ಪ್ರತಿ ದಿನ ಹಸುವಿನ ತುಪ್ಪ ಹೊಟ್ಟಗೆ ಹೋಗುತ್ತೆ. ಇನ್ಮುಂದೆ ಎರಡು ಹನಿ ತುಪ್ಪವನ್ನು ಮೂಗಿಗೆ ಬಿಟ್ಕೊಳ್ಳಿ. ಪ್ರತಿ ದಿನ ನೀವು ಮೂಗಿಗೆ ತುಪ್ಪ ಹಾಕಿದ್ರೆ ಅನೇಕ ರೋಗಗಳಿಂದ ಮುಕ್ತಿ ಸಿಗುತ್ತೆ. ಆರೋಗ್ಯದಲ್ಲಿ ವೃದ್ಧಿಯಾಗುತ್ತೆ.
ಶುದ್ಧ ಹಸುವಿನ ತುಪ್ಪ ಭಾರತೀಯ ಅಡುಗೆ ಮನೆಯಲ್ಲಿ ಪ್ರಮುಖ ಜಾಗ ಪಡೆದಿರುತ್ತದೆ. ಶುದ್ಧ ಹಸುವಿನ ತುಪ್ಪವನ್ನು ಜನರು ಅನೇಕ ಅಡುಗೆಗೆ ಬಳಕೆ ಮಾಡ್ತಾರೆ. ಆದ್ರೆ ಈ ಶುದ್ಧ ಹಸುವಿನ ತುಪ್ಪ ಶೀತ, ಕಟ್ಟಿದ ಮೂಗು ಸೇರಿದಂತೆ ಅನೇಕ ಸಮಸ್ಯೆ ಔಷಧಿ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹಸುವಿನ ತುಪ್ಪದ ಕೆಲ ಹನಿಯನ್ನು ಮೂಗಿಗೆ ಬಿಡುವುದ್ರಿಂದ ಅನೇಕ ರೋಗಗಳಿಂದ ನಾವು ಮುಕ್ತಿ ಪಡೆಯಬಹುದು. ನಾವಿಂದು ಹಸುವಿನ ತುಪ್ಪವನ್ನು ಮೂಗಿಗೆ ಬಿಡುವುದು ಹೇಗೆ ಮತ್ತು ಅದ್ರಿಂದ ಯಾವೆಲ್ಲ ರೋಗ ವಾಸಿಯಾಗುತ್ತೆ ಎಂಬುದನ್ನು ಹೇಳ್ತೆವೆ.
ಹಸು (Cow) ವಿನ ತುಪ್ಪ (Ghee) ವನ್ನು ಮೂಗಿ (Nose) ಗೆ ಬಿಡುವ ವಿಧಾನ : ತುಪ್ಪವನ್ನು ಮೂಗಿಗೆ ಬಿಡುವ ಚಿಕಿತ್ಸೆಯನ್ನು ನಾಸ್ಯ ಎಂದು ಕರೆಯಲಾಗುತ್ತದೆ. ಆಯುರ್ವೇದ (Ayurveda) ದಲ್ಲಿ ಈ ಚಿಕಿತ್ಸೆ ಹೆಚ್ಚು ಮಹತ್ವ ಪಡೆದಿದೆ. ದೇಹದಿಂದ ಅನೇಕ ಸೋಂಕುಗಳನ್ನು ದೂರವಿಡುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ.
ಹಸುವಿನ ತುಪ್ಪದ ಎರಡು ಹನಿಗಳನ್ನು ಬೆಳಿಗ್ಗೆ ಅಥವಾ ರಾತ್ರಿ ಮೂಗಿಗೆ ಹಾಕುವುದು ಪ್ರಯೋಜನಕಾರಿ. ತುಪ್ಪ ದ್ರವರೂಪದಲ್ಲಿರಲಿ. ಹಾಗೆಯೇ ಉಗುರು ಬೆಚ್ಚಗಿರಲಿ. ಹತ್ತಿ ಅಥವಾ ಡ್ರಾಪ್ಪರ್ ಇಲ್ಲವೆ ಬೆರಳಿನ ಸಹಾಯದಿಂದ ನೀವು ತುಪ್ಪವನ್ನು ಮೂಗಿನೊಳಗೆ ಸೇರಿಸಬೇಕು. ತಲೆಯನ್ನು ಮೇಲ್ಮುಖವಾಗಿಟ್ಟುಕೊಂಡು ತುಪ್ಪವನ್ನು ಹಾಕಿ. ತುಪ್ಪ ಹಾಕಿದ 15 ನಿಮಿಷ ಹಾಗೆಯೇ ಬಿಡಿ. ತುಪ್ಪ ಮೆದುಳಿಗೆ ಹೋಗಬೇಕು. ನೀವು ಮಲಗಿಕೊಂಡು ತುಪ್ಪ ಹಾಕಿಕೊಳ್ಳುವುದು ಉತ್ತಮ. ತುಪ್ಪವನ್ನು ಏಕೆ ಮೂಗಿಗೆ ಹಾಕಬೇಕೆಂದ್ರೆ, ನೀವು ಮೂಗಿನ ಹೊಳ್ಳೆಗಳಿಗೆ ತುಪ್ಪವನ್ನು ಹಾಕಿದಾಗ ಅದು ಮೊದಲು ನಿಮ್ಮ ಮೆದುಳಿಗೆ ಹೋಗುತ್ತದೆ. ನಂತರ ಕಣ್ಣುಗಳಿಗೆ, ನಂತರ ಕಿವಿಗೆ ಹೋಗುತ್ತದೆ. ಇದ್ರಿಂದ ಕಟ್ಟಿದ ಮೂಗಿನ ಸಮಸ್ಯೆ ಕಡಿಮೆಯಾಗುತ್ತದೆ.
ಬೆಳಗ್ಗೆದ್ದು ಈ ಪಾನೀಯ ಕುಡಿದ್ರೆ ಒಂದೇ ತಿಂಗಳಲ್ಲೇ ತೂಕ ಇಳಿಸ್ಕೋಬೋದು
ಹಸುವಿನ ತುಪ್ಪವನ್ನು ಮೂಗಿಗೆ ಹಾಕುವುದ್ರಿಂದಾಗುವ ಲಾಭಗಳು :
1. ಕೊಬ್ಬಿನಾಮ್ಲಗಳು ಮೆದುಳನ್ನು ತಲುಪುತ್ತವೆ. ನಿಮ್ಮ ವಿಚಾರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
2. ನರಮಂಡಲವನ್ನು ಪುನರುಜ್ಜೀವನಗೊಳಿಸುವ ಮೂಲಕ ಏಕಾಗ್ರತೆ, ಕಲಿಕೆ ಮತ್ತು ಸ್ಮರಣೆ ಶಕ್ತಿಯನ್ನು ಸುಧಾರಿಸುತ್ತದೆ.
3. ಹೆದರಿಕೆ, ಆತಂಕ, ಮೈಗ್ರೇನ್ ಮತ್ತು ತಲೆ ಸುತ್ತುವಿಕೆಯಂತಹ ಸಮಸ್ಯೆ ಕಡಿಮೆ ಮಾಡುತ್ತದೆ.
4. ನಿದ್ರಾಹೀನತೆಯ ನಿವಾರಿಸಲು ಅತ್ಯುತ್ತಮ ಮಾರ್ಗವಾಗಿದೆ.
5. ಡ್ರೈ ಐ ಸಿಂಡ್ರೋಮ್ ಗುಣಪಡಿಸುವ ಶಕ್ತಿ ಹೊಂದಿದೆ.
6. ಬಹಳ ಸಮಯ ಕಂಪ್ಯೂಟರ್ ಮುಂದೆ ಅಥವಾ ಮೊಬೈಲ್ ಮುಂದೆ ಕುಳಿತುಕೊಳ್ಳುವವರಿಗೆ ಈ ವಿಧಾನ ಬಹಳ ಪ್ರಯೋಜನಕಾರಿ.
7. ಕಿವಿ ಸೋಂಕು,ಶ್ರವಣ ದೋಷ, ಕಿವಿಯ ಉರಿಯೂತ ಸೇರಿದಂತೆ ಕಿವಿಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ನೀಡುತ್ತದೆ.
8. ಕಟ್ಟಿದ ಮೂಗು,ಸೈನುಟಿಸ್, ಅಲರ್ಜಿ, ಅನೋಸ್ಮಿಯಾ, ಹೈಪೋಸ್ಮಿಯಾ, ಪ್ಯಾರೋಸ್ಮಿಯಾವನ್ನು ಗುಣಪಡಿಸುತ್ತದೆ.
9. ಹಲ್ಲಿನ ಸವೆತ ಮತ್ತು ಹಲ್ಲು ನೋವನ್ನು ಕಡಿಮೆ ಮಾಡುತ್ತದೆ.
10. ಮೆದುಳಿನ ಸ್ಟ್ರೋಕ್, ಪಾರ್ಶ್ವವಾಯು ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.
11. ಕುತ್ತಿಗೆ ಸ್ನಾಯು, ಗಂಟಲು ಮತ್ತು ಮೂಗುಗಳನ್ನು ನಯಗೊಳಿಸುತ್ತದೆ.
12. ದೇಹದ ನೋವು ಮತ್ತು ಗರ್ಭಕಂಠದ ಸ್ಪಾಂಡಿಲೋಸಿಸ್ ಗುಣಪಡಿಸುತ್ತದೆ
13. ರೋಗನಿರೋಧಕ ಶಕ್ತಿ ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ. ಕಾಲೋಚಿತ ವೈರಲ್ ಸೋಂಕುಗಳು ಮತ್ತು ಜ್ವರದಿಂದ ರಕ್ಷಿಸುತ್ತದೆ.
14. ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಇದು ಒಳ್ಳೆಯದು.
15. ಎರಡು ಹನಿ ತುಪ್ಪ ನಿಮ್ಮ ಮನಸ್ಥಿತಿ ಸುಧಾರಿಸುವ ಜೊತೆಗೆ ಒತ್ತಡ ಕಡಿಮೆ ಮಾಡುತ್ತದೆ.
16. ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುತ್ತದೆ.
17. ಕೋಪ ಹಾಗೂ ಕಿರಿಕಿರಿ ನಿಯಂತ್ರಿಸುವ ಕೆಲಸ ಮಾಡುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ.
ವಯಸ್ಸಾದಂತೆ ಲೈಂಗಿಕಾಸಕ್ತಿ ಕಡಿಮೆ ಆಗ್ತಿದ್ಯಾ? ಅಡುಗೆ ಮನೆಯಲ್ಲಿದೆ ಬೆಸ್ಟ್ ಔಷಧಿ
18. ಆಲೋಚನಾ ಗುಣಮಟ್ಟ ಸುಧಾರಿಸುತ್ತದೆ. ತುಪ್ಪ ಸಾತ್ವಿಕವಾಗಿರುವ ಕಾರಣ ಸಕಾರಾತ್ಮಕ ಆಲೋಚನೆ ಹೆಚ್ಚಾಗುತ್ತದೆ.
19. ನೆನಪಿನ ಶಕ್ತಿ ಹೆಚ್ಚಿಸುತ್ತದೆ. ವೃದ್ಧಾಪ್ಯದಲ್ಲಿ ಕಾಡುವ ಮರೆವಿನ ರೋಗಕ್ಕೆ ಇದು ಉತ್ತಮ ಚಿಕಿತ್ಸೆ.