
ಆಹಾರದ ಬಗ್ಗೆ ಪರಿಜ್ಞಾನವಿರುವವರು ಅತ್ಯುತ್ತಮವಾದ ಡಯೆಟ್ ಅನುಸುರಿತ್ತಾರೆ. ಕೆಲವು ಡಯೆಟ್ ಪದ್ಧತಿಗಳು ಆಹಾರದ ಪ್ರಮಾಣಕ್ಕಿಂತ ಗುಣಮಟ್ಟದ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತವೆ. ಅಂತಹ ಅತ್ಯುತ್ತಮ ಆಹಾರ ಪದ್ಧತಿಗಳಲ್ಲಿ ಮೆಡಿಟರೇನಿಯನ್ ಪದ್ಧತಿ ಗ್ರೇಟ್ ಎನಿಸಿದರೆ. ಯುಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ಪ್ರಕಾರ, ಮೆಡಿಟರೇನಿಯನ್ ಡಯೆಟ್ ವಿಶ್ವದಲ್ಲೇ ಅತ್ಯುತ್ತಮ ಆಹಾರ ಪದ್ಧತಿ ಎನಿಸಿದೆ. ಇದಕ್ಕೆ ಒಂದಲ್ಲ, ಎರಡಲ್ಲ, ಕಳೆದ ಆರು ವರ್ಷಗಳಿಂದ ಸತತವಾಗಿ ಈ ಮನ್ನಣೆ ಲಭಿಸಿದೆ. ಇದೀಗ, ೨೦೨೩ರಲ್ಲೂ ಅನುಸರಿಸಬಹುದಾದ ಅತ್ಯುತ್ತಮ ಆಹಾರ ಪದ್ಧತಿ ಎನ್ನುವ ಹೆಗ್ಗಳಿಕೆಯೂ ಮೆಡಿಟರೇನಿಯನ್ ಡಯೆಟ್ ಗೆ ಸಂದಿದೆ. ಪೌಷ್ಟಿಕಾಂಶದ ಸಮತೋಲನದಿಂದ ಕೂಡಿರುವ ಈ ಆಹಾರ ಪದ್ಧತಿಯಲ್ಲಿ ಸಸ್ಯ ಆಧಾರಿತ ಆಹಾರ, ಹಣ್ಣುಗಳು ಹಾಗೂ ತರಕಾರಿಗಳು ಒಳಗೊಂಡಿವೆ. ಧಾನ್ಯ, ಬೀನ್ಸ್, ಬೀಜಗಳು, ಸಮುದ್ರ ಆಹಾರ, ಮತ್ತು ವರ್ಜಿನ್ ತೈಲಗಳನ್ನು ಬಳಕೆ ಮಾಡಲಾಗುತ್ತದೆ. ಈ ಪದ್ಧತಿಯನ್ನು ಗ್ರೀಸ್, ಇಟಲಿ, ಲೆಬನಾನ್, ಕ್ರೋವೇಷಿಯಾ, ಟರ್ಕಿ, ಮೊನಾಕೊ ಸೇರಿದಂತೆ ಮೆಡಿಟರೇನಿಯನ್ ಸಮುದ್ರದ ಸುತ್ತಮುತ್ತಲ ೨೧ ದೇಶಗಳಲ್ಲಿ ಅನುಸರಿಸಲಾಗುತ್ತದೆ. ಇದು ಈ ದೇಶಗಳ ಸಾಂಪ್ರದಾಯಿಕ ಆಹಾರ ಪದ್ಧತಿ.
ಮೆಡಿಟರೇನಿಯನ್ ಡಯೆಟ್ ದೀರ್ಘಕಾಲದಿಂದ ಇರುವ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ಅತ್ಯುತ್ತಮವಾಗಿದೆ. ಕಾರ್ಡಿಯೋವಾಸ್ಕ್ಯುಲರ್ ತೊಂದರೆ, ಟೈಪ್ ೨ ಮಧುಮೇಹ ಸೇರಿದಂತೆ ಹಲವು ಕ್ರಾನಿಕ್ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ನೆರವಾಗಿ ಜೀವನದ ಗುಣಮಟ್ಟ ಹೆಚ್ಚಿಸುತ್ತದೆ.
New Year 2023: ತೂಕ ಇಳಿಸಿಕೊಳ್ಳೋ ರೆಸಲ್ಯೂಶನ್ ಮಾಡಿದೋರಿಗೆ ಸಿಂಪಲ್ ಟಿಪ್ಸ್
ಮೆಡಿಟರೇನಿಯನ್ ಡಯೆಟ್ ಹೇಗೆ ಕೆಲಸ ಮಾಡುತ್ತೆ?
ಮೆಡಿಟರೇನಿಯನ್ ಆಹಾರ ಪದ್ಧತಿ ಅನುಸರಿಸಿದರೆ ನಿಮ್ಮ ಊಟದ ತಟ್ಟೆಯನ್ನು ಹಣ್ಣುಗಳು, ತರಕಾರಿ, ಧಾನ್ಯ, ಬೀನ್ಸ್, ನಟ್ಸ್, ಲೆಗ್ಯೂಮ್ಸ್, ಆಲಿವ್ ಆಯಿಲ್, ಔಷಧ ಸಸ್ಯ, ಮಸಾಲೆ ಪದಾರ್ಥಗಳಿಂದ ತುಂಬಿಸಬೇಕಾಗುತ್ತದೆ. ಇದು ಒಂದು ದಿನದ ಕಾರ್ಯವಲ್ಲ, ಪ್ರತಿದಿನವೂ ಈ ಪದ್ಧತಿ ಅನುಸರಿಸಬೇಕು. ಹಾಗೆಯೇ, ಸಮುದ್ರ ಆಹಾರ, ಮೀನು, ಮೊಟ್ಟೆ, ಚೀಸ್, ಮೊಸರು ಸಹ ಪ್ಲೇಟ್ ನಲ್ಲಿರಬೇಕು. ಇದರಲ್ಲಿ ರೆಡ್ ಮೀಟ್ ಮತ್ತು ಸಿಹಿ ತಿನಿಸುಗಳನ್ನು ಅಪರೂಪಕ್ಕೆ ಒಮ್ಮೆ ಮಾತ್ರ ಸೇವಿಸುವ ಆಹಾರ ಎಂಬುದಾಗಿ ಪರಿಗಣಿಸಲಾಗಿಸುತ್ತದೆ. ಹಾಗೆಯೇ, ಅಪರೂಪಕ್ಕೆ ಒಮ್ಮೆ ಒಂದು ಗ್ಲಾಸ್ ವೈನ್ ಸಹ ಉತ್ತಮ. ಒಮೆಗಾ-೩ ಫ್ಯಾಟಿ ಆಸಿಡ್ ನಮ್ಮ ದೇಹಕ್ಕೆ ಬೇಕಾಗಿರುವ ಅಂಶ. ಇದಕ್ಕಾಗಿ ಮೀನು ಸೇವನೆ ಮಾಡುತ್ತಾರೆ.
ಶುಗರ್ ಲೆವೆಲ್ ಹೆಚ್ಚಾಗ್ಬಾರ್ದು ಅಂದ್ರೆ ಈ ಒಂದು ಹಣ್ಣು ತಿನ್ನಿ ಸಾಕು
ಭಾರತೀಯ ಆಹಾರಕ್ಕೆ ಹೆಚ್ಚು ಭಿನ್ನತೆಯಿಲ್ಲ
ಮೆಡಿಟರೇನಿಯನ್ ಡಯೆಟ್ ಭಾರತೀಯ ಆಹಾರ ಪದ್ಧತಿಗಿಂತ ತೀರ ಭಿನ್ನವಾಗಿಲ್ಲ ಎನ್ನುವುದು ವಿಶೇಷ. ಭಾರತೀಯರ ಆಹಾರದಲ್ಲೂ ಹಣ್ಣು, ಧಾನ್ಯ, ತರಕಾರಿ, ಬೀನ್ಸ್, ಮೀನು ಸೇರಿದಂತೆ ಹಲವು ಪದಾರ್ಥಗಳಿಗೆ ಪ್ರಾಮುಖ್ಯತೆ ಇದೆ. ಆದರೆ, ಭಾರತದಲ್ಲಿ ಕಾರ್ಬೋಹೈಡ್ರೇಟ್ಸ್ ಆಹಾರ ಪದಾರ್ಥಗಳ ಬಳಕೆ ಹೆಚ್ಚು. ಮೀನು ಬಳಕೆ ದಕ್ಷಿಣ ಭಾರತದ ರಾಜ್ಯಗಳು, ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಬಳಕೆ ಮಾಡುವುದು ಕಂಡುಬರುತ್ತದೆ. ಮೆಡಿಟರೇನಿಯನ್ ಡಯೆಟ್ ಉತ್ತಮ ಕೊಬ್ಬು ಸೇವನೆಗೆ ಆದ್ಯತೆ ನೀಡುತ್ತದೆ. ಅಲ್ಲಿನ ಜನಾಂಗ ಎಕ್ಸ್ ಟ್ರಾ ವರ್ಜಿನ್ ಆಲಿಯವ್ ಎಣ್ಣೆಯನ್ನು ಬಳಕೆ ಮಾಡುತ್ತದೆ. ಆದರೆ, ಭಾರತದಲ್ಲಿ ನಾವು ಬಳಕೆ ಮಾಡುವ ಸಾಸಿವೆ ಎಣ್ಣೆ, ಸೋಯಾಬೀನ್, ಅಕ್ಕಿ ತೌಡು ( ), ಶೇಂಗಾ ಎಣ್ಣೆಗಳು ಸಹ ಇದೇ ಮಾದರಿಯಲ್ಲಿ ಲಾಭಕರವಾಗಿವೆ. ಹಾಗೆಯೇ, ಒಮೆಗಾ-೩ ಫ್ಯಾಟಿ ಆಸಿಡ್ ಸಸ್ಯಾಹಾರಿಗಳಿಗೆ ವಿವಿಧ ಬೀಜಗಳು, ಕುಂಬಳಕಾಯಿ ಬೀಜ, ಅಗಸೆ ಬೀಜ ಮುಂತಾದವುಗಳಿಂದ ದೊರೆಯುತ್ತದೆ. ಹೀಗಾಗಿ, ಮೆಡಿಟರೇನಿಯನ್ ಡಯೆಟ್ ಗೂ, ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಗೂ ಭಾರೀ ವ್ಯತ್ಯಾಸವೇನಿಲ್ಲ ಎನ್ನುತ್ತಾರೆ ತಜ್ಞರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.