‌ಗಳನ್ನು ಬಳಸುವುದರಿಂದಲೂ ಅಪಾಯ (Danger) ಕಡಿಮೆಯೇನಲ್ಲ. ಹಾಗಿದ್ರೆ ಕಾಯಿಲ್ ಹಚ್ಚಿಡೋದ್ರಿಂದ, ಅಥವಾ ಸೊಳ್ಳೆಬತ್ತಿಗಳಿಂದ ಹೊರಹೊಮ್ಮುವ ಹೊಗೆಯಿಂದ ಏನೆಲ್ಲಾ ತೊಂದ್ರೆಯಿದೆ ತಿಳಿದುಕೊಳ್ಳೋಣ.

​ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ
ಒಂದು ಅಧ್ಯಯನವು ಒಂದು ಸೊಳ್ಳೆ ಸುರುಳಿಯನ್ನು ಸುಡುವುದರಿಂದ ಉತ್ಪತ್ತಿಯಾಗುವ ಕಣಗಳು 75-137 ಸಿಗರೇಟ್‌ಗಳನ್ನು ಸುಡುವುದಕ್ಕೆ ಸಮನಾಗಿರುತ್ತದೆ ಎಂದು ಅಂದಾಜಿಸಿದೆ. ಸೊಳ್ಳೆ ಕಾಯಿಲ್ ಹೊಗೆಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ (Lungs) ಕ್ಯಾನ್ಸರ್‌ನಂತಹ ಹೆಚ್ಚು ಗಂಭೀರವಾದ ಆರೋಗ್ಯ ಪರಿಣಾಮಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.

ಮಲೇರಿಯಾಕ್ಕೆ ಕಾರಣವಾಗುವ ಸೊಳ್ಳೆಗಳನ್ನು ಗುರುತಿಸುವುದು ಈಗ ಸುಲಭ !

ಸೊಳ್ಳೆಬತ್ತಿಗಳಲ್ಲಿ ಕ್ಯಾನ್ಸರ್ (Cancer) ಕಾರಕ ಪದಾರ್ಥಗಳಿವೆ. ಇದರಿಂದಾಗಿ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಇಷ್ಟು ಮಾತ್ರವಲ್ಲದೆ, ನೀವು ಮುಚ್ಚಿದ ಕೋಣೆಯಲ್ಲಿ ಸೊಳ್ಳೆ ಬತ್ತಿಯನ್ನು ಬಳಸುತ್ತಿದ್ದರೆ, ಅದರ ಹೊಗೆಯು ಸಿಗರೇಟ್‌ಗಳನ್ನು ಉಸಿರಾಡುವುದಕ್ಕೆ ಸಮಾನವಾಗಿರುತ್ತದೆ. ಕ್ವಿಲ್‌ನಲ್ಲಿ ಕಂಡುಬರುವ ಪೈರೆಥ್ರಿನ್ ಒಂದು ಕೀಟನಾಶಕವಾಗಿದ್ದು ಅದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ.

ಉಸಿರಾಟ ಸಂಬಂಧಿ ಸಮಸ್ಯೆ
ಸೊಳ್ಳೆ ಬತ್ತಿ ಹಚ್ಚಿಡುವುದರಿಂದ ಇದರ ರಾಸಾಯನಿಕಯುಕ್ತ ಹೊಗೆಗೆ ಉಸಿರಾಟ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಅದರಲ್ಲೂ ಅಸ್ತಮಾ, ಒಣಕೆಮ್ಮು ಮೊದಲಾದ ಆರೋಗ್ಯ ಸಮಸ್ಯೆ ಇರುವವರು ದೀರ್ಘಕಾಲ ಮೊಸ್ಕಿಟೋ ಕಾಯಿಲ್‌ಗೆ ಒಡ್ಡಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಮಾರಕವೆಂದು ಪರಿಗಣಿಸಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ನಿವಾರಕ ಯಂತ್ರಗಳು ಕೂಡಾ ನಮ್ಮ ಆರೋಗ್ಯಕ್ಕೂ ಹಾನಿಕಾರಕ. ಎಲ್ಲೋ ಒಂದು ಕಡೆ ನಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುವ, ಮುಚ್ಚಿದ ಕೋಣೆಯಲ್ಲಿ ಯಂತ್ರದಿಂದ ಹೊರಬರುವ ವಾಸನೆಯನ್ನೂ ನಾವು ಉಸಿರಾಡುತ್ತೇವೆ.

​ಅಲರ್ಜಿಯನ್ನುಂಟು ಮಾಡುವ ಸಾಧ್ಯತೆಯಿದೆ
ಈ ಉತ್ಪನ್ನಗಳು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು ಅಥವಾ ಉಲ್ಬಣಗೊಳಿಸಬಹುದು. ಅವರು ಕಣ್ಣುಗಳನ್ನು ಕೆರಳಿಸಬಹುದು ಅಥವಾ ಅಲರ್ಜಿಯನ್ನು ಉಂಟುಮಾಡಬಹುದು. ಸೊಳ್ಳೆ ಸುರುಳಿಗಳ ಹೊಗೆಗೆ ಒಡ್ಡಿಕೊಳ್ಳುವುದಕ್ಕೆ ಸಂಬಂಧಿಸಿದ ಅಡ್ಡಪರಿಣಾಮಗಳೆಂದರೆ ತಲೆನೋವು, ಕೆಮ್ಮು, ಗಂಟಲು ನೋವು, ವಾಕರಿಕೆ ಮತ್ತು ತಲೆತಿರುಗುವಿಕೆಯನ್ನು ಒಳಗೊಂಡಿರಬಹುದು. ಇದು ಆಸ್ತಮಾ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD), ಮತ್ತು ತಲೆನೋವುಗಳಂತಹ ಉಸಿರಾಟದ ಪರಿಸ್ಥಿತಿಗಳನ್ನು ಸಹ ಪ್ರಚೋದಿಸಬಹುದು.

ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆಗಳನ್ನು ಬಳಸುವುದು ಬಹಳ ಒಳ್ಳೆಯದು. ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವುದು ಅಥವಾ ಸೊಳ್ಳೆ ನಿವಾರಕಗಳಂತಹ ಕೆಲವು ಸುರಕ್ಷಿತ ಸೊಳ್ಳೆ ತಡೆಗಟ್ಟುವ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..