ಮನೆಯಲ್ಲಿ ಮಾಡಿದ ಕಾಫಿಗಿಂತ ಮೆಷಿನ್ ನಲ್ಲಿ ಬಂದ ಕಾಫಿ ರುಚಿಯೇ ಹೆಚ್ಚು. ಅನೇಕರು ಇದೇ ಕಾರಣಕ್ಕೆ ಆಫೀಸ್ ನಲ್ಲಿ ನಾಲ್ಕೈದು ಬಾರಿ ಕಾಫಿ ಹೀರ್ತಾರೆ. ಆದ್ರೆ ಈ ಎಸ್ಪ್ರೆಸೊ ಕಾಫಿಗಳನ್ನು ಬಾಯಿಗಿಡುವ ಮೊದಲು ಈ ವಿಷ್ಯ ತಿಳಿದುಕೊಳ್ಳಿ.
ಬೆಳಿಗ್ಗೆ ಎದ್ದಾಗ ಬೆಡ್ ಕಾಫಿ (Bed Coffee) ಸೇವನೆ ಮಾಡುವವರು ಅನೇಕರಿದ್ದಾರೆ. ಬೆಳಿಗ್ಗೆನಿಂದ ರಾತ್ರಿಯವರೆಗೆ ನಾಲ್ಕೈದು ಬಾರಿ ಕಾಫಿ ಹೀರುವ ಜನರಿದ್ದಾರೆ. ಕಾಫಿ ಅವರಿಗೆ ಚಟವಾಗಿರುತ್ತದೆ. ಕಾಫಿ ಮೂಡ್ ಫ್ರೆಶ್ ಮಾಡುತ್ತದೆ ಎನ್ನುವ ಕಾರಣಕ್ಕೆ ಕಚೇರಿಯಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಕಾಫಿ ಸೇವನೆ ಮಾಡುವವರಿದ್ದಾರೆ. ಕಾಫಿಯಲ್ಲಿಯೇ ಅನೇಕ ವಿಧಗಳಿವೆ. ಅದ್ರಲ್ಲಿ ಎಸ್ಪ್ರೆಸೊ (Espresso) ಕೂಡ ಒಂದು. ಎಸ್ಪ್ರೆಸೊವನ್ನು ಶ್ರೀಮಂತ ಶೈಲಿಯ ಕಾಫಿ ಎನ್ನಬಹುದು. ಇಟಾಲಿಯನ್ (Italian) ಮೂಲಕ ಕಾಫಿ ಬ್ಯೂಯಿಂಗ್ ವಿಧಾನವನ್ನು ಎಸ್ಪ್ರೆಸೊ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಸ್ಪ್ರೆಸೊ ಕಾಫಿ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಹೊಸ ಸಂಶೋಧನೆ (Research) ಯೊಂದು ಎಸ್ಪ್ರೆಸೊ ಬಗ್ಗೆ ಹೊಸ ವಿಷ್ಯವನ್ನು ಹೇಳಿದೆ.
ನಿಮಗೆಲ್ಲ ಗೊತ್ತಿರುವಂತೆ ಕಾಫಿಯನ್ನು ಮಿತವಾಗಿ ಸೇವನೆ ಮಾಡ್ಬೇಕು. ಕಾಫಿಯಲ್ಲಿರುವ ನೈಸರ್ಗಿಕ ರಾಸಾಯನಿಕಗಳು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಇದ್ರಿಂದ ಪಾರ್ಶ್ವವಾಯು ಸೇರಿದಂತೆ ಹೃದಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ರೆ ಈಗ ಹೊಸ ಸಂಶೋಧನೆ, ಎಸ್ಪ್ರೆಸೊ ಪುರುಷ ಹಾಗೂ ಮಹಿಳೆ ಇಬ್ಬರ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಿದೆ.
undefined
ನಾರ್ವೆಯ ಸಂಶೋಧಕರು ಈ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಎಸ್ಪ್ರಸೊ ಕಾಫಿ ಸೇವಿಸುವ ರೀತಿ ಮತ್ತು ಅದರಿಂದ ರಕ್ತದಲ್ಲಿ ಆಗುವ ಕೊಲೆಸ್ಟ್ರಾಲ್ ಬದಲಾವಣೆಯನ್ನು ಪತ್ತೆ ಹಚ್ಚಿದ್ದಾರೆ. ಸಂಶೋಧಕರು 40 ವರ್ಷಕ್ಕಿಂತ ಮೇಲ್ಪಟ್ಟ 21 ಸಾವಿರಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿದ್ದಾರೆ. ಕಾಫಿ ಕುಡಿಯುವುದರಿಂದ ಮಹಿಳೆಯರ ಮೇಲೆ ವಿಭಿನ್ನ ಮತ್ತು ಪುರುಷರ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ ಎಂಬುದು ಸಂಶೋಧನೆಯಿಂದ ಬಹಿರಂಗವಾಗಿದೆ.
ಬೇಸಿಗೆಯಲ್ಲಿ ಹೆಚ್ಚು ಕರಿಮೆಣಸು ತಿಂದ್ರೆ ಆರೋಗ್ಯಕ್ಕೆ ಹಾನಿ, ಹುಷಾರ್ !
ಐದಕ್ಕಿಂತ ಹೆಚ್ಚು ಬಾರಿ ಕಾಫಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಅಪಾಯ ಹೆಚ್ಚು : ದಿನಕ್ಕೆ ಮೂರರಿಂದ ಐದು ಎಸ್ಪ್ರೆಸೊಗಳನ್ನು ಸೇವಿಸುವ ಜನರು ಎಸ್ಪ್ರೆಸೊವನ್ನು ಸೇವಿಸದವರಿಗಿಂತ ಹೆಚ್ಚಿನ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುತ್ತಾರೆ. ಮೂರರಿಂದ ಐದು ಎಸ್ಪ್ರೆಸೊ ಪಾನೀಯಗಳನ್ನು ಕುಡಿಯುವ ಪುರುಷರು ಮಹಿಳೆಯರಿಗಿಂತ ಹೆಚ್ಚಿನ ಕೊಲೆಸ್ಟ್ರಾಲ್ ಹೊಂದುತ್ತಾರೆ ಎಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ.
ಆರಕ್ಕಿಂತ ಹೆಚ್ಚು ಕಪ್ ಎಸ್ಪ್ರೆಸೊ ಕಾಫಿ ಮಹಿಳೆಯರಿಗೆ ಅಪಾಯಕಾರಿ : ಅಂದರೆ ಹೆಚ್ಚು ಎಸ್ಪ್ರೆಸೊ ಕಾಫಿ ಕುಡಿಯುವುದರಿಂದ ಪುರುಷರಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಆದರೆ ಮಹಿಳೆಯರಲ್ಲಿ ಇದು ಕಡಿಮೆ. ಇತ್ತೀಚಿನ ಸಂಶೋಧನೆಯು ದಿನಕ್ಕೆ ಮೂರರಿಂದ ಐದು ಕಪ್ ಎಸ್ಪ್ರೆಸೊ ಕುಡಿಯುವ ಪುರುಷರಿಗೆ ಎಚ್ಚರಿಕೆ ನೀಡಿದೆ. ಹಾಗಾಂತ ಮಹಿಳೆಯರು ಸುರಕ್ಷಿತರು ಎಂದಲ್ಲ. ಮಹಿಳೆಯರು ಬೇಕಾಬಿಟ್ಟಿ ಎಸ್ಪ್ರೆಸೊ ಸೇವನೆ ಮಾಡುವಂತಿಲ್ಲ. ಮಹಿಳೆಯರು ಎಸ್ಪ್ರೆಸೊ ಕಾಫಿಯನ್ನು ದಿನಕ್ಕೆ ಆರಕ್ಕಿಂತ ಹೆಚ್ಚು ಬಾರಿ ಸೇವಿಸಿದರೆ ಅವರ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯವಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಫುಡ್ ಪಾಯಿಸನ್ ಜೀವ ತೆಗೆಯುವುದೇ? ಪ್ರವಾಸ ಹೋಗೋರು ಎಚ್ಚರವಾಗಿರಿ
ಎಸ್ಪ್ರೆಸೊ ಕಾಫಿ ಪ್ರಯೋಜನ : ಈ ಮೊದಲು ಎಸ್ಪ್ರೆಸೊ ಕಾಫಿಯ ಪ್ರಯೋಜನಗಳನ್ನು ಅನೇಕ ಸಂಶೋಧನೆಗಳಲ್ಲಿ ಬಹಿರಂಗಪಡಿಸಲಾಗಿದೆ. ಬಿಸಿ ನೀರಿನಲ್ಲಿ ಕಾಫಿ ಪುಡಿಯನ್ನು ಸೇರಿಸಿ ಅಥವಾ ಕುದಿಸಿ ಎಸ್ಪ್ರೆಸೊ ಕಾಫಿಯನ್ನು ತಯಾರಿಸಲಾಗುತ್ತದೆ. ತೂಕವನ್ನು ಕಡಿಮೆ ಮಾಡಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಎಸ್ಪ್ರೆಸೊ ಕಾಫಿ ಒಳ್ಳೆಯದು ಎಂದು ಅನೇಕ ಸಂಶೋಧನೆಗಳಲ್ಲಿ ಹೇಳಲಾಗಿದೆ. ಆದ್ರೆ ಯಾವ ಸಂಶೋಧಕರೂ ಅತಿಯಾದ ಸೇವನೆ ಬಗ್ಗೆ ಸಲಹೆ ನೀಡಿಲ್ಲ. ಇದರರ್ಥ ಯಾವುದನ್ನಾದರೂ ಅತಿಯಾಗಿ ಸೇವಿಸುವುದು ಅಪಾಯಕಾರಿ. "ಕಾಫಿಯ ಹೆಚ್ಚಿನ ಬಳಕೆಯಿಂದಾಗಿ, ಸಣ್ಣ ಆರೋಗ್ಯ ಸಮಸ್ಯೆಯೂ ದೊಡ್ಡ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ನೀವೂ ಎಸ್ಪ್ರೆಸೊ ಅಥವಾ ಸಾಮಾನ್ಯ ಕಾಫಿ ಪ್ರಿಯರಾಗಿದ್ದರೆ ಕಾಫಿ ಸೇವನೆಯನ್ನು ಕಡಿಮೆ ಮಾಡಿ.