ಆಕೆ ದೀಪಿಕಾಳಷ್ಟು ಸೈಜ್ ಝೀರೋ ಅಲ್ಲ, ಸಣ್ಣ ನಡುವಿನ, ಸಪೂರ ದೇಹದವಳಂತು ಅಲ್ಲವೇ ಅಲ್ಲ. ದೀಪಿಕಾಗೆ ಸಂಪೂರ್ಣ ವಿರುದ್ಧ ಅನ್ನುವಷ್ಟು ದಢೂತಿ ದೇಹದವಳು. ಜಾಲತಾಣದಲ್ಲಿ ಧೂಳೆಬ್ಬಿಸಿರೊ ‘ಬೇಷರಮ್ ರಂಗ್’ ಹಾಡಿನಲ್ಲಿ ಕುಣಿಯೋ ಯುವತಿ ಬೇರಾರು ಅಲ್ಲ, ಪ್ಲಸ್ ಸೈಜ್ ಬೆಡಗಿ ತಾನ್ವಿ ಗೀತಾ ರವಿಶಂಕರ್.
ಶೋಭಾ ಎಂ.ಸಿ, ಔಟ್ ಪುಟ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೇಷರಮ್ ರಂಗ್’ ಅಂತ ದೀಪಿಕಾ ಪಡುಕೋಣೆ ಬಿಕನಿಯಲ್ಲಿ ಬಿಂಕದಿಂದ ಕುಣಿಯುತ್ತಿದ್ದನ್ನು ನೋಡಿ ಮೈಮರೆತವರೇ ಇಲ್ಲ. ದೀಪಿಕಾ ತೊಟ್ಟ ಬಿಕನಿ, ಆಕೆಯ ಧಾರಾಳ ಮೈ ಪ್ರದರ್ಶನ ರಸಿಕರನ್ನು ಕೆಣಕುವಂತಿದ್ರೆ, ಮಡಿವಂತರನ್ನು ಕೆರಳಿಸಿದ್ರೆ. ಶೀಲ, ಅಶ್ಲೀಲ, ಬಟ್ಟೆ ಕಲರ್ ಎಲ್ಲ ವಿವಾದಗಳೆಲ್ಲ ಮುಗಿಯುವ ಹಂತಕ್ಕೆ ಬಂದ ಹೊತ್ತಲ್ಲಿ, ಇಡೀ ಇಂಟರ್ನೆಟ್ನಲ್ಲಿ ಹೊಸ ವಿಡಿಯೋವೊಂದು ಬಿರುಗಾಳಿ ಎಬ್ಬಿಸಿದೆ. ಅದೂ ‘ಬೇಷರಮ್ ರಂಗ್ ’ ಹಾಡಿನದ್ದೇ ಆದ್ರೆ, ಇಲ್ಲಿರೋದು ದೀಪಿಕಾ ಅಲ್ಲ. ದೀಪಿಕಾ ಪಡುಕೋಣೆಯ ಮೈಮಾಟಕ್ಕೆ ಮನಸೋತಿದ್ದವರು, ಈ ವಿಡಿಯೋದಲ್ಲಿ ಕುಣಿದ ಹುಡುಗಿ, ಆಕೆ ತೊಟ್ಟ ಡ್ರೆಸ್ ನೋಡಿ ಕೆಲವರು ಹೌಹಾರಿದ್ರೆ, ಇನ್ನೂ ಕೆಲವರು ಅಬ್ಬೋ ಅಂತ ಅಚ್ಚರಿಗೊಂಡಿದ್ದಾರೆ.
undefined
ಯಾಕೆ ಅಂತೀರಾ ? ಆಕೆ ದೀಪಿಕಾಳಷ್ಟು ಸೈಜ್ ಝೀರೋ ಅಲ್ಲ, ಸಣ್ಣ ನಡುವಿನ, ಸಪೂರ ದೇಹ (Slim body)ದವಳಂತು ಅಲ್ಲವೇ ಅಲ್ಲ. ದೀಪಿಕಾಗೆ ಸಂಪೂರ್ಣ ವಿರುದ್ಧ ಅನ್ನುವಷ್ಟು ದಢೂತಿ (Fat) ದೇಹದವಳು. ಜಾಲತಾಣದಲ್ಲಿ ಧೂಳೆಬ್ಬಿಸಿರೊ ‘ಬೇಷರಮ್ ರಂಗ್’ ಹಾಡಿನಲ್ಲಿ ಕುಣಿಯೋ ಯುವತಿ (Girl) ಬೇರಾರು ಅಲ್ಲ, ಪ್ಲಸ್ ಸೈಜ್ ಬೆಡಗಿ ತಾನ್ವಿ ಗೀತಾ ರವಿಶಂಕರ್.
ಪಠಾಣ್ ತಂಡಕ್ಕೆ ಮತ್ತೊಂದು ಶಾಕ್, ಬೇಷರಂ ರಂಗ್ ಹಾಡಿನ ದೀಪಿಕಾ ಸೀನ್‌ಗೆ CBFC ಕತ್ತರಿ!
31 ವರ್ಷದ ತಾನ್ವಿ ಸೋಷಿಯಲ್ ಮೀಡಿಯಾದ ಪ್ರಭಾವಿ ಯುವತಿ. ಡಾನ್ಸರ್, ವಾಯ್ಸ್ ಓವರ್ ಆರ್ಟಿಸ್ಟ್, ಅಷ್ಟೇ ಏಕೆ, ಫ್ಯಾಷನ್ ಲೋಕದಲ್ಲಿ ಆಕೆ ಜನಪ್ರಿಯ ಮಾಡೆಲ್. ತನ್ನ ದಢೂತಿ ದೇಹವನ್ನೇ ಧಾರಾಳವಾಗಿ ಪ್ರದರ್ಶಿಸುವ ಎದೆಗಾರಿಕೆಯ ತಾನ್ವಿ, ದಪ್ಪ ಎಂದು ಆಡಿಕೊಳ್ಳುತ್ತಿದ್ದವರ ಮನಃಸ್ಥಿತಿಗೆ ಸಡ್ಡು ಹೊಡೆದು ನಿಂತಿದ್ದಾರೆ.
ಆಕೆ ಅನುಭವಿಸಿದ ಅವಮಾನ, ಎದುರಿಸಿದ ಸವಾಲುಗಳು (Problems), ಸುತ್ತಮುತ್ತಲಿನ ಕೊಂಕು ಮಾತು, ವ್ಯಂಗ್ಯ, ಲೇವಡಿ.. ಅಬ್ಬಬ್ಬಾ ಒಂದೆರಡಲ್ಲ. ತಾನ್ವಿ ಹುಟ್ಟಿದ್ದು ದಕ್ಷಿಣ ಭಾರತದಲ್ಲಿ, ಓದಿದ್ದು ಪುಣೆಯಲ್ಲಿ ಎಂಜಿನಿಯರಿಂಗ್, ಈಗ ಬದುಕು ಕಟ್ಟಿಕೊಳ್ಳುತ್ತಿರುವುದು ಮುಂಬೈನಲ್ಲಿ. ಹುಟ್ಟಿನಿಂದಲೂ ‘ಸ್ವಲ್ಪ ದಪ್ಪ’ ಎಂಬ ವ್ಯಂಗ್ಯದ ಮಾತು ಕೇಳಿಕೊಂಡೇ ಬೆಳೆದ ತಾನ್ವಿ, ಮೈತೂಕದ (Weight) ಬಗ್ಗೆ ಎಂದಿಗೂ ತಲೆಕೆಡಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ, ‘ಸೌಂದರ್ಯದ ಬಗ್ಗೆ ಚಿಂತಿಸಬೇಡ, ವಿದ್ಯಾಭ್ಯಾಸದ ಬಗ್ಗೆಯಷ್ಟೇ ಚಿಂತಿಸು. ಸೌಂದರ್ಯ ಶಾಶ್ವತ ಅಲ್ಲ’ ಎಂಬ ತಾಯಿಯ ಮಾತು. ಮಹತ್ವಾಕಾಂಕ್ಷೆಯ ತಾನ್ವಿಗೆ ಬದುಕಿನ ಬಗ್ಗೆ ಕಲರ್, ಕಲರ್ ಕನಸು ಕಂಡವಳು. ಎಂಜಿನಿಯರಿಂಗ್ ಮುಗಿಸಿದ ಬಳಿಕ ಪುಣೆಯಲ್ಲಿ ಡ್ಯಾನ್ಸರ್ ಆಗಬೇಕೆಂದು ಅಕಾಡೆಮಿಯೊಂದಕ್ಕೆ ಸೇರಿದಳು.
ಅಲ್ಲಿಂದ ಶುರುವಾಯ್ತು ತಾನ್ವಿಯ ಹೋರಾಟ. ದೇಹ ತೂಕವೇ ತನ್ನ ಕಲೆಗೆ ಅಡ್ಡಿಯಾಗುತ್ತೆಂಬುದು ಅರಿವಾಗತೊಡಗಿತು. 20ಕೆಜಿಗಿಂತಲೂ ಹೆಚ್ಚು ತೂಕ ಇಳಿಸಲೇಬೇಕೆಂಬ ಒತ್ತಡ. ತೂಕು ಇಳಿಸುವ ತಾನ್ವಿ ಪ್ರಯತ್ನ ಕೈಕೊಡುತ್ತಲೇ ಇತ್ತು. ಕಾರಣ, ಆಕೆಗಿದ್ದದ್ದು eating disorder- ತಿನ್ನುವ ನ್ಯೂನ್ಯತೆ. ತನಗಿರುವ ನ್ಯೂನ್ಯತೆಯ ಅರಿವೇ ಇರಲಿಲ್ಲ. ದಿನಕ್ಕೆ 12 ರಿಂದ 14 ಗಂಟೆ ದುಡಿಯುತ್ತಿದ್ದ ತಾನ್ವಿ, ಕಷ್ಟಪಟ್ಟು ಇಳಿಸಿದ್ದು 25ಕೆಜಿ ತೂಕ. ಇಷ್ಟೆಲ್ಲ ಆದರೂ, ತಾನ್ವಿಗೆ ಅದೃಷ್ಟ ಕೈಕೊಟ್ಟಿತ್ತು. 2011ರಲ್ಲಿ ಡ್ಯಾನ್ಸ್ ಷೋ ಅಕಾಡೆಮಿಯಿಂದ ತಾನ್ವಿಯನ್ನು ಹೊರಗಟ್ಟಿಬಿಟ್ಟಿತು. ಡಾನ್ಸರ್ಗೆ ಬೇಕಿರೋದೇ ‘ಸುಂದರ ದೇಹ’ ಅನ್ನೋ ಒನ್ಲೈನ್ ಕಾರಣ ಕೊಟ್ಟು ಹೊರಗಟ್ಟಿತು. ತಾನ್ವಿ ಮಾನಸಿಕವಾಗಿ ಕುಸಿದು ಹೋದಳು. ಅವಮಾನ, ಸಂಕಟದಿಂದ ತತ್ತರಿಸಿಹೋದಳು. ದೇಹ ತೂಕ ಉಳಿಸುವ ಆಕೆಯ ಪ್ರಯತ್ನಗಳೂ ಯಶಸ್ವಿಯಾಗಲಿಲ್ಲ.
ಬರೀ ಕೇಸರಿ ಬಿಕನಿಯಿಂದ ಸುದ್ದಿಯಾಗಿದ್ದ ಡಿಪ್ಪಿ ಬೇರೆ ಏನೋ ಸುದ್ದಿ ಕೊಡ್ತಿದ್ದಾರೆ!
ಹೀಗಿರುವಾಗಲೇ ಲಾಕ್ಮೆ ಫ್ಯಾಷನ್ ವೀಕ್ (Lakme Fashion Week) ಆಕೆಯ ಬದುಕಿನ ತಿರುವನ್ನೇ ಬದಲಿಸಿ. ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ದಢೂತಿ ದೇಹದ ಯುವತಿರ ಮೊದಲ ಫ್ಯಾಷನ್ ಷೋದಲ್ಲಿ (first plus-size fashion show ) ತಾನ್ವಿ ಗೀತಾ ರವಿಶಂಕರ್ಗೆ ಅವಕಾಶ ಸಿಕ್ಕಬಿಟ್ಟಿತು. ದಪ್ಪಗಿರುವ ಯುವತಿಯರು ಅನುಭವಿಸುತ್ತಿದ್ದ ನೋವು, ಕೀಳರಿಮೆ, ತಮ್ಮ ಎಲ್ಲ ಆಸೆಗಳನ್ನು, ತಮ್ಮ ದಢೂತಿ ದೇಹವೇ ನುಂಗಿ ಹಾಕುತ್ತಿದೆ ಎಂಬ ಸಂಕಟ. ತಾವಿಚ್ಚೆ ಪಟ್ಟ ಬಟ್ಟೆ ಹಾಕುವಂತಿಲ್ಲ, ಸ್ಲೀವ್ ಲೆಸ್ ಟೀ ಶರ್ಟ್, ಮಂಡಿವರೆಗಿನ ಸ್ಕರ್ಟ್.. ಹುಂ ಯಾವುದನ್ನೂ ತೊಡುವಂತೆಯೇ ಇಲ್ಲ ಎಂಬ ನೋವು ಹಿಂಡಿ ಹಾಕುತ್ತಿತ್ತು. ಆ ಮಾಡೆಲ್ಗಳ ಮಾತು, ತಾನ್ವಿಯಲ್ಲಿ ಹೊಸ ಯೋಚನೆ ಹುಟ್ಟುಹಾಕಿತು, ಅದೇ ಆಕೆಯ ಈಗಿನ ಡೋಂಟ್ ಕೇರ್ ಪ್ರವೃತ್ತಿಗೆ ಕಾರಣವಾಯ್ತು. ಅಲ್ಲಿಂದ ತಾನ್ವಿ ಹಿಂದಿರುಗಿ ನೋಡಲೇ ಇಲ್ಲ. ತನ್ನ ದಢೂತಿ ದೇಹ, ಫ್ಯಾಷನ್ ಲೋಕದಲ್ಲಿ ಮಿಂಚಬೇಕೆಂಬ ಕನಸು, ಎಲ್ಲವನ್ನೂ ತನ್ನ ಬ್ಲಾಗ್ನಲ್ಲಿ ಬರೆದುಕೊಂಡಳು. ಈ ಮಧ್ಯೆ, ಕಾಸ್ಮೋಪಾಲಿಟಿನ್ ಬಾಡಿ ಲವ್ ಇನ್ಫ್ಲೂಯೆನ್ಸರ್-2022 ಸ್ಪರ್ಧೆಯಲ್ಲಿ ಗೆದ್ದು ಬೀಗಿದಳು.
ತಾನ್ವಿ, ಸತತ ಹೋರಾಟ, ಸೋಲು-ಗೆಲುವಿನಿಂದ ಗಟ್ಟಿಯಾಗುತ್ತಲೇ ಇದ್ದರೂ, ಫ್ಯಾಷನ್ ಲೋಕಕ್ಕೆ ಕಾಲಿಟ್ಟಾಗ ಎದುರಾಗಿದ್ದ ಟ್ರೋಲ್ ಎಂಬ ಪೆಡಂಭೂತ. ತಾನ್ವಿಯ ದಢೂತಿ ದೇಹ, ಜಾಲತಾಣದ ಟ್ರೋಲರ್ಗಳಿಗೆ ಆಹಾರವಾಯ್ತು. ದಿನವೂ ಆಕೆಯನ್ನು ಟ್ರೋಲ್ ಮಾಡತೊಡಗಿದಳು. ಆದ್ರೆ, ಟ್ರೋಲರ್ಗಳ ಅಸಹ್ಯಕರ ಕಾಮೆಂಟ್ಗಳು ತಾನ್ವಿಯನ್ನು ಈ ಬಾರಿ ಕುಗ್ಗಿಸಲಿಲ್ಲ. ನೆಗೆಟಿವ್ ಕಾಮೆಂಟ್ಗಳಿಗೆ ತಲೆಕೆಡಿಸಿಕೊಳ್ಳದೇ, ತನ್ನ ಗುರಿ (Aim) ಬೆನ್ನತ್ತಿ ನಿಂತಳು.
ಯಾರಿಗೇಕೆ ಬಾದರ್ ಮಾಡಬೇಕು, ಬೇಶರಮ್ ಹಾಡಿಗೆ ಪ್ಲಸ್ ಸೈಜ್ ಯುವತಿ ಡ್ಯಾನ್ಸಿಗೆ ಫ್ಯಾನ್ಸ್ ಫಿದಾ!
ಈಗ ತಾನ್ವಿ, ಜಾಲತಾಣದ ಪ್ರಭಾವಿ ಯುವತಿ. ತನ್ನಂತೆ ವಿಪರೀತ ದೇಹ ತೂಕ ಹೊಂದಿರುವ ಕೋಟ್ಯಂತರ ಯುವತಿಯರ ಪಾಲಿನ ಕಣ್ಮಣಿ. ನಾಚಿಕೆ, ಮುಜುಗರ ಯಾವುದಕ್ಕೂ ಕ್ಯಾರೆ ಎನ್ನದೇ, ದೀಪಿಕಾಳಿಗೆ ಸವಾಲೊಡ್ಡುವಂತೆ ‘ಬೇಷರಮ್ ರಂಗ್’ ಅಂತ ಮೈಕುಲುಕುತ್ತಿದ್ದಾಳೆ. ‘ನಮ್ಮನ್ನು ಬದುಕಿಸುತ್ತಾ, ಬದುಕು ಸಾಗಿಸುವಷ್ಟೇ ದೇಹದ ಕೆಲಸ. ದೇಹ ಸುಂದರವಾಗಿಯೇ ಇರಬೇಕೆಂದು ಆಸೆಪಡುವುದನ್ನು ನಿಲ್ಲಿಸಿ. ನೀವು ಸುಂದರ, ಅದ್ಭುತ ವ್ಯಕ್ತಿ. ಎಲ್ಲ ಪ್ರೀತಿ, ಗೌರವ ಪಡೆಯುವ ಅಧಿಕಾರ ನಿಮಗಿದೆ. ಬೇರೆಯವರಿಂದ ಸಲಹೆಗಳನ್ನು ಪಡೆಯುವುದನ್ನು ನಿಲ್ಲಿಸಿ, ನಿಮಗಿಷ್ಟ ಬಂದಂತೆ ಬದುಕಲು ಕಲಿಯಿರಿ, ಬದುಕಿ’ ಎನ್ನುತ್ತಾಳೆ ತಾನ್ವಿ.
ಈಗ ಹೇಳಿ ತಾನ್ವಿಗೂ ದೀಪಿಕಾ ಪಡುಕೋಣೆಗೂ ಏನ್ ವ್ಯತ್ಯಾಸ ಇದೆ ?